Kitchen Tips: ಗ್ಯಾಸ್ ಸ್ಟವ್ ಬಳಿ ಎಂದಿಗೂ ಇಡಬಾರದ 6 ವಸ್ತುಗಳಿವು
Things to Keep Away From Gas Stove: ಸುಲಭವಾಗಿ ಬಳಸಲು ಅಡುಗೆಗೆ ಬೇಕಾದ ಸಾಮಾನುಗಳನ್ನೆಲ್ಲಾ ನಾವು ಗ್ಯಾಸ್ ಸ್ಟವ್ ಹತ್ತಿರ ಇಡುತ್ತೇವೆ. ಆದರೆ ಹೀಗೆ ಇಡುವುದು ಸುರಕ್ಷಿತವಲ್ಲ.

ಗ್ಯಾಸ್ ಸ್ಟವ್ ಬಳಿ ಇಡುವುದು ಸುರಕ್ಷಿತವಲ್ಲ
ಅಡುಗೆಮನೆಯಲ್ಲಿ ಗ್ಯಾಸ್ ಸ್ಟವ್ ಹತ್ತಿರವೇ ನಾವು ಅಡುಗೆಗೆ ಬಳಸುವ ಹೆಚ್ಚಿನ ವಸ್ತುಗಳನ್ನು ಇಡುತ್ತೇವೆ. ಇದು ಕೆಲಸವನ್ನು ಸುಲಭಗೊಳಿಸಿದರೂ ಎಲ್ಲಾ ರೀತಿಯ ವಸ್ತುಗಳನ್ನು ಗ್ಯಾಸ್ ಸ್ಟವ್ ಬಳಿ ಇಡುವುದು ಸುರಕ್ಷಿತವಲ್ಲ. ಒಂದು ವೇಳೆ ನೀವು ಈ ವಸ್ತುಗಳನ್ನು ಇಟ್ಟಿದ್ದರೆ ತಕ್ಷಣವೇ ತೆಗೆದುಬಿಡಿ.
ಅಡುಗೆ ಎಣ್ಣೆ
ಅಡುಗೆಗೆ ಬಳಸುವ ಎಣ್ಣೆಯನ್ನು ಎಂದಿಗೂ ಗ್ಯಾಸ್ ಸ್ಟವ್ ಬಳಿ ಇಡಬಾರದು. ನಿರಂತರವಾಗಿ ಶಾಖ ತಗುಲಿದಾಗ ಅದು ಬೇಗನೆ ಹಾಳಾಗಲು ಕಾರಣವಾಗುತ್ತದೆ. ಇದರಿಂದ ಎಣ್ಣೆಯ ರುಚಿ ಮತ್ತು ಗುಣಮಟ್ಟ ಹಾಳಾಗಬಹುದು.
ಮಸಾಲೆ ಪದಾರ್ಥ
ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳನ್ನು ಗ್ಯಾಸ್ ಸ್ಟವ್ ಬಳಿ ಇಡುವುದನ್ನು ತಪ್ಪಿಸಬೇಕು. ಶಾಖ ತಗುಲಿದಾಗ ಅದರ ರಚನೆ ಮತ್ತು ರುಚಿಯಲ್ಲಿ ಬದಲಾವಣೆಗಳಾಗುತ್ತವೆ. ಮಸಾಲೆ ಪದಾರ್ಥಗಳನ್ನು ಅಡುಗೆಮನೆಯ ಶೆಲ್ಫ್‌ನಲ್ಲಿ ಇಡುವುದು ಉತ್ತಮ.
ಟಿಶ್ಯೂ ಪೇಪರ್
ಟಿಶ್ಯೂ ಪೇಪರ್ ಅನ್ನು ಗ್ಯಾಸ್ ಸ್ಟವ್ ಬಳಿ ಇಡುವುದನ್ನು ತಪ್ಪಿಸಿ. ಇದು ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆ ಬಹಳ ಹೆಚ್ಚಿರುತ್ತದೆ. ಆದ್ದರಿಂದ ಇದನ್ನು ಗ್ಯಾಸ್ ಸ್ಟವ್‌ನಿಂದ ದೂರ ಇಡಲು ಗಮನಹರಿಸಿ.
ಎಲೆಕ್ಟ್ರಿಕ್ ಉಪಕರಣಗಳು
ಗ್ಯಾಸ್ ಸ್ಟವ್‌ನಿಂದ ಬರುವ ಅತಿಯಾದ ಶಾಖವು ಎಲೆಕ್ಟ್ರಿಕ್ ಉಪಕರಣಗಳು ಬೇಗನೆ ಹಾಳಾಗಲು ಕಾರಣವಾಗುತ್ತದೆ. ಆದ್ದರಿಂದ ಇಂತಹ ವಸ್ತುಗಳನ್ನು ಎಂದಿಗೂ ಗ್ಯಾಸ್ ಸ್ಟವ್ ಹತ್ತಿರ ಇಡಬಾರದು.
ಹಾಳಾಗುವ ಆಹಾರಗಳು
ಬೇಗನೆ ಹಾಳಾಗುವ ಆಹಾರ ಪದಾರ್ಥಗಳನ್ನು ಗ್ಯಾಸ್ ಸ್ಟವ್ ಬಳಿ ಇಡುವುದನ್ನು ತಪ್ಪಿಸಿ. ಹೆಚ್ಚು ಶಾಖ ಅಥವಾ ಬೆಳಕು ಇಲ್ಲದ ಸ್ಥಳದಲ್ಲಿ ಇದನ್ನು ಇಡಬೇಕು. ತರಕಾರಿಗಳು, ಹಣ್ಣುಗಳನ್ನು ಕೋಣೆಯ ಉಷ್ಣಾಂಶದಲ್ಲಿ ಇಡಬಹುದು.
ಕ್ಲೀನರ್‌ಗಳು
ಕ್ಲೀನರ್‌ಗಳು ಹಲವು ಬಗೆಯ ರಾಸಾಯನಿಕಗಳಿಂದ ಮಾಡಲ್ಪಟ್ಟಿರುತ್ತವೆ. ಆದ್ದರಿಂದ ಇದು ಬೆಂಕಿ ಹೊತ್ತಿಕೊಳ್ಳುವ ಸಾಧ್ಯತೆಯೂ ಬಹಳ ಹೆಚ್ಚಿರುತ್ತದೆ. ಗ್ಯಾಸ್ ಸ್ಟವ್ ಬಳಿ ಕ್ಲೀನರ್‌ಗಳನ್ನು ಇಡುವುದನ್ನು ತಪ್ಪಿಸಿ.