ಮಸಾಲೆ ಪದಾರ್ಥ ತಿಂದು ತೂಕ ಇಳಿಸಿಕೊಳ್ಳಬಹುದಾ? ಈ ಐದು ಐಟಂ ವೈಟ್‌ಲಾಸ್‌ಗೆ ಬೆಸ್ಟ್
ತೂಕ ಇಳಿಸಬೇಕು, ಫಿಟ್ (Fit) ಆಗಬೇಕು ಎನ್ನುವ ತವಕ ಪ್ರತಿಯೊಬ್ಬರಲ್ಲೂ ಇರುತ್ತದೆ. ಅದಕ್ಕಾಗಿ ಏನೇನೋ ಕಸರತ್ತುಗಳನ್ನು, ಔಷಧಗಳನ್ನು ಸಹ ಸೇವಿಸುತ್ತಾರೆ. ನೀವು ಸ್ಲಿಮ್ (Slim) ಆಗ್ಬೇಕು ಎಂದು ನೀವು ಬಯಸುವಿರಾದರೆ ಈ 5 ಮಸಾಲೆ ಪದಾರ್ಥಗಳನ್ನು ಆಹಾರದ ಒಂದು ಭಾಗವನ್ನಾಗಿ ಮಾಡಿ, ನೀವು ವೇಗವಾಗಿ ತೂಕ ಕಳೆದುಕೊಳ್ಳುತ್ತೀರಿ.
ಆಹಾರ ಕ್ರಮ, ಯೋಗ(Yoga) ಮತ್ತು ವ್ಯಾಯಾಮ ಕೇವಲ ತೂಕ ಇಳಿಸಲು ಅಗತ್ಯವಲ್ಲ. ತೂಕವನ್ನು ಕಡಿಮೆ ಮಾಡುವ ವಸ್ತುಗಳನ್ನು ಆಹಾರದಲ್ಲಿ ಸೇರಿಸಬೇಕು. ಕೆಲವು ಮಸಾಲೆ ಪದಾರ್ಥಗಳನ್ನು ಆಹಾರದ ಒಂದು ಭಾಗವನ್ನಾಗಿ ಮಾಡುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ಮಸಾಲೆ ಪದಾರ್ಥಗಳು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ತೂಕ ಇಳಿಸಲು ಸಹಾಯ ಮಾಡುತ್ತದೆ.
ಡಯಟ್(Diet) ಮಾಡುವಾಗ ಅನೇಕರು ರುಚಿಯಿಲ್ಲದ ಆಹಾರವನ್ನು ತಿನ್ನುತ್ತಾರೆ. ಮಸಾಲೆಗಳು ನಿಮ್ಮ ತೂಕವನ್ನು ಹೆಚ್ಚಿಸುತ್ತವೆ ಎಂದಲ್ಲ. ಈ ಆರೋಗ್ಯಕರ ಗಿಡಮೂಲಿಕೆಗಳು ಮತ್ತು ಮಸಾಲೆಗಳನ್ನು ಆಹಾರದಲ್ಲಿ ಬಳಸಿದರೆ, ಕ್ರಮೇಣ ತೂಕ ಕಳೆದುಕೊಳ್ಳಲು ಪ್ರಾರಂಭಿಸುತ್ತೀರಿ. ಆರೋಗ್ಯಕರವಾಗಿ ತೂಕ ಇಳಿಸಲು ಯಾವೆಲ್ಲಾ ಮಸಾಲೆಗಳನ್ನು ನೀವು ಸೇವಿಸಬೇಕು ನೋಡೋಣ...
ಜೀರಿಗೆ-(Cumin) : ಜೀರಿಗೆಯನ್ನು ಹೆಚ್ಚಾಗಿ ಮನೆಗಳಲ್ಲಿ ಬೇಯಿಸಿದ ತರಕಾರಿಗಳಲ್ಲಿ ಹಾಕಲಾಗುತ್ತದೆ. ಜೀರಿಗೆಯು ತೂಕ ಇಳಿಸಲು ಸಾಕಷ್ಟು ಸಹಾಯ ಮಾಡುತ್ತದೆ. ಜೀರಿಗೆಯು ಇನ್ಸುಲಿನ್ ಸೂಕ್ಷ್ಮತೆಯಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ. ಇದರಲ್ಲಿ ಫೈಟೋಸ್ಟೆರಾಲ್ ಗಳು ಇರುತ್ತವೆ, ಇದು ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ತೂಕ ಇಳಿಸಲು ಜೀರಿಗೆ ನೀರು ಕೂಡ ಕುಡಿಯಬಹುದು. ಇದರ ಹೊರತಾಗಿ ಮಜ್ಜಿಗೆ ಅಥವಾ ಮೊಸರಿನಲ್ಲಿ ಪುಡಿ ಮಾಡಿದ ಜೀರಿಗೆ ಹೊಟ್ಟೆಗೆ ಲಾಭ ನೀಡುತ್ತದೆ.
ದಾಲ್ಚಿನ್ನಿ(Cinnamon): ನಿಮ್ಮ ದೇಹವು ಸಕ್ಕರೆಯನ್ನು ಹೇಗೆ ಸಂಸ್ಕರಿಸುತ್ತದೆ ಎಂಬುದರಲ್ಲಿ ದಾಲ್ಚಿನ್ನಿ ಪ್ರಮುಖ ಪಾತ್ರ ವಹಿಸುತ್ತದೆ. ದಾಲ್ಚಿನ್ನಿ ಸಕ್ಕರೆಯನ್ನು ಕೊಬ್ಬಾಗಿ ಪರಿವರ್ತಿಸುವುದನ್ನು ತಡೆಯುತ್ತದೆ. ಇದರಿಂದ ಆಹಾರವು ಹೊಟ್ಟೆಯಿಂದ ನಿಧಾನವಾಗಿ ಕರುಳನ್ನು ತಲುಪುತ್ತದೆ. ದಾಲ್ಚಿನ್ನಿಯು ಹೊಟ್ಟೆಯ ಕೊಬ್ಬನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಕರಿಮೆಣಸು(Pepper): ಕರಿಮೆಣಸು ಕೊಬ್ಬಿನ ಕೋಶಗಳ ರಚನೆಯ ಪ್ರಕ್ರಿಯೆಯನ್ನು ನಿಲ್ಲಿಸಲು ಸಹಾಯ ಮಾಡುತ್ತದೆ. ಕರಿಮೆಣಸನ್ನು ತಿನ್ನುವುದರಿಂದ ಕೊಬ್ಬಿಗೆ ಸಂಬಂಧಿಸಿದ ಸಮಸ್ಯೆಗಳು ಬರುವುದಿಲ್ಲ. ಶೀತವಾದಾಗ ಕರಿಮೆಣಸಿನ ಚಹಾ ಕುಡಿಯಬಹುದು, ಇದರ ಹೊರತಾಗಿ ಆಮ್ಲೆಟ್ ನಲ್ಲಿ ಕರಿಮೆಣಸು, ಸಲಾಡ್ ಗಳು ಮತ್ತು ಸೂಪ್ ಗಳು ಸಹ ರುಚಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತವೆ.
ಏಲಕ್ಕಿ- (Cardamom): ಏಲಕ್ಕಿ ಜೀರ್ಣಕ್ರಿಯೆಯಲ್ಲಿ ತುಂಬಾ ಸಹಾಯಕವಾಗಿದೆ. ಏಲಕ್ಕಿ ಉರಿಯೂತ ನಿವಾರಕ ಮತ್ತು ಉತ್ಕರ್ಷಣ ನಿರೋಧಕ ಗುಣಲಕ್ಷಣಗಳನ್ನು ಹೊಂದಿದೆ, ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ನೀವು ಆಹಾರ ಸೇವಿಸಿದ ನಂತರ ಏಲಕ್ಕಿಯನ್ನು ತಿನ್ನಬಹುದು, ಇದರಿಂದ ಆಹಾರವನ್ನು ಜೀರ್ಣಿಸಿಕೊಳ್ಳಲು ಸುಲಭವಾಗುತ್ತದೆ. ಇದಲ್ಲದೆ, ಏಲಕ್ಕಿ ಚಹಾವನ್ನು ಸಹ ಕುಡಿಯಬಹುದು.
ಅರಿಶಿನ (Turmeric): ಅರಿಶಿನ ಹಾಕುವವರೆಗೂ ತರಕಾರಿಗೆ ರುಚಿ ಇರುವುದಿಲ್ಲ. ಅರಿಶಿನದಲ್ಲಿ ಆಯುರ್ವೇದ ಗುಣಗಳು ಸಮೃದ್ಧವಾಗಿದೆ. ಅರಿಶಿನವನ್ನು ತಿನ್ನುವುದರಿಂದ ದೇಹದಲ್ಲಿ ನಯವಾದ ಕಿರಿಕಿರಿ ನಿವಾರಣೆಯಾಗುತ್ತದೆ. ಇದಲ್ಲದೆ ಇದರಿಂದ ಹಲವು ಅರೋಗ್ಯ ಪ್ರಯೋಜನಗಳೂ ಇವೆ. ಇದನ್ನು ಆಯುರ್ವೇದದಲ್ಲಿ ಹಿಂದಿನ ಕಾಲದಿಂದಲೂ ಇದನ್ನು ಬಳಕೆ ಮಾಡಿಕೊಂಡು ಬಂದಿದ್ದಾರೆ.
ಅರಿಶಿನವು ಅನೇಕ ರೀತಿಯ ವಿಷಗಳನ್ನು ತೊಡೆದುಹಾಕುವ ಕೆಲಸ ಮಾಡುತ್ತದೆ. ಅರಿಶಿನವು ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು(Weight loss) ಸುಲಭಗೊಳಿಸುತ್ತದೆ. ಚಳಿಗಾಲದಲ್ಲಿ ಅರಿಶಿನ ಹಾಲು ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ.