ಗ್ಯಾಸ್ ಸ್ಟೌವ್ ಬಳಕೆ ಹೆಚ್ಚಾದಂತೆ ಅಪಘಾತಗಳೂ ಹೆಚ್ಚುತ್ತಿವೆ. ಗ್ಯಾಸ್ ಸೋರಿಕೆ, ಬೆಂಕಿ ಅವಘಡಗಳ ಬಗ್ಗೆ ಆಗಾಗ ಕೇಳುತ್ತಲೇ ಇರುತ್ತೇವೆ. ಆದ್ದರಿಂದ ಗ್ಯಾಸ್ ಸ್ಟೌವ್ ಬಳಸುವಾಗ ಮಾಡಲೇಬೇಕಾದ ಕೆಲಸ ಇಲ್ಲಿವೆ.
kitchen Dec 19 2025
Author: Ashwini HR Image Credits:Pixabay
Kannada
ಸಿಲಿಂಡರ್ ಓರೆಯಾಗಿ ಇಡಬೇಡಿ
ಅಡುಗೆಮನೆಯಲ್ಲಿ ಚೆನ್ನಾಗಿ ಗಾಳಿಯಾಡುವ ಜಾಗದಲ್ಲಿ ಎಲ್‌ಪಿಜಿ ಸಿಲಿಂಡರ್ ಇಡಬೇಕು. ಅಷ್ಟೇ ಅಲ್ಲ, ಸಿಲಿಂಡರ್ ಅನ್ನು ಓರೆಯಾಗಿ ಇಡುವುದನ್ನು ಸಂಪೂರ್ಣವಾಗಿ ತಪ್ಪಿಸಿ. ಇದು ಗ್ಯಾಸ್ ಸೋರಿಕೆಗೆ ಕಾರಣವಾಗಬಹುದು.
Image credits: istock
Kannada
ಹೋಸ್ ಪರೀಕ್ಷಿಸಲು ಮರೆಯಬೇಡಿ
ಸಿಲಿಂಡರ್‌ಗೆ ಜೋಡಿಸಲಾದ ರಬ್ಬರ್ ಹೋಸ್‌ನಿಂದ ಗ್ಯಾಸ್ ಸೋರಿಕೆಯಾಗುವ ಸಾಧ್ಯತೆ ಹೆಚ್ಚು. ಕಾಲಾನಂತರದಲ್ಲಿ, ಈ ರಬ್ಬರ್ ಹೋಸ್‌ನಲ್ಲಿ ಬಿರುಕುಗಳು ಉಂಟಾಗಿ ಗ್ಯಾಸ್ ಸೋರಿಕೆಯಾಗುತ್ತದೆ. ಆಗಾಗ ಹೋಸ್ ಪರೀಕ್ಷಿಸಲು ಮರೆಯಬೇಡಿ.
Image credits: istock
Kannada
ರೆಗ್ಯುಲೇಟರ್ ಆಫ್ ಮಾಡಿ
ಕೇವಲ ಸ್ಟೌವ್‌ನ ನಾಬ್ ಆಫ್ ಮಾಡಿದರೆ ಸಾಲದು. ಬಳಕೆ ಮುಗಿದ ನಂತರ ರೆಗ್ಯುಲೇಟರ್ ಆಫ್ ಮಾಡಲು ಮರೆಯದಿರಿ. ಇದು ಅಪಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ.
Image credits: Flipkart Website
Kannada
ಕಿಟಕಿಗಳನ್ನ ಓಪನ್ ಮಾಡಿ
ಅಡುಗೆಮನೆಯಲ್ಲಿ ಗ್ಯಾಸ್ ವಾಸನೆ ಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬೇಡಿ. ತಕ್ಷಣ ರೆಗ್ಯುಲೇಟರ್ ಆಫ್ ಮಾಡಿ. ಬಾಗಿಲು ಮತ್ತು ಕಿಟಕಿಗಳನ್ನು ತೆರೆಯಲು ಮರೆಯಬೇಡಿ.
Image credits: Getty
Kannada
ಇವೆನ್ನೆಲ್ಲಾ ಇಡಬೇಡಿ
ಪ್ಲಾಸ್ಟಿಕ್ ಕವರ್, ಟಿಶ್ಯೂ ಪೇಪರ್ ಮತ್ತು ಎಣ್ಣೆಯುಕ್ತ ಬಟ್ಟೆಗಳನ್ನು ಗ್ಯಾಸ್ ಸ್ಟೌವ್ ಬಳಿ ಇಡಬೇಡಿ. ಇದು ಬೆಂಕಿ ಹೊತ್ತಿಕೊಳ್ಳುವ ಅಪಾಯವನ್ನು ಹೆಚ್ಚಿಸುತ್ತದೆ.