ಮೊಸರು ಖಾಲಿಯಾಗಿದ್ಯಾ? ಕೇವಲ 15 ನಿಮಿಷದಲ್ಲಿ ಹೀಗೆ ಮೊಸರು ತಯಾರಿಸಿ
ಹಲವು ಬಾರಿ ನಾವು ಆತುರದಲ್ಲಿ ಮೊಸರು ತಯಾರಿಸಲು ಮರೆತುಬಿಡುತ್ತೇವೆ. ಕೊನೆ ಗಳಿಗೆಯಲ್ಲಿ ಮೊಸರು ಇಲ್ಲ ಅನ್ನೋದು ಗೊತ್ತಾಗುತ್ತೆ. ಇಂತಹ ಸಂದರ್ಭದಲ್ಲಿ ಸುಲಭವಾಗಿ ಕೇವಲ 15 ನಿಮಿಷಗಳಲ್ಲಿ ಮೊಸರು ತಯಾರಿಸೋದು ಹೇಗೆ ಅನ್ನೋದನ್ನು ತಿಳಿಯೋಣ.

ಮನೆಯಲ್ಲಿ ಮೊಸರು ಖಾಲಿ ಆಗಿದ್ಯಾ?
ಮೊಸರು ಆರೋಗ್ಯಕರ ಜೊತೆಗೆ ರುಚಿಕರವಾದ ಆಹಾರವೂ ಹೌದು. ನಮ್ಮಲ್ಲಿ ಹಲವು ಜನ ಪ್ರತಿದಿನ ಮೊಸರು ಸೇವಿಸುತ್ತಾರೆ, ಹಾಗಾಗಿ ಹೆಚ್ಚಾಗಿ ಮನೆಯಲ್ಲಿಯೇ ಮೊಸರು ತಯಾರಿಸುತ್ತಾರೆ. ಆದರೆ, ಕೆಲವೊಮ್ಮೆ, ಆತುರದಲ್ಲಿ, ನಾವು ಮೊಸರು ಮಾಡಲು ಮರೆತುಬಿಡುತ್ತೇವೆ, ಊಟ ಮಾಡುವ ಸಮಯಕ್ಕೆ ಅಯ್ಯೋ ಮೊಸರು ಇಲ್ಲ ಅನ್ನೋದು ಗೊತ್ತಾಗುತ್ತದೆ.
ಸಿಂಪಲ್ ವಿಧಾನದ ಮೂಲಕ ಮೊಸರು ತಯಾರಿಸಿ
ಕೆಲವೊಮ್ಮೆ, ಅತಿಥಿಗಳು ಅನಿರೀಕ್ಷಿತವಾಗಿ ಬಂದಾಗ, ಮೊಸರು ಇಲ್ಲದೇ ಹೋದರೆ ಟೆನ್ಶನ್ ಆಗುತ್ತದೆ. ಆದರೆ ಇನ್ನು, ಚಿಂತಿಸುವ ಅಗತ್ಯವಿಲ್ಲ ಅಥವಾ ಮಾರುಕಟ್ಟೆಗೆ ಹೋಗುವ ಅಗತ್ಯವಿಲ್ಲ. ಈ ಸರಳ ಟಿಪ್ಸ್ ಬಳಸಿ ನೀವು ಕೇವಲ 15 ನಿಮಿಷಗಳಲ್ಲಿ ಮನೆಯಲ್ಲಿ ದಪ್ಪ, ಕೆನೆಭರಿತ ಮತ್ತು ಪಪ್ರ್ಹೆಕ್ಟ್ ಮೊಸರನ್ನು ತಯಾರಿಸಬಹುದು.
15 ನಿಮಿಷಗಳಲ್ಲಿ ಗಟ್ಟಿ ಮೊಸರು ತಯಾರಿಸಿ
ಮೊದಲು, ಹಾಲನ್ನು ಕುದಿಸಿ. ಕುದಿಸಿದ ನಂತರ, ಕಡಿಮೆ ಉರಿಯಲ್ಲಿ 2-3 ನಿಮಿಷ ಕುದಿಸಿ. ಇದು ದಪ್ಪ ಮತ್ತು ಕೆನೆಯಂತಹ ಮೊಸರನ್ನು ಉತ್ಪಾದಿಸುತ್ತದೆ. ಹಾಲನ್ನು ಒಲೆಯಿಂದ ತೆಗೆದು ಸ್ವಲ್ಪ ತಣ್ಣಗಾಗಲು ಬಿಡಿ. ಆದರೆ ಹಾಲು ಉಗುರು ಚೆಚ್ಚಗೆ ಇರುವಂತೆ ನೋಡಿ.
ಪ್ರೆಶರ್ ಕುಕ್ಕರ್ ನಲ್ಲಿಡಿ
ಈಗ, ಉಗುರುಬೆಚ್ಚಗಿನ ಹಾಲಿಗೆ 1-2 ಟೀ ಚಮಚ ತಾಜಾ ಮೊಸರು ಸೇರಿಸಿ, ನಂತರ ಮೊಸರು ಕರಗುವವರೆಗೆ ಚೆನ್ನಾಗಿ ತಿರುಗಿಸುತ್ತಿರಿ. ನಂತರ, ಪಾತ್ರೆಯನ್ನು ಮುಚ್ಚಿ. ಪ್ರೆಶರ್ ಕುಕ್ಕರ್ ತೆಗೆದುಕೊಂಡು, ಸ್ವಲ್ಪ ನೀರು (1-2 ಗ್ಲಾಸ್) ಸೇರಿಸಿ, ಮತ್ತು ಮೊಸರಿನೊಂದಿಗೆ ಪಾತ್ರೆಯನ್ನು ಒಳಗೆ ಇರಿಸಿ. ನೀರಿನ ಮಟ್ಟವು ಪಾತ್ರೆಯ ಅರ್ಧದಷ್ಟು ಇದ್ದರೆ ಸಾಕು. ಕುಕ್ಕರ್‌ನ ಮುಚ್ಚಳವನ್ನು ಮುಚ್ಚಿ, ವಿಸಿಲ್ ಹಾಕಬೇಡಿ. ಕಡಿಮೆ ಉರಿಯಲ್ಲಿ ಅಥವಾ 12-15 ನಿಮಿಷಗಳ ಹಾಗೆಯೇ ಬಿಡಿ.
ಇದನ್ನು ನೆನಪಿನಲ್ಲಿಡಿ:
ಪ್ರೆಶರ್ ಕುಕ್ಕರ್‌ನ ಸೌಮ್ಯವಾದ ಶಾಖವು ಮೊಸರಿನಲ್ಲಿರುವ ಬ್ಯಾಕ್ಟೀರಿಯಾವನ್ನು ಸಕ್ರಿಯಗೊಳಿಸುತ್ತದೆ ಮತ್ತು ಮೊಸರು ಬೇಗನೆ ಗಟ್ಟಿಯಾಗುತ್ತದೆ. 15 ನಿಮಿಷಗಳ ನಂತರ ಪ್ರೆಶರ್ ಕುಕ್ಕರ್ ತೆರೆಯಿರಿ; ಅಷ್ಟೊತ್ತಿಗೆ, ಮೊಸರು ಗಟ್ಟಿಯಾಗಿರುತ್ತದೆ. ಅದು ಸ್ವಲ್ಪ ಸಡಿಲವಾಗಿ ಕಂಡುಬಂದರೆ, ಅದನ್ನು ಇನ್ನೊಂದು 5-10 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ, ತಣ್ಣಗಾಗಲು 30 ನಿಮಿಷಗಳ ಕಾಲ ಫ್ರೀಜ್ ನಲ್ಲಿಡಿ. ಇದು ರುಚಿಯನ್ನು ಸುಧಾರಿಸುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

