ಚಪಾತಿ ಪ್ಯಾನ್‌ಗೆ ಅಂಟಿಕೊಳ್ಳದೆ ಚೆನ್ನಾಗಿ ಉಬ್ಬಬೇಕೆಂದರೆ ಈ 3 ಸರಳ ಉಪಾಯ ಅನುಸರಿಸಿ
Puffy Chapati Tips: ಪ್ಯಾನ್ ಮೇಲೆ ಚಪಾತಿ ಹಾಕುತ್ತಿದ್ದಂತೆ ಅದು ಟುಸ್ ಪಟಾಕಿಯಾಗಿಬಿಡುತ್ತದೆ. ಚೆನ್ನಾಗಿ ಮೇಲೇಳುವುದಿಲ್ಲ. ಸರಿಯಾಗಿ ಉಬ್ಬಿದ ಚಪಾತಿ ರುಚಿಯನ್ನು ಹೆಚ್ಚಿಸುವುದಲ್ಲದೆ ಹಗುರವಾಗಿ ಮೃದುವಾಗಿರುತ್ತವೆ. ಹಾಗಾದರೆ ಚಪಾತಿ ಉಬ್ಬಬೇಕೆಂದರೆ ಏನೆಲ್ಲಾ ಮಾಡಬಹುದು. ಇಲ್ಲಿದೆ ನೋಡಿ ಟಿಪ್ಸ್.

ಚೆನ್ನಾಗಿ ಮೇಲೇಳಲ್ಲ
ಭಾರತೀಯ ಅಡುಗೆಮನೆಗಳಲ್ಲಿ ಚಪಾತಿ ಕಾಮನ್. ಅನೇಕ ಜನರು ಬೆಳಗಿನ ಉಪಾಹಾರಕ್ಕೆ ಅಥವಾ ರಾತ್ರಿಯ ಊಟಕ್ಕೆ ಚಪಾತಿ ಬೇಯಿಸುತ್ತಾರೆ. ಆದರೆ ಪ್ಯಾನ್ ಅಥವಾ ಹಂಚಿನ ಮೇಲೆ ಹಾಕುತ್ತಿದ್ದಂತೆ ಅದು ಟುಸ್ ಪಟಾಕಿಯಾಗಿಬಿಡುತ್ತದೆ. ಅಂದರೆ ಚೆನ್ನಾಗಿ ಮೇಲೇಳುವುದಿಲ್ಲ. ಸರಿಯಾಗಿ ಉಬ್ಬಿದ ಚಪಾತಿ ರುಚಿಯನ್ನು ಹೆಚ್ಚಿಸುವುದಲ್ಲದೆ ಹಗುರವಾಗಿ ಮೃದುವಾಗಿರುತ್ತವೆ. ಹಾಗಾದರೆ ಚಪಾತಿ ಉಬ್ಬಬೇಕೆಂದರೆ ಏನೆಲ್ಲಾ ಮಾಡಬಹುದು. ಇಲ್ಲಿದೆ ನೋಡಿ ಸುಲಭ ಟಿಪ್ಸ್.
ಸಾಫ್ಟ್ ಆಗಿಡಲು ಸಹಾಯ ಮಾಡುತ್ತೆ
ಪ್ರತಿ ಸಾರಿ ಹೇಳುವ ಹಾಗೆ ಮೊದಲ ಮತ್ತು ಅತ್ಯಂತ ಮುಖ್ಯವಾದ ಹಂತವೆಂದರೆ ಹಿಟ್ಟನ್ನು ಸರಿಯಾಗಿ ಬೆರೆಸುವುದು. ಗೋಧಿ ಹಿಟ್ಟಿಗೆ ನಿಧಾನವಾಗಿ ನೀರು ಸೇರಿಸುತ್ತಾ ಚೆನ್ನಾಗಿ ಬೆರೆಸಿ ನಾದಿಟ್ಟುಕೊಳ್ಳಿ. ನಾದಿಟ್ಟುಕೊಂಡ ಹಿಟ್ಟು ತುಂಬಾ ಗಟ್ಟಿಯಾಗಿರಬಾರದು ಅಥವಾ ತುಂಬಾ ಸಡಿಲವಾಗಿರಬಾರದು. ಮೃದುವಾದ ಮತ್ತು ನಯವಾದ ಹಿಟ್ಟು ಚಪಾತಿಯನ್ನ ಸಾಫ್ಟ್ ಆಗಿಡಲು ಸಹಾಯ ಮಾಡುತ್ತದೆ.
ಲಟ್ಟಿಸುವ ವಿಧಾನ
ಈಗ ಬೆರೆಸಿದ ಅಥವಾ ನಾದಿಟ್ಟ ಹಿಟ್ಟನ್ನು ಮುಚ್ಚಿ 20 ರಿಂದ 30 ನಿಮಿಷಗಳ ಕಾಲ ಹಾಗೆಯೇ ಬಿಡಿ. ಇದರಿಂದ ಅದು ಒಳ್ಳೆಯ ಹದಕ್ಕೆ ಬರುವುದಲ್ಲದೆ, ಚಪಾತಿ ಲಟ್ಟಿಸುವಾಗ, ತಿರುವಿ ಹಾಕುವಾಗ ಸುಲಭವಾಗುತ್ತದೆ. ಇನ್ನೊಂದು ಮುಖ್ಯವಾದ ವಿಷಯವೆಂದರೆ ಚಪಾತಿಯನ್ನು ಲಟ್ಟಿಸುವ ವಿಧಾನವು ಸರಿಯಾಗಿರಬೇಕು.
ಪ್ಯಾನ್ ಸಂಪೂರ್ಣ ಬಿಸಿ ಮಾಡಿ
ಲಟ್ಟಿಸುವಾಗ ಅಂಚು ಮತ್ತು ಮಧ್ಯಭಾಗವು ಸಮವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ ಬೇಯಿಸುವಾಗ ಗಾಳಿಯು ಒಂದು ಬದಿಯಲ್ಲಿ ಸಂಗ್ರಹವಾಗಿ ಅದು ಸಂಪೂರ್ಣವಾಗಿ ಉಬ್ಬುವುದನ್ನು ತಡೆಯುತ್ತದೆ. ಈಗ ಪ್ಯಾನ್ ಅನ್ನು ಬಿಸಿ ಮಾಡುವ ಸಮಯ. ಚಪಾತಿಯನ್ನು ಬೇಯಿಸುವ ಮೊದಲು ಪ್ಯಾನ್ ಅನ್ನು ಸಂಪೂರ್ಣವಾಗಿ ಬಿಸಿ ಮಾಡಬೇಕು.
ಸರಿಯಾದ ತಾಪಮಾನ
ತಣ್ಣನೆಯ ಪ್ಯಾನ್ ಚಪಾತಿ ಅಂಟಿಕೊಳ್ಳಲು ಕಾರಣವಾಗಬಹುದು ಮತ್ತು ಹೆಚ್ಚು ಬಿಸಿಯಾದ ಪ್ಯಾನ್ ಚಪಾತಿ ಸುಟ್ಟಿಹೋಗಲು ಕಾರಣವಾಗಬಹುದು. ಆದ್ದರಿಂದ ಚಪಾತಿಯನ್ನು ಸರಿಯಾದ ತಾಪಮಾನದಲ್ಲಿ ಗ್ರಿಡಲ್ ಮೇಲೆ ಇಡುವುದರಿಂದ ಅದು ಸರಿಯಾಗಿ ಬೇಯುತ್ತದೆ ಮತ್ತು ಉಬ್ಬಲು ಪ್ರಾರಂಭಿಸುತ್ತದೆ.
ಚೆನ್ನಾಗಿ ಉಬ್ಬಲು
ಚಪಾತಿಯನ್ನು ಒಂದು ಬದಿಯಲ್ಲಿ ಲಘುವಾಗಿ ಬೇಯಿಸಿ. ನಂತರ ಅದನ್ನು ತಿರುಗಿಸಿ ಇನ್ನೊಂದು ಬದಿಯಲ್ಲಿಯೂ ಕೆಲವು ಸೆಕೆಂಡುಗಳ ಕಾಲ ಬೇಯಿಸಿ. ಮತ್ತೆ ಇನ್ನೊಂದು ಬದಿಯಲ್ಲಿ ತಿಳಿ ಕಂದು ಬಣ್ಣದ ಕಲೆಗಳು ಕಾಣಿಸಿಕೊಂಡಾಗ ಅದನ್ನು ಮತ್ತೆ ತಿರುಗಿಸಿ ಮತ್ತು ಬಟ್ಟೆ ಅಥವಾ ಸ್ಪಾಟುಲಾದಿಂದ ನಿಧಾನವಾಗಿ ಒತ್ತಿರಿ. ಇದರಿಂದ ಚಪಾತಿಯಲ್ಲಿ ಆವಿ ಬಂದು ಉಬ್ಬಲು ಅನುವು ಮಾಡಿಕೊಡುತ್ತದೆ.
ಪರಿಣಿತರಾಗಿದ್ದರೆ ಹೀಗೆ ಮಾಡಿ
ಕೆಲವರು ಕಡಿಮೆ ಉರಿಯಲ್ಲಿ ನೇರವಾಗಿ ಚಪಾತಿ ಬೇಯಿಸುತ್ತಾರೆ. ಇದು ಚಪಾತಿ ಬೇಗನೆ ಮೇಲೇರಲು ಸಹಾಯ ಮಾಡುತ್ತದೆ. ಆದರೆ ನೀವು ಚಪಾತಿಯನ್ನು ಲಟ್ಟಿಸುವ ಮತ್ತು ಬೇಯಿಸುವಲ್ಲಿ ಪರಿಣಿತರಾಗಿದ್ದರೆ ಮಾತ್ರ ಹೀಗೆ ಮಾಡಿ.
ಈ ಮೂರು ವಿಷಯ ಗಮನದಲ್ಲಿರಲಿ
ಸರಿಯಾಗಿ ಕಲಸಿದ ಹಿಟ್ಟು, ಚೆನ್ನಾಗಿ ತಿರುಗಿಸುವಂತೆ ಲಟ್ಟಿಸಿಕೊಳ್ಳುವುದು, ಪ್ಯಾನ್‌ನ ಸರಿಯಾದ ತಾಪಮಾನ... ಈ ಮೂರು ವಿಷಯಗಳನ್ನು ಮನಸ್ಸಿನಲ್ಲಿಟ್ಟುಕೊಂಡರೆ ಚಪಾತಿ ಉಬ್ಬಿಸುವುದು ಕಷ್ಟವೇನಲ್ಲ. ಸ್ವಲ್ಪ ಕಾಳಜಿ ಮತ್ತು ಅಭ್ಯಾಸದಿಂದ ನೀವು ಸಹ ಸುಲಭವಾಗಿ ಪ್ಯಾನ್ ಮೇಲೆ ಚಪಾತಿ ಉಬ್ಬಿಸಬಹುದು ಮತ್ತು ನಿಮ್ಮ ಕುಟುಂಬದಿಂದ ಪ್ರಶಂಸೆ ಗಳಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

