ತಿರುಪತಿ To ವಿಜಯಪುರ ನಡುವೆ ವಿಶೇಷ ರೈಲು: ರಾಜ್ಯದ 10 ನಿಲ್ದಾಣಗಳಲ್ಲಿ ನಿಲುಗಡೆ
ದುರ್ಗಾ ಪೂಜೆ ಹಬ್ಬದ ಪ್ರಯಾಣಿಕರ ದಟ್ಟಣೆ ನಿಯಂತ್ರಿಸಲು ತಿರುಪತಿ ಮತ್ತು ವಿಜಯಪುರ ನಡುವೆ ಸಾಪ್ತಾಹಿಕ ವಿಶೇಷ ರೈಲು ಸಂಚರಿಸಲಿದೆ. ಈ ರೈಲು ಅಕ್ಟೋಬರ್ 4 ರಿಂದ 25ರವರೆಗೆ ಪ್ರತಿ ಭಾನುವಾರ ಸಂಚರಿಸಲಿದ್ದು, ಒಟ್ಟು 11 ಬೋಗಿಗಳನ್ನು ಒಳಗೊಂಡಿರುತ್ತದೆ.

ತಿರುಪತಿ-ವಿಜಯಪುರ ನಡುವೆ ವಿಶೇಷ ರೈಲುಗಳ ಸಂಚಾರ
ದುರ್ಗಾ ಪೂಜೆ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯನ್ನು ನಿಯಂತ್ರಿಸಲು, ದಕ್ಷಿಣ ಕರಾವಳಿ ರೈಲ್ವೆಯು ತಿರುಪತಿ ಮತ್ತು ವಿಜಯಪುರ ನಡುವೆ ಪ್ರತಿ ದಿಕ್ಕಿನಲ್ಲಿ ತಲಾ 4 ಟ್ರಿಪ್ ಸಾಪ್ತಾಹಿಕ ವಿಶೇಷ ರೈಲನ್ನು ಓಡಿಸಲು ಸೂಚಿಸಿದೆ.
ರೈಲು ಸಂಖ್ಯೆ 07419/07420
ರೈಲು ಸಂಖ್ಯೆ 07419 ತಿರುಪತಿ-ವಿಜಯಪುರ ಸಾಪ್ತಾಹಿಕ ವಿಶೇಷ ಎಕ್ಸ್‌ಪ್ರೆಸ್ ರೈಲು 04.10.2026 ರಿಂದ 25.10.2026 ರವರೆಗೆ ಪ್ರತಿ ಭಾನುವಾರ 08:15 ಗಂಟೆಗೆ ತಿರುಪತಿಯಿಂದ ಹೊರಟು, ಅದೇ ದಿನ (ಭಾನುವಾರ) 22:25 ಕ್ಕೆ ವಿಜಯಪುರ ತಲುಪಲಿದೆ.
ಹಿಂತಿರುಗುವ ಮಾರ್ಗದಲ್ಲಿ ರೈಲು ಸಂಖ್ಯೆ 07420 ವಿಜಯಪುರ-ತಿರುಪತಿ ಸಾಪ್ತಾಹಿಕ ವಿಶೇಷ ಎಕ್ಸ್'ಪ್ರೆಸ್ 04.10.2026 ರಿಂದ 25.10.2026 ರವರೆಗೆ ಪ್ರತಿ ಭಾನುವಾರ 23:35 ಗಂಟೆಗೆ ವಿಜಯಪುರದಿಂದ ಹೊರಟು, ಮಾರನೇ ದಿನ (ಸೋಮವಾರ) 14:15 ಕ್ಕೆ ತಿರುಪತಿ ತಲುಪಲಿದೆ.
ಎಲ್ಲೆಲ್ಲಿ ನಿಲುಗಡೆ?
ಮಾರ್ಗಮಧ್ಯದಲ್ಲಿ ಈ ರೈಲು ಎರಡೂ ಮಾರ್ಗಗಳಲ್ಲಿ ರೇಣಿಗುಂಟ, ಕೋಡೂರು, ರಾಜಂಪೇಟೆ, ಕಡಪ, ಯರ್ರಗುಂಟ, ತಾಡಿಪತ್ರಿ, ಗುತ್ತಿ, ಗುಂತಕಲ್, ಬಳ್ಳಾರಿ, ತೋರಣಗಲ್ಲು, ಹೊಸಪೇಟೆ, ಕೊಪ್ಪಳ, ಗದಗ, ಹೊಳೆ ಆಲೂರು, ಬದಾಮಿ, ಬಾಗಲಕೋಟೆ, ಆಲಮಟ್ಟಿ ಮತ್ತು ಬಸವನ ಬಾಗೇವಾಡಿ ರೋಡ್ ನಿಲ್ದಾಣಗಳಲ್ಲಿ ನಿಲ್ಲಲಿದೆ.
ರೈಲು ಕೋಚ್ ಮಾಹಿತಿ
ಈ ವಿಶೇಷ ರೈಲು 11 ಬೋಗಿಗಳನ್ನು ಹೊಂದಿರಲಿದ್ದು, 1-2, 2 2-3 3, 4 ಸ್ವೀಪರ್ ಕ್ಲಾಸ್, 2 ಸಾಮಾನ್ಯ ಎರಡನೇ ದರ್ಜೆ ಹಾಗೂ 2 ಲಗೇಜ್, ಬ್ರೇಕ್ ವ್ಯಾನ್ ಮತ್ತು ದಿವ್ಯಾಂಗಜನರ ಬೋಗಿಗಳು ಸೇರಿವೆ.
ಇದನ್ನೂ ಓದಿ: ಬೆಂಗಳೂರು-ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ; ಮೆಮು ರೈಲುಗಳ ತಾತ್ಕಾಲಿಕ ನಿಲ್ದಾಣ ಬದಲಾವಣೆ ಅವಧಿ ವಿಸ್ತರಣೆ

