ಸುಲಭವಾಗಿ ಲಭ್ಯವಿರುವ ಈ ಆರು ಸೂಪರ್ ಫುಡ್ ಬಳಸಿದ್ರೆ ನೆನಪಿನ ಶಕ್ತಿ ಹೆಚ್ಚುತ್ತೆ!
ಕೆಲವು ಆಹಾರಗಳ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಆ ಆಹಾರಗಳೇನೆಂದು ನೋಡೋಣ…

ಮೆದುಳಿನ ಆರೋಗ್ಯ...
ವಯಸ್ಸಾದಂತೆ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ಚಿಕ್ಕ ಪುಟ್ಟ ವಿಷಯಗಳನ್ನು ಮರೆತುಬಿಡುತ್ತೇವೆ. ಹಾಗಾಗದಿರಲು ಕೆಲವು ಆಹಾರಗಳನ್ನು ತಪ್ಪದೇ ಸೇವಿಸಬೇಕು. ಇಂದು ವಿಶ್ವ ಮೆದುಳಿನ ದಿನ. ಮೆದುಳನ್ನು ಆರೋಗ್ಯವಾಗಿಡಲು ಏನು ಮಾಡಬೇಕೆಂದು ತಿಳಿದುಕೊಳ್ಳೋಣ.
ಮೆದುಳು ನಮ್ಮ ದೇಹದ ಅತ್ಯಂತ ಶಕ್ತಿಶಾಲಿ ಅಂಗ. ಅದನ್ನು ಆರೋಗ್ಯವಾಗಿಡುವುದು ನಮ್ಮ ಕೈಯಲ್ಲಿದೆ. ಕೆಲವು ಆಹಾರಗಳ ಸೇವನೆಯಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಆ ಆಹಾರಗಳೇನೆಂದು ನೋಡೋಣ.
ಫ್ಯಾಟಿ ಫಿಶ್
ಫ್ಯಾಟಿ ಫಿಶ್‌ನಲ್ಲಿ ಒಮೆಗಾ-3 ಫ್ಯಾಟಿ ಆಸಿಡ್ಸ್ ಹೇರಳವಾಗಿದೆ. ಹಾಗಾಗಿ ಸಾಲ್ಮನ್, ಸಾರ್ಡೀನ್‌ಗಳಂತಹ ಮೀನುಗಳನ್ನು ಸೇವಿಸಬಹುದು. ಇವು ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತವೆ. ಒಮೆಗಾ-3 ಫ್ಯಾಟಿ ಆಸಿಡ್ಸ್ ಮೆದುಳು ಮತ್ತು ನರ ಕೋಶಗಳನ್ನು ನಿರ್ಮಿಸಲು ಸಹಾಯ ಮಾಡುತ್ತವೆ. ಇವು ಕಲಿಕೆಗೆ ಸಹಾಯಕ. ಆದ್ದರಿಂದ ಈ ರೀತಿಯ ಮೀನುಗಳನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
ಬೆರ್ರಿಗಳು
ಬ್ಲೂಬೆರ್ರಿ, ಸ್ಟ್ರಾಬೆರ್ರಿ, ಬ್ಲ್ಯಾಕ್‌ಬೆರ್ರಿ ಇತರ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ. ಇವು ನಿಮ್ಮ ಮೆದುಳನ್ನು ಯಂಗ್ ಆಗಿಡಲು ಸಹಾಯ ಮಾಡುತ್ತವೆ. ಅಂದರೆ ಮರೆವು ಬರದಂತೆ ತಡೆಯುತ್ತವೆ. ಮೆದುಳಿನ ಕೋಶಗಳ ನಡುವಿನ ಸಂವಹನವನ್ನು ಸುಧಾರಿಸುತ್ತವೆ.
ಈ ಬೆರ್ರಿಗಳನ್ನು ತಿನ್ನಲು ಉತ್ತಮ ಸಮಯ: ಬೆಳಗಿನ ತಿಂಡಿ, ಮೊಸರಿನೊಂದಿಗೆ ಅಥವಾ ಸ್ಮೂಥಿಯಲ್ಲಿ ಬೆರೆಸಿ ಸೇವಿಸಬಹುದು.
ಡ್ರೈ ಫ್ರೂಟ್ಸ್
ವಾಲ್‌ನಟ್ಸ್, ಬಾದಾಮಿ, ಅಗಸೆ ಬೀಜಗಳು, ಚಿಯಾ ಬೀಜಗಳು, ಸೂರ್ಯಕಾಂತಿ ಬೀಜಗಳು ವಿಟಮಿನ್ E ಯಿಂದ ಕೂಡಿವೆ. ಇವು ಮೆದುಳಿನ ಕೋಶಗಳನ್ನು ವಯಸ್ಸಿಗೆ ಸಂಬಂಧಿಸಿದ ಕಾಯಿಲೆಯಿಂದ ರಕ್ಷಿಸುತ್ತವೆ. ಮರೆವಿನ ಸಮಸ್ಯೆ ಬರದಂತೆ ವಿಟಮಿನ್ E ರಕ್ಷಣಾ ಕವಚದಂತೆ ಕೆಲಸ ಮಾಡುತ್ತದೆ.
ಹಸಿರು ತರಕಾರಿಗಳು
ಪಾಲಕ್, ಕೇಲ್, ಬ್ರೊಕೊಲಿಯಂತಹ ಹಸಿರು ತರಕಾರಿಗಳು ವಿಟಮಿನ್ K, ಫೋಲೇಟ್ ಮತ್ತು ಬೀಟಾ-ಕ್ಯಾರೋಟಿನ್‌ನಿಂದ ಕೂಡಿವೆ. ಈ ಪೋಷಕಾಂಶಗಳು ಅರಿವಿನ ಕುಸಿತವನ್ನು ನಿಧಾನಗೊಳಿಸುತ್ತವೆ. ನಿಮ್ಮ ಮೆದುಳನ್ನು ಚುರುಕಾಗಿಡುತ್ತವೆ. ಚಟುವಟಿಕೆಯಿಂದ ಕೆಲಸ ಮಾಡಲು ಸಹಾಯ ಮಾಡುತ್ತವೆ. ಇವುಗಳ ಜೊತೆಗೆ, ನಾವು ನಿಯಮಿತವಾಗಿ ತಿನ್ನುವ ಬಿಳಿ ಅಕ್ಕಿಯ ಬದಲಿಗೆ ಕಂದು ಅಕ್ಕಿಯನ್ನು ಸೇವಿಸಬೇಕು. ಇದು ಮೆದುಳಿನ ಆರೋಗ್ಯಕ್ಕೆ ಸಹಾಯ ಮಾಡುತ್ತದೆ.
ಡಾರ್ಕ್ ಚಾಕೊಲೇಟ್
ಡಾರ್ಕ್ ಚಾಕೊಲೇಟ್‌ನಲ್ಲಿ ನೆನಪಿನ ಶಕ್ತಿಯನ್ನು ಹೆಚ್ಚಿಸುವ ಫ್ಲೇವನಾಯ್ಡ್‌ಗಳು, ಚುರುಕುತನವನ್ನು ನೀಡುವ ಕೆಫೀನ್ ಮತ್ತು ಮೆದುಳಿನ ಆರೋಗ್ಯಕ್ಕೆ ಉತ್ಕರ್ಷಣ ನಿರೋಧಕಗಳಿವೆ. ಆದರೆ, ಇವುಗಳನ್ನು ಕಡಿಮೆ ಪ್ರಮಾಣದಲ್ಲಿ ಮಾತ್ರ ಸೇವಿಸಬೇಕು. ಹೆಚ್ಚು ಸೇವಿಸುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
ಅರಿಶಿನ
ಅರಿಶಿನದಲ್ಲಿರುವ ಸಕ್ರಿಯ ಸಂಯುಕ್ತ ಕರ್ಕ್ಯುಮಿನ್ ಮೆದುಳಿಗೆ ರಕ್ತ ಪರಿಚಲನೆ ಸರಿಯಾಗಿ ಆಗುವಂತೆ ಮಾಡುತ್ತದೆ. ಮಾನಸಿಕ ಸ್ಥಿತಿ ಮತ್ತು ನೆನಪಿನ ಶಕ್ತಿಯನ್ನು ಸುಧಾರಿಸುತ್ತದೆ, ಆತಂಕ ಮತ್ತು ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ಇದು ಸಿರೊಟೋನಿನ್ ಮತ್ತು ಡೋಪಮೈನ್ ಅನ್ನು ಹೆಚ್ಚಿಸುತ್ತದೆ. ನೀವು ಅಡುಗೆ ಮಾಡುವಾಗ ಅರಿಶಿನವನ್ನು ಸೇರಿಸಿದರೆ ಸಾಕು.