Cinnamon Health Benefits: ಮಕ್ಕಳಾಗುತ್ತಿಲ್ಲ ಎಂಬ ಚಿಂತೆಯೇ ? ದಾಲ್ಚಿನ್ನಿ ತಿಂದು ನೋಡಿ

ಪಲಾವ್, ಬಿರಿಯಾನಿ ಹೀಗೆ ಹಲವು ವಿಶೇಷ ಅಡುಗೆಗಳನ್ನು ಪರಿಮಳ ಭರಿತವಾದ ದಾಲ್ಚಿನಿ (Cinnamon)ಯನ್ನು ಸೇರಿಸಿ ಮಾಡಲಾಗುತ್ತದೆ. ಹೆಚ್ಚಿನವರು ಇದು ಆಹಾರಕ್ಕೆ ಇನ್ನಷ್ಟು ರುಚಿ ಸೇರಿಸುವ ಮಸಾಲೆ ಪದಾರ್ಥವೆಂದು ಮಾತ್ರ ತಿಳಿದಿದ್ದಾರೆ. ಆದರೆ ನಿಮಗೆ ಗೊತ್ತಾ, ನಿಮ್ಮ ಆಹಾರ (Food)ದಲ್ಲಿ ದಾಲ್ಚಿನ್ನಿ ಸೇರಿಸುವುದರಿಂದ ಗರ್ಭಧಾರಣೆ (Pregnancy)ಯ ಸಾಧ್ಯತೆಯನ್ನು ಹೆಚ್ಚಿಸಬಹುದು.

Cinnamon To Your Diet Can Increase The Chances Of Pregnancy

ದಾಲ್ಚಿನ್ನಿ (Cinnamon) ಆಹಾರಕ್ಕೆ ಸ್ವಾದಿಷ್ಟ ಹಾಗೂ ಹೆಚ್ಚು ರುಚಿ (Taste)ಯನ್ನು ಕೊಡುವ ಮಸಾಲೆ ಪದಾರ್ಥವಾಗಿದೆ. ವೈಜ್ಞಾನಿಕವಾಗಿ ಇದನ್ನು ಸಿನಮೋನ್ ಎಂದು ಕರೆಯುತ್ತಾರೆ. ದಾಲ್ಚಿನ್ನಿಯಲ್ಲಿರುವ ಔಷಧೀಯ ಗುಣಗಳಿಂದಾಗಿ ಸಾವಿರಾರು ವರ್ಷಗಳಿಂದ ಇದನ್ನು ಬಳಸಿಕೊಂಡು ಬರಲಾಗುತ್ತಿದೆ. ಭಾರತದಲ್ಲಿ ಮಾತ್ರವಲ್ಲದೆ ಇಂಡೋನೇಷ್ಯಾ, ವಿಯೆಟ್ನಾಂ ಮೊದಲಾದ ಕಡೆಗಳಲ್ಲಿಯೂ ದಾಲ್ಚಿನ್ನಿಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ದಾಲ್ಚಿನ್ನಿಯಲ್ಲಿ ಹಲವು ವಿಧಗಳು ಸಹ ಇವೆ. ಅದರಲ್ಲಿ ಸಿಲೋನ್ ದಾಲ್ಚಿನ್ನಿ ಹಾಗೂ ಕ್ಯಾಸಿಯಾ ದಾಲ್ಚಿನ್ನಿ ಹೆಚ್ಚು ಪ್ರಸಿದ್ಧವಾಗಿದೆ.

ದಾಲ್ಚಿನ್ನಿ ಸೇವನೆಯಿಂದ ಹಲವು ಆರೋಗ್ಯ (Health) ಸಮಸ್ಯೆಗಳು ದೂರವಾಗುತ್ತವೆ. ಮುಖ್ಯವಾಗಿ ದಾಲ್ಚಿನ್ನಿ ಆಂಟಿ ವೈರಲ್, ಬ್ಯಾಕ್ಟಿರೀಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ದಾಲ್ಚಿನ್ನಿ ಸೇವಿಸುತ್ತಿರುವುದರಿಂದ ಸುಲಭವಾಗಿ ಅನಾರೋಗ್ಯ ಕಾಡುವುದಿಲ್ಲ. ಇದಲ್ಲದೆ, ಪುರುಷರು ಮತ್ತು ಮಹಿಳೆಯರಲ್ಲಿ ಕಾಮಾಸಕ್ತಿ ಮತ್ತು ಫಲವತ್ತತೆಯನ್ನು ಹೆಚ್ಚಿಸಲು ದಾಲ್ಚಿನ್ನಿ ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ. ನೀವು ಮಗುವನ್ನು ಹೊಂದಲು ಯೋಚಿಸುತ್ತಿದ್ದರೆ, ದಿನನಿತ್ಯದ ಆಹಾರ (Food)ದಲ್ಲಿ ದಾಲ್ಚಿನ್ನಿಯನ್ನು ಸೇರಿಸುವುದನ್ನು ಮರೆಯಬೇಡಿ.

ಈ ಗಿಡಮೂಲಿಕೆ ಮಸಾಲಾ ಚಹಾ ಕುಡಿದು ಮಲಗಿದ್ರೆ ತೂಕ ಇಳಿಯುತ್ತೆ!

ಫಲವತ್ತತೆಯನ್ನು ಹೆಚ್ಚಿಸಲು ದಾಲ್ಚಿನ್ನಿ ನಿಜವಾಗಿಯೂ ಸಹಾಯ ಮಾಡಬಹುದೇ ?
ನಿಯಮಿತವಾಗಿ ಆಹಾರದಲ್ಲಿ ದಾಲ್ಚಿನ್ನಿಯ ಬಳಕೆ ಗರ್ಭಧರಿಸಲು ಸಹಾಯ ಮಾಡುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ. ಆಹಾರದಲ್ಲಿ ಈ ಮಸಾಲೆ ಸೇರ್ಪಡೆಯು ಫಲವತ್ತತೆಯನ್ನು ಸುಧಾರಿಸಲು ಮತ್ತು ನೈಸರ್ಗಿಕವಾಗಿ ಕಾಮವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಪುರುಷರು ಹಾಗೂ ಮಹಿಳೆಯರು ದಾಲ್ಚಿನ್ನಿ ಸೇವಿಸುವುದರಿಂದ ಯಾವ ರೀತಿ ಪ್ರಯೋಜನವಾಗುತ್ತದೆ ?

ದಾಲ್ಚಿನ್ನಿ ಪ್ರಕೃತಿಯಲ್ಲಿ ಬೆಚ್ಚಗಿರುತ್ತದೆ. ಹೀಗಾಗಿ ಇದನ್ನು ಚಹಾ, ಡಿಟಾಕ್ಸ್ ಪಾನೀಯಗಳು, ಸೂಪ್‌ಗಳು, ಮೇಲೋಗರಗಳು ಮತ್ತು ಸಿಹಿತಿಂಡಿಗಳಿಗೆ ಸೇರಿಸುವುದರಿಂದ ಪುರುಷರಲ್ಲಿ ವೀರ್ಯದ ಸಂಖ್ಯೆ ಹೆಚ್ಚಾಗುತ್ತದೆ. ಅದೇ ರೀತಿ, ಮಹಿಳೆಯರು ಆಹಾರದಲ್ಲಿ ಸ್ವಲ್ಪ ಪ್ರಮಾಣದ ದಾಲ್ಚಿನ್ನಿ ಸೇರಿಸುವುದು ಅನಿಯಮಿತ ಋತುಚಕ್ರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಅಷ್ಟು ಮಾತ್ರವಲ್ಲ ಮಹಿಳೆಯರಲ್ಲಿ ಬಂಜೆತನಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾದ ಪಾಲಿಸಿಸ್ಟಿಕ್ ಓವರಿ ಸಿಂಡ್ರೋಮ್ (ಪಿಸಿಓಎಸ್) ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಮಧುಮೇಹಿಗಳು ಈ 3 ವಿಧದ ಹಾಲನ್ನು ಸೇವಿಸಿದ್ರೆ ರೋಗ ನಿಯಂತ್ರಣ ಗ್ಯಾರಂಟಿ

ಬೆಳಗ್ಗೆ ದಾಲ್ಚಿನ್ನಿ ಚಹಾ ಅಥವಾ ದಾಲ್ಚಿನ್ನಿ ಡಿಟಾಕ್ಸ್ ನೀರನ್ನು ಕುಡಿಯುವುದು ಸಹ ಋತುಚಕ್ರವನ್ನು ಕ್ರಮಬದ್ಧಗೊಳಿಸಲು ಸಹಾಯ ಮಾಡುತ್ತದೆ. ಇದು ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ದಾಲ್ಚಿನ್ನಿ ಸೇವನೆ ತೂಕವನ್ನು ಕಳೆದುಕೊಳ್ಳಲು ಸಹ ನೆರವಾಗುತ್ತದೆ., ದಾಲ್ಚಿನ್ನಿ ಸೇವಿಸುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೀಗಾಗಿ ಮಧುಮೇಹ (Diabetes) ಹೊಂದಿರುವ ಜನರಿಗೆ ಇದು ಸಹಕಾರಿಯಾಗಿದೆ. ದಾಲ್ಚಿನ್ನಿ ಸೇವನೆ ಹೃದಯ (Heart)ದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಾಲ್ಚಿನ್ನಿಯಲ್ಲಿರುವ ಪ್ರಿಬಯಾಟಿಕ್ ಗುಣಗಳು ಕರುಳಿನ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದಾಲ್ಚಿನ್ನಿ ಸೇವನೆ ರಕ್ತದೊತ್ತಡದಂತಹಾ ಸಮಸ್ಯೆಯಿಂದ ರಕ್ಷಿಸುತ್ತದೆ.

ದಿನನಿತ್ಯದ ಆಹಾರದಲ್ಲಿ ದಾಲ್ಚಿನ್ನಿಯನ್ನು ಹೇಗೆ ಸೇರಿಸಬಹುದು ? 
ದಾಲ್ಚಿನ್ನಿ ಆರೋಗ್ಯಕ್ಕೆ ಉತ್ತಮವಾದರೂ ಇದರ ಅಧಿಕ ಸೇವನೆ ಒಳ್ಳೆಯದಲ್ಲ. ಆರೋಗ್ಯ ತಜ್ಞರ ಪ್ರಕಾರ, ಪುರುಷರು ಅಥವಾ ಮಹಿಳೆಯರು ತಮ್ಮ ದೈನಂದಿನ ಆಹಾರದಲ್ಲಿ ಸುಮಾರು 3 ಗ್ರಾಂ ದಾಲ್ಚಿನ್ನಿ ಸೇರಿಸಿಕೊಳ್ಳಬಹುದು. 

ದಾಲ್ಚಿನ್ನಿಯನ್ನು ದೈನಂದಿನ ಆಹಾರಕ್ರಮದಲ್ಲಿ ಸೇರಿಸಲು ಹಲವಾರು ಮಾರ್ಗಗಳಿವೆ, ದಾಲ್ಚಿನ್ನಿ ಬಿಸಿನೀರಿನಲ್ಲಿ ಹಾಕಿಟ್ಟು ಆ ನೀರನ್ನು ಕುಡಿಯಬಹುದು. ದಾಲ್ಚಿನ್ನಿಯನ್ನು ಸಲಾಡ್‌, ಗಂಜಿ, ಸೂಪ್‌, ಸ್ಮೂಥಿಗಳಲ್ಲೂ ಸೇರಿಸಿಕೊಳ್ಳಬಹುದು. ದಾಲ್ಚಿನ್ನಿಯನ್ನು ನಿಮ್ಮ ಆಹಾರದಲ್ಲಿ ಸೇರಿಸುವ ಇನ್ನೊಂದು ಪರಿಣಾಮಕಾರಿ ವಿಧಾನವೆಂದರೆ, ನೀರಿನಲ್ಲಿ ನಿಂಬೆ ಹೋಳುಗಳನ್ನು ಕುದಿಸುವ ಮೂಲಕ ತಯಾರಿಸಿದ ಡಿಟಾಕ್ಸ್ ನೀರಿಗೆ ದಾಲ್ಚಿನ್ನಿ ಕಡ್ಡಿ ಮತ್ತು ಜೇನುತುಪ್ಪವನ್ನು ಸೇರಿಸಿ. ಇದನ್ನು ಕುಡಿಯವುದು ಆರೋಗ್ಯಕ್ಕೆ ಉತ್ತಮವಾಗಿದೆ. ನೀವು ಮಲಗುವ ಸಮಯದಲ್ಲಿ ದಾಲ್ಚಿನ್ನಿ ಸೇರಿಸಿದ ನೀರನ್ನು ಕುಡಿಯುವುದರಿಂದ ಇದು ಆರಾಮದಾಯಕವಾಗಿ ನಿದ್ರೆಯನ್ನು ಮಾಡಲು ಸಹಾಯ ಮಾಡುತ್ತದೆ.

Latest Videos
Follow Us:
Download App:
  • android
  • ios