- Home
- Karnataka Districts
- ನಮ್ಮ 100 ರೂಪಾಯಿ ಈ ದೇಶದಲ್ಲಿ 30,000ಕ್ಕೆ ಸಮ! ಭಾರತೀಯರಿಗೆ ಚೀಪೆಸ್ಟ್ ಟೂರಿಸ್ಟ್ ತಾಣ ಯಾವುದು ಗೊತ್ತಾ?
ನಮ್ಮ 100 ರೂಪಾಯಿ ಈ ದೇಶದಲ್ಲಿ 30,000ಕ್ಕೆ ಸಮ! ಭಾರತೀಯರಿಗೆ ಚೀಪೆಸ್ಟ್ ಟೂರಿಸ್ಟ್ ತಾಣ ಯಾವುದು ಗೊತ್ತಾ?
ಭಾರತೀಯ ರೂಪಾಯಿಗೆ ಹೋಲಿಸಿದರೆ ಈ ದೇಶದ ಕರೆನ್ಸಿ ಮೌಲ್ಯ ಕಡಿಮೆ ಇರುವುದರಿಂದ, ಸರಿಯಾದ ಪ್ಲಾನಿಂಗ್ ಮೂಲಕ ಕಡಿಮೆ ಖರ್ಚಿನಲ್ಲಿ ರಾಜರಂತೆ ಪ್ರವಾಸ ಮಾಡಬಹುದು. ನಮ್ಮ ₹100 ಕೊಟ್ಟರೆ ಅವರ ದೇಶದಲ್ಲಿ 30,000ಕ್ಕೆ ಸಮವಾಗುತ್ತದೆ. ಯಾವುದು ಈ ದೇಶ, ವೀಸಾ ಮತ್ತು ಪ್ರಯಾಣದ ಸಂಪೂರ್ಣ ಮಾಹಿತಿ ಇಲ್ಲಿ ನೀಡಲಾಗಿದೆ.

ವಿದೇಶಿ ಟ್ರಿಪ್ ಅಂದ್ರೆ ಲಕ್ಷಗಟ್ಟಲೆ ಖರ್ಚಾಗುತ್ತೆ ಅಂತಲೇ ಬಹಳಷ್ಟು ಜನ ಅಂದುಕೊಳ್ತಾರೆ. ಫ್ಲೈಟ್ ಟಿಕೆಟ್, ಹೋಟೆಲ್, ಊಟ, ಓಡಾಟ ಎಲ್ಲ ಸೇರಿಸಿದರೆ ಬಜೆಟ್ ದೊಡ್ಡದೇ ಇರುತ್ತೆ. ಆದರೆ ಸರಿಯಾದ ದೇಶವನ್ನು ಆರಿಸಿಕೊಂಡು, ಮೊದಲೇ ಪ್ಲಾನ್ ಮಾಡಿದರೆ ಕಡಿಮೆ ಖರ್ಚಿನಲ್ಲೂ ವಿದೇಶಿ ಟ್ರಿಪ್ ಎಂಜಾಯ್ ಮಾಡಬಹುದು. ಅಂಥ ಬೆಸ್ಟ್ ಟೂರಿಸ್ಟ್ ತಾಣಗಳಲ್ಲಿ ವಿಯೆಟ್ನಾಂ ಕೂಡ ಒಂದು. ಪ್ರಕೃತಿ ಸೌಂದರ್ಯ, ಬೀಚ್ಗಳು, ಐತಿಹಾಸಿಕ ಕಟ್ಟಡಗಳು, ರುಚಿಯಾದ ಊಟ ಹಾಗೂ ವಿಭಿನ್ನ ಸಂಸ್ಕೃತಿಯಿಂದ ಈ ದೇಶ ಪ್ರವಾಸಿಗರನ್ನು ಸೆಳೆಯುತ್ತಿದೆ. ಭಾರತೀಯ ಪ್ರವಾಸಿಗರಿಗೂ ವಿಯೆಟ್ನಾಂ ಟ್ರಿಪ್ ಅಂದ್ರೆ ಈಗ ಸಖತ್ ಕ್ರೇಜ್.
ಈ ದೇಶದ ಬಗ್ಗೆ ತಿಳಿದುಕೊಳ್ಳಬೇಕಾದ ಕುತೂಹಲಕಾರಿ ವಿಚಾರವೊಂದಿದೆ. ಭಾರತೀಯ ರೂಪಾಯಿಗೆ ಹೋಲಿಸಿದರೆ ವಿಯೆಟ್ನಾಂ ಕರೆನ್ಸಿ ಮೌಲ್ಯ ತುಂಬಾ ಕಡಿಮೆ. ನಮ್ಮ 100 ರೂಪಾಯಿ ವಿಯೆಟ್ನಾಂ ಕರೆನ್ಸಿ 'ವಿಯೆಟ್ನಾಮೀಸ್ ಡಾಂಗ್' (VND) ಲೆಕ್ಕದಲ್ಲಿ 30,000 ಕ್ಕೆ ಸಮ. ವಿಯೆಟ್ನಾಂ ಕರೆನ್ಸಿ ಮೌಲ್ಯದ ಜೊತೆಗೆ ಅಲ್ಲಿನ ಹೋಟೆಲ್, ಊಟ, ಓಡಾಟಕ್ಕೆ ಎಷ್ಟು ಖರ್ಚಾಗುತ್ತೆ? ಟ್ರಿಪ್ಗೆ ಹೋಗುವ ಮುನ್ನ ಏನೆಲ್ಲಾ ತಿಳಿದುಕೊಳ್ಳಬೇಕು ಅನ್ನೋ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.
ವಿಯೆಟ್ನಾಂ ಅಧಿಕೃತ ಕರೆನ್ಸಿ ಹೆಸರು ವಿಯೆಟ್ನಾಮೀಸ್ ಡಾಂಗ್. ನಮ್ಮ ರೂಪಾಯಿಯನ್ನು INR ಅಂತ ಕರೆದರೆ, ವಿಯೆಟ್ನಾಂ ಡಾಂಗ್ ಅನ್ನು VND ಅಂತಾರೆ. ಈ ದೇಶದಲ್ಲಿ ಬೆಲೆಗಳು ಸಾವಿರ, ಲಕ್ಷಗಳಲ್ಲಿ ಇರುವುದನ್ನು ನೋಡಿ ಹೊಸಬರು ಶಾಕ್ ಆಗಬಹುದು.
ವಿಯೆಟ್ನಾಂನಲ್ಲಿ ನಮ್ಮ 100 ರೂಪಾಯಿಗೆ ಸುಮಾರು 30,000 ಡಾಂಗ್, 1,000 ರೂಪಾಯಿಗೆ ಬರೋಬ್ಬರಿ 3 ಲಕ್ಷ ಡಾಂಗ್ ಸಿಗುತ್ತೆ. ಆದರೆ ಈ ಲೆಕ್ಕ ಕರೆನ್ಸಿ ವಿನಿಮಯ ದರದ ಮೇಲೆ ಬದಲಾಗುತ್ತಿರುತ್ತದೆ. ಬ್ಯಾಂಕ್, ಕರೆನ್ಸಿ ಎಕ್ಸ್ಚೇಂಜ್ ಸೆಂಟರ್ ಹಾಗೂ ಕಾರ್ಡ್ ವಹಿವಾಟುಗಳಲ್ಲಿ ದರಗಳು ಬೇರೆ ಬೇರೆ ಇರಬಹುದು. ಜೊತೆಗೆ ಎಕ್ಸ್ಚೇಂಜ್ ಶುಲ್ಕ ಕೂಡ ಇರಬಹುದು.
ವಿಯೆಟ್ನಾಂನಲ್ಲಿ ಬೆಲೆಗಳು ದೊಡ್ಡ ಸಂಖ್ಯೆಯಲ್ಲಿ ಕಂಡ ತಕ್ಷಣ ಅಲ್ಲಿನ ವಸ್ತುಗಳು ತುಂಬಾ ದುಬಾರಿ ಅಂತ ಅಂದುಕೊಳ್ಳಬೇಡಿ. ಡಾಂಗ್ ಮೌಲ್ಯ ಕಡಿಮೆ ಇರುವುದರಿಂದ ಸಂಖ್ಯೆಗಳು ದೊಡ್ಡದಾಗಿ ಕಾಣುತ್ತವೆ. ಒಂದು ವಸ್ತುವಿನ ಬೆಲೆಯನ್ನು ಭಾರತೀಯ ರೂಪಾಯಿಗೆ ಕನ್ವರ್ಟ್ ಮಾಡಿ ನೋಡಿದಾಗಲೇ ಅದರ ಅಸಲಿ ಖರ್ಚು ಎಷ್ಟಂತ ನಿಮಗೆ ಅರ್ಥವಾಗುತ್ತದೆ.
ವಿಯೆಟ್ನಾಂ ನಿಜಕ್ಕೂ ಅಗ್ಗದ ದೇಶವೇ?
ಕರೆನ್ಸಿ ಮೌಲ್ಯವನ್ನು ಮಾತ್ರ ನೋಡಿ ಒಂದು ದೇಶ ಅಗ್ಗವಾಗಿದೆ ಅಂತ ನಿರ್ಧರಿಸಲು ಸಾಧ್ಯವಿಲ್ಲ. ಅಲ್ಲಿನ ಹೋಟೆಲ್ ದರಗಳು, ಊಟ, ಓಡಾಟ, ಟೂರಿಸ್ಟ್ ಪ್ಲೇಸ್ಗಳ ಎಂಟ್ರಿ ಫೀಸ್ ಹಾಗೂ ಪ್ರವಾಸಿಗರಿಗೆ ನೀಡುವ ಸೇವೆಗಳ ಬೆಲೆಯನ್ನು ಕೂಡ ನಾವು ಲೆಕ್ಕಕ್ಕೆ ತೆಗೆದುಕೊಳ್ಳಬೇಕು.
ವಿಯೆಟ್ನಾಂನಲ್ಲಿ ಲೋಕಲ್ ರೆಸ್ಟೋರೆಂಟ್ಗಳಲ್ಲಿ ಊಟ, ಸಾಮಾನ್ಯ ಹೋಟೆಲ್ಗಳಲ್ಲಿ ವಾಸ್ತವ್ಯ ಹಾಗೂ ಪಬ್ಲಿಕ್ ಟ್ರಾನ್ಸ್ಪೋರ್ಟ್ ಬಳಸಿದರೆ ಖರ್ಚನ್ನು ಕಂಟ್ರೋಲ್ ಮಾಡಬಹುದು. ಮುಖ್ಯವಾಗಿ ಮೊದಲೇ ಹೋಟೆಲ್ ಬುಕ್ ಮಾಡಿಕೊಳ್ಳುವುದು, ಒಂದೇ ಏರಿಯಾದಲ್ಲಿರುವ ಜಾಗಗಳನ್ನು ಒಂದೇ ದಿನ ಕವರ್ ಮಾಡುವುದು ಹಾಗೂ ಟೂರಿಸ್ಟ್ ಸೀಸನ್ನಲ್ಲಿ ಟಿಕೆಟ್ಗಳನ್ನು ಮೊದಲೇ ಖರೀದಿಸುವುದರಿಂದ ಹಣ ಉಳಿಸಬಹುದು.
ಆದರೆ ಲಕ್ಸುರಿ ರೆಸಾರ್ಟ್ಗಳು, ಪ್ರೈವೇಟ್ ಕ್ಯಾಬ್ಗಳು, ದುಬಾರಿ ರೆಸ್ಟೋರೆಂಟ್ಗಳು ಹಾಗೂ ಸ್ಪೆಷಲ್ ಕ್ರೂಸ್ ಪ್ಯಾಕೇಜ್ಗಳನ್ನು ಆರಿಸಿಕೊಂಡರೆ ಬಜೆಟ್ ಖಂಡಿತ ಹೆಚ್ಚಾಗುತ್ತದೆ. ಹಾಗಾಗಿ ವಿಯೆಟ್ನಾಂ ಟ್ರಿಪ್ ಖರ್ಚು ನಿಮ್ಮ ಪ್ರಯಾಣದ ಶೈಲಿ, ಉಳಿದುಕೊಳ್ಳುವ ಜಾಗ ಹಾಗೂ ಟ್ರಿಪ್ ದಿನಗಳ ಮೇಲೆ ಡಿಪೆಂಡ್ ಆಗಿರುತ್ತದೆ. ಆದ್ದರಿಂದ ವಿಯೆಟ್ನಾಂ ಅಗ್ಗದ ದೇಶ ಅಂತಲೂ ಹೇಳಲಾಗದು, ಹಾಗಂತ ದುಬಾರಿ ದೇಶ ಅಂತಲೂ ಹೇಳಲಾಗದು.
ವಿಯೆಟ್ನಾಂನಲ್ಲಿ ಪ್ರಕೃತಿ ಸೌಂದರ್ಯದಿಂದ ಹಿಡಿದು ಐತಿಹಾಸಿಕ ನಗರಗಳವರೆಗೆ ನೋಡಲು ಸಾಕಷ್ಟು ಜಾಗಗಳಿವೆ. ಮೊದಲ ಬಾರಿ ಹೋಗುವವರು ತಮ್ಮ ಸಮಯ ಹಾಗೂ ಬಜೆಟ್ಗೆ ತಕ್ಕಂತೆ ಕೆಲವು ಪ್ರಮುಖ ಜಾಗಗಳನ್ನು ಆರಿಸಿಕೊಳ್ಳಬಹುದು.
1. ಹಾ ಲಾಂಗ್ ಬೇ (Ha Long Bay)
ವಿಯೆಟ್ನಾಂನ ಅತ್ಯಂತ ಫೇಮಸ್ ಟೂರಿಸ್ಟ್ ಸ್ಪಾಟ್ಗಳಲ್ಲಿ ಹಾ ಲಾಂಗ್ ಬೇ ಕೂಡ ಒಂದು. ಸಮುದ್ರದ ಮಧ್ಯೆ ಎದ್ದು ನಿಂತಿರುವ ಸುಣ್ಣದ ಕಲ್ಲಿನ ಬೆಟ್ಟಗಳು, ಹಸಿರು ದ್ವೀಪಗಳು, ನೈಸರ್ಗಿಕ ಗುಹೆಗಳು ಇಲ್ಲಿನ ಹೈಲೈಟ್. ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡಬೇಕು ಅನ್ನೋರಿಗೆ ಇದು ಬೆಸ್ಟ್ ಚಾಯ್ಸ್.
ಇಲ್ಲಿ ಬೋಟಿಂಗ್, ಕ್ರೂಸ್ ಟೂರ್ ಹಾಗೂ ಗುಹೆಗಳ ವೀಕ್ಷಣೆ ಮಾಡಬಹುದು. ಕೆಲವು ಪ್ಯಾಕೇಜ್ಗಳಲ್ಲಿ ಊಟ, ಬೋಟಿಂಗ್ ಹಾಗೂ ಇತರ ಆಕ್ಟಿವಿಟಿಗಳು ಸೇರಿರುತ್ತವೆ. ನೀವು ಆರಿಸಿಕೊಳ್ಳುವ ಪ್ಯಾಕೇಜ್ ಮೇಲೆ ಖರ್ಚು ಡಿಪೆಂಡ್ ಆಗಿರುತ್ತದೆ.
2. ಹನೋಯಿ (Hanoi)
ವಿಯೆಟ್ನಾಂ ರಾಜಧಾನಿ ಹನೋಯಿ ತನ್ನ ಇತಿಹಾಸ, ಸಂಸ್ಕೃತಿ ಹಾಗೂ ಲೋಕಲ್ ಲೈಫ್ಸ್ಟೈಲ್ಗೆ ಫೇಮಸ್. ಹಳೆಯ ನಗರದ ಬೀದಿಗಳು, ಕೆರೆಗಳು, ಸಾಂಪ್ರದಾಯಿಕ ಮಾರುಕಟ್ಟೆಗಳು ಹಾಗೂ ಐತಿಹಾಸಿಕ ಕಟ್ಟಡಗಳನ್ನು ಇಲ್ಲಿ ನೋಡಬಹುದು. ಲೋಕಲ್ ಫುಡ್ ಟೇಸ್ಟ್ ಮಾಡಬೇಕು ಅನ್ನೋರಿಗೂ ಈ ಸಿಟಿ ಹೇಳಿಮಾಡಿಸಿದಂತಿದೆ.
ಹನೋಯಿಯಲ್ಲಿ ಹೋ ಚಿ ಮಿನ್ ಸಮಾಧಿ, ಹೋನ್ ಕೀಮ್ ಕೆರೆ ಹಾಗೂ ಓಲ್ಡ್ ಕ್ವಾರ್ಟರ್ನಂಥ ಜಾಗಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಬೀದಿ ಬದಿಯ ಅಂಗಡಿಗಳು, ಸಣ್ಣ ಕೆಫೆಗಳಲ್ಲಿ ಲೋಕಲ್ ಅಡುಗೆಯ ರುಚಿ ಸವಿಯಬಹುದು. ಸಿಟಿಯಲ್ಲಿ ಓಡಾಡಲು ನಡಿಗೆ, ಪಬ್ಲಿಕ್ ಟ್ರಾನ್ಸ್ಪೋರ್ಟ್ ಅಥವಾ ಆ್ಯಪ್ ಆಧಾರಿತ ಕ್ಯಾಬ್ಗಳನ್ನು ಬಳಸಬಹುದು.
3. ಹೋ ಚಿ ಮಿನ್ ಸಿಟಿ (Ho Chi Minh City)
ವಿಯೆಟ್ನಾಂನ ದಕ್ಷಿಣ ಭಾಗದಲ್ಲಿರುವ ಹೋ ಚಿ ಮಿನ್ ಸಿಟಿ ದೇಶದ ಪ್ರಮುಖ ವಾಣಿಜ್ಯ ಹಾಗೂ ಟೂರಿಸ್ಟ್ ಸೆಂಟರ್. ಹಿಂದೆ ಸೈಗಾನ್ ಅಂತ ಕರೆಯುತ್ತಿದ್ದ ಈ ನಗರದಲ್ಲಿ ಮಾಡರ್ನ್ ಬಿಲ್ಡಿಂಗ್ಗಳ ಜೊತೆಗೆ ಐತಿಹಾಸಿಕ ಜಾಗಗಳೂ ಇವೆ.
ವಾರ್ ರೆಮ್ನೆಂಟ್ಸ್ ಮ್ಯೂಸಿಯಂ, ನೊಟ್ರೆ ಡ್ಯಾಮ್ ಕೆಥೆಡ್ರಲ್, ಸೆಂಟ್ರಲ್ ಪೋಸ್ಟ್ ಆಫೀಸ್ ಹಾಗೂ ಬೆನ್ ಥಾನ್ ಮಾರ್ಕೆಟ್ನಂಥ ಜಾಗಗಳನ್ನು ನೀವು ನೋಡಬಹುದು. ಸಿಟಿ ಲೈಫ್ಸ್ಟೈಲ್, ಲೋಕಲ್ ಮಾರ್ಕೆಟ್ ಹಾಗೂ ಫುಡ್ ಕಲ್ಚರ್ ಬಗ್ಗೆ ಹತ್ತಿರದಿಂದ ತಿಳಿದುಕೊಳ್ಳಬೇಕು ಅನ್ನೋರಿಗೆ ಇದು ಬೆಸ್ಟ್ ಡೆಸ್ಟಿನೇಶನ್.
4. ಡಾ ನಾಂಗ್ (Da Nang)
ಬೀಚ್ಗಳು, ಮಾಡರ್ನ್ ಸಿಟಿ ವಾತಾವರಣ ಹಾಗೂ ಪ್ರಕೃತಿ ಸೌಂದರ್ಯದ ಕಾಂಬಿನೇಶನ್ಗೆ ಡಾ ನಾಂಗ್ ಫೇಮಸ್. ಫ್ಯಾಮಿಲಿ ಅಥವಾ ಫ್ರೆಂಡ್ಸ್ ಜೊತೆ ಟ್ರಿಪ್ಗೆ ಹೋಗುವವರು ಈ ಸಿಟಿಯನ್ನು ತಮ್ಮ ಪ್ಲಾನ್ನಲ್ಲಿ ಸೇರಿಸಿಕೊಳ್ಳಬಹುದು.
ಮೈ ಖೇ ಬೀಚ್, ಮಾರ್ಬಲ್ ಮೌಂಟೇನ್ಸ್ ಹಾಗೂ ಬಾ ನಾ ಹಿಲ್ಸ್ ಇಲ್ಲಿನ ಪ್ರಮುಖ ಆಕರ್ಷಣೆಗಳು. ಬಾ ನಾ ಹಿಲ್ಸ್ನಲ್ಲಿರುವ ಗೋಲ್ಡನ್ ಬ್ರಿಡ್ಜ್ ತನ್ನ ವಿಭಿನ್ನ ವಿನ್ಯಾಸದಿಂದ ಪ್ರವಾಸಿಗರನ್ನು ಅಟ್ರಾಕ್ಟ್ ಮಾಡುತ್ತದೆ. ಆದರೆ ಕೆಲವು ಜಾಗಗಳಿಗೆ ಎಂಟ್ರಿ ಟಿಕೆಟ್ ಹಾಗೂ ಟ್ರಾನ್ಸ್ಪೋರ್ಟ್ ಖರ್ಚು ಇರುತ್ತದೆ.
5. ಹೋಯ್ ಆನ್ (Hoi An)
ಸಾಂಪ್ರದಾಯಿಕ ಕಟ್ಟಡಗಳು, ಕಲರ್ಫುಲ್ ಲ್ಯಾಂಟರ್ನ್ಗಳು ಹಾಗೂ ನದಿ ತೀರದ ಸೌಂದರ್ಯದಿಂದ ಹೋಯ್ ಆನ್ ಸ್ಪೆಷಲ್ ಎನಿಸಿಕೊಂಡಿದೆ. ಸಂಜೆ ಹೊತ್ತು ಹಳೆಯ ಟೌನ್ ಬೀದಿಗಳಲ್ಲಿ ವಾಕ್ ಮಾಡುವುದು, ನದಿಯಲ್ಲಿ ಬೋಟಿಂಗ್ ಮಾಡುವುದು ಪ್ರವಾಸಿಗರಿಗೆ ಸಖತ್ ಫೀಲ್ ಕೊಡುತ್ತದೆ.
ಲೋಕಲ್ ಕರಕುಶಲ ವಸ್ತುಗಳ ಅಂಗಡಿಗಳು, ಸಾಂಪ್ರದಾಯಿಕ ಮಾರುಕಟ್ಟೆಗಳು ಹಾಗೂ ಸಣ್ಣ ರೆಸ್ಟೋರೆಂಟ್ಗಳು ಇಲ್ಲಿ ಕಾಣಸಿಗುತ್ತವೆ. ಡಾ ನಾಂಗ್ನಿಂದ ಹೋಯ್ ಆನ್ಗೆ ರೋಡ್ ಮೂಲಕ ಹೋಗಬಹುದು. ಈ ಎರಡು ಜಾಗಗಳನ್ನು ಒಟ್ಟಿಗೆ ಕವರ್ ಮಾಡಿದರೆ ಟೈಮ್ ಸೇವ್ ಆಗುತ್ತದೆ.
6. ನಿನ್ ಬಿನ್ (Ninh Binh)
ಹಸಿರು ಭತ್ತದ ಗದ್ದೆಗಳು, ಸುಣ್ಣದ ಕಲ್ಲಿನ ಬೆಟ್ಟಗಳು ಹಾಗೂ ನದಿ ಮಾರ್ಗಗಳು ನಿನ್ ಬಿನ್ ಏರಿಯಾಗೆ ಸ್ಪೆಷಲ್ ಲುಕ್ ಕೊಡುತ್ತವೆ. ಪ್ರಕೃತಿಯ ಮಡಿಲಲ್ಲಿ ರಿಲ್ಯಾಕ್ಸ್ ಮಾಡಬೇಕು ಅನ್ನೋರಿಗೆ ಇದು ಬೆಸ್ಟ್ ಚಾಯ್ಸ್.
ಟ್ರಾಂಗ್ ಆನ್ ಹಾಗೂ ಟಾಮ್ ಕಾಕ್ನಂಥ ಜಾಗಗಳಲ್ಲಿ ಬೋಟಿಂಗ್ ಮಾಡಬಹುದು. ಬೆಟ್ಟಗಳು, ಗುಹೆಗಳು ಹಾಗೂ ಹಳ್ಳಿಯ ಪ್ರಕೃತಿ ಸೌಂದರ್ಯವನ್ನು ಒಂದೇ ಟ್ರಿಪ್ನಲ್ಲಿ ಎಂಜಾಯ್ ಮಾಡುವ ಚಾನ್ಸ್ ಇಲ್ಲಿದೆ. ಹನೋಯಿಯಿಂದ ನಿನ್ ಬಿನ್ಗೆ ರೋಡ್ ಅಥವಾ ಟ್ರೈನ್ ಮೂಲಕ ಹೋಗಬಹುದು.
7. ಫು ಕ್ವಾಕ್ (Phu Quoc)
ಬೀಚ್ಗಳು, ರೆಸಾರ್ಟ್ಗಳು ಹಾಗೂ ನೀಲಿ ನೀರಿನಿಂದ ಫು ಕ್ವಾಕ್ ದ್ವೀಪ ಫೇಮಸ್ ಆಗಿದೆ. ರಿಲ್ಯಾಕ್ಸ್ ಮಾಡಲೆಂದೇ ವಿದೇಶಿ ಟ್ರಿಪ್ಗೆ ಹೋಗುವವರು ಈ ಜಾಗವನ್ನು ಆರಿಸಿಕೊಳ್ಳಬಹುದು. ಬೀಚ್ಗಳಲ್ಲಿ ಟೈಮ್ ಸ್ಪೆಂಡ್ ಮಾಡುವುದು, ವಾಟರ್ ಆಕ್ಟಿವಿಟಿಗಳಲ್ಲಿ ಪಾಲ್ಗೊಳ್ಳುವುದು ಹಾಗೂ ದ್ವೀಪದ ಪ್ರಕೃತಿ ಸೌಂದರ್ಯವನ್ನು ಎಂಜಾಯ್ ಮಾಡುವುದು ಇಲ್ಲಿನ ಸ್ಪೆಷಾಲಿಟಿ.
ವಿಯೆಟ್ನಾಂ ಟ್ರಿಪ್ ಆರಾಮದಾಯಕವಾಗಿರಲು ಕೆಲವು ವಿಚಾರಗಳನ್ನು ನೀವು ಮೊದಲೇ ಗಮನಿಸಬೇಕು.
ವೀಸಾ : ಭಾರತೀಯ ಪಾಸ್ಪೋರ್ಟ್ ಇರುವವರು ಟ್ರಿಪ್ಗೆ ಮುನ್ನ ವಿಯೆಟ್ನಾಂ ವೀಸಾ ನಿಯಮಗಳನ್ನು ಚೆಕ್ ಮಾಡಿಕೊಳ್ಳಿ. ನಿಮ್ಮ ಅರ್ಹತೆ, ಪ್ರಯಾಣದ ಉದ್ದೇಶ ಹಾಗೂ ವೀಸಾ ಅವಧಿಗೆ ತಕ್ಕಂತೆ ಲಭ್ಯವಿರುವ ಇ-ವೀಸಾ ವಿಧಾನದ ಡೀಟೇಲ್ಸ್ ಅನ್ನು ಅಧಿಕೃತ ವೆಬ್ಸೈಟ್ನಲ್ಲಿ ಕನ್ಫರ್ಮ್ ಮಾಡಿಕೊಳ್ಳಿ.
ಕರೆನ್ಸಿ ಎಕ್ಸ್ಚೇಂಜ್ : ಭಾರತದಿಂದ ಹೊರಡುವ ಮುನ್ನ ಅಥವಾ ವಿಯೆಟ್ನಾಂ ತಲುಪಿದ ಮೇಲೆ ನಂಬಿಕಸ್ಥ ಎಕ್ಸ್ಚೇಂಜ್ ಸೆಂಟರ್ಗಳಲ್ಲಿ ಹಣ ಬದಲಾಯಿಸಿಕೊಳ್ಳಿ. ಏರ್ಪೋರ್ಟ್ಗಳಲ್ಲಿರುವ ಎಕ್ಸ್ಚೇಂಜ್ ರೇಟ್ ಹಾಗೂ ಸಿಟಿಯಲ್ಲಿರುವ ರೇಟ್ಗಳು ಬೇರೆ ಬೇರೆ ಇರಬಹುದು. ಕಾರ್ಡ್ ಪೇಮೆಂಟ್ ಮಾಡುವಾಗ ಫಾರಿನ್ ಟ್ರಾನ್ಸಾಕ್ಷನ್ ಫೀಸ್ ಬಗ್ಗೆಯೂ ಗಮನಹರಿಸಿ.
ಟ್ರಿಪ್ ಬುಕಿಂಗ್ಸ್ : ಫ್ಲೈಟ್ ಟಿಕೆಟ್, ಹೋಟೆಲ್, ಕ್ರೂಸ್ ಹಾಗೂ ಪ್ರಮುಖ ಟೂರ್ ಪ್ಯಾಕೇಜ್ಗಳನ್ನು ಮೊದಲೇ ಬುಕ್ ಮಾಡಿಕೊಳ್ಳುವುದು ಜಾಣತನ. ರಶ್ ಹೆಚ್ಚಿರುವ ಟೈಮ್ನಲ್ಲಿ ಲಾಸ್ಟ್ ಮಿನಿಟ್ ಬುಕಿಂಗ್ ಮಾಡಿದರೆ ಖರ್ಚು ಹೆಚ್ಚಾಗಬಹುದು.
ಹವಾಮಾನ : ವಿಯೆಟ್ನಾಂನ ಉತ್ತರ, ಮಧ್ಯ ಹಾಗೂ ದಕ್ಷಿಣ ಭಾಗಗಳಲ್ಲಿ ಹವಾಮಾನ ಒಂದೇ ರೀತಿ ಇರುವುದಿಲ್ಲ. ಕೆಲವು ಕಡೆ ಮಳೆ, ತೇವಾಂಶ ಹೆಚ್ಚಿರಬಹುದು. ಹಾಗಾಗಿ ಟ್ರಿಪ್ ದಿನಾಂಕಕ್ಕೆ ತಕ್ಕಂತೆ ಹವಾಮಾನ ವರದಿ ನೋಡಿ ಬಟ್ಟೆ ಹಾಗೂ ಟ್ರಿಪ್ ಪ್ಲಾನ್ ರೆಡಿ ಮಾಡಿಕೊಳ್ಳಿ.
ಊಟ : ವಿಯೆಟ್ನಾಮೀಸ್ ಅಡುಗೆಗಳಲ್ಲಿ ನೂಡಲ್ಸ್, ರೈಸ್, ತರಕಾರಿ ಹಾಗೂ ನಾನ್-ವೆಜ್ ಐಟಂಗಳು ಹೆಚ್ಚಾಗಿ ಕಾಣಸಿಗುತ್ತವೆ. ವೆಜಿಟೇರಿಯನ್ಸ್ ತಮ್ಮ ಊಟದ ಬಗ್ಗೆ ಮೊದಲೇ ಹೋಟೆಲ್ನವರಿಗೆ ತಿಳಿಸುವುದು ಬೆಸ್ಟ್. ಕೆಲವು ಪ್ರಮುಖ ಸಿಟಿಗಳಲ್ಲಿ ಇಂಡಿಯನ್ ರೆಸ್ಟೋರೆಂಟ್ಗಳು ಕೂಡ ಇವೆ.






