Kitchen Hacks: ಸಾರು ರುಚಿಯಾಗಿ ಬರ್ತಿಲ್ವಾ? ಈ ತಪ್ಪು ಮಾಡ್ಬೇಡಿ
Kitchen Tips: ಕೆಲವರು ಸಾರು ರುಚಿಯಾಗಲಿ ಅಂತಾ ತುಂಬಾ ಪ್ರಯತ್ನ ಮಾಡ್ತಾರೆ. ಬಗೆಬಗೆಯ ಮಸಾಲೆ ಹಾಕ್ತಾರೆ. ಆದ್ರೂ ಸಾರು ರುಚಿಯಾಗಲ್ಲ. ಇದು ಅವರಿಗೆ ನಿರಾಸೆ ತರುತ್ತೆ. ಅಸಲಿಗೆ ಸಾರು ಯಾಕೆ ರುಚಿಯಾಗಲ್ಲ ಗೊತ್ತಾ?.

ಕೆಲವು ಟ್ರಿಕ್ಸ್ ಫಾಲೋ ಮಾಡಿ
ಸಾರು ರುಚಿಯಾಗಲಿ ಅಂತಾ ಮಹಿಳೆಯರು ತುಂಬಾ ಪ್ರಯತ್ನ ಮಾಡ್ತಾರೆ. ಏನೇನೋ ಮಸಾಲೆ ಹಾಕ್ತಾರೆ. ಆದ್ರೂ ಕೆಲವರಿಗೆ ರುಚಿಯಾಗಿ ಬರಲ್ಲ. ಯಾಕೆ ಹೀಗೆ ಅಂತಾ ಬೇಜಾರ್ ಮಾಡ್ಕೋತಾರೆ. ಕೆಲವು ಟ್ರಿಕ್ಸ್ ಫಾಲೋ ಮಾಡಿದ್ರೆ ಸಾರು ರುಚಿಯಾಗುತ್ತೆ.
ಬಿಸಿ ಇಲ್ಲದ ಎಣ್ಣೆ
ಬಿಸಿ ಇಲ್ಲದ ಎಣ್ಣೆಯಲ್ಲಿ ಒಗ್ಗರಣೆ ಹಾಕಿದ್ರೆ ಸಾರು ರುಚಿಯಾಗಲ್ಲ. ಜೀರಿಗೆ, ಸಾಸಿವೆ ಪರಿಮಳ ಬಿಡುವುದಿಲ್ಲ. ಮಸಾಲೆಗಳನ್ನು ಹಸಿಯಾಗಿ ಬಿಟ್ಟರೆ ಸಾರಿನ ರುಚಿ ಹಾಳಾಗುತ್ತೆ. ಹಾಗಾಗಿ ಮಸಾಲೆಗಳನ್ನು ಚೆನ್ನಾಗಿ ಹುರಿಯಬೇಕು.
ಮುಚ್ಚಳ ಮುಚ್ಚಿ
ಸರಿಯಾದ ಸಮಯದಲ್ಲಿ ಉಪ್ಪು ಹಾಕಿದ್ರೆ ಅಡುಗೆ ರುಚಿಯಾಗುತ್ತೆ. ತರಕಾರಿ ಅರ್ಧ ಬೆಂದ ಮೇಲೆ ಉಪ್ಪು ಹಾಕುವುದು ಉತ್ತಮ. ಅಡುಗೆ ಮಾಡುವಾಗ ಪಾತ್ರೆಗೆ ಮುಚ್ಚಳ ಮುಚ್ಚಿ. ಇಲ್ಲದಿದ್ದರೆ ಸಾರಿನ ರುಚಿ ಹಾಳಾಗುತ್ತೆ.
ಹಳೆಯ ಮಸಾಲೆ ಬಳಸಬೇಡಿ
ಪ್ರತಿ ಸಾರಿಗೆ ಮಸಾಲೆ ಹಾಕಬಹುದು. ಆದರೆ ಯಾವ ಸಾರಿಗೆ ಯಾವ ಮಸಾಲೆ ಅಂತಾ ಗೊತ್ತಿರಬೇಕು. ತಾಜಾ ಪದಾರ್ಥಗಳನ್ನು ಬಳಸಿ. ಹಳೆಯ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಬಳಸಿದರೆ ಸಾರಿನ ರುಚಿ ಕೆಡುತ್ತದೆ.
ಈರುಳ್ಳಿಯ ಹಸಿ ವಾಸನೆ ಹೋಗಲಿ
ಈರುಳ್ಳಿ ಕಂದು ಬಣ್ಣಕ್ಕೆ ಬರುವ ಮುನ್ನ ಟೊಮ್ಯಾಟೊ ಹಾಕಬೇಡಿ. ಈರುಳ್ಳಿಯ ಹಸಿ ವಾಸನೆ ಹೋಗುವವರೆಗೂ ಹುರಿಯಿರಿ. ಟೊಮ್ಯಾಟೊ ಹಾಕಿದ ತಕ್ಷಣ ಮಸಾಲೆ ಹಾಕಬೇಡಿ. ಟೊಮ್ಯಾಟೊ ಸ್ವಲ್ಪ ಬೆಂದ ಮೇಲೆ ಮಸಾಲೆ ಸೇರಿಸಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

