MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Kitchen
  • ಎಷ್ಟೇ ವಿಶಲ್ ಕೂಗಿಸಿದ್ರೂ ಮಾಂಸ ರಬ್ಬರ್‌ನಂತಿದ್ರೆ ಬೆಣ್ಣೆಯಂತೆ ಮೃದುವಾಗಲು ಅಜ್ಜಿಯರು ಹೀಗೆ ಮಾಡ್ತಿದ್ರಂತೆ!

ಎಷ್ಟೇ ವಿಶಲ್ ಕೂಗಿಸಿದ್ರೂ ಮಾಂಸ ರಬ್ಬರ್‌ನಂತಿದ್ರೆ ಬೆಣ್ಣೆಯಂತೆ ಮೃದುವಾಗಲು ಅಜ್ಜಿಯರು ಹೀಗೆ ಮಾಡ್ತಿದ್ರಂತೆ!

Cook mutton fast: ಮಟನ್ ಬೇಯಲು ತೆಗೆದುಕೊಳ್ಳುವ ಸಮಯ ನೋಡಿದರೆ ಅಡುಗೆ ಮಾಡುವುದೇ ಸಾಕು ಅನ್ನಿಸಿಬಿಡುತ್ತದೆ. ಕೆಲವೊಮ್ಮೆ ಎಷ್ಟೇ ವಿಶಲ್ ಹಾಕಿಸಿದರೂ ಮಾಂಸ ರಬ್ಬರ್‌ನಂತೆಯೇ ಇರುತ್ತದೆ. ಇಂತಹ ಮಟನ್ ಬಹಳ ಬೇಗನೆ ಬೇಯಿಸಲು ಇಲ್ಲಿದೆ ನಮ್ಮ ಅಜ್ಜಿ ಕಾಲದ ಅದ್ಭುತ ಟಿಪ್ಸ್‌. 

2 Min read
Author : Ashwini HR
Published : Jun 27 2026, 12:03 PM IST
Share this Photo Gallery
  • FB
  • TW
  • Linkdin
  • Whatsapp
16
ಇಂಥಹ ಮಟನ್‌ಗೆ ಏನ್ ಮಾಡ್ಬೇಕು?
Image Credit : Getty

ಇಂಥಹ ಮಟನ್‌ಗೆ ಏನ್ ಮಾಡ್ಬೇಕು?

ಇಂಥಹ ಮಟನ್‌ಗೆ ಏನ್ ಮಾಡ್ಬೇಕು?
ಸಂಡೆ ಬಂತೆಂದರೆ ನಾನ್-ವೆಜ್ ಪ್ರಿಯರ ಮನೆಯಲ್ಲಿ ಮಾಂಸದ ಅಡುಗೆ ಘಮಘಮಿಸುತ್ತಿರುತ್ತದೆ. ಅದರಲ್ಲೂ ಹೆಚ್ಚಿನವರಿಗೆ ಚಿಕನ್‌ಗಿಂತ ಮಟನ್ ಸವಿಯುವುದು ಎಂದರೆ ಎಲ್ಲಿಲ್ಲದ ಪ್ರೀತಿ. ಆದರೆ ಮಟನ್ ಅಡುಗೆ ಮಾಡುವಾಗ ಇರುವ ಒಂದು ದೊಡ್ಡ ಸಮಸ್ಯೆ ಎಂದರೆ ಅದು ಬೇಗನೆ ಬೇಯುವುದಿಲ್ಲ. ಚಿಕನ್ ಕೆಲವೇ ನಿಮಿಷಗಳಲ್ಲಿ ಬೆಂದು ಹೋದರೆ, ಮಟನ್ ಬೇಯಲು ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ. ಅದರಲ್ಲೂ ಮಟನ್ ಸ್ವಲ್ಪ ಬಲಿತಿದ್ದರೆ (Tough Meat) ಎಷ್ಟೇ ವಿಶಲ್ ಕೂಗಿಸಿದರೂ ಸರಿಯಾಗಿ ಬೇಯುವುದಿಲ್ಲ.

ಹಾಗಾದರೆ ಮಟನ್ ಅನ್ನು ಹೋಟೆಲ್ ಶೈಲಿಯಲ್ಲಿ ಬೆಣ್ಣೆಯಂತೆ ಮೃದುವಾಗಿ ಬೇಯಿಸುವುದು ಹೇಗೆ? ನಮ್ಮ ಅಜ್ಜಿ-ಮುತ್ತಜ್ಜಿಯರ ಕಾಲದಿಂದಲೂ ಅನುಸರಿಸಿಕೊಂಡು ಬರುತ್ತಿರುವ ಕೆಲವು ಸುಲಭ ಟಿಪ್ಸ್‌ಗಳು ಇಲ್ಲಿವೆ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ
Image Credit : Getty

1. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ

1. ಉಗುರುಬೆಚ್ಚಗಿನ ನೀರಿನಿಂದ ತೊಳೆಯಿರಿ
ಸಾಮಾನ್ಯವಾಗಿ ನಾವು ಮಟನ್ ಅನ್ನು ನಲ್ಲಿಯ ತಣ್ಣೀರಿನಿಂದ ತೊಳೆಯುತ್ತೇವೆ. ಆದರೆ ಮಟನ್ ಅನ್ನು ತಣ್ಣೀರಿನ ಬದಲು ಉಗುರುಬೆಚ್ಚಗಿನ (Lukewarm Water) ನೀರಿನಿಂದ ತೊಳೆದರೆ ಅದು ಬೇಗನೆ ಬೇಯಲು ಸಹಾಯ ಮಾಡುತ್ತದೆ. ಇದು ಮಾಂಸದ ನಾರುಗಳನ್ನು ಸಡಿಲಗೊಳಿಸುತ್ತದೆ.

Related Articles

Related image1
ಎರಡೇ ಎರಡು ಕಾಳು ಸಾಕು.. ಕುಕ್ಕರ್ ಬೇಕಿಲ್ಲ, ಪಾತ್ರೆಯಲ್ಲೇ ಮಟನ್ ಬೆಣ್ಣೆಯಂತೆ ಮೆತ್ತಗೆ ಬೇಯುತ್ತೆ!
Related image2
ಒಗ್ಗರಣೆ ಇಲ್ಲದೆ ರುಚಿಕರವಾದ ಮಟನ್ ಕರಿ ಮಾಡುವುದು ಹೇಗೆ? ಈ ರೀತಿ ಮಾಡಿ ನೋಡಿ, ಟೇಸ್ಟ್ ಡಬ್ಬಲ್ ಆಗುತ್ತೆ!
36
2. ಗಟ್ಟಿ ಮಾಂಸಕ್ಕೆ ಮೊಸರಿನ ಮಸಾಲೆ
Image Credit : gemini ai

2. ಗಟ್ಟಿ ಮಾಂಸಕ್ಕೆ ಮೊಸರಿನ ಮಸಾಲೆ

2. ಗಟ್ಟಿ ಮಾಂಸಕ್ಕೆ ಮೊಸರಿನ ಮಸಾಲೆ
ನೀವು ತಂದ ಮಟನ್ ಸ್ವಲ್ಪ ಗಟ್ಟಿಯಾಗಿದ್ದರೆ ಅದನ್ನು ಬೇಯಿಸುವ ಮೊದಲು ಮ್ಯಾರಿನೇಟ್ ಮಾಡುವುದು ಬಹಳ ಮುಖ್ಯ. ಮಟನ್ ತೊಳೆದ ನಂತರ ಅದಕ್ಕೆ ಸ್ವಲ್ಪ ಅರಿಶಿನ, ಎರಡು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಅರ್ಧ ಕಪ್ ಗಟ್ಟಿ ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಇದನ್ನು ಕನಿಷ್ಠ 5 ರಿಂದ 6 ಗಂಟೆಗಳ ಕಾಲ ಹಾಗೆಯೇ ಬಿಡಿ. ಮೊಸರಿನಲ್ಲಿರುವ ಆಮ್ಲೀಯ ಗುಣವು ಮಾಂಸವನ್ನು ಮೃದುಗೊಳಿಸುತ್ತದೆ. ಹೀಗೆ ಮಾಡಿದರೆ ಎಂಥಹ ಬಲಿತಿರುವ ಮಟನ್ ಕೂಡ ಕೇವಲ 10 ನಿಮಿಷದಲ್ಲಿ ಬೆಣ್ಣೆಯಂತೆ ಮೃದುವಾಗುತ್ತದೆ.

46
3. ನಿಂಬೆ ರಸದ ಮ್ಯಾಜಿಕ್
Image Credit : Getty

3. ನಿಂಬೆ ರಸದ ಮ್ಯಾಜಿಕ್

3. ನಿಂಬೆ ರಸದ ಮ್ಯಾಜಿಕ್
ಒಂದು ವೇಳೆ ನೀವು ತಂದ ಮಟನ್ ಎಳೆಯದಾಗಿದ್ದರೆ (Tender Mutton), ಅದನ್ನು ಅತಿ ಹೆಚ್ಚು ಹೊತ್ತು ಮ್ಯಾರಿನೇಟ್ ಮಾಡುವ ಅಗತ್ಯವಿಲ್ಲ. ಅಂತಹ ಮಟನ್ ಅನ್ನು ತೊಳೆದ ನಂತರ ಸ್ವಲ್ಪ ನಿಂಬೆ ರಸದೊಂದಿಗೆ ಮಿಕ್ಸ್ ಮಾಡಿ 10-15 ನಿಮಿಷ ಬಿಡಿ. ನಿಂಬೆ ರಸವು ಮಾಂಸದ ಪ್ರೋಟೀನ್ ಅನ್ನು ಬೇಗನೆ ಒಡೆಯಲು ಸಹಾಯ ಮಾಡುತ್ತದೆ, ಇದರಿಂದ ಮಟನ್ ಬೇಗನೆ ಬೇಯುತ್ತದೆ.

56
4. ಅಡುಗೆ ಮಾಡುವಾಗ ಎಣ್ಣೆಯ ಬಳಕೆ
Image Credit : freepik

4. ಅಡುಗೆ ಮಾಡುವಾಗ ಎಣ್ಣೆಯ ಬಳಕೆ

4. ಅಡುಗೆ ಮಾಡುವಾಗ ಎಣ್ಣೆಯ ಬಳಕೆ
ಮಟನ್ ಬೇಯಲು ಇಟ್ಟಾಗ ಅದಕ್ಕೆ ಎರಡು ಟೀ ಚಮಚ ಎಣ್ಣೆಯನ್ನು ಸೇರಿಸಿ. ಎಣ್ಣೆಯು ಶಾಖವನ್ನು ಸಮವಾಗಿ ಹರಡಲು ಸಹಾಯ ಮಾಡುತ್ತದೆ ಮತ್ತು ಮಾಂಸದ ಒಳಗಿನ ತೇವಾಂಶವನ್ನು ಹಾಗೆಯೇ ಉಳಿಸುತ್ತದೆ. ಇದರಿಂದ ಮಟನ್ ಒಣಗಿದಂತೆ (Dry) ಆಗದೆ ಜ್ಯೂಸಿಯಾಗಿ ಬೇಯುತ್ತದೆ.

66
5. ಹಸಿ ಪರಂಗಿಕಾಯಿ ತುಂಡುಗಳು (Special Tip)
Image Credit : Getty

5. ಹಸಿ ಪರಂಗಿಕಾಯಿ ತುಂಡುಗಳು (Special Tip)

5. ಹಸಿ ಪರಂಗಿಕಾಯಿ ತುಂಡುಗಳು (Special Tip)
ಹಿಂದಿನ ಕಾಲದಲ್ಲಿ ಮಟನ್ ಬೇಗ ಬೇಯಲು ಹಸಿ ಪರಂಗಿಕಾಯಿಯ (Raw Papaya) ಸಣ್ಣ ತುಂಡನ್ನು ಅಥವಾ ಅದರ ಸಿಪ್ಪೆಯನ್ನು ಮಟನ್ ಜೊತೆ ಹಾಕುತ್ತಿದ್ದರು. ಪರಂಗಿಕಾಯಿಯಲ್ಲಿರುವ 'ಪಪೈನ್' ಎಂಬ ಕಿಣ್ವವು ಮಾಂಸವನ್ನು ಅತ್ಯಂತ ವೇಗವಾಗಿ ಮೃದುಗೊಳಿಸುವ ಶಕ್ತಿ ಹೊಂದಿದೆ.

ಇನ್ನು ಮುಂದೆ ಮಟನ್ ತಂದಾಗ ಈ ಸರಳ ಮನೆಮದ್ದುಗಳನ್ನು ಪಾಲಿಸಿ. ನಿಮ್ಮ ಸಮಯವೂ ಉಳಿಯುತ್ತದೆ ಮತ್ತು ಅಡುಗೆಯ ರುಚಿಯೂ ಅದ್ಭುತವಾಗಿರುತ್ತದೆ! 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ಜೀವನಶೈಲಿ
ಅಡುಗೆಮನೆ ಸಲಹೆಗಳು
ಆಹಾರ

Latest Videos
Recommended Stories
Recommended image1
ಗಾಜಿನ ಲೋಟದ ಮೇಲೆ ಬಿಳಿ ಕಲೆಗಳು ಕೂತು ಮಬ್ಬಾಗಿದೆಯಾ? ಸೋಪ್ ಹಚ್ಚಿ ತೊಳೆದ್ರೆ ಹೋಗಲ್ಲ, ಈ ಟ್ರಿಕ್ಸ್ ಬಳಸಿ
Recommended image2
ರಾಸಾಯನಿಕ ದುಬಾರಿ ಡಿಷ್​ವಾಷ್​ ಪಕ್ಕಕ್ಕಿಡಿ: ಕಿತ್ತಳೆ, ನಿಂಬೆಹಣ್ಣಿನಿಂದ ತಯಾರಿಸಿ ಈ ಲಿಕ್ವಿಡ್​- ಎಲ್ಲವೂ ಫಳಫಳ
Recommended image3
ಹತ್ತು ರೂಪಾಯಿ ಉಳಿಸಲು ಹೋಗಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು! ನಿಮ್ಮ ಅಡುಗೆ ಮನೆಯ ಚಾಕು ಹೀಗಿರಲಿ
Related Stories
Recommended image1
ಎರಡೇ ಎರಡು ಕಾಳು ಸಾಕು.. ಕುಕ್ಕರ್ ಬೇಕಿಲ್ಲ, ಪಾತ್ರೆಯಲ್ಲೇ ಮಟನ್ ಬೆಣ್ಣೆಯಂತೆ ಮೆತ್ತಗೆ ಬೇಯುತ್ತೆ!
Recommended image2
ಒಗ್ಗರಣೆ ಇಲ್ಲದೆ ರುಚಿಕರವಾದ ಮಟನ್ ಕರಿ ಮಾಡುವುದು ಹೇಗೆ? ಈ ರೀತಿ ಮಾಡಿ ನೋಡಿ, ಟೇಸ್ಟ್ ಡಬ್ಬಲ್ ಆಗುತ್ತೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved