Cutting board cleaning tips: ಮರದ ಕಟಿಂಗ್ ಬೋರ್ಡ್ ಕ್ಲೀನ್ ಮಾಡುವಾಗ ಈ 5 ತಪ್ಪು ಮಾಡ್ಲೆಬೇಡಿ
Cutting board safety: ಕಟಿಂಗ್ ಬೋರ್ಡ್ ಬಳಸಿ ತರಕಾರಿಗಳು, ಮಾಂಸ ಮತ್ತು ಮೀನು ಕತ್ತರಿಸುವುದು ಸುಲಭ. ಕಟಿಂಗ್ ಬೋರ್ಡ್‌ಗಳನ್ನು ಹಲವು ಬಗೆಯ ಮೆಟೀರಿಯಲ್‌ಗಳಿಂದ ಮಾಡಲಾಗಿರುತ್ತದೆ. ಆದರೆ ಮರದ ಕಟಿಂಗ್ ಬೋರ್ಡ್ ಕ್ಲೀನ್ ಮಾಡುವಾಗ ನಾವು ಮಾಡಬಾರದ ತಪ್ಪುಗಳಿವು.

ಗಡುಸಾದ ಸ್ಕ್ರಬ್ಬರ್‌ಗಳು
ಗಡುಸಾದ ಸ್ಕ್ರಬ್ಬರ್‌ಗಳನ್ನು ಬಳಸಿ ಕಟಿಂಗ್ ಬೋರ್ಡ್ ಅನ್ನು ಎಂದಿಗೂ ಸ್ವಚ್ಛಗೊಳಿಸಬೇಡಿ. ಇದು ಕಟಿಂಗ್ ಬೋರ್ಡ್‌ಗೆ ಹಾನಿಯನ್ನುಂಟುಮಾಡುತ್ತದೆ.
ನಿಂಬೆ
ನೇರವಾಗಿ ನಿಂಬೆಹಣ್ಣು ಬಳಸಿ ಕಟಿಂಗ್ ಬೋರ್ಡ್ ಸ್ವಚ್ಛಗೊಳಿಸುವುದನ್ನು ತಪ್ಪಿಸಿ. ಬದಲಿಗೆ, ನಿಂಬೆ ಜೊತೆ ಉಪ್ಪನ್ನು ಸೇರಿಸಿ ಸ್ವಚ್ಛಗೊಳಿಸುವುದು ಉತ್ತಮ.
ಬ್ಲೀಚ್
ಬ್ಲೀಚ್ ಅನ್ನು ಕಠಿಣ ರಾಸಾಯನಿಕಗಳಿಂದ ತಯಾರಿಸಲಾಗುತ್ತದೆ. ಇದು ಮರಕ್ಕೆ ಹಾನಿ ಮಾಡುತ್ತದೆ. ಆದ್ದರಿಂದ ಬ್ಲೀಚ್ ಬಳಸಿ ಕಟಿಂಗ್ ಬೋರ್ಡ್ ಸ್ವಚ್ಛಗೊಳಿಸಬೇಡಿ.
ನೀರಿನಲ್ಲಿ ನೆನೆಸಬೇಡಿ
ಮರದ ಕಟಿಂಗ್ ಬೋರ್ಡನ್ನು ನೀರಿನಲ್ಲಿ ನೆನೆಸಿಡುವುದನ್ನು ತಪ್ಪಿಸಬೇಕು. ಮರವಾಗಿರುವುದರಿಂದ ಇದು ತೇವಾಂಶವನ್ನು ಸುಲಭವಾಗಿ ಹೀರಿಕೊಳ್ಳುತ್ತದೆ.
ಡಿಶ್‌ವಾಶರ್
ಮರದ ಕಟಿಂಗ್ ಬೋರ್ಡನ್ನು ಡಿಶ್‌ವಾಶರ್‌ನಲ್ಲಿ ಹಾಕಿ ತೊಳೆಯಬೇಡಿ. ಇದು ಕಟಿಂಗ್ ಬೋರ್ಡ್‌ಗೆ ಹಾನಿಯನ್ನುಂಟು ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

