ಅಡುಗೆ ಮಾಡುವಾಗ ಬೆಂಡೆಕಾಯಿಯಲ್ಲಿ ಸ್ವಲ್ಪವೂ ಲೋಳೆ ಇರಬಾರದಂದ್ರೆ ಜಸ್ಟ್ ಹೀಗ್ ಮಾಡಿ
Okra Cooking Hacks: ಕೆಲವರು ಬೆಂಡೆಕಾಯಿ ಪಲ್ಯವನ್ನು ಟೇಸ್ಟಿಯಾಗಿ, ಜಿಗುಟು ಇಲ್ಲದಂತೆ ಮಾಡುತ್ತಾರೆ. ಆದರೆ ಕೆಲವರು ಎಷ್ಟೇ ಪ್ರಯತ್ನಿಸಿದರೂ ಪಲ್ಯ ಜಿಡ್ಡು ಜಿಡ್ಡಾಗಿಯೇ ಇರುತ್ತದೆ. ಹೀಗಾಗಬಾರದು ಅಂದ್ರೆ ಏನು ಮಾಡಬೇಕು ಗೊತ್ತಾ?.

ಬೆಂಡೆಕಾಯಿಯಲ್ಲಿರುವ ಪೋಷಕಾಂಶಗಳು
ಬೆಂಡೆಕಾಯಿಯಲ್ಲಿ ಫೈಬರ್, ವಿಟಮಿನ್ ಎ, ಸಿ, ಕೆ, ಮೆಗ್ನೀಶಿಯಂನಂತಹ ಪೋಷಕಾಂಶಗಳಿವೆ. ಇದು ಸಕ್ಕರೆ ಕಾಯಿಲೆ ನಿಯಂತ್ರಿಸಲು, ಜೀರ್ಣಕ್ರಿಯೆ ಸುಧಾರಿಸಲು ಮತ್ತು ಮೂಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
ಕತ್ತರಿಸುವ ಮೊದಲೇ ಚೆನ್ನಾಗಿ ತೊಳೆಯಿರಿ
ಇನ್ನು ಅಡುಗೆ ಮಾಡುವಾಗ ಬೆಂಡೆಕಾಯಿ ಲೋಳೆ ಸಿಗುತ್ತಿದ್ದರೆ ಕತ್ತರಿಸುವ ಮೊದಲೇ ಚೆನ್ನಾಗಿ ತೊಳೆಯಿರಿ. ತಕ್ಷಣ ಕತ್ತರಿಸಬೇಡಿ. ಅವು ಸಂಪೂರ್ಣವಾಗಿ ಒಣಗಿದ ನಂತರವೇ ಕತ್ತರಿಸಿ. ಟಿಶ್ಯೂ ಪೇಪರ್‌ನಿಂದ ಒರೆಸಿದರೆ ತೇವಾಂಶ ಇರುವುದಿಲ್ಲ.
ಬೆಂಡೆಕಾಯಿ ತುಂಡುಗಳು ಅಂಟಿಕೊಳ್ಳಲ್ಲ
ಬೆಂಡೆಕಾಯಿ ಪಲ್ಯ ಮಾಡುತ್ತಿದ್ದರೆ ಜಿಡ್ಡಾಗದಂತೆ ಮಾಡಲು ಮೊಸರು ಬಳಸಿ. ಹುರಿಯುವಾಗ ಒಂದು ಚಮಚ ಮೊಸರು ಹಾಕಿದರೆ ತುಂಡುಗಳು ಅಂಟಿಕೊಳ್ಳುವುದಿಲ್ಲ. ರುಚಿಯೂ ಹೆಚ್ಚುತ್ತದೆ. ನಿಂಬೆರಸ ಅಥವಾ ಹುಣಸೆ ರಸವನ್ನೂ ಬಳಸಬಹುದು.
ಕಡಲೆ ಹಿಟ್ಟನ್ನು ಹಾಕಿ
ಬೆಂಡೆಕಾಯಿ ಪಲ್ಯದಲ್ಲಿ ಕಡಲೆ ಹಿಟ್ಟನ್ನು ಹಾಕಿದರೂ ಪಲ್ಯ ಜಿಡ್ಡಾಗುವುದಿಲ್ಲ. ಇದರಿಂದ ರುಚಿ ಕೆಡುವುದಿಲ್ಲ, ಬದಲಾಗಿ ಇನ್ನಷ್ಟು ಹೆಚ್ಚುತ್ತದೆ. ಬೆಂಡೆಕಾಯಿ ಹುರಿಯುವಾಗಲೇ ಕಡಲೆ ಹಿಟ್ಟನ್ನು ಸೇರಿಸಬೇಕು.
ಹುರಿಯುವಾಗ ಉಪ್ಪನ್ನು ಹಾಕಬೇಡಿ
ಬೆಂಡೆಕಾಯಿಗಳನ್ನು ಸರಿಯಾಗಿ ಹುರಿಯದಿದ್ದರೂ ಪಲ್ಯ ಜಿಡ್ಡಾಗುತ್ತದೆ. ಆದ್ದರಿಂದ ಅವುಗಳನ್ನು ಚೆನ್ನಾಗಿ ಹುರಿಯಿರಿ. ಹುರಿಯುವಾಗ ಉಪ್ಪನ್ನು ಹಾಕಬೇಡಿ. 8-10 ನಿಮಿಷ ಹುರಿದ ನಂತರ ಬೇರೆ ಪದಾರ್ಥಗಳನ್ನು ಸೇರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

