ಹಾಲಿನ ಕೆನೆಯನ್ನು ಅನೇಕ ರೀತಿ ಬಳಸಬಹುದು. ಕೆಲವರು ಇದನ್ನ ನೇರವಾಗಿ ತಿಂದರೆ, ಮತ್ತೆ ಕೆಲವರು ತುಪ್ಪ ತಯಾರಿಸಲು ಬಳಸುತ್ತಾರೆ. ಹೆಚ್ಚಿನವರಿಗೆ ಕೆನೆ ಸಂಗ್ರಹಿಸಿ ತಯಾರಿಸಿದ ದೇಸಿ ತುಪ್ಪವೆಂದ್ರೆ ಇಷ್ಟ.
kitchen Dec 18 2025
Author: Ashwini HR Image Credits:Freepik
Kannada
ಆ ತುಪ್ಪ ಹೆಚ್ಚು ಬಾಳಿಕೆ ಬರಲ್ಲ
ಅನೇಕ ಜನರು ಹಸಿ ಹಾಲಿನ ಕೆನೆಯನ್ನು ಹೊರತೆಗೆದು ಅದರಿಂದ ದೇಸಿ ತುಪ್ಪವನ್ನು ತಯಾರಿಸುತ್ತಾರೆ. ಆದರೆ ಆ ತುಪ್ಪ ಹೆಚ್ಚು ಬಾಳಿಕೆ ಬರುವುದಿಲ್ಲ ಮತ್ತು ಕೆನೆಭರಿತ ದೇಸಿ ತುಪ್ಪದಷ್ಟು ರುಚಿಕರವಾಗಿರುವುದಿಲ್ಲ.
Image credits: Freepik
Kannada
ದಪ್ಪ ಕೆನೆ ಪಡೆಯಲು
ವಿಶೇಷವೆಂದರೆ ಕೆನೆ ದಪ್ಪವಾಗಿದ್ದಷ್ಟೂ ನೀವು ಸುಲಭವಾಗಿ ತುಪ್ಪವನ್ನು ತಯಾರಿಸಲು ಸಾಧ್ಯವಾಗುತ್ತದೆ. ದಪ್ಪ ಕೆನೆ ಪಡೆಯಲು ಜನರು ವಿಭಿನ್ನ ವಿಧಾನಗಳನ್ನು ಬಳಸುತ್ತಾರೆ.
Image credits: Freepik
Kannada
ಹಾಲನ್ನು ಬಿಸಿ ಮಾಡುವ ಮಾರ್ಗ
ಆದರೆ ನೀವು ಇದಕ್ಕೆಲ್ಲಾ ಹೆಚ್ಚು ಕಷ್ಟಪಡಬೇಕಿಲ್ಲ. ಕುದಿಸುವ ಪ್ರಮಾಣವನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು. ಅಂದರೆ ದಪ್ಪ ಕೆನೆ ಮಾಡಲು ಮೊದಲು ಹಾಲನ್ನು ಬಿಸಿ ಮಾಡುವ ಸರಿಯಾದ ಮಾರ್ಗವನ್ನು ತಿಳಿದುಕೊಳ್ಳಬೇಕು.
Image credits: unsplash
Kannada
ರೊಟ್ಟಿಗಿಂತ ದಪ್ಪ ಕೆನೆ ಬರುತ್ತೆ
ಹಾಲನ್ನು ಎಂದೂ ಹೆಚ್ಚಿನ ಉರಿಯಲ್ಲಿ ಕುದಿಸಬೇಡಿ. ಒಮ್ಮೆ ಬಿಸಿ ಮಾಡಿದ ನಂತರ, ಕಡಿಮೆ ಉರಿಯಲ್ಲಿ ಸ್ವಲ್ಪ ಸಮಯದವರೆಗೆ ಹಾಲನ್ನು ಕುದಿಸುವುದರಿಂದ ಹಾಲಿನ ಗಟ್ಟಿ ಹೆಚ್ಚಾಗಿ, ರೊಟ್ಟಿಗಿಂತ ದಪ್ಪ ಕೆನೆ ಬರುತ್ತೆ.
Image credits: pinterest
Kannada
ಅಕ್ಕಿ ಧಾನ್ಯ
ಹಾಲಿನಲ್ಲಿ ಸ್ವಲ್ಪ ಹಸಿ ಅಕ್ಕಿ ಧಾನ್ಯಗಳನ್ನು ಹಾಕಿ ಬೆರೆಸಿ. ಈ ಸಣ್ಣ ಧಾನ್ಯಗಳು ಕ್ರೀಮ್ ಅಂದ್ರೆ ಕೆನೆ ಗಟ್ಟಿಯಾಗಿ ಮಾಡಲು ಸಹಾಯ ಮಾಡುತ್ತವೆ.