MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Karnataka Districts
  • ಭಾರತ ಸೇನೆಯಲ್ಲಿ 24 ವರ್ಷ ಸೇವೆ ಮುಗಿಸಿ ಬೆಂಗಳೂರು-ತಾಳಗುಪ್ಪ ರೈಲಲ್ಲಿ ಬಂದ ಯೋಧರಿಗೆ ಶಿವಮೊಗ್ಗ ಜನರ ಅದ್ಧೂರಿ ಸ್ವಾಗತ

ಭಾರತ ಸೇನೆಯಲ್ಲಿ 24 ವರ್ಷ ಸೇವೆ ಮುಗಿಸಿ ಬೆಂಗಳೂರು-ತಾಳಗುಪ್ಪ ರೈಲಲ್ಲಿ ಬಂದ ಯೋಧರಿಗೆ ಶಿವಮೊಗ್ಗ ಜನರ ಅದ್ಧೂರಿ ಸ್ವಾಗತ

ಭಾರತೀಯ ಸೇನೆಯಲ್ಲಿ 24 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಮಲೆನಾಡಿನ ಇಬ್ಬರು ಯೋಧರಾದ ವಿಜಯ್ ಕುಮಾರ್ ಮತ್ತು ಶಿವಾಜಿ ನಾಯ್ಕ್ ತವರಿಗೆ ಮರಳಿದ್ದಾರೆ. ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಇವರಿಗೆ ಕುಟುಂಬಸ್ಥರು ಹಾಗೂ ಸಾರ್ವಜನಿಕರು ಅದ್ಧೂರಿ ಸ್ವಾಗತ ಕೋರಿದರು. ಇವರ ಸಾಧನೆಯನ್ನೊಮ್ಮೆ ಓದಿ.

2 Min read
Author : Sathish Kumar KH
Published : Oct 02 2026, 11:36 AM IST
Share this Photo Gallery
  • FB
  • TW
  • Linkdin
  • Whatsapp
15
ಭಾರತೀಯ ಸೇನೆಯಲ್ಲಿ 24 ವರ್ಷದ ಸೇವೆ
Image Credit : Asianet News

ಭಾರತೀಯ ಸೇನೆಯಲ್ಲಿ 24 ವರ್ಷದ ಸೇವೆ

ಭಾರತ ಮಾತೆಯ ರಕ್ಷಣೆಗಾಗಿ ಹಿಮ ಪರ್ವತದ ಚಳಿ, ಮಳೆ, ಬಿಸಿಲೆನ್ನದೆ ಗಡಿಯಲ್ಲಿ ನಿಂತು ಬರೋಬ್ಬರಿ 24 ವರ್ಷಗಳ ಕಾಲ ದೇಶ ಸೇವೆ ಸಲ್ಲಿಸಿ ನಿವೃತ್ತರಾಗಿ ತವರಿಗೆ ಮರಳಿದ ಮಲೆನಾಡಿನ ಇಬ್ಬರು ಹೆಮ್ಮೆಯ ವೀರ ಯೋಧರಿಗೆ ಶಿವಮೊಗ್ಗ ರೈಲ್ವೆ ನಿಲ್ದಾಣದಲ್ಲಿ ಭಾವಪೂರ್ಣ ಹಾಗೂ ಅದ್ಧೂರಿ ಸ್ವಾಗತ ಕೋರಲಾಯಿತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ತಡರಾತ್ರಿ ಆಗಮನ
Image Credit : Asianet News

ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ತಡರಾತ್ರಿ ಆಗಮನ

ಬೆಂಗಳೂರು-ತಾಳಗುಪ್ಪ ರೈಲಿನಲ್ಲಿ ತಡರಾತ್ರಿ ಆಗಮಿಸಿದ ಹವಾಲ್ದಾರ್ ವಿಜಯ್ ಕುಮಾರ್ ಮತ್ತು ಎನ್‌ಸಿಒ ಶಿವಾಜಿ ನಾಯ್ಕ್ ಅವರನ್ನು ಕುಟುಂಬಸ್ಥರು, ಸ್ನೇಹಿತರು, ಮಾಜಿ ಯೋಧರು ಹಾಗೂ ನೂರಾರು ದೇಶಭಕ್ತರು ಹೂಮಾಲೆ ಹಾಕಿ, ಡೊಳ್ಳು ಕುಣಿತ, ಪಟಾಕಿ ಸಿಡಿಸಿ, 'ಭಾರತ್ ಮಾತಾ ಕೀ ಜೈ' ಘೋಷಣೆಗಳನ್ನು ಕೂಗುತ್ತಾ, ಸಿಹಿ ಹಂಚಿ ಸಂಭ್ರಮದಿಂದ ಬರಮಾಡಿಕೊಂಡರು.

Related Articles

Related image1
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ
Related image2
ಶಿವಮೊಗ್ಗ ಪ್ರವಾಸಿಗಳಿಗೆ ಗುಡ್‌ನ್ಯೂಸ್: ದುಬಾರೆ ದುರ್ಘಟನೆ ಬಳಿಕ 'ಸಕ್ರೆಬೈಲು ಸಾಕಾನೆ ಬಿಡಾರ' ಪುನರಾರಂಭ!
35
ಸಾಹಸಮಯ ಸೇವೆ ಸಲ್ಲಿಸಿದ ಹವಾಲ್ದಾರ್ ವಿಜಯ್ ಕುಮಾರ್:
Image Credit : Asianet News

ಸಾಹಸಮಯ ಸೇವೆ ಸಲ್ಲಿಸಿದ ಹವಾಲ್ದಾರ್ ವಿಜಯ್ ಕುಮಾರ್:

ಭೋಪಾಲ್‌ನಲ್ಲಿ ಕಠಿಣ ತರಬೇತಿ ಪಡೆದು ಸೈನ್ಯಕ್ಕೆ ಸೇರ್ಪಡೆಗೊಂಡ ಹವಾಲ್ದಾರ್ ವಿಜಯ್ ಕುಮಾರ್ ಅವರು ಪಂಜಾಬ್, ಅಸ್ಸಾಂನ ಗುವಾಹಟಿ, ಬಬೀನಾ, ಜಮ್ಮುವಿನ ಗಡಿ ನಿಯಂತ್ರಣ ರೇಖೆಯ ಮೆಂಧರ್ ಸೆಕ್ಟರ್, ನವದೆಹಲಿ, ಅರುಣಾಚಲ ಪ್ರದೇಶ ಹಾಗೂ ಜಾನ್ಸಿಗಳಲ್ಲಿ ಕರ್ತವ್ಯ ನಿರ್ವಹಿಸಿದ್ದಾರೆ. ದೇಶದ ಭದ್ರತೆಯಲ್ಲಿ ಅತ್ಯಂತ ಪ್ರಮುಖವೆನಿಸಿದ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ವೇಳೆ ಕಥುವಾ ಗಡಿಯಲ್ಲಿ ಅತ್ಯಾಧುನಿಕ ಡ್ರೋನ್ ಕಾರ್ಯಾಚರಣೆಯ ಮಹತ್ವದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದ್ದಾಗಿದೆ.

45
ರಾಷ್ಟ್ರೀಯ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದ ಶಿವಾಜಿ ನಾಯ್ಕ್:
Image Credit : Asianet News

ರಾಷ್ಟ್ರೀಯ ರೈಫಲ್ಸ್‌ನಲ್ಲಿ ಸೇವೆ ಸಲ್ಲಿಸಿದ್ದ ಶಿವಾಜಿ ನಾಯ್ಕ್:

ಮೂಲತಃ ನ್ಯಾಮತಿ ತಾಲೂಕಿನವರಾದ ಶಿವಾಜಿ ನಾಯ್ಕ್ ಅವರು ಭಾರತೀಯ ಸೇನೆಯಲ್ಲಿ ಎನ್‌ಸಿಒ (NCO) ಆಗಿ 24 ವರ್ಷಗಳ ಸುದೀರ್ಘ ಸೇವೆ ಪೂರೈಸಿದ್ದಾರೆ. ಜಮ್ಮು-ಕಾಶ್ಮೀರದ ಉಗ್ರರ ಉಪಟಳವಿರುವ ಕಣಿವೆಯಲ್ಲಿ ರಾಷ್ಟ್ರೀಯ ರೈಫಲ್ಸ್ (Rashtriya Rifles) ಪಡೆಯ ಮೂಲಕ ಕಾರ್ಯಾಚರಣೆ ನಡೆಸಿದ್ದಲ್ಲದೆ, ಬಾಂಬೆ, ರಾಜಸ್ಥಾನದಲ್ಲಿ ನಡೆದ ಇಂಡೋ-ರಷ್ಯನ್ ಜಂಟಿ ಸಮರಾಭ್ಯಾಸ, ಪಠಾಣ್‌ಕೋಟ್ ಮತ್ತು ಗುವಾಹಟಿಗಳಲ್ಲಿ ದೇಶಕ್ಕಾಗಿ ನಿಷ್ಠೆಯಿಂದ ದುಡಿದಿದ್ದಾರೆ.

55
ಯೋಧರು ನಮ್ಮ ಹೆಮ್ಮೆ - ಸೂಡಾ ಅಧ್ಯಕ್ಷ ಮಧುಸೂದನ್:
Image Credit : Asianet News

ಯೋಧರು ನಮ್ಮ ಹೆಮ್ಮೆ - ಸೂಡಾ ಅಧ್ಯಕ್ಷ ಮಧುಸೂದನ್:

ರೈಲ್ವೆ ನಿಲ್ದಾಣಕ್ಕೆ ಆಗಮಿಸಿ ಯೋಧರನ್ನು ಗೌರವಿಸಿ ಮಾತನಾಡಿದ ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರ (ಸೂಡಾ) ಅಧ್ಯಕ್ಷ ಮಧುಸೂದನ್, 'ದೇಶದ ಗಡಿಯನ್ನು ಕಾಯುವ ಯೋಧರು ನಮ್ಮ ಹೆಮ್ಮೆ. ಪ್ರಾಣದ ಹಂಗು ತೊರೆದು ದೇಶ ರಕ್ಷಣೆ ಮಾಡಿದ ಸೈನಿಕರನ್ನು ಸಮಾಜದಲ್ಲಿ ಸದಾ ಗೌರವಿಸುವುದು ಪ್ರತಿಯೊಬ್ಬ ನಾಗರಿಕನ ಆದ್ಯ ಕರ್ತವ್ಯ' ಎಂದು ಬಣ್ಣಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಕಾಂತೇಶ್ ಈಶ್ವರಪ್ಪ, ಡಿ.ಎಸ್. ಶಿವಕುಮಾರ್, ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್ ಸೇರಿದಂತೆ ಸ್ಥಳೀಯ ಗಣ್ಯರು, ಮಾಜಿ ಸೈನಿಕರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದು ಯೋಧರಿಗೆ ಶುಭ ಹಾರೈಸಿದರು.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಭಾರತೀಯ ಸೇನೆ
ಶಿವಮೊಗ್ಗ
ರೈಲು
 

Latest Videos
Recommended Stories
Recommended image1
ಬಿಸಿಲೂರು ವಿಜಯಪುರದಲ್ಲಿ ಗ್ರೇಟ್‌ ಗ್ರೀನ್‌ ವಾಲ್‌, ಏಪ್ರಿಲ್‌ಕೂಲ್‌, ತಾಪಮಾನ 2-3 ಡಿಗ್ರಿಯಷ್ಟು ಕಡಿಮೆ
Recommended image2
Mantralaya mutt: ಕೇವಲ 22 ದಿನಗಳಲ್ಲಿ ರಾಯರ ಹುಂಡಿಗೆ ಹರಿದುಬಂತು ಕೋಟಿ ಕೋಟಿ ಕಾಣಿಕೆ! ಚಿನ್ನ ಬೆಳ್ಳಿ ಎಷ್ಟು?
Recommended image3
ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲು ವೇಳಾಪಟ್ಟಿ ಪ್ರಕಟ: ನಿಲ್ದಾಣ, ಸಮಯದ ವಿವರ ಇಲ್ಲಿದೆ
Related Stories
Recommended image1
ಶಿವಮೊಗ್ಗ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊಸ ಪದ್ದತಿಗೆ ಮುನ್ನುಡಿ
Recommended image2
ಶಿವಮೊಗ್ಗ ಪ್ರವಾಸಿಗಳಿಗೆ ಗುಡ್‌ನ್ಯೂಸ್: ದುಬಾರೆ ದುರ್ಘಟನೆ ಬಳಿಕ 'ಸಕ್ರೆಬೈಲು ಸಾಕಾನೆ ಬಿಡಾರ' ಪುನರಾರಂಭ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved