MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Sri Krishna Janmashtami Wishes
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Karnataka Districts
  • ಗದಗ: ಪ್ರೀತಿಸಿ ಮದುವೆಯಾದ ಗಂಡನಿಗೆ ಬೆಡ್ ರೂಂ ನಲ್ಲಿ ಕಬ್ಬಿಣದ ಸಲಾಕೆಯಿಂದ ಹೊಡೆದು ಚಟ್ಟ ಕಟ್ಟಿದ ಹೆಂಡತಿ!

ಗದಗ: ಪ್ರೀತಿಸಿ ಮದುವೆಯಾದ ಗಂಡನಿಗೆ ಬೆಡ್ ರೂಂ ನಲ್ಲಿ ಕಬ್ಬಿಣದ ಸಲಾಕೆಯಿಂದ ಹೊಡೆದು ಚಟ್ಟ ಕಟ್ಟಿದ ಹೆಂಡತಿ!

ಗದಗ ಜಿಲ್ಲೆಯ ನರಗುಂದ ತಾಲೂಕಿನಲ್ಲಿ, ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೊಬ್ಬಳು ತನ್ನ ಪತಿಯನ್ನು ಕಬ್ಬಿಣದ ಸಲಾಕೆಯಿಂದ ಹೊಡೆದು ಭೀಕರವಾಗಿ ಹತ್ಯೆ ಮಾಡಿದ್ದಾಳೆ. ಪ್ರೀತಿಸಿ ಮದುವೆಯಾಗಿದ್ದ ಈ ದಂಪತಿ ನಡುವೆ ನಿರಂತರ ಜಗಳ ನಡೆಯುತ್ತಿದ್ದು, ಇದೇ ಕಾರಣಕ್ಕೆ ಈ ಘೋರ ಕೃತ್ಯ ನಡೆದಿದೆ. 

2 Min read
Author : Gowthami K
Published : May 21 2026, 03:18 PM IST
Share this Photo Gallery
  • FB
  • TW
  • Linkdin
  • Whatsapp
15
ಪತ್ನಿಯಿಂದಲೇ ಪತಿಯ ಭೀಕರ ಹತ್ಯೆ!
Image Credit : Asianet News

ಪತ್ನಿಯಿಂದಲೇ ಪತಿಯ ಭೀಕರ ಹತ್ಯೆ!

ಗದಗ:ಅವರಿಬ್ಬರು ಒಬ್ಬರನ್ನು ಒಬ್ಬರು ಗಾಢವಾಗಿ ಪ್ರೀತಿಸಿ ಮದುವೆಯಾಗಿದ್ದರು. ಆದರೆ ಅದ್ಯಾಕೋ ಮದುವೆಗೆ ಮುಂಚೆ ಇದ್ದ ಬಾಂಧವ್ಯ ಮದುವೆ ನಂತರ ಇರಲಿಲ್ಲ. ಹೀಗಾಗಿ ಇವರಿಬ್ಬರ ದಾಂಪತ್ಯದಲ್ಲಿ ಆಗಾಗ ಗಲಾಟೆಗಳು ನಡೆಯುತ್ತಿತ್ತು. ಇದೀಗ ದಂಪತಿ ಜಗಳದಲ್ಲಿ ಹೆಂಡತಿ ಗಂಡನನ್ನೇ ಮುಗಿಸಿರುವ ಘಟನೆ ನಡೆದಿದೆ. ಲ್ಲೆಯ ನರಗುಂದ ತಾಲ್ಲೂಕಿನ ರಡ್ಡೇರ ನಾಗನೂರು ಗ್ರಾಮದಲ್ಲಿ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೇ ತನ್ನ ಪತಿಯನ್ನು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಬೆಡ್ ರೂಂನಲ್ಲೇ ಗಂಡನ ತಲೆಗೆ ಕಬ್ಬಿಣದ ಸಲಾಕೆಯಿಂದ ಹೊಡೆದು ಪತ್ನಿ ಕ್ರೂರವಾಗಿ ಹತ್ಯೆ ಮಾಡಿದ್ದಾಳೆ. ವಿಶ್ವನಾಥ ಹಾದಿಮನಿ (29) ಕೊಲೆಯಾದ ದುರ್ದೈವಿಯಾಗಿದ್ದು. ಪತಿಯನ್ನು ಹತ್ಯೆ ಮಾಡಿದ ಆರೋಪದ ಮೇಲೆ ಪತ್ನಿ ಕವಿತಾಳನ್ನು ನರಗುಂದ ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
 ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ವೈಮನಸ್ಸು
Image Credit : Asianet News

ಪ್ರೀತಿಸಿ ಮದುವೆಯಾಗಿದ್ದ ದಂಪತಿ ನಡುವೆ ವೈಮನಸ್ಸು

ಮೂಲಗಳ ಪ್ರಕಾರ, ವಿಶ್ವನಾಥ್ ಮತ್ತು ಕವಿತಾ ಕಳೆದ 2022 ರಲ್ಲಿ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ಪ್ರೇಮ ವಿವಾಹವಾಗಿದ್ದರೂ ಸಹ, ಮದುವೆಯಾದ ಆರಂಭದ ದಿನಗಳಿಂದಲೇ ಇಬ್ಬರ ನಡುವೆ ಸಣ್ಣಪುಟ್ಟ ವಿಷಯಗಳಿಗೂ ಮನಸ್ತಾಪಗಳು ಶುರುವಾಗಿದ್ದವು. ದಂಪತಿಗಳ ನಡುವಿನ ವೈಮನಸ್ಸು ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇತ್ತು ಎನ್ನಲಾಗಿದೆ.

Related Articles

Related image1
ಟ್ರಂಪ್‌ ಹತ್ಯೆ ಸೇರಿ 18 ದಾಳಿ ಸಂಚು ರೂಪಿಸಿದ್ದ ಉಗ್ರ ಸೆರೆ; ಇರಾನ್ ಮೇಲಿನ ದಾಳಿಗೆ ಪ್ರತೀಕಾರದ ಕ್ರಮ
Related image2
ರಾಯಚೂರು:ದಿನಾಲು ಕುಡಿದು ತಾಯಿ ಜತೆಗೆ ಜಗಳವಾಡ್ತಿದ್ದ ಅಣ್ಣನ ಕೊಂದ ತಮ್ಮಆತ್ಮ*ಹತ್ಯೆ ಎಂದು ನಂಬಿಸಲು ಹೆಣ ನೇತು ಹಾಕಿದ!
35
ತವರು ಮನೆ ಸೇರಿದ್ದ ಪತ್ನಿ
Image Credit : Asianet News

ತವರು ಮನೆ ಸೇರಿದ್ದ ಪತ್ನಿ

ಇದೇ ಕೌಟುಂಬಿಕ ಜಗಳದ ಕಾರಣದಿಂದಾಗಿ ಪತ್ನಿ ಕವಿತಾ ತನ್ನ ಪತಿಯನ್ನು ಬಿಟ್ಟು ತವರು ಮನೆ ಸೇರಿದ್ದಳು. ಇತ್ತೀಚೆಗಷ್ಟೇ ಹಿರಿಯರು ಸಂಧಾನ ನಡೆಸಿ, ಇಬ್ಬರನ್ನೂ ಒಂದು ಮಾಡಿದ್ದರು. ಅದರಂತೆ ಕೇವಲ 15 ದಿನಗಳ ಹಿಂದಷ್ಟೇ ಕವಿತಾ ತನ್ನ ಗಂಡನ ಮನೆಗೆ ಮರಳಿ ಬಂದಿದ್ದಳು. ಆದರೆ, ಮನೆಗೆ ಬಂದ ಮೇಲೂ ಇಬ್ಬರ ನಡುವಿನ ದಾಂಪತ್ಯ ಕಲಹ ಮಾತ್ರ ಮುಗಿದಿರಲಿಲ್ಲ.

45
ಜಗಳ ಕೊಲೆಯಲ್ಲಿ ಅಂತ್ಯ: ಬೆಡ್ ರೂಂ ನಲ್ಲಿ ಭೀಕರ ಕೃತ್ಯ
Image Credit : Asianet News

ಜಗಳ ಕೊಲೆಯಲ್ಲಿ ಅಂತ್ಯ: ಬೆಡ್ ರೂಂ ನಲ್ಲಿ ಭೀಕರ ಕೃತ್ಯ

ಬುಧವಾರ ರಾತ್ರಿಯೂ ಸಹ ಪತಿ-ಪತ್ನಿಯ ನಡುವೆ ತೀವ್ರ ಸ್ವರೂಪದ ಜಗಳ ನಡೆದಿದೆ ಎನ್ನಲಾಗಿದೆ. ಈ ವೇಳೆ ತೀವ್ರ ಆಕ್ರೋಶಗೊಂಡ ಕವಿತಾ, ಪತಿ ವಿಶ್ವನಾಥ್ ಮಲಗುವ ಕೋಣೆಯಲ್ಲಿದ್ದಾಗ ಮನೆಯಲ್ಲಿದ್ದ ಕಬ್ಬಿಣದ ಸಲಾಕೆಯನ್ನು (Iron Rod) ತಂದು ಆತನ ತಲೆ ಹಾಗೂ ದೇಹದ ಭಾಗಕ್ಕೆ ಜೋರಾಗಿ ಹೊಡೆದಿದ್ದಾಳೆ. ಪತ್ನಿಯ ಭೀಕರ ಹಲ್ಲೆಯಿಂದಾಗಿ ತೀವ್ರ ರಕ್ತಸ್ರಾವಗೊಂಡು ವಿಶ್ವನಾಥ್ ಬೆಡ್ ರೂಂ ನಲ್ಲೇ ಕೊನೆಯುಸಿರೆಳೆದಿದ್ದಾರೆ.

55
ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ಚುರುಕು
Image Credit : Asianet News

ಸ್ಥಳಕ್ಕೆ ಪೊಲೀಸರ ಭೇಟಿ, ತನಿಖೆ ಚುರುಕು

ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ ನರಗುಂದ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ರಡ್ಡೇರ ನಾಗನೂರು ಗ್ರಾಮದ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಕೊಲೆ ಕೃತ್ಯ ಎಸಗಿದ ಪತ್ನಿ ಕವಿತಾಳನ್ನು ಪೊಲೀಸರು ತಕ್ಷಣವೇ ವಶಕ್ಕೆ ಪಡೆದುಕೊಂಡಿದ್ದು, ಸದ್ಯ ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಗದಗ ಜಿಲ್ಲೆಯ ನರಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಕೊಲೆ
ಗಂಡ
ಕ್ರೈಮ್ ನ್ಯೂಸ್
ಸುದ್ದಿ
ಪ್ರೀತಿ
ಗದಗ

Latest Videos
Recommended Stories
Recommended image1
ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳಿಂದ ಪರಪ್ಪನ ಅಗ್ರಹಾರ ಜೈಲಿನ ವಾರ್ಡನ್ ಮೇಲೆ ಮಾರಣಾಂತಿಕ ಹಲ್ಲೆ
Recommended image2
ಬೆಳಿಗ್ಗೆ ವೇಕ್-ಅಪ್ ಕಾಲ್, ಮನೆ ಬಾಗಿಲಿಗೇ ಕಾರ್: ಬೆಂಗಳೂರು ಏರ್‌ಪೋರ್ಟ್‌ನಿಂದ ಡೋರ್-ಟು-ಡೋರ್ ಐಷಾರಾಮಿ ಸೇವೆ
Recommended image3
ಶ್ರೀಕೃಷ್ಣ ಜನ್ಮದಿನ ಮಳೆ ಬರುತ್ತದೆಯೇ? ಜ್ಯೋತಿಷ್ಯ ಶಾಸ್ತ್ರದ ಈ ನಂಬಿಕೆ ಇಂಟರೆಸ್ಟಿಂಗ್
Related Stories
Recommended image1
ಟ್ರಂಪ್‌ ಹತ್ಯೆ ಸೇರಿ 18 ದಾಳಿ ಸಂಚು ರೂಪಿಸಿದ್ದ ಉಗ್ರ ಸೆರೆ; ಇರಾನ್ ಮೇಲಿನ ದಾಳಿಗೆ ಪ್ರತೀಕಾರದ ಕ್ರಮ
Recommended image2
ರಾಯಚೂರು:ದಿನಾಲು ಕುಡಿದು ತಾಯಿ ಜತೆಗೆ ಜಗಳವಾಡ್ತಿದ್ದ ಅಣ್ಣನ ಕೊಂದ ತಮ್ಮಆತ್ಮ*ಹತ್ಯೆ ಎಂದು ನಂಬಿಸಲು ಹೆಣ ನೇತು ಹಾಕಿದ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved