Right time to drink milk: ಹಾಲನ್ನು ಯಾರು, ಯಾವ ಸಮಯದಲ್ಲಿ ಕುಡಿಯಬೇಕು?
ತೂಕ ಇಳಿಸಿಕೊಳ್ಳಲು ಮತ್ತು ತೂಕ ಹೆಚ್ಚಿಸಲು ನೀವು ಯಾವ ಸಮಯದಲ್ಲಿ ಹಾಲು ಕುಡಿಯಬೇಕು?. ಆ ಸಮಯದಲ್ಲೇ ಕುಡಿಯುವುದರಿಂದ ಏನೆಲ್ಲಾ ಪ್ರಯೋಜನ ಸಿಗುತ್ತದೆ ಇಲ್ಲಿ ನೋಡಿ...

ಹಾಲು ಕುಡಿಯಲು ಸರಿಯಾದ ಸಮಯ
ನಮ್ಮ ಎಲ್ಲಾ ತಾಯಂದಿರು ನಾವೇನೂ ಊಟ, ತಿಂಡಿ ಮಾಡದಿದ್ದಾಗ "ಕೊನೆ ಪಕ್ಷ ಹಾಲನ್ನಾದರೂ ಕುಡಿ" ಎಂದು ಬಾಲ್ಯದಿಂದಲೂ ಹೇಳುತ್ತಾ ಬಂದಿರುವುದನ್ನು ನಾವೆಲ್ಲರೂ ಕೇಳುತ್ತಾ ಬಂದಿದ್ದೇವೆ. ಏಕೆಂದರೆ ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟೀನ್ ಮತ್ತು ಅಗತ್ಯ ಜೀವಸತ್ವಗಳಿವೆ. ಇದು ನಮ್ಮ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ಆರೋಗ್ಯಕರವಾಗಿಡುತ್ತದೆ, ಆದರೆ ಹಾಲು ಕುಡಿಯಲು ಸರಿಯಾದ ಸಮಯ ಯಾವುದು ಎಂದು ನಿಮಗೆ ತಿಳಿದಿದೆಯೇ. ಏಕೆಂದರೆ ಹಾಲನ್ನು ಸಮಯಕ್ಕೆ ಸರಿಯಾಗಿ ಕುಡಿಯುವುದರಿಂದ ನಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಅಷ್ಟೇ ಏಕೆ ಮುಖ ಫಳ ಫಳವೆಂದು ಹೊಳೆಯುವಂತೆ ಮಾಡಬಹುದು.
ತೂಕ ಇಳಿಸಿಕೊಳ್ಳಲು
ತೂಕ ಇಳಿಸಿಕೊಳ್ಳಲು ಹಾಲು ಕುಡಿಯಲು ಉತ್ತಮ ಸಮಯ ಬೆಳಗ್ಗೆ. ಬೆಳಗ್ಗೆ ಹಾಲು ನಿಮ್ಮ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ, ದಿನವಿಡೀ ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಕೆಲವೊಮ್ಮೆ ಮಲಗುವ ಮುನ್ನ ಹಾಲು ಕುಡಿಯುವುದರಿಂದ ತಡರಾತ್ರಿ ಹಸಿವಾಗುವುದು ಕಡಿಮೆಯಾಗುತ್ತದೆ ಮತ್ತು ರಾತ್ರಿಯಿಡೀ ಸ್ನಾಯುಗಳನ್ನು ಸರಿಪಡಿಸಬಹುದು. ಅಂದಹಾಗೆ ಕಡಿಮೆ ಕೊಬ್ಬಿನ ಹಾಲು ಅಥವಾ ಕೆನೆ ತೆಗೆದ ಹಾಲು ಆಯ್ಕೆ ತೂಕ ನಷ್ಟಕ್ಕೆ ಉತ್ತಮವೆಂದು ಪರಿಗಣಿಸಲಾಗುತ್ತದೆ.
ತೂಕ ಹೆಚ್ಚಿಸಿಕೊಳ್ಳುವವರು
ತೂಕ ಹೆಚ್ಚಿಸಿಕೊಳ್ಳಲು ಹಾಲು ಕುಡಿಯಲು ಉತ್ತಮ ಸಮಯವೆಂದರೆ ಊಟದ ನಡುವೆ ಅಥವಾ ಮಲಗುವ ಮುನ್ನ. ಊಟದ ನಡುವೆ ಹಾಲು ಕುಡಿಯುವುದರಿಂದ ದೇಹಕ್ಕೆ ಹೆಚ್ಚಿನ ಕ್ಯಾಲೊರಿಗಳು ಮತ್ತು ಪೋಷಕಾಂಶಗಳು ದೊರೆಯುತ್ತವೆ. ಮಲಗುವ ಮುನ್ನ ಕುಡಿಯುವುದರಿಂದ ಹಾಲು ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳನ್ನು ಪೂರೈಸುವ ಮೂಲಕ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ.
ಸ್ನಾಯುವಿನ ದ್ರವ್ಯರಾಶಿ( Muscle mass)ಹೆಚ್ಚಿಸಲು
ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಲು, ವ್ಯಾಯಾಮದ ನಂತರ ಹಾಲು ಕುಡಿಯವುದು ಒಳ್ಳೆಯದು. ಹಾಲಿನಲ್ಲಿರುವ ಪ್ರೋಟೀನ್ ಮತ್ತು ಕಾರ್ಬೋಹೈಡ್ರೇಟ್‌ಗಳ ಸಂಯೋಜನೆಯು ಸ್ನಾಯುಗಳ ಚೇತರಿಕೆ ಮತ್ತು ಬೆಳವಣಿಗೆಗೆ ಸಹಾಯ ಮಾಡುತ್ತದೆ. ವ್ಯಾಯಾಮ ಮಾಡಿ 30 ನಿಮಿಷದಿಂದ ಒಂದು ಗಂಟೆಯ ಒಳಗೆ ಹಾಲು ಕುಡಿಯುವುದು ಸ್ನಾಯುವಿನ ದ್ರವ್ಯರಾಶಿಯನ್ನು ಹೆಚ್ಚಿಸಲು ಉತ್ತಮ ಸಮಯವೆಂದು ಪರಿಗಣಿಸಲಾಗಿದೆ.
ಹೊಳೆಯುವ ಚರ್ಮಕ್ಕಾಗಿ
ಹೊಳೆಯುವ ಚರ್ಮಕ್ಕಾಗಿ, ಮಲಗುವ ಮುನ್ನ ಹಾಲು ಕುಡಿಯವುದು ಉತ್ತಮ ಸಮಯ. ಹಾಲಿನಲ್ಲಿ ವಿಟಮಿನ್ ಎ, ವಿಟಮಿನ್ ಡಿ ಮತ್ತು ಕ್ಯಾಲ್ಸಿಯಂ ನಂತಹ ಪೋಷಕಾಂಶಗಳಿವೆ, ಇದು ಚರ್ಮವನ್ನು ಆರೋಗ್ಯಕರವಾಗಿಡುತ್ತದೆ. ಮಲಗುವ ಮುನ್ನ ಹಾಲು ಕುಡಿಯುವುದರಿಂದ ಈ ಪೋಷಕಾಂಶಗಳು ರಾತ್ರಿಯಿಡೀ ಕೆಲಸ ಮಾಡುತ್ತವೆ. ಚರ್ಮದ ಪುನರುತ್ಪಾದನೆಗೆ ಸಹಾಯ ಮಾಡುತ್ತದೆ ಮತ್ತು ಮುಖಕ್ಕೆ ನೈಸರ್ಗಿಕ ಹೊಳಪನ್ನು ತರುತ್ತದೆ. ಇದಲ್ಲದೆ, ದೈನಂದಿನ ತ್ವಚೆಯ ಆರೈಕೆಯಲ್ಲಿ ಹಾಲನ್ನು ಸೇರಿಸುವುದರಿಂದ ಮುಖವು ಹೆಚ್ಚು ಹೊಳೆಯುತ್ತದೆ ಮತ್ತು ಆರೋಗ್ಯಕರವಾಗಿ ಕಾಣುವಂತೆ ಮಾಡುತ್ತದೆ.