ಪಾತ್ರೆಗಳಿಗೂ Expiry Date ಇದೆ… ಸಮಯಕ್ಕೆ ಸರಿಯಾಗಿ ಬದಲಿಸಿಲ್ಲ ಅಂದ್ರೆ ಅಪಾಯ ಖಚಿತಾ
ಔಷಧಿಗಳಂತೆ ಅಡುಗೆಗೆ ಬಳಸುವ ಪಾತ್ರೆಗಳಿಗೂ ಸಹ Expiry Date ಇದೆ ಅನ್ನೋದು ನಿಮಗೆ ಗೊತ್ತಿದ್ಯಾ?. ಆ ಪಾತ್ರೆಗಳನ್ನು ನಿರ್ದಿಷ್ಟ ಸಮಯಕ್ಕಿಂತ ಹೆಚ್ಚು ಕಾಲ ಬಳಸುವುದರಿಂದ ನಿಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಿದ್ರೆ ಪಾತ್ರೆಗಳ Expiry Date ಯಾವುದು ನೋಡೋಣ.

ಪಾತ್ರೆಗಳ Expiry Date
ಅಡುಗೆಯಿಂದ ಹಿಡಿದು ತಿನ್ನುವವರೆಗೆ ಎಲ್ಲದಕ್ಕೂ ಪಾತ್ರೆಗಳನ್ನು ಬಳಸಲಾಗುತ್ತದೆ. ಆದರೆ ಕೆಲವೊಮ್ಮೆ ಪಾತ್ರೆಗಳು ಅವುಗಳ ಅವಧಿ ಮೀರಿರುತ್ತವೆ, ನಂತರ ಅವುಗಳಲ್ಲಿ ಆಹಾರವನ್ನು ಸೇವಿಸುವುದರಿಂದ ನಿಮಗೆ ಹಾನಿಯಾಗಬಹುದು.
Expiry Date ಕಳೆದ ಪಾತ್ರೆಗಳ ಬಳಕೆಯಿಂದ ಏನಾಗುತ್ತೆ?
ಇದನ್ನು ತಿಳಿದರೆ ಅನೇಕ ಜನರು ಅಚ್ಚರಿಗೊಳಗಾಗಬಹುದು, ಆದರೆ ಔಷಧಿಗಳಂತೆ, ಪಾತ್ರೆಗಳು ಸಹ ತಮ್ಮದೇ ಆದ ಎಕ್ಸ್’ಪೈರಿ ಡೇಟ್ ಹೊಂದಿರುತ್ತವೆ, ಇದನ್ನು ಪ್ರತಿಯೊಬ್ಬರು ತಿಳಿದುಕೊಳ್ಳುವುದು ಬಹಳ ಮುಖ್ಯ. ಪ್ರತಿಯೊಂದು ಲೋಹಕ್ಕೂ ತನ್ನದೇ ಆದ Expiry Date ಇದೆ. ಪಾತ್ರೆಗಳ ಎಕ್ಸ್’ಪೈರಿ ಡೇಟ್ ಎಂದರೆ ಅವು ಬಳಕೆಗೆ ಸುರಕ್ಷಿತವಾಗಿಲ್ಲದ ಸಮಯ. ಕಾಲಾನಂತರದಲ್ಲಿ, ಪಾತ್ರೆಗಳ ಮೇಲೆ ಗೀಟುಗಳು, ತುಕ್ಕು ಹಿಡಿಯುವುದು ಅಥವಾ ಲೇಪನವು ಕ್ಷೀಣಿಸಲು ಪ್ರಾರಂಭಿಸುತ್ತದೆ, ಈ ಹಾನಿಕಾರಕ ಪದಾರ್ಥಗಳು, ಅಡುಗೆಯಲ್ಲಿ ಬೆರೆತರೆ ಅದರಿಂದ ಆರೋಗ್ಯ ಸಮಸ್ಯೆ ಕಾಡೋದಕ್ಕೆ ಶುರುವಾಗುತ್ತೆ.
ನಾನ್-ಸ್ಟಿಕ್ ಪಾತ್ರೆಗಳು
ನಾನ್-ಸ್ಟಿಕ್ ಪ್ಯಾನ್‌ಗಳ (non stick pans) ಲೇಪನವು 2-3 ವರ್ಷಗಳಲ್ಲಿ ಹಾಳಾಗಬಹುದು. ಲೇಪನದ ಪದರವು ಎದ್ದು ಬರುತ್ತಿದ್ದರೆ, ಹಾನಿಕಾರಕ ರಾಸಾಯನಿಕಗಳು ಆಹಾರಕ್ಕೆ ಸೇರಬಹುದು. ಹಾಗಾಗಿ ಪ್ರತಿ 2-3 ವರ್ಷಗಳಿಗೊಮ್ಮೆ ಅವುಗಳನ್ನು ಬದಲಾಯಿಸಬೇಕು.
ಅಲ್ಯೂಮೀನಿಯಂ ಪಾತ್ರೆಗಳು
ಸಾಮಾನ್ಯವಾಗಿ ಅಲ್ಯೂಮೀನಿಯಂ ಪಾತ್ರೆಗಳು (aluminium utensils) ಅಡುಗೆ ಮಾಡಲು, ತಿನ್ನೋದಕ್ಕೂ ಉತ್ತಮವಲ್ಲ ಎಂದು ಹೇಳಲಾಗುತ್ತದೆ. ಆದರೆ ಇದರಲ್ಲಿ ತುಕ್ಕು ಹಿಡಿದರೆ, ಅಥವಾ ಪಾತ್ರೆ ಹಾಳಾಗಿದ್ದರೆ ಬಳಕೆಗೆ ಯೋಗ್ಯವಾಗಿರೋದಿಲ್ಲ. 5-7 ವರ್ಷಗಳ ನಂತರ ಪಾತ್ರೆಗಳನ್ನು ಬದಲಾಯಿಸೋದು ಉತ್ತಮ.
ಪ್ಲಾಸ್ಟಿಕ್ ಡಬ್ಬಿ ಅಥವಾ ಪ್ಲೇಟ್
ಪ್ಲಾಸ್ಟಿಕ್ ಪಾತ್ರೆಗಳು (plastic boxes) 1-2 ವರ್ಷಗಳಲ್ಲಿ ಹಾಳಾಗಿ ಹೋಗುತ್ತವೆ. ತಜ್ಞರ ಪ್ರಕಾರ ಪ್ಲಾಸ್ಟಿಕ್ ತಟ್ಟೆಗಳಲ್ಲಿ ಆಹಾರವನ್ನು ಸೇವನೆ ಮಾಡೋದು ಸಹ ತಪ್ಪು. ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ.
ಲೋಹದ ಪಾತ್ರೆಗಳು
ಕಬ್ಬಿಣದ ಪಾತ್ರೆಗಳು (iron utensils)ದೀರ್ಘಕಾಲ ಬಾಳಿಕೆ ಬರುತ್ತವೆ. ಅಲ್ಲದೆ, ಅದರಲ್ಲಿ ಆಹಾರವನ್ನು ಬೇಯಿಸುವುದು ದೇಹಕ್ಕೆ ತುಂಬಾ ಪ್ರಯೋಜನಕಾರಿ. ಆದಾಗ್ಯೂ, ಕೆಲವೊಮ್ಮೆ ಮಳೆಗಾಲ ಅಥವಾ ತೇವಾಂಶವುಳ್ಳ ಸ್ಥಳದಲ್ಲಿರುವುದರಿಂದ, ಈ ಪಾತ್ರೆ ತುಕ್ಕು ಹಿಡಿಯಬಹುದು. ಲಘು ತುಕ್ಕು ತೆಗೆಯಬಹುದು, ಆದರೆ ಅತಿಯಾದ ತುಕ್ಕು ಇದ್ದರೆ, ಪಾತ್ರೆಯನ್ನು ಬಳಕೆ ಮಾಡಬಾರದು.
ಹಳೆಯ ಪಾತ್ರೆಗಳು
ಹಳೆಯ ಅಥವಾ ಹಾನಿಗೊಳಗಾದ ಪಾತ್ರೆಗಳನ್ನು ಬಳಸುವುದರಿಂದ ಲೋಹದ ಕಣಗಳು ಅಥವಾ ರಾಸಾಯನಿಕಗಳು ಆಹಾರಕ್ಕೆ ಸೇರಬಹುದು, ಇದು ಹೊಟ್ಟೆಯ ಸಮಸ್ಯೆಗಳು, ಅಲರ್ಜಿಗಳು ಅಥವಾ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಹೆಚ್ಚಿಸುತ್ತದೆ. ನಾನ್-ಸ್ಟಿಕ್ ಪಾತ್ರೆಗಳ ಪದರದ ಲೇಪನವು ತುಂಬಾನೆ ಅಪಾಯಕಾರಿ.
ಪಾತ್ರೆಗಳ ದೀರ್ಘಕಾಲೀನ ಆರೈಕೆ
ಪಾತ್ರೆಗಳನ್ನು ದೀರ್ಘಕಾಲದವರೆಗೆ ನೋಡಿಕೊಳ್ಳಬಹುದು. ಇದಕ್ಕಾಗಿ, ಪಾತ್ರೆಗಳನ್ನು ತೊಳೆದ ನಂತರ ಒರೆಸಿ. ಇದಲ್ಲದೆ, ನಾನ್-ಸ್ಟಿಕ್ ಪಾತ್ರೆಗಳಲ್ಲಿ ಚೂಪಾದ ಲೋಹದ ಚಮಚಗಳನ್ನು ಬಳಸಬೇಡಿ. ಇದರಿಂದ ದೀರ್ಘಕಾಲದವರೆಗೆ ಇದನ್ನು ಬಳಕೆ ಮಾಡಬಹುದು.