Asianet Suvarna News Asianet Suvarna News

Weight Loss Tips: ಸಣ್ಣಗಾಗ್ಬೇಕಾ ? ಪ್ರತಿದಿನ ಈ ದೇಸಿ ಸ್ವೀಟ್ ತಿನ್ನಿ ಸಾಕು

ತೂಕ (Weight) ಹೆಚ್ಚಳ ಇತ್ತೀಚಿಗೆ ಪ್ರತಿಯೊಬ್ಬರಲ್ಲಿ ಕಂಡು ಬರುತ್ತಿರುವ ಸಮಸ್ಯೆ. ಸ್ಲಿಮ್ ಆಗ್ಬೇಕು ಅಂತ ಹೆಚ್ಚಿನವರು ಇಷ್ಟಪಡೋ ಆಹಾರ (Food)ವನ್ನೆಲ್ಲಾ ಸೈಡಿಗಿಟ್ಟು ಬರೀ ಜ್ಯೂಸ್, ಡ್ರೈಫ್ರೂಟ್ಸ್, ಕಾಳುಗಳನ್ನು ತಿನ್ನೋದನ್ನು ರೂಢಿ ಮಾಡ್ಕೊಂಡಿದ್ದಾರೆ. ಆದ್ರೆ ಇಲ್ಲೊಂದು ದೇಸಿ ಸ್ವೀಟ್‌ (Desi Sweet) ಇದೆ. ಇದನ್ನು ತಿನ್ತಾನೇ ನೀವು ತೂಕ ಕಡಿಮೆ ಮಾಡ್ಕೊಳ್ಬೋದು.

Desi Sweet Recipe That Helps In Weight Loss
Author
Bengaluru, First Published Mar 16, 2022, 4:25 PM IST

ಬದಲಾದ ಜೀವನಶೈಲಿ, ಆಹಾರಪದ್ಧತಿಯಿಂದ ತೂಕ (Weight) ಹೆಚ್ಚಳ ಎಂಬುದು ಎಲ್ಲರಲ್ಲಿ ಕಂಡುಬರುತ್ತಿರುವ ಸಾಮಾನ್ಯ ಸಮಸ್ಯೆ. ತೂಕ ಇಳಿಸ್ಕೊಂಡು ಸ್ಲಿಮ್ ಆಗ್ಬೇಕು ಅನ್ನೋದು ಪ್ರತಿಯೊಬ್ಬರ ಆಸೆ. ಅದಕ್ಕೆಂದೇ ವರ್ಕೌಟ್‌, ಯೋಗ, ಧ್ಯಾನ, ಡಯೆಟ್ ಎಲ್ಲಾ ಮಾಡ್ತಾರೆ. ಆಹಾರ ತಿನ್ನೋದನ್ನೂ ಬಿಟ್ಟು ಫ್ರುಟ್ಸ್‌, ಕಾಳುಗಳನ್ನು ತಿನ್ನುವವರೂ ಇದ್ದಾರೆ. ಆದ್ರೆ ತೂಕ ಇಳಿಸ್ಕೊಳ್ಳೋಕೆ ನೀವು ತಿನ್ನೋದೆಲ್ಲಾ ಬಿಟ್ಟು ಕಷ್ಟಪಡಬೇಕಾಗಿಲ್ಲ ಬಿಡಿ. ಡೈಲೀ ಈ ದೇಸಿ ಸ್ವೀಟ್ ತಿನ್ನಿ ತೂಕ ಅತ್ಯಂತ ತ್ವರಿತವಾಗಿ ಕಡಿಮೆಯಾಗುತ್ತೆ. ಮಾತ್ರವಲ್ಲ ಕೀಲುನೋವಿನ ಸಮಸ್ಯೆನೂ ಇರಲ್ಲ. 

ಹೆಚ್ಚು ಸ್ವೀಟ್ಸ್ (Sweets) ತಿನ್ನೋದ್ರಿಂದ ಸಾಮಾನ್ಯವಾಗಿ ತೂಕ ಹೆಚ್ಚಳವಾಗುತ್ತದೆ ಅನ್ನೋದನ್ನು ಕೇಳಿದ್ದೀವಿ. ಆದ್ರೆ ಈ ದೇಸಿ ಸ್ವೀಟ್ ತಿಂದ್ರೆ ತೂಕ ಇಳಿಸ್ಕೊಳ್ಬೋದು. ಮಾತ್ರವಲ್ಲ ಇದು ದೇಹದಲ್ಲಿರುವ ಮೂಳೆಯನ್ನು ಬಲಪಡಿಸುತ್ತದೆ. ಕೈ ಕಾಲುಗಳಲ್ಲಿ ಕಂಡುಬರುವ ಜಾಯಿಂಟ್ ಪೆಯಿನ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ. ಅಷ್ಟೇ ಅಲ್ಲ ಯಾವಾಗ್ಲೂ ಈ ಸ್ವೀಟ್ ತಿನ್ನೋದ್ರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಸುಧಾರಿಸುತ್ತದೆ. ರೋಗನಿರೋಧಕ ಶಕ್ತಿ (Immunity Power) ಹೆಚ್ಚುತ್ತದೆ. ಆರೋಗ್ಯ (Health)ಕ್ಕೆ ಇಷ್ಟೆಲ್ಲಾ ಹೆಲ್ಪ್‌ಫುಲ್ ಆಗೋ ಆ ಸ್ವೀಟ್ ಯಾವ್ದು ತಿಳ್ಕೊಳ್ಳೋಣ.

Healthy Breakfast: ತೂಕ ಇಳಿಸ್ಬೇಕೆಂದ್ರೆ ಬಾಳೆಹಣ್ಣಿನ ಜೊತೆ ಬೆಳಿಗ್ಗೆ ಇದನ್ನು ತಿಂದ್ನೋಡಿ

ಮಖಾನಾ ಫಿರ್ನಿ
ಮಖಾನಾ ಫಿರ್ನಿ (Makhana Phirni ) ಎಂಬುದು ಕ್ಲಾಸಿಕ್ ಸ್ವೀಟ್ ಟ್ರೀಟ್ ಆಗಿದೆ. ಕಮಲದ ಬೀಜಗಳು ಎಂದು ಕರೆಯಲ್ಪಡುವ ಮಖಾನಾವನ್ನು ಸಾಮಾನ್ಯವಾಗಿ ಭಾರತೀಯ ಅಡುಗೆಗಳಲ್ಲಿ ಬಳಸಲಾಗುತ್ತದೆ. ಉತ್ತರಭಾರತದಲ್ಲಿ ಹಬ್ಬಹರಿದಿನಗಳಲ್ಲಿ ಇದನ್ನು ಹೆಚ್ಚಾಗಿ ಬಳಸುತ್ತಾರೆ.  ಇದು ಸಾತ್ವಿಕ ಆಹಾರಗಳಲ್ಲಿ ಒಂದಾಗಿದೆ. ಈ ಬೀಜಗಳು ನೈಸರ್ಗಿಕವಾಗಿ ಆಹಾರದ ಫೈಬರ್, ಕ್ಯಾಲ್ಸಿಯಂ, ಮ್ಯಾಂಗನೀಸ್, ಪೊಟ್ಯಾಸಿಯಮ್‌ನಂತಹ ಖನಿಜಗಳಿಂದ ತುಂಬಿರುತ್ತವೆ. ದೇಸಿ ಮಖಾನಾ ಫಿರ್ನಿಯನ್ನು ಹಾಲು, ಪುಡಿಮಾಡಿದ ಮಖಾನಾ, ಹುರಿದ ಬಾದಾಮಿ, ಖರ್ಜೂರವನ್ನು ಸೇರಿಸಿ ತಯಾರಿಸಲಾಗುತ್ತದೆ.

ದೇಸಿ ಸ್ವೀಟ್‌ನ ವಿಶಿಷ್ಟತೆ ಏನು ?
ಮಖಾನಾ ಫಿರ್ನಿ ಖಾದ್ಯವನ್ನು ತುಂಬಾ ಸಿಹಿಯಾಗಿಸುವುದು ಇದಕ್ಕೆ ಸೇರಿಸುವ ಖರ್ಜೂರ (Dates)ಗಳ ಸೇರ್ಪಡೆಯಾಗಿದೆ. ಇದು ದೇಹಕ್ಕೆ ಬೇಕಾದ ಕಬ್ಬಿಣ, ಫೋಲೇಟ್, ಫೈಬರ್, ವಿಟಮಿನ್ ಬಿ೬, ತಾಮ್ರ ಮತ್ತು ಇತರ ಅಗತ್ಯ ಪೋಷಕಾಂಶಗಳನ್ನು ಒದಗಿಸುತ್ತದೆ. ಇದಲ್ಲದೆ ಈ ಆರೋಗ್ಯಕರ ಸಿಹಿತಿಂಡಿಯು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ಮೆದುಳಿನ ಆರೋಗ್ಯಕ್ಕೆ ಉತ್ತಮವಾಗಿದೆ. ಮಖಾನಾ ಫಿರ್ನಿಯ ಸೇವನೆ ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ಇದು ಮಧುಮೇಹಿಗಳಿಗೆ ಒಳ್ಳೆಯದು. 

ಖರ್ಜೂರದಲ್ಲಿರುವ ಕ್ಯಾರೊಟಿನಾಯ್ಡ್ ಇರುವಿಕೆಯು ಹೃದಯದ ಆರೋಗ್ಯಕ್ಕೆ ಉತ್ತಮಗೊಳಿಸುತ್ತದೆ. ಕಣ್ಣಿನ ದೃಷ್ಟಿಯನ್ನು ಸುಧಾರಿಸುತ್ತದೆ. ಮಖಾನಾ ಫಿರ್ನಿ ಒಂದು ಸಾರಿ ತಿಂದರೆ ಇದು ದೀರ್ಘಕಾಲ ಹೊಟ್ಟೆ ತುಂಬಿದಾ ಅನುಭವ ನೀಡುತ್ತದೆ. ಹೀಗಾಗಿ ಇದು ಪರಿಣಾಮಕಾರಿ ತೂಕ ನಿರ್ವಹಣೆಯಲ್ಲಿ ಸಹಾಯ ಮಾಡುತ್ತದೆ.

Weight Loss Tips: ಅನ್ನವನ್ನು ತೆಂಗಿನೆಣ್ಣೆ ಸೇರಿಸಿ ಬೇಯಿಸಿ, ತೂಕ ಹೆಚ್ಚಾಗೋ ಭಯವಿಲ್ಲ

ಮನೆಯಲ್ಲಿ ಮಖಾನಾ ಫಿರ್ನಿ ತಯಾರಿಸುವುದು ಹೇಗೆ ?
ಮನೆಯಲ್ಲೇ ಮಖಾನಾ ಫಿರ್ನಿ ತಯಾರಿಸಲು ಮೊದಲಿಗೆ ಪ್ಯಾನ್ ತೆಗೆದುಕೊಂಡು 1 ಟೀ ಚಮಚ ತುಪ್ಪವನ್ನು ಸೇರಿಸಿ, ಇದಕ್ಕೆ 1 ಕಪ್ ಬಾದಾಮಿಯನ್ನು ಸೇರಿಸಿ ಹುರಿದುಕೊಳ್ಳಿ. ಇದಕ್ಕೇ   ½ ಕಪ್ ಖರ್ಜೂರವನ್ನು ಬೀಜ ತೆಗೆದುಹಾಕಿ ಮತ್ತು ಅವುಗಳನ್ನು 1 ಕಪ್ ಬೆಚ್ಚಗಿನ ಹಾಲಿನಲ್ಲಿ ನೆನೆಸಿ. ನಂತರ ದಪ್ಪ ತಳವಿರುವ ಪಾತ್ರೆಯನ್ನು ತೆಗೆದುಕೊಂಡು 900 ಮಿಲಿ ಹಾಲು ಸೇರಿಸಿ, ಕಡಿಮೆ ಉರಿಯಲ್ಲಿ ಬೆರೆಸಿ. ಈ ಮಧ್ಯೆ, ಇನ್ನೊಂದು ಪ್ಯಾನ್ ತೆಗೆದುಕೊಂಡು 1 ಚಮಚ ತುಪ್ಪ ಸೇರಿಸಿ ಮತ್ತು 1 ಕಪ್ ಮಖಾನಾವನ್ನು ಹುರಿಯಿರಿ. ಇದು ತಣ್ಣಗಾದ ನಂತ ಮಿಕ್ಸಿಯಲ್ಲಿ ಪುಡಿ ಮಾಡಿಕೊಳ್ಳಿ.

ಇನ್ನೊಂದು ಪಾತ್ರೆಯಲ್ಲಿ ಹಾಲು ಕಡಿಮೆಯಾಗಲು ಪ್ರಾರಂಭಿಸಿದ ನಂತರ, ಈ ಮಖಾನಾ ಪುಡಿಯನ್ನು ಸೇರಿಸಿ. ಬಾದಾಮಿಯನ್ನು ಪುಡಿಮಾಡಿ ಮತ್ತು ಹಾಲಿನ ಮಿಶ್ರಣಕ್ಕೆ ಸೇರಿಸಿ ಮತ್ತು ಬೆರೆಸಿ. 1⁄2 ಟೀಚಮಚ ಏಲಕ್ಕಿ ಪುಡಿಯನ್ನು ಸೇರಿಸಿ . ಈ ಮಧ್ಯೆ, ಖರ್ಜೂರದ ಮಿಶ್ರಣವನ್ನು ಮಾಡಿ ಮತ್ತು ಅದನ್ನು ಹಾಲಿನ ಮಿಶ್ರಣಕ್ಕೆ ಸೇರಿಸಿ, ಕುದಿಸಿ ಮತ್ತು 7-8 ನಿಮಿಷ ಬೇಯಿಸಿ. ಫಿರ್ನಿ ಸ್ವಲ್ಪ ದಪ್ಪವಾದ ನಂತರ, ಅದನ್ನು ಸರ್ವಿಂಗ್ ಕಪ್‌ಗಳಲ್ಲಿ ಸುರಿಯಿರಿ ಮತ್ತು ಫ್ರಿಜ್‌ನಲ್ಲಿಡಿ. ಇದನ್ನು ಡ್ರೈ ಫ್ರೂಟ್ಸ್‌ಗಳಿಂದ ಅಲಂಕರಿಸಿ ಸರ್ವ್ ಮಾಡಬಹುದು.

Follow Us:
Download App:
  • android
  • ios