ಫ್ಯಾಟಿ ಲಿವರ್ ಸಮಸ್ಯೆ ಬರದಂತೆ ತಡೆಯುತ್ತವೆ ಈ 5 ಅಡುಗೆ ಎಣ್ಣೆಗಳು
ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಅಥವಾ ಫ್ಯಾಟಿ ಲಿವರ್ ಕಾಯಿಲೆಗೆ ಕಳಪೆ ಆಹಾರ, ಕೆಟ್ಟ ಜೀವನಶೈಲಿ, ಹೆಚ್ಚಿದ ಬೊಜ್ಜು, ಇನ್ಸುಲಿನ್‌ಗೆ ದೇಹದ ಪ್ರತಿರೋಧ, ಚಯಾಪಚಯ ಸಮಸ್ಯೆಗಳು ಕಾರಣ. ಆದರೆ ಈ ಸಮಸ್ಯೆಗೆ ಪರಿಹಾರವಾಗಿ ಕೆಲವು ಅಡುಗೆ ಎಣ್ಣೆಗಳು ಕೆಲಸ ಮಾಡುತ್ತವೆ ಎಂದು ಅಧ್ಯಯನಗಳು ಹೇಳಿವೆ. ಅವು ಯಾವುವು ಎಂಬುದನ್ನು ಈಗ ನೊಡೋಣ.

ಫ್ಯಾಟಿ ಲಿವರ್ ಡಿಸೀಸ್ ಅಥವಾ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ ಇಂದು ಯುವ ಸಮೂಹದ ಅನೇಕರನ್ನು ಕಾಡುತ್ತಿದೆ. ಕಳಪೆ ಆಹಾರ, ಕೆಟ್ಟ ಜೀವನಶೈಲಿ, ಹೆಚ್ಚಿದ ಬೊಜ್ಜು, ಇನ್ಸುಲಿನ್‌ಗೆ ಪ್ರತಿರೋಧ, ಚಯಾಪಚಯ ಸಮಸ್ಯೆಗಳು(metabolic issues) ಇದಕ್ಕೆ ಮುಖ್ಯ ಕಾರಣ. ಈ ಎಲ್ಲಾ ಸಮಸ್ಯೆಗಳು ನಾನ್-ಆಲ್ಕೋಹಾಲಿಕ್ ಫ್ಯಾಟಿ ಲಿವರ್ ಡಿಸೀಸ್ (NAFLD) ಎಂದು ಕರೆಯಲ್ಪಡುವ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆಗೆ ಕಾರಣವಾಗುತ್ತಿದೆ. ಸಾಮಾನ್ಯವಾಗಿ ಅತೀಯಾಗಿ ಮದ್ಯಸೇವಿಸುವವರು ಈ ಫ್ಯಾಟಿ ಲಿವರ್ ಸಮಸ್ಯೆಗೆ ಒಳಗಾಗುತ್ತಿದ್ದರು. ಆದರೆ ಈಗ ಮದ್ಯಸೇವನೆ ಮಾಡದವರಲ್ಲಿಯೂ ಈ ಫ್ಯಾಟಿ ಲಿವರ್ ಸಮಸ್ಯೆ ಕಂಡು ಬರುತ್ತಿದೆ. ನಾವು ನಮ್ಮ ದೇಹದೊಳಗೆ ಏನು ತುಂಬುತ್ತೇವೆಯೋ ಅದೇ ನಮ್ಮ ಆರೋಗ್ಯದಲ್ಲಿ ಅಥವಾ ಫಿಟ್‌ನೆಸ್‌ನಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದಕ್ಕೆ ಈ ಫ್ಯಾಟಿ ಲಿವರ್ ಸಮಸ್ಯೆ ಒಂದು ಉದಾಹರಣೆಯಾಗಿದೆ.
ಈ ಫ್ಯಾಟಿ ಲಿವರ್ ಸಮಸ್ಯೆಯಲ್ಲಿ ನಾವು ಅಡುಗೆಗೆ ಬಳಸುವ ಎಣ್ಣೆ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಅಡುಗೆ ಎಣ್ಣೆಗಳು ಕೊಬ್ಬಿನ ಮೂಲಗಳಾಗಿದ್ದು, ಅವು ಹೊಂದಿರುವ ಕೊಬ್ಬಿನ ಗುಣಮಟ್ಟ ಹಾಗೂ ಅವು ಲಿವರ್‌ನಲ್ಲಿ ಶೇಖರಣೆಯಾಗುವುದಲ್ಲದೇ ನೋವು, ವಾತದ ಒತ್ತಡ, ಇನ್ಸುಲಿನ್ ಸೂಕ್ಷ್ಮತೆ ಮುಂತಾದವುಗಳ ಮೇಲೆ ಬಹಳ ಪರಿಣಾಮ ಬೀರುತ್ತದೆ. ಹೀಗಾಗಿ ಕೊಬ್ಬಿನ ಪಿತ್ತಜನಕಾಂಗದ(Fatty liver)ಕಾಯಿಲೆಯನ್ನು ಬರದಂತೆ ತಡೆಯಲು ನಾವು ಸರಿಯಾದ ಅಡುಗೆ ಎಣ್ಣೆಯನ್ನು ಬಳಸುವುದು ಕೂಡ ಬಹಳ ಮುಖ್ಯವಾಗುತ್ತದೆ. ನ್ಯಾಷನಲ್ ಲೈಬ್ರರಿ ಆಫ್ ಮೆಡಿಸಿನ್ ನಡೆಸಿದ ಸಂಶೋಧನಾ ಅಧ್ಯಯನದ ಪ್ರಕಾರ, EPAನಂತಹ ಒಮೆಗಾ-3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿರುವ ಕ್ಯಾನೋಲಾ ಎಣ್ಣೆಯು ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡುವ ಮತ್ತು ಯಕೃತ್ತಿನ ಕಾರ್ಯವನ್ನು ಸುಧಾರಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ತಿಳಿದು ಬಂದಿದೆ. ಹೀಗಾಗಿ ಇಂತಹ ಎಣ್ಣೆಯನ್ನು ಅಡುಗೆಯಲ್ಲಿ ಬಳಸಿದಾಗ ಅಥವಾ ಸರಿಯಾದ ಪ್ರಮಾಣದಲ್ಲಿ ಸೇವಿಸಿದಾಗ ಫ್ಯಾಟಿ ಲಿವರ್ ಕಾಯಿಲೆಗಳನ್ನು ತಪ್ಪಿಸಲು ಸಾಧ್ಯವಾಗುತ್ತದೆ. ಹೀಗಿರುವಾಗ ಫ್ಯಾಟಿ ಲಿವರ್ ಬರದಂತೆ ತಡೆಯುವ ಕೆಲ ಅಡುಗೆ ಎಣ್ಣೆಗಳ ಬಗ್ಗೆ ಇಲ್ಲಿ ನೋಡೋಣ.
ಎಕ್ಟ್ರಾ ವರ್ಜಿನ್ ಆಲಿವ್ ಆಯಿಲ್ (Extra virgin olive oil):EVOO ಎಂದೂ ಕರೆಯಲ್ಪಡುವ ಇದು, ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD) ಇರುವವರಿಗೆ ಹೆಚ್ಚು ಶಿಫಾರಸು ಮಾಡಲಾದ ಮತ್ತು ಸಂಶೋಧಿಸಲಾದ ಅಡುಗೆ ಎಣ್ಣೆಗಳಲ್ಲಿ ಒಂದಾಗಿದೆ. ಇದು ಆರೋಗ್ಯಕರ ಕೊಬ್ಬುಗಳು ಮತ್ತು ರೋಗ ನಿರೋಧಕ ಶಕ್ತಿಗಳ ಸಂಯೋಜನೆಯನ್ನು ನೀಡುತ್ತದೆ, ಇದು ಯಕೃತ್ತಿನ ಕಾರ್ಯವನ್ನು ನೇರವಾಗಿ ಬೆಂಬಲಿಸುತ್ತದೆ ಮತ್ತು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಸುಮಾರು 73% ಒಲೀಕ್ ಆಮ್ಲವನ್ನು ಹೊಂದಿರುತ್ತದೆ., ಇದು ನೋವನ್ನು ಕಡಿಮೆ ಮಾಡುವ ಆರೋಗ್ಯಕರ ಕೊಬ್ಬು, ಇನ್ಸುಲಿನ್ ಸೂಕ್ಷ್ಮತೆಯನ್ನು ಬೆಂಬಲಿಸುತ್ತದೆ ಮತ್ತು ಲಿಪಿಡ್ ಚಯಾಪಚಯವನ್ನು(lipid metabolism.)ಸುಧಾರಿಸುತ್ತದೆ. ಇದು ಪಾಲಿಫಿನಾಲ್‌ಗಳು ಮತ್ತು ವಿಟಮಿನ್ ಇ ನಂತಹ ಬಲವಾದ ಸಂಯುಕ್ತಗಳನ್ನು ಹೊಂದಿದೆ ಇದು ಆಕ್ಸಿಡೇಟಿವ್ ಒತ್ತಡದ ವಿರುದ್ಧ ಹೋರಾಡುತ್ತದೆ, ಆಕ್ಸಿಡೇಟಿವ್ ಒತ್ತಡವೂ ಯಕೃತ್ತಿನ(ಲಿವರ್) ಜೀವಕೋಶಗಳಿಗೆ ಹಾನಿ ಮಾಡುವಲ್ಲಿ ಮತ್ತು ಯಕೃತ್ತಿನ ಸ್ಥಿತಿಯನ್ನು ಹದಗೆಡಿಸುವಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. ಕ್ಲಿನಿಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ 2021 ರ ವಿಶ್ಲೇಷಣೆಯು ಈ ಎಣ್ಣೆಯಲ್ಲಿರುವ ಹೆಚ್ಚಿನ ಅಂಶಗಳು ಯಕೃತ್ತಿನ ಕೊಬ್ಬನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತವೆ. ಮತ್ತು ಎಎಲ್‌ಟಿ ಮತ್ತು ಎಎಸ್‌ಟಿಯಂತಹ ಪ್ರಮುಖ ಯಕೃತ್ತಿನ ಕಿಣ್ವಗಳನ್ನು ಸುಧಾರಿಸುತ್ತದೆ ಎಂದು ತೋರಿಸಿದೆ. ಇದು ರೋಗ ನಿರೋಧಕಗಳಿಂದ ಸಮೃದ್ಧವಾಗಿದೆ ಮತ್ತು ಹೈಡ್ರಾಕ್ಸಿಟೈರೋಸಾಲ್‌ನಂತಹ ಪಾಲಿಫಿನಾಲ್‌ಗಳನ್ನು ಹೊಂದಿರುತ್ತದೆ, ಇದು ಜೀವಕೋಶಗಳನ್ನು ಆಕ್ಸಿಡೇಟಿವ್ ಒತ್ತಡ ಮತ್ತು ವಯಸ್ಸಾಗುವಿಕೆಯಿಂದ ರಕ್ಷಿಸುತ್ತದೆ. ಇದು ರೋಗನಿರೋಧಕ ಕಾರ್ಯ ಮತ್ತು ಜೀವಕೋಶಗಳ ದುರಸ್ತಿಗೂ ಸಹಕರಿಸುತ್ತದೆ.
<h1>Flaxseed Oil</h1>
ಅಗಸೆಬೀಜದ ಎಣ್ಣೆ(Flaxseed Oil): ಇದು ಸಸ್ಯ ಆಧಾರಿತ ಒಮೆಗಾ-3 ಕೊಬ್ಬಿನಾಮ್ಲವಾದ ಆಲ್ಫಾ-ಲಿನೋಲೆನಿಕ್ ಆಮ್ಲ (ALA)ದಿಂದ ಸಮೃದ್ಧವಾಗಿದೆ. ಒಮೆಗಾ-3ಗಳು ನೋವು ನಿವಾರಣೆ ಮಾಡಲು ಮತ್ತು ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ಜೊತೆಗೆ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಮತ್ತು HDL(ಉತ್ತಮ ಕೊಲೆಸ್ಟ್ರಾಲ್) ಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಲಿಪಿಡ್ಸ್ ಇನ್ ಹೆಲ್ತ್ ಅಂಡ್ ಡಿಸೀಸ್ (2016) ನಲ್ಲಿ ನಡೆಸಿದ ಅಧ್ಯಯನವು ಅಗಸೆಬೀಜದ ಎಣ್ಣೆ ಪೂರಕವು ಪ್ರಾಣಿಗಳಲ್ಲಿ ಯಕೃತ್ತಿನ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಯಕೃತ್ತಿನ ಕಿಣ್ವದ ಮಟ್ಟವನ್ನು ಸುಧಾರಿಸುತ್ತದೆ ಎಂದು ಕಂಡುಹಿಡಿದಿದೆ. ಎಎಲ್‌ಎ ಮೆದುಳಿನ ಕೋಶ ರಚನೆಯನ್ನು ಬೆಂಬಲಿಸುತ್ತದೆ ಮತ್ತು ಮನಸ್ಥಿತಿ ಸಮತೋಲನ, ಸ್ಮರಣೆ ಮತ್ತು ನರರಕ್ಷಣೆಗೆ ಸಹಾಯ ಮಾಡುತ್ತದೆ. ಅಲ್ಲದೆ, ಇದು ಚರ್ಮವನ್ನು ಹೈಡ್ರೀಕರಿಸಿಸುತ್ತದೆ, ನಯವಾಗಿಸುತ್ತದೆ ಇದರ ಜೊತೆಗೆ ಎಸ್ಜಿಮಾ, ಮೊಡವೆ ಮತ್ತು ಶುಷ್ಕತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.
ಕೋಲ್ಡ್-ಪ್ರೆಸ್ಡ್ ಕ್ಯಾನೋಲಾ ಎಣ್ಣೆ(Cold-Pressed Canola Oil): ಈ ಕೋಲ್ಡ್ ಪ್ರೆಸ್ಟ್ ಕ್ಯಾನೋಲಾ ಎಣ್ಣೆಯೂ ಒಮೆಗಾ-3ಯನ್ನು ಹೊಂದಿದೆ. ಇದು ಫ್ಯಾಟಿ ಲಿವರ್ ಸಮಸ್ಯೆ ಹೊಂದಿರುವ ಜನರು ಇದನ್ನು ಮಿತವಾಗಿ ಬಳಸಿದರೆ ಒಳ್ಳೆಯ ಪರಿಣಾಮ ಬೀರುತ್ತದೆ. ಮಿತವಾಗಿ ಸೇವಿಸಿದಾಗ, ಇದು ಯಕೃತ್ತಿನ ಕೊಬ್ಬನ್ನು ಕಡಿಮೆ ಮಾಡಲು, ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಮತ್ತು ಉತ್ತಮ ಲಿಪಿಡ್ ಚಯಾಪಚಯ ಕ್ರಿಯೆಯನ್ನು ಬೆಂಬಲಿಸಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ. ಡಯಾಬಿಟಿಸ್ ಕೇರ್‌ನಲ್ಲಿ 2013 ರ ಅಧ್ಯಯನವು ಸ್ಯಾಚುರೇಟೆಡ್ ಕೊಬ್ಬನ್ನು ಕ್ಯಾನೋಲಾ ಎಣ್ಣೆಯಿಂದ ಬದಲಾಯಿಸುವುದರಿಂದ ಯಕೃತ್ತಿನ ಕಿಣ್ವದ ಮಟ್ಟವನ್ನು ಸುಧಾರಿಸಬಹುದು ಎಂದು ಹೇಳುತ್ತದೆ.
ಎಂಸಿಟಿ ಆಯಿಲ್(Medium Chain Triglyceride oil): ತೂಕ ನಷ್ಟ, ಚಯಾಪಚಯ ಮತ್ತು ಮೆದುಳಿನ ಆರೋಗ್ಯದಲ್ಲಿ ಈ ಎಂಸಿಟಿ(ಮಧ್ಯಮ ಸರಪಳಿ ಟ್ರೈಗ್ಲಿಸರೈಡ್ ಎಣ್ಣೆ) ತನ್ನ ಪ್ರಯೋಜನಗಳಿಂದಾಗಿ ಜನಪ್ರಿಯತೆಯನ್ನು ಗಳಿಸಿದೆ. ಫ್ಯಾಟಿ ಲಿವರ್ ಕಾಯಿಲೆಯಲ್ಲಿ ಈ ಎಂಸಿಟಿ ಎಣ್ಣೆಯ ಪಾತ್ರವಿದೆಯೇ ಎಂಬುದನ್ನು ಗಮನಿಸಿದಾಗ ಬೇರೆ ಎಣ್ಣೆಗಳಿಗೆ ಹೋಲಿಸಿದರೆ ಎಂಸಿಟಿ ಎಣ್ಣೆಗಳು ಯಕೃತ್ತಿನಲ್ಲಿ ಕೊಬ್ಬಿನಂತೆ ಸಂಗ್ರಹವಾಗುವ ಸಾಧ್ಯತೆ ಬಹಳ ಕಡಿಮೆ ಎಂದು ಹೇಳಲಾಗುತ್ತದೆ. ಎಂಸಿಟಿಗಳು ವೇಗವಾಗಿ ಯಕೃತ್ತಿಗೆ ಸಾಗಿಸಲ್ಪಡುತ್ತವೆ ಹಾಗೂ ತಕ್ಷಣದ ಶಕ್ತಿಯಾಗಿ ಬಳಸಲ್ಪಡುತ್ತವೆ. ಹೀಗಾಘಿ ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯಾಗುವುದು ಬಹಳ ಕಡಿಮೆ. ಕ್ಲಿನಿಕಲ್ ನ್ಯೂಟ್ರಿಷನ್‌ನ 2020 ರ ಅಧ್ಯಯನದ ಪ್ರಕಾರ, ದೀರ್ಘ ಸರಪಳಿ ಟ್ರೈಗ್ಲಿಸರೈಡ್ (LCT)ಎಣ್ಣೆಗೆ ಹೋಲಿಸಿದರೆ ಎಂಸಿಟಿ ಎಣ್ಣೆ ಯಕೃತ್ತಿನ ಕೊಬ್ಬಿನ ಅಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಎಂಸಿಟಿ ಎಣ್ಣೆ ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬನ್ನು ಸುಡುವುದನ್ನು ಉತ್ತೇಜಿಸುತ್ತದೆ. ಆದಾಗ್ಯೂ, ಈ ಎಣ್ಣೆಗಳನ್ನು ಮಿತವಾಗಿ ಸೇವಿಸುವುದು ಉತ್ತಮ. ಇವು ವೇಗವಾಗಿ ಹೀರಲ್ಪಡುತ್ತವೆ ಹಾಗೂ ಅಷ್ಟೇ ವೇಗವಾಗಿ ಶಕ್ತಿಯಾಗಿ ಪರಿವರ್ತನೆಯಾಗುತ್ತದೆ. ಇದರ ಈ ಲಕ್ಷಣಗಳಿಂದಾಗಿ ಕ್ರೀಡಾಪಟುಗಳು ಮತ್ತು ಕೀಟೋಜೆನಿಕ್ ಆಹಾರಕ್ರಮವನ್ನು ಅನುಸರಿಸುವ ವ್ಯಕ್ತಿಗಳು ಇದನ್ನು ಹೆಚ್ಚಾಗಿ ಬಳಸುತ್ತಾರೆ.
ಆವಕಾಡೊ ಎಣ್ಣೆ(Avocado oil): ಬಟರ್‌ಫ್ರುಟ್, ಬೆಣ್ಣೆಹಣ್ಣು ಅಥವಾ ಆವಕಾಡೋ ಎಂದು ಕರೆಯಲ್ಪಡುವ ಸ್ವಾದಿಷ್ಟವಾದ ಹಲವು ಪೋಷಕಾಂಶಗಳನ್ನು ಹೊಂದಿರುವ ಈ ಹಣ್ಣಿನ ಎಣ್ಣೆಯೂ ಯಕೃತ್ತಿನ ಆರೋಗ್ಯವನ್ನು ಬೆಂಬಲಿಸುವುದಕ್ಕೆ ಇತ್ತೀಚೆಗೆ ಬಹಳ ಜನಪ್ರಿಯವಾಗುತ್ತಿದೆ. ಜೊತೆಗೆ ಫ್ಯಾಟಿ ಲಿವರ್ ಕಾಯಿಲೆಗಳನ್ನು ಸರಿಪಡಿಸಲು ಸಹಾಯ ಮಾಡುತ್ತದೆ. ಇದು ಹೃದಯ ಮತ್ತು ಯಕೃತ್ತಿಗೆ ಒಳ್ಳೆಯ ಆರೋಗ್ಯಕರ ಕೊಬ್ಬಾದ ಒಲೀಕ್ ಆಮ್ಲದಿಂದ ಸಮೃದ್ಧವಾಗಿದೆ. ಈ ಓಲೀಕ್ ಆಮ್ಲವೂ ಕೆಟ್ಟ ಕೊಲೆಸ್ಟ್ರಾಲ್ (LDL)ಅನ್ನು ಕಡಿಮೆ ಮಾಡಲು ಮತ್ತು ಇನ್ಸುಲಿನ್ ಸೂಕ್ಷ್ಮತೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ, ಇದು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ (NAFLD) ಅನ್ನು ತಡೆಗಟ್ಟುವಲ್ಲಿ ಪ್ರಮುಖವಾಗಿದೆ. ಇದು ವಿಟಮಿನ್ ಇ, ಕ್ಯಾರೊಟಿನಾಯ್ಡ್‌ಗಳು ಮತ್ತು ಸಸ್ಯ ಸ್ಟೆರಾಲ್‌ಗಳನ್ನು ಸಹ ಒಳಗೊಂಡಿದೆ, ಇದು ಯಕೃತ್ತಿನಲ್ಲಿ ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಜರ್ನಲ್ ಆಫ್ ಡಯೆಟರಿ ಸಪ್ಲಿಮೆಂಟ್ಸ್ ಅಂಡ್ ಲಿಪಿಡ್ಸ್ ಇನ್ ಹೆಲ್ತ್ ಅಂಡ್ ಡಿಸೀಸ್ ಹೇಳುವಂತೆ ಆವಕಾಡೊ ಎಣ್ಣೆಯು ಯಕೃತ್ತಿನಲ್ಲಿ ಕೊಬ್ಬಿನ ಶೇಖರಣೆಯನ್ನು ಕಡಿಮೆ ಮಾಡುತ್ತದೆ, ಯಕೃತ್ತಿನ ಕಿಣ್ವದ ಮಟ್ಟವನ್ನು ಸುಧಾರಿಸುತ್ತದೆ ಮತ್ತು ಯಕೃತ್ತಿನ ಕೋಶಗಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತದೆ.