Asianet Suvarna News Asianet Suvarna News

Weight Loss: ಡಯಟ್ ಬಿಟ್ಟು ಹಾರರ್ ಮೂವಿ ನೋಡಿ, ತೂಕ ಇಳಿಯುತ್ತೆ!

ಹೊಟ್ಟೆ ಬಂದಿದೆ, ಬೊಜ್ಜು ಹೆಚ್ಚಾಗಿದೆ..ಏನ್ ಮಾಡಿದ್ರೂ ತೂಕ ಕಡಿಮೆಯಾಗ್ತಿಲ್ಲ ಎನ್ನುವವರು ಇದನ್ನು ಓದಿ. ಮನೆಯಲ್ಲೇ ಕುಳಿತು ಆರಾಮವಾಗಿ ತೂಕ ಇಳಿಸಬಹುದಂತೆ. ಅದಕ್ಕೆ ಪರಿಶ್ರಮಬೇಡ. ಸ್ವಲ್ಪ ಧೈರ್ಯ ಬೇಕು,ಸಮಯ ಬೇಕು.

Does Watching Horror Movies Reduce Weight Know Expert Opinion
Author
Bangalore, First Published Feb 18, 2022, 6:02 PM IST

ತೂಕ (Weight) ಇಳಿಸಿಕೊಳ್ಳಲು ಅನೇಕ ಆಯ್ಕೆ (Option)ಗಳಿವೆ. ಹೆಚ್ಚಿನ ಜನರು (People) ಆಹಾರ (Food) ಪದ್ಧತಿ ಅಥವಾ ವ್ಯಾಯಾಮ (Exercise),ಜಿಮ್ ಮೂಲಕ ತೂಕ ಇಳಿಸಿಕೊಳ್ಳುವ ಪ್ರಯತ್ನಕ್ಕೆ ಮುಂದಾಗ್ತಾರೆ. ಮತ್ತೆ ಕೆಲವರಿಗೆ ರುಚಿಯಾದ ಆಹಾರ ಬಿಡಲು ಮನಸ್ಸಿರುವುದಿಲ್ಲ. ಸಮಯಕ್ಕೆ ಮೊದಲೇ ಎದ್ದು ವ್ಯಾಯಾಮ ಮಾಡಲು ಸಾಧ್ಯವಾಗುವುದಿಲ್ಲ. ಅಂತವರು ಇಂಟರ್ನೆಟ್ ಮೊರೆ ಹೋಗ್ತಾರೆ. ವ್ಯಾಯಾಮ,ಡಯಟ್ ಎರಡನ್ನು ಬಿಟ್ಟು ಬೇರೆ ಯಾವ ವಿಧಾನದ ಮೂಲಕ ತೂಕ ಇಳಿಸಬಹುದು ಎಂಬ ವಿಧಾನ ಹುಡುಕಲು ಶುರು ಮಾಡ್ತಾರೆ. ನೀವೂ ಈ ಹುಡುಕಾಟದಲ್ಲಿದ್ದರೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ. ಸುಲಭ ವಿಧಾನದ ಮೂಲಕ ತೂಕ ಕಡಿಮೆ ಮಾಡಬಹುದು. ಆದ್ರೆ ಸ್ವಲ್ಪ ಧೈರ್ಯ ಬೇಕು. ಕೆಲವರು ಹಾರರ್ ಚಿತ್ರಗಳನ್ನು ವೀಕ್ಷಿಸುವುದಿಲ್ಲ. ದೆವ್ವ,ಭೂತದ ಸಿನಿಮಾ,ಧಾರಾವಾಹಿಗಳು ಅವರಿಗೆ ಭಯ ಹುಟ್ಟಿಸುತ್ತವೆ. ರಾತ್ರಿ ನಿದ್ರೆ ಬರುವುದಿಲ್ಲ ಎಂದು ಕೆಲವರು ಹೇಳಿದ್ರೆ ಮತ್ತೆ ಕೆಲವರು ಈ ಸಿನಿಮಾಗಳನ್ನು ಒಂಟಿಯಾಗಿ ನೋಡಲು ಸಾಧ್ಯವಿಲ್ಲ ಅಂತಾರೆ. ಇಲ್ಲ ಒಬ್ಬರೇ ಮನೆಯಲ್ಲಿದ್ದಾಗ ಚಿತ್ರದ ದೃಶ್ಯಗಳು ನೆನಪಾಗುತ್ವೆ ಎನ್ನುವವರಿದ್ದಾರೆ. ತೂಕ ಇಳಿಸಿಕೊಳ್ಳಬೇಕೆಂದ್ರೆ ನೀವು ಈ ಎಲ್ಲ ಭಯ ಬಿಡ್ಬೇಕು. ಯಸ್ ಹಾರರ್ ಚಿತ್ರ ನೋಡೋದ್ರಿಂದ ನಿಮ್ಮ ಬೊಜ್ಜನ್ನು ಕಡಿಮೆ ಮಾಡ್ಬಹುದು.

ತೂಕ ಇಳಿಸಿಕೊಳ್ಳಲು ಹಾರರ್ ಚಲನಚಿತ್ರಗಳು ಸಹಾಯಕವಾಗಿವೆಯೇ? :
ವಾಸ್ತವವಾಗಿ, ಯುನೈಟೆಡ್ ಕಿಂಗ್ಡಮ್‌ನ ವೆಸ್ಟ್ ಮಿನಿಸ್ಟರ್ ವಿಶ್ವವಿದ್ಯಾಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಜನರು ಭೂತದ ಚಿತ್ರಗಳು ಮತ್ತು ಮನಸ್ಸಿಗೆ ಮುದ ನೀಡುವ ಚಿತ್ರಗಳನ್ನು ನೋಡುವ ಮೂಲಕ ತೂಕವನ್ನು ಇಳಿಸಿಕೊಳ್ಳಬಹುದು ಎಂದು ಅಧ್ಯಯನದ ವರದಿ ಹೇಳಿದೆ.

ಹಾರರ್ ಚಲನಚಿತ್ರಿದಿಂದ ತೂಕ ಕಡಿಮೆಯಾಗುವುದು ಹೇಗೆ? : ಹಾರರ್ ಚಿತ್ರಗಳನ್ನು ನಾವು ವೀಕ್ಷಣೆ ಮಾಡುವಾಗ ಸಾಮಾನ್ಯವಾಗಿ ನಮ್ಮ ಮನಸ್ಸು ಹಾಗೂ ದೇಹದಲ್ಲಿ ಅನೇಕ ಬದಲಾವಣೆಗಳನ್ನು ನಾವು ಗಮನಿಸಿರುತ್ತೇವೆ. ಉಸಿರಾಟದ ಬದಲಾವಣೆಯಾಗುತ್ತದೆ. ಇದ್ರಿಂದ ಚಯಾಪಚಯ ದರದಲ್ಲಿ ಅಸಮತೋಲನ ಉಂಟುಮಾಡುತ್ತದೆ. ಇದ್ರಿಂದ ಕ್ಯಾಲೊರಿ ಬರ್ನ್ ಆಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ. 

Health Care : ಸ್ನಾನದ ವಿಷಯದಲ್ಲಿ ನೀವು 100% ಮಾಡ್ತಿರೋ ಮಿಸ್ಟೇಕಿದು..

ಅಧ್ಯಯನದ ಫಲಿತಾಂಶ : ಯುನೈಟೆಡ್ ಕಿಂಗ್ಡಮ್‌ನ ವೆಸ್ಟ್ ಮಿನಿಸ್ಟರ್  ಅಧ್ಯಯನದಲ್ಲಿ ಸುಮಾರು 10 ಜನರು ಭಾಗವಹಿಸಿದ್ದರು. ಹಾರರ್ ಚಿತ್ರಗಳನ್ನು ವೀಕ್ಷಿಸುತ್ತಿದ್ದ ಜನರಲ್ಲಿ ಆಮ್ಲಜನಕದ ಮಟ್ಟಗಳು ಮತ್ತು ಅವರು ಚಲನಚಿತ್ರವನ್ನು ವೀಕ್ಷಿಸಿದಾಗ ಹೊರಸೂಸುವ ಕಾರ್ಬನ್ ಡೈಆಕ್ಸೈಡ್ ಪ್ರಮಾಣವನ್ನು ಸಂಶೋಧಕರು ಗಮನಿಸಿದರು. ಇದರಲ್ಲಿ ತೀವ್ರ ಆತಂಕ ಮತ್ತು ಖಿನ್ನತೆಯ ಲಕ್ಷಣಗಳು ಸೇರಿದ್ದವು. ಹಾರರ್ ಚಿತ್ರಗಳನ್ನು ವೀಕ್ಷಿಸಿದ್ರೆ ತೂಕ ಇಳಿಕೆಯಾಗುತ್ತದೆ ಎಂಬ ಬಗ್ಗೆ ಇನ್ನಷ್ಟು ಸಂಶೋಧನೆ ನಡೆಯಬೇಕೆಂದು ಸಂಶೋಧಕರು ಹೇಳಿದ್ದಾರೆ.

ಹಾರರ್ ಚಲನಚಿತ್ರ ವೀಕ್ಷಣೆಯಿಂದ ಬರ್ನ್ ಆಗುತ್ತೆ ಇಷ್ಟು ಕ್ಯಾಲೊರಿ : ಅಧ್ಯಯನದ ಪ್ರಕಾರ, ನೀವು ಸರಾಸರಿ 90 ನಿಮಿಷಗಳ ಕಾಲ  ಹಾರರ್ ಚಲನಚಿತ್ರವನ್ನು ವೀಕ್ಷಿಸಿದಾಗ, ನಿಮ್ಮ ದೇಹದಿಂದ 113 ಕ್ಯಾಲೊರಿಗಳನ್ನು ನೀವು ಬರ್ನ್ ಮಾಡುತ್ತೀರಿ. ಇದು 30 ನಿಮಿಷಗಳ ಕಾಲ ವಾಕಿಂಗ್ ಮಾಡಿದ್ರೆ ಬರ್ನ್ ಆಗುವ ಕ್ಯಾಲೊರಿಗಳಿಗೆ ಸಮವೆಂದು ಸಂಶೋಧಕರು ಹೇಳಿದ್ದಾರೆ.  ಹಾರರ್ ಚಲನಚಿತ್ರಗಳು ಅಡ್ರಿನಾಲಿನ್ ಮತ್ತು ಕ್ಯಾಲೊರಿಗಳನ್ನು ಬರ್ನ್ ಮಾಡಬಹುದು ಎಂದು ಸಂಶೋಧಕರು ಹೇಳುತ್ತಾರೆ.
ಕೆಲವು ಚಲನಚಿತ್ರಗಳು ಕ್ಯಾಲೊರಿ ಬರ್ನ್ ಮಾಡಲು ಹೆಚ್ಚು ಪರಿಣಾಮಕಾರಿಯಾಗಿದ್ದವು. ಅಧ್ಯಯನದ ಪ್ರಕಾರ 10 ಚಲನಚಿತ್ರಗಳು ಹೆಚ್ಚು ಕ್ಯಾಲೊರಿ ಬರ್ನರ್‌ಗಳೆಂದು ಹೇಳಲಾಗಿದೆ. 

Love And Heart: ಪ್ರೀತಿ ಮಾಡೋದು ಹೃದಯದ ಆರೋಗ್ಯಕ್ಕೆ ಡೇಂಜರ್ ಅಂತೆ..!

ಹೆಚ್ಚು ಕ್ಯಾಲೊರಿ ಬರ್ನ್ ಮಾಡುವ ಚಿತ್ರಗಳು :
ದಿ ಶೈನಿಂಗ್  (The Shining )  184 ಕ್ಯಾಲೊರಿ ಬರ್ನ್ ಮಾಡುತ್ತದೆಯಂತೆ.
ಜಾಸ್ (Jaws) 161 ಕ್ಯಾಲೋರಿ ಬರ್ನ್ ಮಾಡುತ್ತದೆಯಂತೆ
ದಿ ಎಕ್ಸಾರ್ಸಿಸ್ಟ್ (The Exorcist ) 158 ಕ್ಯಾಲೊರಿ ಬರ್ನ್ ಮಾಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

Follow Us:
Download App:
  • android
  • ios