ಪ್ರತಿದಿನ 20 ನಿಮಿಷ ಡಕ್ ವಾಕ್ ಮಾಡಿದ್ರೆ ಆರೋಗ್ಯ ಸೂಪರ್, ಇಷ್ಟಕ್ಕೂ ಏನಿದು?
ಆರೋಗ್ಯವಾಗಿರಲು ವ್ಯಾಯಾಮ ಮಾಡೋದು ಬಹಳ ಮುಖ್ಯ. ಆದಾಗ್ಯೂ, ಸರಿಯಾದ ವ್ಯಾಯಾಮ ಮಾಡಲು ಸರಿಯಾದ ವಿಧಾನ ಅಳವಡಿಸಿದ್ರೆ, ಅದರಿಂದ ನಿಮಗೆ ಗರಿಷ್ಠ ಪ್ರಯೋಜನ ಸಿಗುತ್ತೆ. ನೀವು ಆರೋಗ್ಯಕರವಾಗಿರಲು ಕೆಲವೊಂದು ವ್ಯಾಯಾಮಗಳನ್ನು ಮಾಡಬೇಕು. ಅದರಲ್ಲಿ ಡಕ್ ವಾಕ್ ಕೂಡ ಒಂದು. ಡಕ್ ವಾಕ್ ವ್ಯಾಯಾಮ ನಿಮ್ಮ ಪೃಷ್ಠಗಳು ಮತ್ತು ತೊಡೆಗಳಿಗೆ ಹೆಚ್ಚು ಒತ್ತು ನೀಡುತ್ತದೆ.

ಪೃಷ್ಠ ಮತ್ತು ತೊಡೆಯ ಸ್ನಾಯುಗಳು ಸಾಮಾನ್ಯವಾಗಿ ಕೆಲಸ ಮಾಡಲು ಕಷ್ಟಕರವಾದ ದೊಡ್ಡ ಸ್ನಾಯುಗಳಾಗಿವೆ. ಆದ್ದರಿಂದ ಡಕ್ ವಾಕ್(Duck walk) ಮಾಡೋ ಮೂಲಕ ಈ ಸ್ನಾಯುಗಳನ್ನು ಬಲಪಡಿಸಲು ಸುಲಭವಾಗುತ್ತದೆ. ಆದ್ದರಿಂದ ಇಂದು ನಾವು ಡಕ್ ವಾಕ್ ವ್ಯಾಯಾಮದ ಪ್ರಯೋಜನಗಳನ್ನು ಮತ್ತು ಅದನ್ನು ಮಾಡಲು ಸರಿಯಾದ ಮಾರ್ಗದ ಬಗ್ಗೆ ತಿಳಿಸುತ್ತೇವೆ.
ಡಕ್(Duck) ವಾಕ್ ಮಾಡೋದು ಹೇಗೆ?
ಡಕ್ ವಾಕ್ ಮಾಡಲು, ಮೊದಲನೆಯದಾಗಿ, ನೀವು ನಿಮ್ಮ ಕಾಲುಗಳನ್ನು ಅಗಲವಾಗಿ ಇಟ್ಟುಕೊಂಡು ನಿಲ್ಲಬೇಕು.
ವ್ಯಾಯಾಮ ಮಾಡುವಾಗ ನೀವು ನಿಮ್ಮ ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಿಗಿಗೊಳಿಸುವುದನ್ನು ಇಲ್ಲಿ ನೆನಪಿನಲ್ಲಿಡಿ, ಇದರಿಂದ ಬೆನ್ನು ಮತ್ತು ಕಿಬ್ಬೊಟ್ಟೆಯ ಸ್ನಾಯುಗಳಿಗೆ ನೋವಾಗುವುದಿಲ್ಲ.
ಬ್ಯಾಲೆನ್ಸ್ ಮಾಡುವಾಗ ನಿಮ್ಮ ಮೊಣಕಾಲುಗಳನ್ನು ಬಾಗಿಸಿ. ಆದರೆ ನೀವು ಸಂಪೂರ್ಣವಾಗಿ ಬಾಗಬೇಕಾಗಿಲ್ಲ. ಕುರ್ಚಿಯಲ್ಲಿ(Cair) ಕುಳಿತುಕೊಳ್ಳುವಂತೆ ದೇಹವನ್ನು ಸೊಂಟದಿಂದ ತುಂಬಾ ಕೆಳಕ್ಕೆ ಇಳಿಸಬೇಕು. ನಿಮ್ಮ ಸಂಪೂರ್ಣ ಹೊರೆಯು ಪಾದಗಳ ಮೇಲೆ ಇರಬೇಕು.
ಡಕ್ ವಾಕ್ ಮಾಡುವಾಗ ಕೈಗಳನ್ನು ಎದೆಯ ಮುಂದೆ ಇರಿಸಿ. ಬ್ಯಾಲೆನ್ಸ್(Balance) ಮಾಡಲು ಇದು ನಿಮಗೆ ಸಹಾಯ ಮಾಡುತ್ತದೆ.
ಈಗ ನೀವು ಕೆಲವು ಹೆಜ್ಜೆ ಮುಂದೆ ಹೋಗಿ, ಹಗುರವಾಗಿ ಪಾದವನ್ನು ಮೇಲಕ್ಕೆತ್ತಿ, ನಂತರ ನೀವು ಪ್ರಾರಂಭಿಸಿದ ಸ್ಥಳಕ್ಕೆ ಹಿಂತಿರುಗಿ. ಈಗ ನಿಧಾನವಾಗಿ ಎದ್ದುನಿಲ್ಲಿ. ಡಕ್ ವಾಕ್ ಮಾಡುವಾಗ, ತೂಕವು ಹಿಮ್ಮಡಿಯ ಮೇಲೆ ಇರುವುದನ್ನು ಖಚಿತಪಡಿಸಿಕೊಳ್ಳಲು ನಿಮ್ಮ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ನೀವು ಮುಂದಕ್ಕೆ ಬಾಗಬೇಕು.
ಪ್ರಾರಂಭದಲ್ಲಿ, ವ್ಯಾಯಾಮ(Exercise) ಮಾಡುವಾಗ ಕಾಲುಗಳಲ್ಲಿ ನೋವನ್ನು ಅನುಭವಿಸಬಹುದು. ಆದರೆ ನಿಯಮಿತವಾಗಿ ಡಕ್ ವಾಕ್ ಅಭ್ಯಾಸ ಮಾಡಿದರೆ, ಅದು ನಿಮ್ಮ ಪಾದಗಳ ಸ್ನಾಯುಗಳನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ತ್ರಾಣವೂ ಹೆಚ್ಚಾಗುತ್ತದೆ.
ಆರಂಭದಲ್ಲಿ ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಡಕ್ ವಾಕ್ ಮಾಡಬೇಕು, ಆದರೆ ಕ್ರಮೇಣ ನೀವು ಸೆಟ್ ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಮತ್ತು ಸೆಟ್ ಗಳ(Set) ನಡುವೆ ಕೆಲವು ಕ್ಷಣಗಳ ಕಾಲ ವಿಶ್ರಾಂತಿ ಪಡೆಯಬೇಕು.
ಡಕ್ ವಾಕ್ ವ್ಯಾಯಾಮದ ಪ್ರಯೋಜನಗಳು ಹಲವಾರಿವೆ…. ಅವುಗಳೆಂದರೆ-
• ಈ ವ್ಯಾಯಾಮವನ್ನು ನಿತಂಬ ಮತ್ತು ತೊಡೆಗಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಇದನ್ನು ನಿಯಮಿತವಾಗಿ ಅಭ್ಯಾಸ ಮಾಡೋದ್ರಿಂದ, ತೊಡೆಗಳ ಹೆಚ್ಚುವರಿ ಕೊಬ್ಬು(Fat) ಕಡಿಮೆಯಾಗುತ್ತದೆ ಮತ್ತು ಕಾಲುಗಳು ಹೆಚ್ಚು ಟೋನ್ ಆಗಿ ಕಾಣುತ್ತವೆ.
• ಡಕ್ ವಾಕ್ ಎಕ್ಸೈಸ್ ಕಾಲುಗಳೊಂದಿಗೆ ಕಿಬ್ಬೊಟ್ಟೆಯ ಭಾಗದ ಸ್ನಾಯುಗಳ ಮೇಲೂ ಕೆಲಸ ಮಾಡುತ್ತದೆ. ಈ ಕಾರಣದಿಂದಾಗಿ ಇದು ಹೊಟ್ಟೆಯನ್ನು(STomach) ಒಳಗೆ ತರಲು ಸಹಾಯ ಮಾಡುತ್ತದೆ.
• ಇದು ನಿಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಪಾದಗಳಿಗೆ(Feet) ಹೆಚ್ಚುವರಿ ಶಕ್ತಿ ನೀಡುತ್ತದೆ.
• ದೇಹದ ಸಮತೋಲನಕ್ಕೆ ಇದು ಸಾಕಷ್ಟು ಒಳ್ಳೆಯದು ಎಂದು ಸಹ ಪರಿಗಣಿಸಲಾಗುತ್ತದೆ, ಏಕೆಂದರೆ ವ್ಯಕ್ತಿಯು ಪದೇ ಪದೇ ಮೇಲೆ ಡಕ್ ವಾಕ್ ಮಾಡುವಾಗ ತನ್ನನ್ನು ಸಮತೋಲನಗೊಳಿಸಿಕೊಳ್ಳುವ ಕಲೆಯನ್ನು ಕಲಿಯುತ್ತಾನೆ.
• ಈ ವ್ಯಾಯಾಮದ ವಿಶೇಷವೆಂದರೆ ಇದು ಕಾರ್ಡಿಯೋ(Cardio) ವ್ಯಾಯಾಮ ಮತ್ತು ಶಕ್ತಿಯ ವ್ಯಾಯಾಮ ಎರಡೂ ಆಗಿದೆ. ಈ ರೀತಿಯಾಗಿ, ಡಕ್ ವಾಕ್ ಸರಿಯಾದ ರೀತಿಯಲ್ಲಿ ಮಾಡಿದ್ರೆ, ಅದು ನಿಮ್ಮ ತಾಲೀಮು ಗುರಿಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುತ್ತದೆ.
• ಇದು ನಿಮ್ಮ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ, ಇದು ನಿಮ್ಮ ಪಾದಗಳಿಗೆ ಹೆಚ್ಚುವರಿ ಶಕ್ತಿ(Power) ನೀಡುತ್ತದೆ.