ಮಹಿಳೆಯರೇ ಎಚ್ಚರ.. ಮನೆಯೊಳಗೆ ಹಾವುಗಳು ಬರದಂತೆ ತಡೆಯುವ ಈ ಸೀಕ್ರೆಟ್ ತಿಳಿದಿರಲಿ!
ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮನೆಗಳಿಗೆ ಹಾವುಗಳು ನುಗ್ಗಬಹುದು. ಮನೆಯಲ್ಲಿ ಮತ್ತು ಅಂಗಳದಲ್ಲಿ ಹಾವುಗಳಿಗೆ ಅನುಕೂಲಕರವಾದ ವಾತಾವರಣವನ್ನು ತಪ್ಪಿಸುವುದು ಮುಖ್ಯ. ಎಲ್ಲಾದರೂ ಬಿಲಗಳು ಅಥವಾ ಪೊಟರೆಗಳು ಕಂಡುಬಂದರೆ, ಅವುಗಳನ್ನು ತಕ್ಷಣ ಮುಚ್ಚಿ.

ಹಾವುಗಳು ಕೆಲವೊಮ್ಮೆ ಮನೆಯೊಳಗೆ ಬರಬಹುದು. ಕೆಲವೊಮ್ಮೆ ಅತಿಯಾಗಿಯೇ ಬರಬಹುದು. ಹೆಚ್ಚಾಗಿ ಮಹಿಳೆಯರು ಮನೆ ಕ್ಲೀನ್ ಮಾಡುವಾಗ, ಮನೆಯೊಳಕ್ಕೆ ಓಡಾಡುವಾಗ, ಅಡುಗೆಮನೆಯೋಕ್ಕೆ ಹಾವುಗಳನ್ನು ನೋಡಬಹುದು. ಪುರುಷರಿಗಿಂತ ಹೆಚ್ಚಾಗಿ ಮಹಿಳೆಯರಿಗೆ ಹಾವಿನ ಭಯ ಹೆಚ್ಚು ಎನ್ನಲಾಗುತ್ತದೆ. ಹೀಗಾಗಿ, ಮಹಿಳೆಯರು ಹಾವಿನ ಕಾಟದಿಂದ ತಪ್ಪಿಸಿಕೊಳ್ಳುವ ಈ ಸೀಕ್ರೆಟ್ ತಿಳಿದಿರುವುದು ಒಳ್ಳೆಯದು..
ಮಳೆಗಾಲದಲ್ಲಿ ಮಾತ್ರವಲ್ಲ, ಬೇಸಿಗೆಯಲ್ಲೂ ಮನೆಗಳಿಗೆ ಹಾವುಗಳು ನುಗ್ಗಬಹುದು. ಮನೆಯಲ್ಲಿ ಮತ್ತು ಅಂಗಳದಲ್ಲಿ ಹಾವುಗಳಿಗೆ ಅನುಕೂಲಕರವಾದ ವಾತಾವರಣವನ್ನು ತಪ್ಪಿಸುವುದು ಮುಖ್ಯ. ಬಿಲಗಳು ಅಥವಾ ಪೊಟರೆಗಳಿದ್ದರೆ ಅವುಗಳನ್ನು ಮುಚ್ಚಿ.
ಒಣಗಿದ ಎಲೆಗಳು, ಮರದ ತುಂಡುಗಳು, ತೆಂಗಿನ ಗರಿ, ಕಲ್ಲುಗಳು ಮತ್ತು ಪ್ಲಾಸ್ಟಿಕ್ ವಸ್ತುಗಳು ರಾಶಿಯಾಗಿರುವ ಜಾಗಗಳು ಹಾವುಗಳಿಗೆ ಅಚ್ಚುಮೆಚ್ಚು. ಮನೆಯ ಸಮೀಪ ಅಥವಾ ಕಿಟಕಿಗಳ ಬಳಿ ಇವುಗಳನ್ನು ರಾಶಿ ಹಾಕಬೇಡಿ.
ಅಡುಗೆಮನೆ, ನೀರಿನ ಟ್ಯಾಂಕ್‌ಗಳಂತಹ ತಂಪಾದ ಸ್ಥಳಗಳ ಬಗ್ಗೆ ವಿಶೇಷ ಗಮನವಿರಲಿ. ಮನೆಯೊಳಗೆ ಬರುವ ಚರಂಡಿಗಳನ್ನು ಆಗಾಗ ಸ್ವಚ್ಛಗೊಳಿಸಿ ಮತ್ತು ಪರಿಶೀಲಿಸಿ. ಅವುಗಳನ್ನು ಸರಿಯಾಗಿ ಮುಚ್ಚಿರುವುದನ್ನು ಖಚಿತಪಡಿಸಿಕೊಳ್ಳಿ.
ಮನೆಯ ಹೊರಗಿನ ನೀರು ನಿಂತಿರುವ ಜಾಗ, ಕೊಳಗಳು ಹಾವುಗಳನ್ನು ಆಕರ್ಷಿಸುತ್ತವೆ. ಅಲ್ಲಿನ ಜೀವಿಗಳನ್ನು ಬೇಟೆಯಾಡಲು ಬರುತ್ತವೆ. ಹಲ್ಲಿ, ಇಲಿ, ಸಣ್ಣ ಪಕ್ಷಿಗಳ ಇರುವಿಕೆಯನ್ನು ಹಾವುಗಳು ಗುರುತಿಸಬಲ್ಲವು.
ಮನೆಯ ಸಮೀಪ ನಾಯಿ ಗೂಡು, ಕೋಳಿ ಗೂಡುಗಳಿದ್ದರೆ ಜಾಗರೂಕರಾಗಿರಿ. ಸಾಕುಪ್ರಾಣಿಗಳಿಗೆ ನೀಡಿದ ಆಹಾರದ ಉಳಿದ ಭಾಗವನ್ನು ತಿನ್ನಲು ಇಲಿಗಳು ಬರುವ ಸಾಧ್ಯತೆ ಹೆಚ್ಚು. ಇವುಗಳನ್ನು ಹಿಡಿಯಲು ಹಾವುಗಳು ಇಲ್ಲಿಗೆ ಬರಬಹುದು.
ಮನೆ ಮತ್ತು ತೋಟಕ್ಕೆ ರಕ್ಷಣಾ ಬೇಲಿ ಹಾಕುವುದು ಹಾವುಗಳು ಬರದಂತೆ ತಡೆಯುತ್ತದೆ. ಹಾವುಗಳಿಗೆ ಕಿರಿಕಿರಿ ಉಂಟುಮಾಡುವ ಕೆಲವು ವಾಸನೆಗಳಿವೆ. ಹಾವುಗಳ ಕಾಟವಿರುವ ಪ್ರದೇಶಗಳಲ್ಲಿ ಬೆಳ್ಳುಳ್ಳಿ ಜಜ್ಜಿ ಹಾಕುವುದು ಮತ್ತು ಸಾಂಬ್ರಾಣಿ ಹೊಗೆ ಹಾಕುವುದು ಹಾವುಗಳನ್ನು ದೂರವಿಡಬಹುದು.
ಮನೆಯಲ್ಲಿ ಹಾಕುವ ಚಪ್ಪಲಿ ಒರೆಸುವ ಮ್ಯಾಟ್ ಅನ್ನೂ ಕಡೆಗಣಿಸಬೇಡಿ. ಇದರ ಕೆಳಗೆ ಹಾವು ಸುರುಳಿ ಸುತ್ತಿಕೊಂಡು ಮಲಗಿರುವ ಘಟನೆಗಳನ್ನು ನೀವು ಕೇಳಿರಬಹುದು. ಆದ್ದರಿಂದ, ಪ್ರತಿದಿನ ಎಚ್ಚರಿಕೆಯಿಂದ ಮ್ಯಾಟ್ ಕೊಡವಿ ಹಾಕಿ.
ಮನೆಗೆ ತಾಗಿಕೊಂಡಿರುವ ಮರದ ಕೊಂಬೆಗಳನ್ನು ಕತ್ತರಿಸಿ. ಹೂವಿನ ತೋಟದ ಆರೈಕೆ ಮಾಡುವಾಗ, ಗಿಡದ ಕುಂಡಗಳನ್ನು ಎಚ್ಚರಿಕೆಯಿಂದ ಸರಿಸಿ. ಮನೆಗೆ ಹತ್ತಿರವಾಗಿ ಸೌದೆ ಅಥವಾ ಕಲ್ಲುಗಳನ್ನು ರಾಶಿ ಹಾಕಿ ಇಡುವುದನ್ನು ತಪ್ಪಿಸಿ. ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಮನೆಯ ಸಮೀಪ ಹೊರಗಡೆ ಹಾಗೂ ಒಳಗೆ ಬಿಸಾಡಬೇಡಿ
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

