ಒಂದೇ ಒಂದು ಇಂಜೆಕ್ಷನ್.. 100 ಕೆಜಿ ತೂಕ ಇಳಿಸ್ಬೋದು, ಬೆಲೆ ಎಷ್ಟು ಅಂತೀರಾ?
ಈ ಔಷಧಿಯನ್ನು ವಾರಕ್ಕೊಮ್ಮೆ ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಳ್ಳಬೇಕು. ಇದರ ಬೆಲೆ ಡೋಸೇಜ್ ಅನ್ನು ಅವಲಂಬಿಸಿ ಬದಲಾಗುತ್ತದೆ.

ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬೊಜ್ಜು ಮತ್ತು ಅಧಿಕ ತೂಕದಿಂದ ಬಳಲುತ್ತಿದ್ದು, ತೂಕ ಇಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಕೆಲವರು ಈ ಸಮಸ್ಯೆಗೆ ಸುಲಭ ಮತ್ತು ತ್ವರಿತ ಪರಿಹಾರವನ್ನು ಹುಡುಕುತ್ತಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಕೊಬ್ಬನ್ನು ಕಡಿಮೆ ಮಾಡುವ ಮಾತ್ರೆಗಳು, ಪೂರಕಗಳು, ಪುಡಿಗಳು ಮತ್ತು ಚುಚ್ಚುಮದ್ದುಗಳು ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಆದರೆ ಇದೀಗ ಹೆಚ್ಚುವರಿ ತೂಕವನ್ನು ಕಡಿಮೆ ಮಾಡುವ ಮತ್ತೊಂದು ಔಷಧ ಭಾರತೀಯ ಮಾರುಕಟ್ಟೆ ಪ್ರವೇಶಿಸಿದೆ. ಹೌದು, ಡ್ಯಾನಿಶ್ ಫಾರ್ಮಾ ಕಂಪನಿ ನೊವೊ ನಾರ್ಡಿಸ್ಕ್ ಭಾರತೀಯ ಮಾರುಕಟ್ಟೆಯಲ್ಲಿ ವೆಗೋವಿ ಎಂಬ ಹೊಸ ಔಷಧವನ್ನು ಬಿಡುಗಡೆ ಮಾಡಿದೆ.
ಜೂನ್ 24 ರಂದು ಮಂಗಳವಾರ ನೊವೊ ನಾರ್ಡಿಸ್ಕ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ವಿಕ್ರಾಂತ್ ಶ್ರೋತ್ರಿಯಾ ಈ ಔಷಧವನ್ನು ಬಿಡುಗಡೆ ಮಾಡಿದ್ದಾರೆ.
ಈ ಕುರಿತು ಮಾತನಾಡಿರುವ ವಿಕ್ರಾಂತ್ ಶ್ರೋತ್ರಿಯಾ, ಔಷಧಿ ಈಗ ಎಲ್ಲಾ ಅನುಮೋದನೆಗಳೊಂದಿಗೆ ಲಭ್ಯವಿದೆ. ಈ ತಿಂಗಳ ಅಂತ್ಯದ ವೇಳೆಗೆ ಇದು ಔಷಧಾಲಯ ಅಂಗಡಿಗಳಲ್ಲಿ ಲಭ್ಯವಿರುತ್ತದೆ ಎಂದು ಹೇಳಿದರು. ಅಧಿಕ ತೂಕ ಮತ್ತು ಬೊಜ್ಜುತನದಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಈ ಔಷಧಿ ಉತ್ತಮ ಫಲಿತಾಂಶವನ್ನು ನೀಡುತ್ತದೆ ಎಂದೂ ಅವರು ಹೇಳಿದರು.
ಈ ಔಷಧಿಯನ್ನು ವಾರಕ್ಕೊಮ್ಮೆ ಇಂಜೆಕ್ಷನ್ ರೂಪದಲ್ಲಿ ತೆಗೆದುಕೊಳ್ಳಬೇಕು. ಅದರ ಬೆಲೆಗಳು ಡೋಸೇಜ್ ಅನ್ನು ಅವಲಂಬಿಸಿ ಬದಲಾಗುತ್ತವೆ ಎಂದು ಸಹ ವಿಕ್ರಾಂತ್ ತಿಳಿಸಿದರು. 0.25 ಮಿಗ್ರಾಂ, 0.5 ಮಿಗ್ರಾಂ ಮತ್ತು 1 ಮಿಗ್ರಾಂ ಡೋಸ್‌ಗಳ ಬೆಲೆ ತಿಂಗಳಿಗೆ 17,345 ರೂ. (ವಾರಕ್ಕೆ 4,366 ರೂ.). 1.7 ಮಿಗ್ರಾಂ ಡೋಸ್ ತಿಂಗಳಿಗೆ 24,280 ರೂ., 2.4 ಮಿಗ್ರಾಂ ಡೋಸ್ ತಿಂಗಳಿಗೆ 26,015 ರೂ. ಎಂದು ಅವರು ಸ್ಪಷ್ಟಪಡಿಸಿದರು.