Asianet Suvarna News Asianet Suvarna News

Health Tips: ಮಲಬದ್ಧತೆ ಸಮಸ್ಯೆನಾ ? ಕರಬೂಜ ತಿನ್ನಿ ಸಾಕು

ಇನ್ನೇನು ಬೇಸಿಗೆ (Summer) ಬಂತು. ಕಲ್ಲಂಗಡಿ (Watermelon), ಕರಬೂಜ ಮೊದಲಾದ ಸೀಸನಲ್‌ ಫ್ರುಟ್ಸ್‌ ಮಾರುಕಟ್ಟೆಗೆ ಬಂದಾಯ್ತು. ಕಲ್ಲಂಗಡಿ ಹಣ್ಣು ತಿನ್ನೋದು ಓಕೆ ಕರಬೂಜ (Muskmelon) ಯಾಕೆ ಅಂತೀರಾ ? ಮಸ್ಕಮೆಲನ್ ತಿನ್ನೋದು ಕಣ್ಣಿನ ದೃಷ್ಟಿಗೆ ಒಳ್ಳೇದು. ರಕ್ತದೊತ್ತಡಾನೂ ನಿಯಂತ್ರಣದಲ್ಲಿರುತ್ತೆ. ಮಾತ್ರವಲ್ಲ ಇದು ದೇಹದಲ್ಲಿ ಇಮ್ಯುನಿಟಿಯನ್ನೂ ಹೆಚ್ಚಿಸುತ್ತೆ.

Health Benefits Of Muskmelon In Summer
Author
Bengaluru, First Published Mar 15, 2022, 11:01 AM IST

ಬೇಸಿಗೆ (Summer) ಬಂತು ಅಂದ್ರೆ ಸಾಕು ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ವಹಿಸಿದ್ರೂ ಸಾಕಾಗಲ್ಲ. ದೇಹ ನಿಜರ್ಲೀಕರಣಗೊಳ್ಳದಂತೆ ಹೆಚ್ಚೆಚ್ಚು ನೀರು ಕುಡಿಯಬೇಕಾಗುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸೀಸನಲ್‌ ಫ್ರುಟ್ಸ್‌ (Seasonal Fruits)ಗಳನ್ನು ತಿನ್ನಬೇಕಾಗುತ್ತದೆ. ಬೇಸಿಗೆಯಲ್ಲಿ ಸೀಸನಲ್ ಫ್ರುಟ್ಸ್ ಅಂದ್ರೆ ತಕ್ಷಣಕ್ಕೆ ನೆನಪಾಗೋದು ಕಲ್ಲಂಗಡಿ, ಮೂಸಂಬಿ, ಮಸ್ಕ್‌ಮೆಲನ್ ಮೊದಲಾದವು. ಕಲ್ಲಂಗಡಿ ಹಣ್ಣು ಹಾಗೂ ಮೂಸಂಬಿ ಹಣ್ಣಿನಲ್ಲಿ ಹೆಚ್ಚು ನೀರಿನಂಶವಿರುವ ಕಾರಣ ಬೇಸಿಗೆಯಲ್ಲಿ ಡಿಹೈಡ್ರೇಶನ್ ಸಮಸ್ಯೆ ಕಾಡದಿರಲು ಈ ಹಣ್ಣುಗಳನ್ನು ತಿನ್ನುವಂತೆ ಶಿಫಾರಸು ಮಾಡಲಾಗುತ್ತದೆ. ಅದೇ ರೀತಿ ಮಸ್ಕ್‌ ಮೆಲನ್ (Muskmelon) ಅಥವಾ ಕರಬೂಜ ಹಣ್ಣು ಸಹ ಆರೋಗ್ಯ (Health)ಕ್ಕೆ ಅದೆಷ್ಟು ಒಳ್ಳೆಯದು ಅನ್ನೋದು ನಿಮಗೆ ಗೊತ್ತಾ ?

ಕರಬೂಜ ಹಣ್ಣನ್ನು ತಿನ್ನೋದ್ರಿಂದ ಏನೆಲ್ಲಾ ಆರೋಗ್ಯ ಪ್ರಯೋಜನವಿದೆ
ಕರಬೂಜ ಹಣ್ಣು, ಬೇಸಿಗೆಯಲ್ಲಿ ಲಭ್ಯವಾಗುವ ಪರಿಮಳಭರಿತವಾದ ಹಣ್ಣುಗಳಲ್ಲಿ ಒಂದಾಗಿದೆ. ಹೆಚ್ಚೇನೂ ಸಿಹಿಯಿಲ್ಲದಿದ್ದರೂ ಆರೋಗ್ಯಕ್ಕಂತೂ ಅತ್ಯುತ್ತಮ. ಪೊಟ್ಯಾಸಿಯಮ್, ಜೀವಸತ್ವಗಳು, ಖನಿಜಗಳಲ್ಲಿ ಮಸ್ಕ್‌ಮೆಲನ್ ಸಮೃದ್ಧವಾಗಿದೆ.

ಇದು ಮೂತ್ರಪಿಂಡದ ಆರೋಗ್ಯ, ರಕ್ತದೊತ್ತಡ ನಿಯಂತ್ರಣ ಮತ್ತು ಕಣ್ಣುಗಳಿಗೆ ಉತ್ತಮವೆಂದು ಪರಿಗಣಿಸಲಾಗಿದೆ. ಮಧುಮೇಹ ಇರುವವರಿಗೆ ಕರಬೂಜ ಹಣ್ಣಿನ ಸೇವನೆ ಅತ್ಯುತ್ತಮ ಆಯ್ಕೆ. ಯಾಕೆಂದರೆ ಇದು ಕಡಿಮೆ ಗ್ಲೈಸೆಮಿಕ್ ಲೋಡ್ ಅನ್ನು ಹೊಂದಿರುತ್ತದೆ. ಹೀಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹತೋಟಿಯಲ್ಲಿಡುತ್ತದೆ.

Children Health: ಬೇಸಿಗೆಯಲ್ಲಿ ಮಕ್ಕಳ ಶಕ್ತಿ ಹೆಚ್ಚಿಸುತ್ತೆ ಈ ಆಹಾರ

ಬೇಸಿಗೆಯಲ್ಲಿ ಮಲಬದ್ಧತೆ ಸಮಸ್ಯೆಗಳನ್ನು ಹೊಂದಿರುವ ಮಂದಿ ಕರಬೂಜ ಹಣ್ಣನ್ನು ತಿನ್ನಬಹುದು. ಇದು ಹೆಚ್ಚಿನ ಫೈಬರ್ ಅಂಶವನ್ನು ಹೊಂದಿರುವ ಕಾರಣ ಕರುಳಿನ ಚಲನೆಯನ್ನು ಸರಾಗಗೊಳಿಸಲು ಸಹಾಯ ಮಾಡುತ್ತದೆ. ವಿಟಮಿನ್ ಸಿ ಮತ್ತು ಆಂಟಿ-ಆಕ್ಸಿಡೆಂಟ್‌ಗಳ ಅತ್ಯುತ್ತಮ ಮೂಲವಾದ ಮಸ್ಕ್‌ಮೆಲನ್‌ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಹೃದ್ರೋಗಗಳು ಮತ್ತು ಕ್ಯಾನ್ಸರ್ ವಿರುದ್ಧ ಹೋರಾಡುತ್ತದೆ ಎಂದು ತಿಳಿದುಬಂದಿದೆ. 

ಇತ್ತೀಚಿನ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಆಯುರ್ವೇದ ತಜ್ಞೆ ಡಾ.ಡಿಕ್ಸಾ ಭಾವಸರ್, ಬೇಸಿಗೆಯಲ್ಲಿ ಸವಿಯಾದ ಕರಬೂಜ ಹಣ್ಣನ್ನು ತಿನ್ನೋದ್ರಿಂದ ಏನೇನು ಪ್ರಯೋಜನವಿದೆ ಎಂಬುದನ್ನು ವಿವರಿಸುತ್ತಾರೆ.

ಬೇಸಿಗೆಯಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದ ನೀರಿನ ಅಗತ್ಯವಿರುತ್ತದೆ. ಹೀಗಿದ್ದಾಗ ಹೆಚ್ಚು ನೀರಿನಂಶವುಳ್ಳ ಮಸ್ಕ್‌ಮೆಲನ್ ತಿನ್ನೋದ್ರಿಂದ ದೇಹಕ್ಕೆ ಹೆಚ್ಚು ನೀರು ಲಭಿಸುತ್ತದೆ. ಕರಬೂಜ ಹಣ್ಣಿನ ಸೇವನೆ ಮೂತ್ರದಲ್ಲಿರುವ ವಿಷವನ್ನು ಹೊರ ಹಾಕಿ ಮೂತ್ರನಾಳದ ಸೋಂಕನ್ನು ಇಲ್ಲವಾಗಿಸುತ್ತದೆ. ಬೇಸಿಗೆಯಲ್ಲಿ ಇದು ನಿಮ್ಮನ್ನು ಹೈಡ್ರೀಕರಿಸುತ್ತದೆ. ಹೀಗಾಗಿ ಚರ್ಮದ ಆರೋಗ್ಯಕ್ಕೂ ಇದು ಒಳ್ಳೆಯದು. ಕರಬೂಜ ಹಣ್ಣಿನ ಸೇವನೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಮೆನೊರ್ಹೇಜಿಯಾ ಮತ್ತು ಇತರ ರಕ್ತಸ್ರಾವದ ಅಸ್ವಸ್ಥತೆಗಳಲ್ಲಿ ಉಪಯುಕ್ತವಾಗಿದೆ. ಶಾಖದ ಸಮಸ್ಯೆಗಳಿರುವ ಜನರಿಗೆ ಮಸ್ಕ್‌ಮೆಲನ್ ಹಣ್ಣಿನ ಸೇವನೆ ಉತ್ತಮವಾಗಿದೆ ಎಂದು ತಜ್ಞರು ಹೇಳುತ್ತಾರೆ.

ಸಿಹಿ ಕಲ್ಲಂಗಡಿ ಹಣ್ಣನ್ನು ಆರಿಸ್ಕೊಳೋದು ಹೇಗೆ ? ಇದಿಷ್ಟು ಗೊತ್ತಿರಲಿ

ಕರಬೂಜ ಹಣ್ಣು ಪಿತ್ತ ಮತ್ತು ವಾತ ದೋಷವನ್ನು ಸಮತೋಲನಗೊಳಿಸುತ್ತದೆ ಮತ್ತು ಮಧುಮೇಹದಿಂದ ಬಳಲುತ್ತಿರುವ ಜನರು ಸಹ ಇದನ್ನು ಋತುವಿನಲ್ಲಿ ಮಿತವಾಗಿ ತಿನ್ನಬಹುದು ಎಂದು ಡಾ.ಭಾವ್ಸರ್ ಹೇಳುತ್ತಾರೆ.

ಆಹಾರದಲ್ಲಿ ಕರಬೂಜ ಹಣ್ಣನ್ನು ಹೇಗೆ ಬಳಸಬಹುದು ?

ಕರಬೂಜ ಹಣ್ಣಿನ ರಸ:  ಕರಬೂಜ ಹಣ್ಣಿನ ಬೀಜಗಳನ್ನು ತೆಗೆದುಹಾಕಿ ಮತ್ತು ಹಣ್ಣನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಿ. ಇದಕ್ಕೆ  ಸ್ಪಲ್ಪ ಸಕ್ಕರೆ ಸೇರಿಸಿ ಗ್ರೈಂಡ್ ಮಾಡಿಕೊಳ್ಳಿ. ಈ ರಸ ಆರೋಗ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಒದಗಿಸುತ್ತದೆ. ಈ ಮಿಶ್ರಣ 6 ತಿಂಗಳ ಮೇಲ್ಪಟ್ಟ ಶಿಶುಗಳಿಗೆ ಅತ್ಯುತ್ತಮ ಪೋಷಣೆಯ ಮೂಲವಾಗಿದೆ.

ಮಸ್ಕ್‌ಮೆಲನ್‌ ಮಿಲ್ಕ್‌ಶೇಕ್: ಮಸ್ಕ್‌ಮೆಲನ್‌ ಮಿಲ್ಕ್‌ಶೇಕ್ ಮಾಡಲು ಕರಬೂಜ ಹಣ್ಣನ್ನು ಸಣ್ಣದಾಗಿ ಕತ್ತರಿಸಿ, ಅದಕ್ಕೆ ಹಾಲು, ಕೆನೆ ಮತ್ತು ಸ್ವಲ್ಪ ಪುಡಿಮಾಡಿದ ಐಸ್ ಸೇರಿಸಿ.

ಮಸ್ಕ್‌ಮೆಲನ್‌ ಖೀರು: ನೀವು ಬೇಸಿಗೆಯಲ್ಲಿ ಆರೋಗ್ಯಕರ ಸಿಹಿತಿಂಡಿ ಆಯ್ಕೆಗಳನ್ನು ಹುಡುಕುತ್ತಿದ್ದರೆ, ಮಸ್ಕ್‌ಮೆಲನ್‌ ಆರೋಗ್ಯಕರವಾದ ಅತ್ಯುತ್ತಮ ಆಯ್ಕೆಯಾಗಿದೆ. ಹಾಲು, ಸಕ್ಕರೆ ಮತ್ತು ಒಣ ಹಣ್ಣುಗಳನ್ನು ಸೇರಿಸಿ ಇದನ್ನು ತಿನ್ನಬಹುದು. ಇನ್ಯಾಕೆ ತಡ, ಕರಬೂಜ ಹಣ್ಣನ್ನು ತಿನ್ನಿ. ಬೇಸಿಗೆಯಲ್ಲಿ ಹೆಲ್ದೀಯಾಗಿರಿ.

Follow Us:
Download App:
  • android
  • ios