Asianet Suvarna News Asianet Suvarna News

Digestive Health: ಜೀರ್ಣಾಂಗದ ಮೇಲೆ ದುಷ್ಪರಿಣಾಮ ಬೀರೋ ಅಭ್ಯಾಸಗಳಿವು!

ಜೀರ್ಣಾಂಗ ವ್ಯವಸ್ಥೆ ನಮ್ಮ ಇಡೀ ದೇಹ ಸರಿಯಾಗಿ ಕಾರ್ಯನಿರ್ವಹಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ. ಅದನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವುದು ಬಹಳ ಮುಖ್ಯ. ಜೀರ್ಣಕಾರ್ಯಕ್ಕೆ ತೊಂದರೆ ನೀಡುವ ನಮ್ಮ ದೈನಂದಿನ ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಿ.
 

Food and lifestyle affect on digestive health
Author
Bangalore, First Published Apr 28, 2022, 5:15 PM IST

ದೈನಂದಿನ ನಮ್ಮ ಅಭ್ಯಾಸಗಳು ದೀರ್ಘಾವಧಿ ಆರೋಗ್ಯದ (Longterm Health) ಮೇಲೆ ಪರಿಣಾಮ ಬೀರುತ್ತಿರುತ್ತವೆ. ನಮಗೆ ಅರಿವಿಲ್ಲದೇ ಕೆಲವು ತಪ್ಪು ಪದ್ಧತಿಗಳನ್ನೂ ನಾವು ರೂಢಿಸಿಕೊಂಡಿರುತ್ತೇವೆ. ಅಂತಹ ಕೆಲವು ಪದ್ಧತಿಗಳು ಜೀರ್ಣಾಂಗ ವ್ಯವಸ್ಥೆಗೆ (Digestive System) ಹಾನಿ ಉಂಟುಮಾಡುತ್ತಿರುತ್ತವೆ. ಅವುಗಳನ್ನು ಅರಿತುಕೊಂಡು ಸುಧಾರಿಸಿಕೊಳ್ಳುವುದು ಮುಖ್ಯ.  ಜೀರ್ಣ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುವ ಕೆಲವು ಅಭ್ಯಾಸಗಳ ಬಗ್ಗೆ ತಿಳಿದುಕೊಳ್ಳಿ. ಈ ಕುರಿತು ಆಯುರ್ವೇದ ತಜ್ಞೆ ಡಾ.ದೀಕ್ಷಾ ಭಾವಸಾರ ಅವರು ಕೆಲವು ಮಾಹಿತಿ ನೀಡಿದ್ದಾರೆ.

•    ಆಹಾರ ಸೇವನೆಯ ಬಳಿಕ ಸ್ನಾನ ಮಾಡುವುದು (Bathing After Food)
ಆಯುರ್ವೇದ ತಜ್ಞರ ಪ್ರಕಾರ, ಮನುಷ್ಯನ ಪ್ರತಿಯೊಂದೂ ಕಾರ್ಯಕ್ಕೂ ನಿಗದಿತ ಸಮಯವನ್ನು ರೂಢಿಸಿಕೊಳ್ಳಲಾಗಿದೆ. ಇದು ಸುಮ್ಮನೆ ಅಲ್ಲ. ಇದನ್ನು ಅನುಸರಿಸದೆ ಬೇಕಾಬಿಟ್ಟಿ ಜೀವನಶೈಲಿ (Lifestyle) ಅಳವಡಿಸಿಕೊಳ್ಳುವುದು ಸರಿಯಲ್ಲ. ಆಹಾರ ಸೇವನೆ ಮಾಡಿದ ಎರಡು ಗಂಟೆಗಳವರೆಗೆ ಸ್ನಾನ ಮಾಡಬಾರದು. ದೇಹದಲ್ಲಿರುವ ಅಗ್ನಿ ತತ್ವ (Fire Element) ಆಹಾರವನ್ನು ಪಚನಗೊಳಿಸಲು ನೆರವಾಗುತ್ತದೆ. ಆಹಾರ ಸೇವನೆ ಬಳಿಕ ಈ ಅಂಶ ತನ್ನಿಂತಾನೇ ಚುರುಕಾಗುತ್ತದೆ ಹಾಗೂ ಜೀರ್ಣ ಕಾರ್ಯಕ್ಕಾಗಿ ರಕ್ತನಾಳಗಳಲ್ಲಿ ರಕ್ತಪ್ರವಾಹವೂ ಹೆಚ್ಚುತ್ತದೆ. ಒಂದೊಮ್ಮೆ ನಾವು ಆಹಾರದ ಬಳಿಕ ಸ್ನಾನ ಮಾಡಿದರೆ ದೇಹದ ತಾಪಮಾನ ಕಡಿಮೆಯಾಗುತ್ತದೆ. ಆಗ ಜೀರ್ಣಾಂಗದ ಕಾರ್ಯವೂ ಮಂದವಾಗುತ್ತದೆ. ಸರಿಯಾಗಿ ಜೀರ್ಣವಾಗುವುದಿಲ್ಲ.

•    ಆಹಾರದ ಬಳಿಕ ನಡಿಗೆ ಸಲ್ಲದು (Walking After Food)
ವಾಕಿಂಗ್‌ ಮಾಡುವುದು ದೇಹಕ್ಕೆ ಉತ್ತಮ. ಬಿರುಸಿನ ನಡಿಗೆಯಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಆದರೆ, ಅದನ್ನು ಊಟ ಅಥವಾ ತಿಂಡಿಯ ಬಳಿಕ ಮಾಡಬಾರದು. ಇದರಿಂದ ಜೀರ್ಣಕಾರ್ಯದ ಮೇಲೆ ಕೆಟ್ಟ ಪರಿಣಾಮವುಂಟಾಗುತ್ತದೆ. ಆಹಾರ ಸೇವನೆಯ ತಕ್ಷಣ ಮಾಡುವ ದೀರ್ಘ ನಡಿಗೆ, ಸ್ವಿಮ್ಮಿಂಗ್‌ (Swimming) ಅಥವಾ ಅತಿಯಾದ ವ್ಯಾಯಾಮ ದೇಹಕ್ಕೆ ಹಾನಿಕಾರಕ. ಇದರಿಂದ ಹೊಟ್ಟೆಯಲ್ಲಿ ನುಲಿದಂತಾಗುವುದು, ಪೌಷ್ಟಿಕಾಂಶ ಹೀರಿಕೊಳ್ಳುವ ಗುಣ ಕಡಿಮೆಯಾಗುವುದು, ಹೊಟ್ಟೆಯಲ್ಲಿ ತಳಮಳ ಮುಂತಾದ ಸಮಸ್ಯೆ ಆಗುತ್ತದೆ.

ಅಯ್ಯೋ, ಬರೀ ತಲೆ ಬಿಸಿ ಮಾಡ್ಕೊಂಡಿದ್ದರೆ ಖುಷಿಯಾಗಿರೋದು ಯಾವಾಗ?

•    ಮಧ್ಯಾಹ್ನದ ಊಟವನ್ನು 2 ಗಂಟೆಯ ಒಳಗೆ ಮಾಡುವುದು (Meal Before 2 PM)
ಆಯುರ್ವೇದದ ಪ್ರಕಾರ, ಮಧ್ಯಾಹ್ನದ ಊಟವನ್ನು 12-2 ಗಂಟೆಯ ಒಳಗೆ ಮಾಡಬೇಕು. ಆಗ ಸೂರ್ಯನು ಆಕಾಶದಲ್ಲಿ ಪ್ರಖರವಾಗಿ ಬೆಳಗುತ್ತಿರುತ್ತಾನೆ. ಆಗ ಪಿತ್ತದ ಅಂಶವು ಪ್ರಮುಖವಾಗಿರುತ್ತದೆ. ಇದರಿಂದ ಆಹಾರ ಬೇಗ ಪಚನವಾಗುತ್ತದೆ. ಇದೇ ಕಾರಣದಿಂದ ಮಧ್ಯಾಹ್ನದ ಊಟ ಎರಡು ಗಂಟೆಯೊಳಗೆ ಮುಗಿಯಬೇಕು. ಆಯುರ್ವೇದದ ಪ್ರಕಾರ ಮಧ್ಯಾಹ್ನದ ಊಟ ಅತ್ಯಂತ ಮಹತ್ವದ್ದು. ಹೀಗಾಗಿ, ಅದಕ್ಕೆ ನಿಗದಿತ ಸಮಯಪಾಲನೆ ಮಾಡಬೇಕು.

•    ರಾತ್ರಿ ಸಮಯದಲ್ಲಿ ಮೊಸರು ಸೇವನೆ ಮಾಡುವುದು (Curd Intake at Night)
ಮೊಸರು ಒಗರಾಗಿ, ಸಿಹಿಯಾಗಿ ಇರುತ್ತದೆ. ಇದು ದೇಹದಲ್ಲಿ ಕಫ ಮತ್ತು ಪಿತ್ತದ ದೋಷವನ್ನು ಹೆಚ್ಚಿಸುತ್ತದೆ. ರಾತ್ರಿ ಸಮಯದಲ್ಲಿ ದೇಹದಲ್ಲಿ ಸಹಜವಾಗಿಯೇ ಕಫದ ಅಂಶ ಹೆಚ್ಚಿರುತ್ತದೆ. ಈ ವೇಳೆ ಮೊಸರನ್ನೂ ಸೇವಿಸುವುದರಿಂದ ಕಫದ ದೋಷ ಇನ್ನಷ್ಟು ಹೆಚ್ಚಿ ಕರುಳಿನಲ್ಲಿ ಕಟ್ಟಿಕೊಳ್ಳುತ್ತದೆ. ಇದರಿಂದ ಮಲಬದ್ಧತೆ ಉಂಟಾಗುತ್ತದೆ. ಹೀಗಾಗಿ, ರಾತ್ರಿ ಸಮಯದಲ್ಲಿ ಮೊಸರು ಸೇವಿಸುವುದು ಸಲ್ಲದು ಎನ್ನುತ್ತಾರೆ ಡಾ.ದೀಕ್ಷಾ ಭಾವಸಾರ.

ತೂಕ ಇಳಿಸೋಕೆ ಡಯೆಟ್‌, ವರ್ಕೌಟ್ ಮಾಡಿ ಸಾಕಾಯ್ತಾ ? ಇಸಾಬ್‌ಗೋಲ್ ಟ್ರೈ ಮಾಡಿ

•    ರಾತ್ರಿ ಊಟದ ನಂತರ ತಕ್ಷಣ ನಿದ್ರಿಸುವುದು (Sleeping After Dinner)
ರಾತ್ರಿ ಊಟ ಹಾಗೂ ಮಲಗುವ ಸಮಯದ ಮಧ್ಯೆ ಕನಿಷ್ಠ ೨-೩ ಗಂಟೆಗಳ ಅಂತರವಿರಬೇಕು. ನಿದ್ರಾ ಅವಧಿಯಲ್ಲಿ ದೇಹ ರಿಪೇರಿಯಾಗುತ್ತಿರುತ್ತದೆ, ನೋವುಗಳ ಶಮನವಾಗುತ್ತಿರುತ್ತದೆ. ವಿಚಾರ, ಭಾವನೆ, ಅನುಭವಗಳನ್ನು ಮಿದುಳು ಅರಗಿಸಿಕೊಳ್ಳುತ್ತಿರುತ್ತದೆ. ಆದರೆ, ದೇಹದ ಶಕ್ತಿ ಜೀರ್ಣಕ್ಕೆ ಮೀಸಲಾದರೆ ಈ ಕಾರ್ಯಗಳಿಗೆ ಧಕ್ಕೆಯಾಗುತ್ತದೆ. ಊಟದ ತಕ್ಷಣ ಮಲಗಿದರೆ ದೈಹಿಕ ಹಾಗೂ ಮಾನಸಿಕ ವಿಶ್ರಾಂತಿ ಸ್ಥಗಿತವಾಗುತ್ತದೆ. ಹೀಗಾಗಿ, ರಾತ್ರಿ ಊಟ ಚಿಕ್ಕದಾಗಿರಬೇಕು ಹಾಗೂ ಮಲಗುವ ಮೂರು ಗಂಟೆಗಳ ಮುನ್ನವೇ ಮಾಡಬೇಕು.

Follow Us:
Download App:
  • android
  • ios