- Home
- Life
- Kitchen
- ಕುಕ್ಕರ್ ಶಿಳ್ಳೆ ಹೊಡೆಯುತ್ತಿದ್ದಂತೆ ನೀರು ಆಚೆ ಬರ್ತಿದ್ರೆ ಈ 4 ಟ್ರಿಕ್ಸ್ ಫಾಲೋ ಮಾಡಿ ಸಾಕು, ಹೊಸದನ್ನ ಕೊಳ್ಳಲ್ಲ
ಕುಕ್ಕರ್ ಶಿಳ್ಳೆ ಹೊಡೆಯುತ್ತಿದ್ದಂತೆ ನೀರು ಆಚೆ ಬರ್ತಿದ್ರೆ ಈ 4 ಟ್ರಿಕ್ಸ್ ಫಾಲೋ ಮಾಡಿ ಸಾಕು, ಹೊಸದನ್ನ ಕೊಳ್ಳಲ್ಲ
Pressure Cooker Whistle Leak: ಕುಕ್ಕರ್ ಹಳೆಯದಾಗುತ್ತಿದ್ದಂತೆ ಬೇಳೆ ಬೇಯಿಸುವಾಗ ನೀರು ಆಚೆ ಬರುತ್ತದೆ. ಇದರಿಂದಾಗಿ ಗ್ಯಾಸ್ ಸ್ಟೌವ್ ಎಲ್ಲಾ ಕೊಳಕಾಗುತ್ತದೆ. ಆಹಾರವೂ ವೇಸ್ಟ್ ಆಗುತ್ತೆ . ನಿಮಗೂ ಇದೇ ರೀತಿ ಆಗುತ್ತಿದ್ದರೆ ಈ ಸಮಸ್ಯೆಯನ್ನು ತಪ್ಪಿಸಲು ಕೆಲವು ಸುಲಭವಾದ ಟಿಪ್ಸ್ ನಿಮಗಾಗಿ…

ಕೆಲವು ಸುಲಭವಾದ ಹ್ಯಾಕ್ಸ್
ತರಕಾರಿ, ಬೇಳೆ ಮತ್ತು ಅಕ್ಕಿ ಬೇಗನೆ ಬೇಯಬೇಕೆಂದರೆ ಪ್ರತಿ ಮನೆಯಲ್ಲೂ ಪ್ರೆಶರ್ ಕುಕ್ಕರ್ ಬಳಸಲಾಗುತ್ತದೆ. ಇದು ಸಮಯವನ್ನು ಉಳಿಸುತ್ತದೆ ಮತ್ತು ಆಹಾರ ಚೆನ್ನಾಗಿ ಬೇಯಲು ಸಹಾಯ ಮಾಡುತ್ತದೆ. ವಿಶೇಷವಾಗಿ ಕುಕ್ಕರ್ ಹಳೆಯದಾಗುತ್ತಿದ್ದಂತೆ ಬೇಳೆ ಬೇಯಿಸುವಾಗ ನೀರು ಆಚೆ ಬರುತ್ತದೆ. ಇದರಿಂದಾಗಿ ಗ್ಯಾಸ್ ಸ್ಟೌವ್, ಕುಕ್ಕರ್ ಎಲ್ಲಾ ಕೊಳಕಾಗುತ್ತವೆ ಮತ್ತು ಆಹಾರ ವೇಸ್ಟ್ ಆಗುತ್ತದೆ. ನಿಮಗೂ ಇದೇ ರೀತಿ ತೊಂದರೆಯಾಗುತ್ತಿದ್ದರೆ ಈ ಸಮಸ್ಯೆಯನ್ನು ತಪ್ಪಿಸಲು ಕೆಲವು ಸುಲಭವಾದ ಹ್ಯಾಕ್ಸ್, ಟಿಪ್ಸ್ ನಿಮಗೆ ಖಂಡಿತ ಸಹಾಯ ಮಾಡುತ್ತದೆ.
ಶಿಳ್ಳೆ ಮತ್ತು ರಬ್ಬರ್
ಕೆಲವೊಮ್ಮೆ ಹಳೆಯ ಅಥವಾ ಸವೆದ ಸೀಟಿ ಮತ್ತು ರಬ್ಬರ್‌ನಿಂದ ಸೋರಿಕೆ ಉಂಟಾಗಬಹುದು. ಈ ಸಮಸ್ಯೆಯನ್ನು ತಪ್ಪಿಸಲು ಸೀಟಿ ಮತ್ತು ರಬ್ಬರ್ ಅನ್ನು ಸಂಪೂರ್ಣವಾಗಿ ಸ್ವಚ್ಛವಾಗಿಡಿ . ಅಷ್ಟೇ ಮಾಡಿದರೆ ಸಾಕಾಗಲ್ಲ, ಸೀಟಿಯನ್ನು ಸರಿಯಾಗಿ ಜೋಡಿಸಿ ಮತ್ತು ಸರಿಯಾದ ರಬ್ಬರ್ ಬಳಸಿ. ಅಪ್ಪಿ ತಪ್ಪಿ ರಬ್ಬರ್ ಡ್ಯಾಮೇಜ್ ಆಗಿರುವುದನ್ನ ನೀವು ಗಮನಿಸಿದರೆ ಅದನ್ನು ತಕ್ಷಣ ಬದಲಾಯಿಸಿ. ಇಲ್ಲದಿದ್ದರೆ ಅಡುಗೆ ಮಾಡಲು ಕಷ್ಟವಾಗಬಹುದು.
ಅರ್ಧದಷ್ಟು ಮಾತ್ರ ತುಂಬಿಸಿ
ಪ್ರೆಶರ್ ಕುಕ್ಕರ್ ನಿಂದ ನೀರು ಹೆಚ್ಚಾಗಿ ಉಕ್ಕಿ ಹರಿಯಲು ಪ್ರಮುಖ ಕಾರಣ ಕುಕ್ಕರ್ ನಲ್ಲಿ ಹೆಚ್ಚು ನೀರು ಇರುವುದು. ಹೆಚ್ಚಿನ ಜನರು ಪ್ರೆಶರ್ ಕುಕ್ಕರ್ ಅನ್ನು ಸಂಪೂರ್ಣವಾಗಿ ತುಂಬಿಸುತ್ತಾರೆ. ಇದರಿಂದಾಗಿ ಅದರಲ್ಲಿರುವ ಪದಾರ್ಥಗಳು ವಿಸ್ತರಿಸುವುದನ್ನು ತಡೆದು, ನೀರು ಸೀಟಿಯ ಮೂಲಕ ಕುದಿಯಲು ಕಾರಣವಾಗುತ್ತದೆ. ಆದ್ದರಿಂದ ಪ್ರೆಶರ್ ಕುಕ್ಕರ್‌ಗೆ ಅಗತ್ಯವಿರುವಷ್ಟು ನೀರನ್ನು ಮಾತ್ರ ಸೇರಿಸಿ. ಇದರಿಂದ ಆಹಾರವು ಬೇಗನೆ ಮತ್ತು ಯಾವುದೇ ತೊಂದರೆಯಿಲ್ಲದೆ ಬೇಯುತ್ತದೆ.
ಎಣ್ಣೆ ಅಥವಾ ತುಪ್ಪ ಬಳಸಿ
ಪ್ರೆಶರ್ ಕುಕ್ಕರ್ ಶಿಳ್ಳೆ ಹೊಡೆದ ತಕ್ಷಣ ಬೇಳೆಯಿಂದ ನೀರು ಸೋರಲು ಪ್ರಾರಂಭಿಸುತ್ತದೆ. ಬೇಳೆಯನ್ನು ಸೇರಿಸುವಾಗ ಪ್ರೆಶರ್ ಕುಕ್ಕರ್‌ಗೆ 1-2 ಚಮಚ ಎಣ್ಣೆ ಅಥವಾ ತುಪ್ಪವನ್ನು ಸೇರಿಸಿ. ಇದು ನೊರೆ ಉಂಟಾಗುವುದನ್ನು ತಡೆಯುತ್ತದೆ ಮತ್ತು ಬೇಳೆಯನ್ನು ಸುಲಭವಾಗಿ ಬೇಯಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಎಣ್ಣೆ ಅಥವಾ ತುಪ್ಪ ಬೇಳೆಗಳ ಪರಿಮಳವನ್ನು ಹೆಚ್ಚಿಸುತ್ತದೆ ಮತ್ತು ನೀರು ಸೋರುವುದನ್ನು ತಡೆಯುತ್ತದೆ.
ಕಡಿಮೆ ಉರಿಯಲ್ಲಿ ಬೇಯಿಸಿ
ಪ್ರೆಶರ್ ಕುಕ್ಕರ್ ಹೆಚ್ಚಿನ ಉರಿಯಲ್ಲಿದ್ದರೂ ಬೇಳೆಕಾಳುಗಳು ಬೇಗನೆ ಕುದಿಯುತ್ತವೆ. ಇದರಿಂದಾಗಿ ಅವು ಚೆಲ್ಲುವ ಅಪಾಯ ಹೆಚ್ಚಾಗುತ್ತದೆ. ಆದ್ದರಿಂದ ಕಡಿಮೆ ಅಥವಾ ಮಧ್ಯಮ ಉರಿಯಲ್ಲಿ ಆಹಾರವನ್ನು ಬೇಯಿಸಿ. ಕಡಿಮೆ ಉರಿಯಿಂದ ಸರಿಯಾದ ಅಡುಗೆ ರೆಡಿಯಾಗುತ್ತದೆ ಮತ್ತು ಕುದಿಯುವುದನ್ನು ತಡೆಯುತ್ತದೆ. ಈ ಮೊದಲೇ ಹೇಳಿದ ಹಾಗೆ ಕುಕ್ಕರ್‌ನಲ್ಲಿ ಹೆಚ್ಚು ನೀರು ಬಳಸುವುದನ್ನು ತಪ್ಪಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
