ಕುಕ್ಕರ್, ಯಾವುದೇ ಪಾತ್ರೆ ಕಪ್ಪು ಬಣ್ಣಕ್ಕೆ ತಿರುಗಿದ್ರೆ ಕೈ ನೋಯಿಸಿಕೊಳ್ಳದೆ ಕ್ಲೀನ್ ಮಾಡೋ ಟ್ರಿಕ್
How to clean a pressure cooker: ಈ ಎರಡೂ ಪದಾರ್ಥಗಳು ಕ್ಲೀನಿಂಗ್ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾದರೆ ಇದನ್ನು ಹೇಗೆ ಉಪಯೋಗಿಸಬೇಕೆಂದು ಹಂತ ಹಂತವಾಗಿ ನೋಡೋಣ. ಮೊದಲು ಕುಕ್ಕರ್ ನಲ್ಲಿ ನೀರು ತುಂಬಿ.

ಕಪ್ಪಾಗಲು ಕಾರಣ
ಕುಕ್ಕರ್ ಸರಿಯಾಗಿ ಸ್ವಚ್ಛಗೊಳಿಸದಿದ್ದರೆ ಕೆಳಭಾಗದಲ್ಲಿ ಅಂದರೆ ಅದರ ಮೇಲ್ಮೈಯಲ್ಲಿ ಕಪ್ಪು ಬಣ್ಣ ಕ್ರಮೇಣ ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದಲ್ಲದೆ ಕುಕ್ಕರ್ ಅನ್ನು ಆಲೂಗಡ್ಡೆ ಬೇಯಿಸಲು ಹೆಚ್ಚು ಬಳಸುವುದರಿಂದ ಅದು ಕಪ್ಪಾಗಲು ಕಾರಣವಾಗಬಹುದು. ಪದೇ ಪದೇ ಸ್ಕ್ರಬ್ ಮಾಡಿದ ನಂತರವೂ ಕಪ್ಪು ಬಣ್ಣ ಇದ್ದರೆ ಈ ಕೆಲಸವನ್ನು ಹೆಚ್ಚು ಸುಲಭಗೊಳಿಸುವ ಒಂದು ಟ್ರಿಕ್ ಬಗ್ಗೆ ಇಂದು ನೋಡೋಣ…
ಡಿಟರ್ಜೆಂಟ್ ಪೌಡರ್ ಮತ್ತು ಉಪ್ಪು
ಕುಕ್ಕರ್ ಕ್ಲೀನ್ ಮಾಡಲು ನಿಮಗೆ ಒಂದು ಚಮಚ ಡಿಟರ್ಜೆಂಟ್ ಪೌಡರ್ ಮತ್ತು ಒಂದು ಚಮಚ ಉಪ್ಪು ಬೇಕಾಗುತ್ತದೆ. ಈ ಎರಡೂ ಪದಾರ್ಥಗಳು ಕ್ಲೀನಿಂಗ್ ಏಜೆಂಟ್‌ಗಳಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾದರೆ ಇದನ್ನು ಹೇಗೆ ಉಪಯೋಗಿಸಬೇಕೆಂದು ಹಂತ ಹಂತವಾಗಿ ನೋಡೋಣ. ಮೊದಲು ಕುಕ್ಕರ್ ನಲ್ಲಿ ನೀರು ತುಂಬಿ. ನೀರು ಬಿಸಿ ಮಾಡಲು ಒಲೆಯ ಮೇಲೆ ಇರಿಸಿ.
ನಿಂಬೆಹಣ್ಣು
ಈಗ ನೀವು ಇದೇ ನೀರಿಗೆ ಡಿಟರ್ಜೆಂಟ್ ಪೌಡರ್ ಮತ್ತು ಉಪ್ಪನ್ನು ಸೇರಿಸಬೇಕು. ಕುಕ್ಕರ್ ತುಂಬಾ ಕೊಳಕಾಗಿದ್ದರೆ ನೀವು ಈ ಮಿಶ್ರಣಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಕೂಡ ಸೇರಿಸಬಹುದು. ಈ ಮಿಶ್ರಣವನ್ನು 2-3 ಬಾರಿ ಕುದಿಸಬೇಕು.
ತಣ್ಣಗಾಗಲು ಬಿಡಿ
ಈಗ ಕುಕ್ಕರ್ ಅನ್ನು ಸ್ಪರ್ಶಿಸುವಾಗ ನಿಮ್ಮ ಕೈಗಳು ಸುಡದಂತೆ ನೀರನ್ನು ಸ್ವಲ್ಪ ತಣ್ಣಗಾಗಲು ಬಿಡಿ. ಇದರ ನಂತರ ಸ್ಕ್ರಬ್ಬರ್ ಸಹಾಯದಿಂದ ಇಡೀ ಕುಕ್ಕರ್ ಅನ್ನು ಚೆನ್ನಾಗಿ ಸ್ಕ್ರಬ್ ಮಾಡಿ. ಈಗ ನೀವು ಕುಕ್ಕರ್ ಅನ್ನು ಶುದ್ಧ ನೀರಿನಿಂದ ತೊಳೆಯಬಹುದು. ಕುಕ್ಕರ್ ಅನ್ನು ತೊಳೆದ ನಂತರ ಅದೇ ಕೊಳಕು ಮತ್ತು ಕಪ್ಪು ಕುಕ್ಕರ್ ಸ್ವಚ್ಛವಾಗಿ ಮತ್ತು ಹೊಳೆಯುತ್ತಿರುವುದನ್ನು ನೀವು ನೋಡುತ್ತೀರಿ.
ಸಮಯ ಮತ್ತು ಶ್ರಮ ವ್ಯರ್ಥ ಮಾಡಬೇಕಾಗಿಲ್ಲ
ಕುಕ್ಕರ್ ಹೆಚ್ಚಾಗಿ ಮಸಾಲೆಗಳು, ಅರಿಶಿನ ಮತ್ತು ಎಣ್ಣೆಯಿಂದ ಕಲೆಗಳಾಗಿಬಿಡುತ್ತವೆ. ಈ ಕಲೆಗಳನ್ನು ತೆಗೆದುಹಾಕುವುದು ಸಾಮಾನ್ಯವಾಗಿ ಸಾಕಷ್ಟು ಪ್ರಯಾಸಕರವಾಗಿರುತ್ತದೆ. ಆದರೆ ಈ ಟ್ರಿಕ್‌ನಿಂದ ನೀವು ನಿಮ್ಮ ಸಮಯ ಮತ್ತು ಶ್ರಮವನ್ನು ವ್ಯರ್ಥ ಮಾಡಬೇಕಾಗಿಲ್ಲ.
ರಿಸಲ್ಟ್ ನೋಡಿದ್ರೆ ಖುಷಿಯಾಗುವಿರಿ
ಈ ಹ್ಯಾಕ್‌ನಲ್ಲಿ ನಿಮ್ಮ ಕುಕ್ಕರ್ ಅನ್ನು ಮಾತ್ರವಲ್ಲದೆ, ಇತರ ಪಾತ್ರೆಗಳನ್ನು ಸಹ ಸುಲಭವಾಗಿ ಸ್ವಚ್ಛಗೊಳಿಸಬಹುದು. ಈ ಶುಚಿಗೊಳಿಸುವ ಟ್ರಿಕ್ ಅನ್ನು ಪ್ರಯತ್ನಿಸಲು ಮರೆಯದಿರಿ. ಫಲಿತಾಂಶ ನೋಡಿ ನೀವು ಸಾಕಷ್ಟು ಖುಷಿಯಾಗುವಿರಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
