MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಬೆಂಗಳೂರು-ಚೆನ್ನೈ 73 ನಿಮಿಷ, ಹೈದರಾಬಾದ್‌ಗೆ 2 ಗಂಟೆ! ಇಲ್ಲಿದೆ 7 ಹೊಸ ಬುಲೆಟ್ ಟ್ರೈನ್ ಮಾರ್ಗಗಳ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು-ಚೆನ್ನೈ 73 ನಿಮಿಷ, ಹೈದರಾಬಾದ್‌ಗೆ 2 ಗಂಟೆ! ಇಲ್ಲಿದೆ 7 ಹೊಸ ಬುಲೆಟ್ ಟ್ರೈನ್ ಮಾರ್ಗಗಳ ಕಂಪ್ಲೀಟ್ ಡೀಟೇಲ್ಸ್

Bullet Train India: ಭಾರತದ ರೈಲ್ವೆ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲು ಕೇಂದ್ರ ಸರ್ಕಾರ ಸಜ್ಜಾಗಿದೆ. ದೇಶದ ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ತಗ್ಗಿಸಲು ಬರೋಬ್ಬರಿ 7 ಹೊಸ ಬುಲೆಟ್ ಟ್ರೈನ್ (ಹೈಸ್ಪೀಡ್ ರೈಲು) ಕಾರಿಡಾರ್‌ಗಳಿಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.   

2 Min read
Author : Ashwini HR
Published : Jun 26 2026, 11:09 AM IST
Share this Photo Gallery
  • FB
  • TW
  • Linkdin
  • Whatsapp
15
ವಿಮಾನಕ್ಕಿಂತಲೂ ಫಾಸ್ಟಾಗಿ ಹೋಗ್ಬೋದು
Image Credit : Gemini

ವಿಮಾನಕ್ಕಿಂತಲೂ ಫಾಸ್ಟಾಗಿ ಹೋಗ್ಬೋದು

ವಿಮಾನಕ್ಕಿಂತಲೂ ಫಾಸ್ಟಾಗಿ ಹೋಗ್ಬೋದು
ಭಾರತದ ರೈಲ್ವೆ ಇತಿಹಾಸದಲ್ಲಿ ಹೊಸ ಕ್ರಾಂತಿ ಆರಂಭವಾಗಲಿದೆ. ಕೇಂದ್ರ ಸರ್ಕಾರವು ದೇಶದ ಪ್ರಮುಖ ನಗರಗಳನ್ನು ಸಂಪರ್ಕಿಸಲು ಬರೋಬ್ಬರಿ 7 ಹೊಸ ಹೈಸ್ಪೀಡ್ ರೈಲು (ಬುಲೆಟ್ ಟ್ರೈನ್) ಕಾರಿಡಾರ್‌ಗಳಿಗೆ ಅನುಮೋದನೆ ನೀಡಿದೆ. ಈ ಯೋಜನೆಯು ಜಾರಿಗೆ ಬಂದರೆ, ಪ್ರಮುಖ ನಗರಗಳ ನಡುವಿನ ಪ್ರಯಾಣದ ಸಮಯವು ಗಣನೀಯವಾಗಿ ಇಳಿಕೆಯಾಗಲಿದ್ದು, ವಿಮಾನ ಪ್ರಯಾಣಕ್ಕಿಂತಲೂ ವೇಗವಾಗಿ ಗಮ್ಯಸ್ಥಾನ ತಲುಪಬಹುದಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಪ್ರಮುಖ ಕಾರಿಡಾರ್‌ಗಳು ಮತ್ತು ಪ್ರಯಾಣದ ಸಮಯ
Image Credit : Gemini

ಪ್ರಮುಖ ಕಾರಿಡಾರ್‌ಗಳು ಮತ್ತು ಪ್ರಯಾಣದ ಸಮಯ

ಪ್ರಮುಖ ಕಾರಿಡಾರ್‌ಗಳು ಮತ್ತು ಪ್ರಯಾಣದ ಸಮಯ
ಹೊಸ ಯೋಜನೆಯ ಪ್ರಕಾರ, ದಕ್ಷಿಣ ಭಾರತದ ಪ್ರಮುಖ ನಗರಗಳಾದ ಬೆಂಗಳೂರು, ಚೆನ್ನೈ ಮತ್ತು ಹೈದರಾಬಾದ್ ನಡುವೆ ಬುಲೆಟ್ ಟ್ರೈನ್ ಸಂಚರಿಸಲಿವೆ.
ಬೆಂಗಳೂರು -ಚೆನ್ನೈ: ಪ್ರಸ್ತುತ ರೈಲಿನಲ್ಲಿ 5-6 ಗಂಟೆ ಬೇಕಾಗುವ ಈ ದೂರವನ್ನು ಬುಲೆಟ್ ಟ್ರೈನ್ ಕೇವಲ 73 ನಿಮಿಷಗಳಲ್ಲಿ (1 ಗಂಟೆ 13 ನಿಮಿಷ) ಕ್ರಮಿಸಲಿದೆ.
ಹೈದರಾಬಾದ್ -ಬೆಂಗಳೂರು: ಈ ಮಾರ್ಗದಲ್ಲಿ ಪ್ರಯಾಣದ ಸಮಯ ಕೇವಲ 2 ಗಂಟೆ 10 ನಿಮಿಷಕ್ಕೆ ಇಳಿಕೆಯಾಗಲಿದೆ.
ಮುಂಬೈ -ಪುಣೆ: ಕೇವಲ 48 ನಿಮಿಷಗಳಲ್ಲಿ ಪ್ರಯಾಣಿಸಬಹುದು.
ಪುಣೆ -ಹೈದರಾಬಾದ್: ಪ್ರಯಾಣದ ಅವಧಿ 2 ಗಂಟೆ 8 ನಿಮಿಷಗಳು.
ದೆಹಲಿ -ವಾರಣಾಸಿ: 3 ಗಂಟೆ 15 ನಿಮಿಷಗಳಲ್ಲಿ ತಲುಪಬಹುದು.
ದೆಹಲಿ -ಪಾಟ್ನಾ: ಕೇವಲ 4 ಗಂಟೆ 41 ನಿಮಿಷಗಳಲ್ಲಿ ಪ್ರಯಾಣಿಸಬಹುದು.

Related Articles

Related image1
Bullet Train: ಗಂಟೆಗೆ 320 ಕಿ.ಮೀ ವೇಗ, 3 ಗಂಟೆಯಲ್ಲೇ ಹೈದರಾಬಾದ್‌ನಿಂದ ಬೆಂಗಳೂರಿಗೆ! ನಿಲ್ದಾಣಗಳ ಪಟ್ಟಿ ಇಲ್ಲಿದೆ
Related image2
ಸೈಕಲ್‌ ವೇಗದಲ್ಲಿ ಹೋಗುವ ಭಾರತದ ಈ Train ;‌ ಆದರೂ 2-3 ತಿಂಗಳು ಮುಂಚೆ ಟಿಕೆಟ್ ಬುಕ್‌ ಮಾಡಬೇಕು!
35
7 ಹೊಸ ಕಾರಿಡಾರ್‌ಗಳು ಯಾವುವು?
Image Credit : X

7 ಹೊಸ ಕಾರಿಡಾರ್‌ಗಳು ಯಾವುವು?

7 ಹೊಸ ಕಾರಿಡಾರ್‌ಗಳು ಯಾವುವು?
ಕೇಂದ್ರ ಸರ್ಕಾರವು ಗುರುತಿಸಿರುವ 7 ಹೊಸ ಕಾರಿಡಾರ್‌ಗಳೆಂದರೆ ಮುಂಬೈ-ಪುಣೆ, ಪುಣೆ-ಹೈದರಾಬಾದ್, ಹೈದರಾಬಾದ್-ಬೆಂಗಳೂರು, ಹೈದರಾಬಾದ್-ಚೆನ್ನೈ, ಚೆನ್ನೈ-ಬೆಂಗಳೂರು, ದೆಹಲಿ-ವಾರಣಾಸಿ ಮತ್ತು ವಾರಣಾಸಿ-ಸಿಲಿಗುರಿ. ಈ ಮಾರ್ಗಗಳು ದೇಶದ ಪ್ರಮುಖ ಆರ್ಥಿಕ, ಕೈಗಾರಿಕಾ ಮತ್ತು ತಾಂತ್ರಿಕ ಹಬ್‌ಗಳನ್ನು ಸಂಪರ್ಕಿಸಲಿವೆ.

45
ಬಿಹಾರಕ್ಕೆ ಬೃಹತ್ ರೈಲ್ವೆ ಕೊಡುಗೆ
Image Credit : X

ಬಿಹಾರಕ್ಕೆ ಬೃಹತ್ ರೈಲ್ವೆ ಕೊಡುಗೆ

ಬಿಹಾರಕ್ಕೆ ಬೃಹತ್ ರೈಲ್ವೆ ಕೊಡುಗೆ
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಪ್ರಕಾರ, ಬಿಹಾರ ರಾಜ್ಯವು ಈ ವಿಸ್ತರಣೆಯಿಂದ ಹೆಚ್ಚಿನ ಲಾಭ ಪಡೆಯಲಿದೆ. ದೆಹಲಿ-ವಾರಣಾಸಿ-ಪಾಟ್ನಾ ಬುಲೆಟ್ ಟ್ರೈನ್ ಕಾರಿಡಾರ್‌ಗೆ ಅನುಮೋದನೆ ಸಿಕ್ಕಿದ್ದು, ಇದು ದೆಹಲಿ ಮತ್ತು ಪಾಟ್ನಾ ನಡುವಿನ ಪ್ರಯಾಣದ ಸಮಯವನ್ನು ಅರ್ಧದಷ್ಟು ಕಡಿಮೆ ಮಾಡಲಿದೆ. ಅಲ್ಲದೆ, ಬಿಹಾರದಲ್ಲಿ ಮುಂದಿನ 7-8 ವರ್ಷಗಳಲ್ಲಿ 200ಕ್ಕೂ ಹೆಚ್ಚು ಹೊಸ ರೈಲು ಸೇವೆಗಳು ಆರಂಭವಾಗಲಿವೆ ಎಂದು ಸಚಿವರು ತಿಳಿಸಿದ್ದಾರೆ.

55
ಯೋಜನೆಯ ಸಿದ್ಧತೆ ಹೇಗಿದೆ?
Image Credit : Gemini

ಯೋಜನೆಯ ಸಿದ್ಧತೆ ಹೇಗಿದೆ?

ಯೋಜನೆಯ ಸಿದ್ಧತೆ ಹೇಗಿದೆ?
ಸದ್ಯ ಮುಂಬೈ-ಅಹಮದಾಬಾದ್ ನಡುವಿನ 508 ಕಿಮೀ ಉದ್ದದ ಮೊದಲ ಬುಲೆಟ್ ಟ್ರೈನ್ ಯೋಜನೆಯ ಕೆಲಸ ನಡೆಯುತ್ತಿದೆ. ಜಪಾನ್‌ನ ಶಿಂಕನ್‌ಸೆನ್ ತಂತ್ರಜ್ಞಾನವನ್ನು ಇದಕ್ಕೆ ಬಳಸಲಾಗುತ್ತಿದೆ. ಈಗ ಅನುಮೋದನೆಗೊಂಡಿರುವ 7 ಹೊಸ ಕಾರಿಡಾರ್‌ಗಳಿಗೆ ಶೀಘ್ರದಲ್ಲೇ ಕಾರ್ಯಸಾಧ್ಯತಾ ವರದಿ (Feasibility study), ಭೂಸ್ವಾಧೀನ ಪ್ರಕ್ರಿಯೆ ಮತ್ತು ಹಣಕಾಸಿನ ವ್ಯವಸ್ಥೆಗಳ ಕುರಿತು ಚರ್ಚೆ ನಡೆಯಲಿದೆ. ಈ ಹೈಸ್ಪೀಡ್ ರೈಲುಗಳು ರಸ್ತೆ ಮತ್ತು ವಿಮಾನ ಪ್ರಯಾಣದ ಮೇಲಿನ ಒತ್ತಡವನ್ನು ಕಡಿಮೆ ಮಾಡುವುದಲ್ಲದೆ, ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ವೇಗ ನೀಡಲಿವೆ.

About the Author

AH
Ashwini HR
ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದ ಸ್ಥಳೀಯ ದಿನಪತ್ರಿಕೆ 'ಕ್ರಾಂತಿದೀಪ'ದಲ್ಲಿ ಉಪ ಸಂಪಾದಕಿಯಾಗಿ ವೃತ್ತಿ ಜೀವನ ಪ್ರಾರಂಭ. ಪತ್ರಿಕೋದ್ಯಮದಲ್ಲಿ 14 ವರ್ಷಗಳ ಅನುಭವ. ರಾಜ್ಯಮಟ್ಟದ ದಿನಪತ್ರಿಕೆಗಳಲ್ಲಿ ಹಾಗೂ ವೆಬ್‌ಸೈಟ್‌ಗಳಲ್ಲಿ ರಾಜಕೀಯ, ಮನರಂಜನೆ, ಶಿಕ್ಷಣ, ಆರೋಗ್ಯ, ಟ್ರೆಂಡಿಂಗ್‌, ಲೈಫ್‌ಸ್ಟೈಲ್‌ ಕುರಿತಾದ ವಿಷಯಗಳ ಲೇಖನಗಳನ್ನು ಬರೆದಿದ್ದೇನೆ.ಪ್ರಸ್ತುತ ಸುವರ್ಣ ಡಿಜಿಟಲ್‌ ತಂಡದ ಭಾಗವಾಗಿ ವೃತ್ತಿ ಜೀವನ ಮುಂದುವರಿಸುತ್ತಿದ್ದೇನೆ.
ರೈಲು
ಭಾರತ ಸುದ್ದಿ
ಭಾರತ
ಬೆಂಗಳೂರು

Latest Videos
Recommended Stories
Recommended image1
ಪವಿತ್ರ ಕ್ಷೇತ್ರದಲ್ಲಿ ಹೇಳುತ್ತಿದ್ದೇನೆ, ಡಿಕೆಶಿ ಜೊತೆ ಆತ್ಮೀಯತೆ ಆರೋಪಕ್ಕೆ ಧರ್ಮಸ್ಥಳದಲ್ಲಿ ವಿಜಯೇಂದ್ರ ಸ್ಪಷ್ಟನೆ
Recommended image2
ಸವಾರರ ಸುರಕ್ಷತೆ ಖಚಿತಪಡಿಸಲು ಕಾರಿನಿಂದ ಇಳಿದಿದ್ದ ದರ್ಶನ್ ಪುತ್ರ, ಅಪಘಾತ ಕೇಸ್‌ಗೆ ವಿಜಯಲಕ್ಷ್ಮಿ ಸ್ಪಷ್ಟನೆ
Recommended image3
ತುರ್ತು ಸೇವೆ 108 ಆ್ಯಂಬುಲೆನ್ಸ್, 104 ಆರೋಗ್ಯ ಸಹಾಯವಾಣಿ ಕಮಾಂಡ್ ಸೆಂಟರ್ ತಾತ್ಕಾಲಿಕ ಸ್ಥಗಿತ
Related Stories
Recommended image1
Bullet Train: ಗಂಟೆಗೆ 320 ಕಿ.ಮೀ ವೇಗ, 3 ಗಂಟೆಯಲ್ಲೇ ಹೈದರಾಬಾದ್‌ನಿಂದ ಬೆಂಗಳೂರಿಗೆ! ನಿಲ್ದಾಣಗಳ ಪಟ್ಟಿ ಇಲ್ಲಿದೆ
Recommended image2
ಸೈಕಲ್‌ ವೇಗದಲ್ಲಿ ಹೋಗುವ ಭಾರತದ ಈ Train ;‌ ಆದರೂ 2-3 ತಿಂಗಳು ಮುಂಚೆ ಟಿಕೆಟ್ ಬುಕ್‌ ಮಾಡಬೇಕು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved