ಜಿಮ್‌ನಲ್ಲಿ ನೀಡಿದ ಸಪ್ಲಿಮೆಂಟರಿ ಪ್ರೊಟೀನ್ ಸೇವಿಸಿದ ಯುವಕ ಸಾವು: ಕುಟುಂಬಸ್ಥರ ಆಕ್ರಂದನ
ಚೆನ್ನೈನಲ್ಲಿ ಜಿಮ್‌ನಲ್ಲಿ ವ್ಯಾಯಾಮ ಮಾಡುತ್ತಿದ್ದ ಯುವಕ ಜಿಮ್ ಟ್ರೈನರ್ ಸಜೆಸ್ಟ್ ಮಾಡಿದ್ದ ಉತ್ತೇಜಕ ಔಷಧಿ ತೆಗೆದುಕೊಂಡು ಸಾವನ್ನಪ್ಪಿದ ಆಘಾತಕಾರಿ ಘಟನೆ ನಡೆದಿದೆ.

ವ್ಯಾಯಾಮ ಮಾಡುತ್ತಿದ್ದ ಯುವಕ
ಚೆನ್ನೈನ ಕಾಸಿಮೇಡು ಜೀವರತ್ನಂ ನಗರದ ನಿವಾಸಿ 35 ವರ್ಷದ ರಾಮ್‌ಕಿ ಸಾವನ್ನಪ್ಪಿದ ಯುವಕ ಇವರು ಕಾಲಡಿಪೇಟೆಯಲ್ಲಿರುವ ಜಿಮ್‌ನಲ್ಲಿ 6 ತಿಂಗಳುಗಳಿಂದ ತೀವ್ರ ವ್ಯಾಯಾಮ ಮಾಡುತ್ತಿದ್ದರು. ದೇಹವನ್ನು ಹುರಿಗೊಳಿಸಲು ತರಬೇತುದಾರರ ಸಲಹೆಯ ಮೇರೆಗೆ ಉತ್ತೇಜಕ ಔಷಧಿಯನ್ನು ಚುಚ್ಚುಮದ್ದಿನ ಮೂಲಕ ತೆಗೆದುಕೊಳ್ಳುತ್ತಿದ್ದರು ಎಂಬ ಮಾಹಿತಿ ಇದೆ.
ಕಿಡ್ನಿ ವೈಫಲ್ಯ
ಇಂತಹ ಪರಿಸ್ಥಿತಿಯಲ್ಲಿ, ಕಳೆದ 2 ದಿನಗಳ ಹಿಂದೆ ರಾಮ್‌ಕಿಗೆ ಇದ್ದಕ್ಕಿದ್ದಂತೆ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿದೆ. ಇದರಿಂದ ಆಘಾತಗೊಂಡ ಪೋಷಕರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ತೀವ್ರ ಚಿಕಿತ್ಸೆ ನೀಡುತ್ತಿದ್ದರು. ಈ ವೇಳೆ ಹಲವು ಪರೀಕ್ಷೆಗಳನ್ನು ನಡೆಸಲಾಯಿತು. ಈ ವೇಳೆ ರಾಮ್‌ಕಿ ಅವರು ಮೂತ್ರಪಿಂಡಗಳು ಸಹ ಹಾನಿಗೊಳಗಾಗಿರುವುದು ತಿಳಿದುಬಂದಿದೆ. ಈ ಬಗ್ಗೆ ವೈದ್ಯರು ರಾಮ್‌ಕಿ ಕುಟುಂಬಕ್ಕೆ ತಿಳಿಸಿದ್ದಾರೆ.
ಚೆನ್ನೈ ಯುವಕ ಸಾವು
ಇದಾದ ನಂತರ ರಾಮ್‌ಕಿ ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿಯೇ ಸಾವನ್ನಪ್ಪಿದ್ದಾ ಚೆನ್ನಾಗಿ ಸಧೃಡವಾಗಿಯೇ ಇದ್ದ ಮಗ ಇದ್ದಕ್ಕಿದ್ದಂತೆ ಹಠಾತ್ ಸಾವಿಗೀಡಾಗಿರುವುದನ್ನು ಅರಗಿಸಿಕೊಳ್ಳಲಾಗದೇ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಪೊಲೀಸ್ ಠಾಣೆಯಲ್ಲಿ ದೂರು
ಘಟನೆಗೆ ಸಂಬಂಧಿಸಿದಂತೆ ರಾಮ್‌ಕಿ ಕುಟುಂಬಸ್ಥರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಲ್ಲಿ, ತಪ್ಪು ಔಷಧಿಯನ್ನು ಶಿಫಾರಸು ಮಾಡಿದ ಜಿಮ್ ತರಬೇತುದಾರನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ಉಂಟಾಯಿತು. ನಂತರ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಜಿಮ್ ಸಪ್ಲಿಮೆಂಟ್ಸ್
ದೇಹವನ್ನು ಹುರಿಗೊಳಿಸಲು ವೈದ್ಯರ ಶಿಫಾರಸ್ಸಿಲ್ಲದೆ ಅನಗತ್ಯ ಮಾತ್ರೆ ಮತ್ತು ಔಷಧಿಗಳನ್ನು ತೆಗೆದುಕೊಂಡ ಯುವಕ ಸಾವನ್ನಪ್ಪಿರುವ ಘಟನೆ ಆ ಪ್ರದೇಶದಲ್ಲಿ ತೀವ್ರ ದುಃಖವನ್ನುಂಟುಮಾಡಿದೆ. ರಾಮ್‌ಕಿಗೆ ಇಬ್ಬರು ಮಕ್ಕಳಿದ್ದು, ಹೆಂಡತಿಯ ಜೊತೆ ಭಿನ್ನಾಭಿಪ್ರಾಯದಿಂದಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾರೆ ಎಂದು ವರದಿ ಆಗಿದೆ.