- Home
- Life
- Kitchen
- ಕುಕ್ಕರ್ ಸೀಟಿ ಪದೇ ಪದೇ ಹಾಳಾಗುತ್ತಿದೆಯೇ? ಈ ಸುಲಭ ಟ್ರಿಕ್ಸ್‌ನಿಂದ ನೀವೇ ಸರಿಪಡಿಸಿ.. ಸಮಯ, ಹಣ ಉಳಿಸಿ!
ಕುಕ್ಕರ್ ಸೀಟಿ ಪದೇ ಪದೇ ಹಾಳಾಗುತ್ತಿದೆಯೇ? ಈ ಸುಲಭ ಟ್ರಿಕ್ಸ್‌ನಿಂದ ನೀವೇ ಸರಿಪಡಿಸಿ.. ಸಮಯ, ಹಣ ಉಳಿಸಿ!
Cooker Whistle Cleaning Tips: ಹಲವು ಬಾರಿ ಸಣ್ಣಪುಟ್ಟ ಸಮಸ್ಯೆಗಳಿಗಾಗಿ ಮೆಕ್ಯಾನಿಕ್ ಅನ್ನು ಕರೆಯುವುದು ಸ್ವಲ್ಪ ಕಿರಿಕಿರಿ ಎನಿಸಬಹುದು. ಹಾಗಾಗಿ ಒಂದು ವೇಳೆ ನೀವು ನಿಮ್ಮ ಕುಕ್ಕರ್ ಸೀಟಿಯನ್ನು ನೀವೇ ಸರಿಪಡಿಸಲು ಬಯಸಿದರೆ ಈ ಟ್ರಿಕ್ ಅನ್ನು ಫಾಲೋ ಮಾಡಬಹುದು.

ಕೆಲಸವನ್ನು ಸುಲಭಗೊಳಿಸುತ್ತೆ, ಸಮಯ ಉಳಿಸುತ್ತೆ
ಅಡುಗೆಮನೆಯಲ್ಲಿ ಕೆಲಸ ಮಾಡುವಾಗ ಇದ್ದಕ್ಕಿದ್ದಂತೆ ಪ್ರೆಶರ್ ಕುಕ್ಕರ್ ಸೀಟಿ ತನ್ನ ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಅಂತಹ ಸಮಯದಲ್ಲಿ ಏನು ಮಾಡಬೇಕೆಂದು ಅರ್ಥವಾಗುವುದಿಲ್ಲ. ಏಕೆಂದರೆ ಇಂದಿನ ಕಾಲದಲ್ಲಿ ಪ್ರೆಶರ್ ಕುಕ್ಕರ್ ನಮ್ಮ ದೈನಂದಿನ ಜೀವನದ ಒಂದು ಭಾಗವಾಗಿದೆ. ಬೇಳೆ ಮಾಡುವುದಿರಲಿ, ಅನ್ನ ಮಾಡುವುದಿರಲಿ ಅಥವಾ ಯಾವುದನ್ನಾದರೂ ಬೇಯಿಸುವುದಿರಲಿ, ತಕ್ಷಣ ಕುಕ್ಕರ್ ನೆನಪಾಗುತ್ತದೆ. ಇದು ನಮ್ಮ ಕೆಲಸವನ್ನು ಸುಲಭಗೊಳಿಸುವುದಲ್ಲದೆ ಸಮಯವನ್ನೂ ಉಳಿಸುತ್ತದೆ.
ನೀವೇ ಸರಿಪಡಿಸುವುದು ಹೇಗೆ?
ನಿಮ್ಮ ಅಡುಗೆಮನೆಯಲ್ಲೂ ಕುಕ್ಕರ್ ಸೀಟಿ ಪದೇ ಪದೇ ಹಾಳಾಗುತ್ತಿದ್ದರೆ, ಸುಲಭವಾದ ಟ್ರಿಕ್ಸ್ ಸಹಾಯದಿಂದ ನೀವು ಇದನ್ನು ಮನೆಯಲ್ಲೇ ಸರಿಪಡಿಸಬಹುದು. ಹೌದು, ಇತ್ತೀಚೆಗೆ @simplerepairstep7626 ಎಂಬ ಹೆಸರಿನ ಯೂಟ್ಯೂಬ್ ಶಾರ್ಟ್ಸ್ ವಿಡಿಯೋದಲ್ಲಿ ಈ ವಿಧಾನವನ್ನು ಹಂಚಿಕೊಳ್ಳಲಾಗಿದೆ. ಹಾಗಾದರೆ ತಡ ಮಾಡದೆ, ಕುಕ್ಕರ್ ಸೀಟಿಯನ್ನು ನೀವೇ ಸರಿಪಡಿಸುವುದು ಹೇಗೆ ಎಂದು ತಿಳಿಯೋಣ.
ಕುಕ್ಕರ್ ಸೀಟಿಯನ್ನು ಸರಿಪಡಿಸುವುದು ಹೇಗೆ?
ಈ ವೈರಲ್ ವಿಡಿಯೋದಲ್ಲಿ ತೋರಿಸಿರುವಂತೆ, ನಿಮ್ಮ ಕುಕ್ಕರ್ ಸೀಟಿ ಸಡಿಲವಾಗಿದ್ದರೆ (Loose), ಅದನ್ನು ಸುಲಭವಾಗಿ ಸರಿಪಡಿಸಬಹುದು. ಇದಕ್ಕಾಗಿ ನೀವು ಒಂದು ಪಿನ್ ಸಹಾಯದಿಂದ ಸೀಟಿಯ ಕೆಳಭಾಗದಲ್ಲಿ ಉಂಗುರಾಕಾದಲ್ಲಿರುವ ಜಾಗವನ್ನ ಸ್ವಲ್ಪ ತಳ್ಳಬೇಕು. ವಿಡಿಯೋದಲ್ಲಿ ತೋರಿಸಿರುವ ಹಾಗೆ ಅಲ್ಲಿ ಒಂದು ಹೊಸ ನಟ್ (Nut) ಅನ್ನು ಫಿಟ್ ಮಾಡಬೇಕು. ನಂತರ ಅದನ್ನು ವಾಪಸ್ ಹಾಕಿ ನೋಡಿದರೆ ಅದು ಮತ್ತೆ ಮೊದಲಿನಂತೆ ಆಗಿರುತ್ತದೆ. ಗಂಟೆಗಳ ಕಾಲ ಹಿಡಿಯುವ ಕೆಲಸ ನಿಮಿಷಗಳಲ್ಲಿ ಮುಗಿಯಿತು ಅಲ್ವಾ?.
ಇತರ ಟಿಪ್ಸ್
ಗಲೀಜು
ಕುಕ್ಕರ್ ಸೀಟಿ ಶಬ್ದ ಮಾಡದಿರಲು ದೊಡ್ಡ ಕಾರಣವೆಂದರೆ ಗಲೀಜು. ಬೇಳೆ ಅಥವಾ ಅನ್ನ ಮಾಡುವಾಗ ಅದರ ನೀರು ಸೀಟಿಯ ರಂಧ್ರದಲ್ಲಿ ಸಿಲುಕಿಕೊಳ್ಳುತ್ತದೆ, ಅದು ಒಣಗಿದ ನಂತರ ಕಲ್ಲಿನಂತೆ ಗಟ್ಟಿಯಾಗುತ್ತದೆ. ಅಂತಹ ಸಂದರ್ಭದಲ್ಲಿ ಸೀಟಿಯನ್ನು ತೆಗೆದು ಅದನ್ನು 10 ನಿಮಿಷಗಳ ಕಾಲ ಬಿಸಿ ನೀರಿನಲ್ಲಿ ನೆನೆಸಿಡಿ. ಇದರ ನಂತರ ಒಂದು ತೆಳುವಾದ ತಂತಿ ಅಥವಾ ಸೂಜಿಯ ಸಹಾಯದಿಂದ ಸೀಟಿಯ ಸಣ್ಣ ರಂಧ್ರಗಳನ್ನು ಸ್ವಚ್ಛಗೊಳಿಸಿ.
ಸ್ಪ್ರಿಂಗ್ ಚೆಕ್ ಮಾಡಿ
ಕೆಲವೊಮ್ಮೆ ಸೀಟಿಯ ಸ್ಪ್ರಿಂಗ್ ಅಥವಾ ಅದರ ಒಳಗಿನ ಭಾಗ ಸಡಿಲವಾಗಿರುತ್ತದೆ. ಸೀಟಿ ಅತಿಯಾಗಿ ಅಲುಗಾಡುತ್ತಿದ್ದರೆ ಅದು ಪ್ರೆಶರ್ ಅನ್ನು ತಡೆಯಲು ಸಾಧ್ಯವಾಗುವುದಿಲ್ಲ. ಸೀಟಿಯ ಒಳಗಿನ ನಟ್ ಅನ್ನು ಪರೀಕ್ಷಿಸಿ. ಅದು ಸಡಿಲವಾಗಿದ್ದರೆ ಅದನ್ನು ಸ್ವಲ್ಪ ಟೈಟ್ ಮಾಡಿ. ಗಮನಿಸಿ, ಅತಿಯಾದ ಬಲ ಪ್ರಯೋಗ ಮಾಡಬೇಡಿ, ಇಲ್ಲದಿದ್ದರೆ ಸೀಟಿ ಜಾಮ್ ಆಗಬಹುದು.
ಸೂಚನೆ
ಕುಕ್ಕರ್ ಎನ್ನುವುದೇ ಒತ್ತಡದ (Pressure) ಸಾಧನವಾಗಿದೆ, ಆದ್ದರಿಂದ ಇದರೊಂದಿಗೆ ಅತಿಯಾದ ಪ್ರಯೋಗಗಳನ್ನು ಮಾಡುವುದು ಅಪಾಯಕಾರಿಯಾಗಬಹುದು. ಒಂದು ವೇಳೆ ನಿಮಗೆ ಸರಿಪಡಿಸಲು ಸಾಧ್ಯವಾಗದಿದ್ದರೆ, ಮೆಕ್ಯಾನಿಕ್‌ಗೆ ತೋರಿಸುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
