Kannada

ಮನೆಯಲ್ಲೇ ತರಕಾರಿ ಬೆಳೆಯೋರು ಈ ಸೀಸನ್‌ನಲ್ಲಿ ಈ ವಿಷಯ ನೆನಪಿಡಿ

Kannada

ನೀರು ನಿಲ್ಲದಂತೆ ನೋಡಿಕೊಳ್ಳಿ

ಗ್ರೋಬ್ಯಾಗ್‌ ಅಥವಾ ಪಾಟ್‌ಗಳಲ್ಲಿ ನೀರು ನಿಲ್ಲಬಾರದು. ಇದಕ್ಕಾಗಿ ಸರಿಯಾದ ಡ್ರೈನೇಜ್ ವ್ಯವಸ್ಥೆ ಇರೋದನ್ನ ಖಚಿತಪಡಿಸಿಕೊಳ್ಳಿ. ನೀರು ಸರಾಗವಾಗಿ ಹರಿದು ಹೋಗಲು ಜಾಗ ಮಾಡಿ.
Image credits: Getty
Kannada

ಸಸಿಗಳನ್ನು ನಾಟಿ ಮಾಡಿ

ತುಂಬಾ ಮಳೆ ಬೀಳುವಾಗ ನೇರವಾಗಿ ಬೀಜ ಬಿತ್ತನೆ ಮಾಡಬೇಡಿ. ಬದಲಿಗೆ, ನೆರಳಿನಲ್ಲಿ ಬೀಜ ಹಾಕಿ ಮೊಳಕೆ ಬರಿಸಿ, ನಂತರ ಆ ಸಸಿಗಳನ್ನು ನಾಟಿ ಮಾಡುವುದು ಉತ್ತಮ.
Image credits: Getty
Kannada

ಚಪ್ಪರವನ್ನು ಗಟ್ಟಿ ಮಾಡಿ

ಹಾಗಲಕಾಯಿ, ಪಡವಲಕಾಯಿ, ತೊಂಡೆಕಾಯಿಯಂತಹ ಬಳ್ಳಿ ತರಕಾರಿಗಳಿಗೆ ಹಾಕಿದ ಚಪ್ಪರವನ್ನು ಗಟ್ಟಿ ಮಾಡಿ. ಜೋರು ಗಾಳಿ, ಮಳೆಗೆ ಅದು ಬೀಳದಂತೆ ಎಚ್ಚರ ವಹಿಸಿ.
Image credits: Getty
Kannada

ಗಿಡದ ಬುಡಕ್ಕೆ ಮಣ್ಣು ಹಾಕಿ

ಮಳೆ ನೀರು ರಭಸವಾಗಿ ಹರಿದು ಗಿಡದ ಬೇರುಗಳು ಹೊರಗೆ ಕಾಣಿಸಬಾರದು. ಹೀಗಾಗಿ ಗಿಡಗಳ ಬುಡಕ್ಕೆ ಮಣ್ಣು ಏರಿಸಿ, ಬೇಕಿದ್ದರೆ ಆಧಾರಕ್ಕೆ ಒಂದು ಕೋಲು ನೆಡಿ.
Image credits: Getty
Kannada

ಕೀಟ-ರೋಗಗಳ ನಿಯಂತ್ರಣ

ಎಲೆ ಚುಕ್ಕೆ ರೋಗ, ಬೇರು ಕೊಳೆತದಂತಹ ಸಮಸ್ಯೆ ತಡೆಯಲು ವಾರಕ್ಕೊಮ್ಮೆ ಸ್ಯೂಡೋಮೊನಾಸ್ ದ್ರಾವಣ ಸಿಂಪಡಿಸಿ. ಒಂದು ಲೀಟರ್ ನೀರಿಗೆ 20 ಗ್ರಾಂ ಸ್ಯೂಡೋಮೊನಾಸ್ ಬೆರೆಸಿ ಬಳಸಬೇಕು.
Image credits: Getty
Kannada

ಗೊಬ್ಬರ ಹಾಕುವಾಗ ಜಾಗ್ರತೆ

ಮಳೆ ಇರುವಾಗ ರಾಸಾಯನಿಕ ಗೊಬ್ಬರಗಳನ್ನು ಬಳಸಬೇಡಿ. ಕೊಟ್ಟಿಗೆ ಗೊಬ್ಬರ ಅಥವಾ ಕಾಂಪೋಸ್ಟ್ ಅನ್ನು ಮಳೆ ಇಲ್ಲದ ಸಮಯ ನೋಡಿ ಗಿಡಗಳಿಗೆ ಹಾಕಿ.
Image credits: Getty
Kannada

ಸೂರ್ಯನ ಬೆಳಕು ಸಿಗಲಿ

ಮಳೆಗಾಲದಲ್ಲಿ ಬಿಸಿಲು ಕಡಿಮೆ ಇರುತ್ತದೆ. ಹಾಗಾಗಿ, ನಿಮ್ಮ ತೋಟದಲ್ಲಿ ಗರಿಷ್ಠ ಬಿಸಿಲು ಬೀಳುವ ಜಾಗದಲ್ಲಿ ಗ್ರೋಬ್ಯಾಗ್‌ಗಳನ್ನು ಇಡಿ.
Image credits: Getty
Kannada

ಕಳೆ ಗಿಡಗಳನ್ನು ತೆಗೆಯಿರಿ

ಮಳೆಗಾಲದಲ್ಲಿ ತರಕಾರಿ ಗಿಡಗಳಿಗಿಂತ ವೇಗವಾಗಿ ಕಳೆಗಳು ಬೆಳೆಯುತ್ತವೆ. ಇವುಗಳನ್ನು ಆಗಿಂದಾಗ್ಗೆ ತೆಗೆಯದಿದ್ದರೆ, ಗಿಡಗಳ ಬೆಳವಣಿಗೆಗೆ ತೊಂದರೆಯಾಗುತ್ತದೆ.
Image credits: Getty

ಈ ಆಹಾರಗಳನ್ನು ಅತಿಯಾಗಿ ತಿಂತೀರಾ? ಸೂಚನೆ ಕೊಡದೆ ಕಿಡ್ನಿ ಹಾಳಾಗುತ್ತೆ!

ಪ್ರತಿದಿನ ಧರಿಸಲು ಸಿಂಪಲ್ ಮತ್ತು ಸ್ಟೈಲಿಶ್ ಚಿನ್ನದ ಮೂಗುತಿ ಡಿಸೈನ್ಸ್ ಇಲ್ಲಿವೆ

ಗಂಡು ಮಕ್ಕಳ ಕೈಬೆರಳಿಗೆ ಚಂದ ಕಾಣುವ 7 ಚಿನ್ನದ ಉಂಗುರಗಳ ಡಿಸೈನ್‌ಗಳು ಇಲ್ಲಿವೆ

ಬೇಸಿಗೆಯಲ್ಲಿ ನಿಮ್ಮ ಗಾರ್ಡನ್‌ ಘಮಘಮಿಸಲು ಈ 10 ಬಿಳಿ ಹೂವಿನ ಗಿಡಗಳನ್ನು ನೆಡಿ