Asianet Suvarna News Asianet Suvarna News

ರಿಲ್ಯಾಕ್ಸ್ ಆಗೋಕೆ ಹೀಗ್ ಮಾಡಿ, ಆರೋಗ್ಯಕ್ಕೂ ಒಳ್ಳೇದು ನೋಡಿ!

ಅನೇಕರಿಗೆ ರಾತ್ರಿ ಏನ್ ಮಾಡಿದ್ರೂ ನಿದ್ರೆ ಬರೋದಿಲ್ಲ. ಅತ್ತಿಂದಿತ್ತ ಹೊರಳಿ ಸುತ್ತಾಗುತ್ತೆ. ಅಂತವರು ಪಾದ ತೊಳೆದು ಮಲಗಿ ನೋಡಿ. ಪ್ರತಿ ದಿನ ಕಾಲು ಸ್ವಚ್ಛಗೊಳಿಸಿ ಮಲಗಿದ್ರೆ ನಿದ್ರೆ ಸದ್ದಿಲ್ಲದೆ ಬಂದಿರುತ್ತೆ.
 

Health Tips For The Foot Care that makes you feel relaxed
Author
Bangalore, First Published Jul 7, 2022, 4:44 PM IST

ದಿನ ಪೂರ್ತಿ ಕೆಲಸ ಮಾಡಿದ್ರೆ ದೇಹ (Body) ದಣಿಯುತ್ತದೆ ನಿಜ. ಆದ್ರೆ ದಣಿದ ದೇಹಕ್ಕೆ ನಿದ್ರೆ (Sleep) ಬರುವುದು ಕಷ್ಟ. ಅನೇಕರು ನಿದ್ರಾಹೀನತೆಯಿಂದ ಬಳಲುತ್ತಾರೆ. ದೇಹ ದಣಿದಿದ್ದರೂ ಅವರಿಗೆ ನಿದ್ರೆ ಸರಿಯಾಗಿ ಬರುವುದಿಲ್ಲ. ರಾತ್ರಿ ನಿದ್ರೆ ಬಂದಿಲ್ಲವೆಂದ್ರೆ ಮರುದಿನ ಮತ್ತೆ ಕೆಲಸ ಮಾಡಲು ಸಾಧ್ಯವಿಲ್ಲ. ನಿದ್ರೆ ಬರಬೇಕೆನ್ನುವ ಕಾರಣಕ್ಕೆ ಜನರು ನಾನಾ ಪ್ರಯತ್ನ ನಡೆಸ್ತಾರೆ. ಕೆಲವರು ನಿದ್ರೆ ಮಾತ್ರೆ ತೆಗೆದುಕೊಳ್ತಾರೆ.  ರಾತ್ರಿ ಸುಖ ನಿದ್ರೆ ಬರಬೇಕೆಂದ್ರೆ ಸುಲಭ ಉಪಾಯವಿದೆ. ರಾತ್ರಿ (Night) ಮಲಗುವ ಮೊದಲು ಪಾದ (Foot) ಗಳನ್ನು ತೊಳೆಯುವುದ್ರಿಂದ ಆಯಾಸ ಕಡಿಮೆಯಾಗುತ್ತದೆ. ಚೆನ್ನಾಗಿ ನಿದ್ರೆ ಬರುತ್ತದೆ. ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ತೊಳೆದರೆ  ಆರೋಗ್ಯದಲ್ಲಿ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ರಾತ್ರಿ ಮಲಗುವ ಮೊದಲು ಕಾಲು ತೊಳೆದ್ರೆ ಏನೆಲ್ಲ ಪ್ರಯೋಜನವಿದೆ ಎಂಬುದನ್ನು ನಾವಿಂದು ಹೇಳ್ತೇವೆ.

ರಾತ್ರಿ ಕಾಲು ತೊಳೆದು ಮಲಗಿದ್ರೆ ಏನು ಪ್ರಯೋಜನ ಗೊತ್ತಾ? : 
ಶಕ್ತಿ ವೃದ್ಧಿ :
ಕಾಲುಗಳನ್ನು ತೊಳೆದು ಮಲಗಿದರೆ ಉತ್ತಮ ನಿದ್ರೆ ಬರುತ್ತದೆ. ಇದ್ರಿಂದ ವ್ಯಕ್ತಿಯು ತಾಜಾತನವನ್ನು ಅನುಭವಿಸುತ್ತಾನೆ. ನಿದ್ರೆ ಸರಿಯಾಗಿ ಆದ್ರೆ ಮೆದುಳು ಶಾಂತವಾಗುತ್ತದೆ. ಜೊತೆಗೆ ದೇಹಕ್ಕೆ ಶಕ್ತಿಯೂ ಲಭ್ಯವಾಗುತ್ತದೆ. ಇದರಿಂದಾಗಿ ಮರುದಿನ ನೀವು ಮತ್ತಷ್ಟು ಉತ್ಸಾಹದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ.

ಲೇಟಾಯ್ತು ಅಂತ ಬ್ರೇಕ್‌ಫಾಸ್ಟ್ ಮಿಸ್ ಮಾಡ್ತೀರಾ ? ಮೈಗ್ರೇನ್ ಬರುತ್ತೆ ಹುಷಾರ್‌ !

ಸ್ನಾಯುಗಳಿಗೆ ಆರಾಮ : ನಾವು ನಮ್ಮ ಇಡೀ ದೇಹದ ಭಾರವನ್ನು ನಮ್ಮ ಕಾಲುಗಳ ಮೇಲೆ ಹಾಕುತ್ತೇವೆ. ಇದರಿಂದಾಗಿ ಪಾದಗಳಲ್ಲಿ ಬಿಗಿತ ಅಥವಾ ಸೆಳೆತದಂತಹ ಸಮಸ್ಯೆಗಳು ಬರಬಹುದು. ರಾತ್ರಿ ಮಲಗುವ ಮುನ್ನ ನಮ್ಮ ಪಾದಗಳನ್ನು ತೊಳೆದರೆ ಕಾಲುಗಳ ಸ್ನಾಯುಗಳ ಜೊತೆಗೆ ಕೀಲು ನೋವಿನಿಂದ ಮುಕ್ತಿ ಪಡೆಯಬಹುದು.

ಪಾದದ ವಾಸನೆಯಿಂದ ಮುಕ್ತಿ :  ದಿನವಿಡೀ ಪಾದಗಳಿಗೆ ಸಾಕ್ಸ್ ಧರಿಸುವುದರಿಂದ ಮತ್ತು ಬಿಗಿಯಾದ ಬೂಟುಗಳನ್ನು ಧರಿಸುವುದರಿಂದ ಪಾದಗಳು ಬೆವರಲು ಪ್ರಾರಂಭಿಸುತ್ತವೆ. ಇದರಿಂದಾಗಿ ಪಾದದಲ್ಲಿ ವಾಸನೆ ಬರುತ್ತದೆ. ರಾತ್ರಿ ಮಲಗುವ ಮೊದಲು ನಿಮ್ಮ ಪಾದಗಳನ್ನು ತೊಳೆಯಬೇಕು. ಇದರಿಂದ ನಿಮ್ಮ ಪಾದ ಸ್ವಚ್ಛಗೊಳ್ಳುತ್ತದೆ. ಹಾಗಾಗಿ ಪಾದದಿಂದ ಬರುವ ವಾಸನೆ ಕಡಿಮೆಯಾಗುತ್ತದೆ.

ಹೆಚ್ಚು ಸ್ಕ್ರೀನ್ ನೋಡೋದ್ರಿಂದ ಕಣ್ಣಿಗೆ ಕನ್ನಡಕ ಹಾಕಬೇಕಾಗತ್ತಾ?

ದೇಹದ ಉಷ್ಣತೆ ನಿಯಂತ್ರಣಕ್ಕೆ ಇದು ಒಳ್ಳೆಯದು : ನಾವು ನಮ್ಮ ಕಾಲುಗಳನ್ನು ನೆಲದ ಮೇಲಿಟ್ಟಿರುತ್ತೇವೆ. ಇದ್ರಿಂದ ಅನೇಕರ ಪಾದದ ಉಷ್ಣತೆ ಹೆಚ್ಚಾಗುತ್ತದೆ. ಪಾದಗಳನ್ನು ಸರಿಯಾಗಿ ತೊಳೆದುಕೊಂಡ್ರೆ  ಪಾದಗಳು ತಂಪಾಗಿರುತ್ತದೆ ಮತ್ತು  ದೇಹದ ಉಷ್ಣತೆಯು ಸಹ ಸಾಮಾನ್ಯವಾಗುತ್ತದೆ. ಇದರಿಂದ ನೀವು ಉತ್ತಮ ನಿದ್ರೆಯನ್ನು ಸಹ ಪಡೆಯಬಹುದು. 

ಕಾಲುಗಳ ಚರ್ಮ (Foot Skin) ಮೃದುವಾಗುತ್ತದೆ : ದಿನವಿಡೀ ಓಡಾಡುವುದರಿಂದ ಪಾದದ ಮೇಲೆ ಧೂಳು ಮತ್ತು ಕೊಳೆ ಇರುತ್ತದೆ. ಇದರಿಂದ ನಮ್ಮ ಪಾದದ ಚರ್ಮ ಒಣಗಬಹುದು. ಪಾದಗಳು ಒಡೆಯಲು ಶುರುವಾಗುತ್ತವೆ. ಅನೇಕರ ಪಾದದ ಚರ್ಮ ಬಿರುಕುಬಿಟ್ಟು ಉರಿಯ ಅನುಭವವಾಗುತ್ತದೆ. ರಾತ್ರಿ ಮಲಗುವ ಮೊದಲು ಪಾದಗಳನ್ನು ಸ್ವಚ್ಛವಾಗಿ ತೊಳೆದುಕೊಂಡರೆ ಅದರಲ್ಲಿರುವ ಕೊಳೆ ಹೋಗುವುದಲ್ಲದೆ ಪಾದಗಳು ಮೃದುವಾಗುತ್ತವೆ.

ಕಾಲು ತೊಳೆಯುವುದು ಹೇಗೆ ? : ರಾತ್ರಿ ಕಾಲುಗಳನ್ನು ಸ್ವಚ್ಛಗೊಳಿಸಿ ಮಲಗಿದ್ರೆ ಏನೆಲ್ಲ ಪ್ರಯೋಜನ ಎಂಬುದು ತಿಳಿಯಿತು. ಹೇಗೆ ಪಾದ ತೊಳೆಯಬೇಕೆಂಬುದನ್ನು ಈಗ ಹೇಳ್ತೇವೆ.
ಪಾದಗಳನ್ನು ತೊಳೆಯಲು, ನೀವು ಉಗುರು ಬೆಚ್ಚಗಿನ ನೀರನ್ನು ಬಳಸಬಹುದು ಅಥವಾ ನಿಮ್ಮ ಪಾದಗಳನ್ನು ಸಾಮಾನ್ಯ ನೀರಿನಿಂದ ತೊಳೆಯಬಹುದು. ನಿಮ್ಮ ಪಾದಗಳನ್ನು ಸ್ವಲ್ಪ ಸಮಯದವರೆಗೆ ನೀರಿನಲ್ಲಿ ಮುಳುಗಿಸಿ. ಪಾದಗಳನ್ನು ನೀರಿನಿಂದ ತೆಗೆದ ನಂತ್ರ ಟವೆಲ್‌ನಿಂದ ಚೆನ್ನಾಗಿ ಒರೆಸಿ ಮತ್ತು ಅದರ ನಂತರ ಪಾದಗಳ ತೇವಾಂಶವನ್ನು ಕಾಪಾಡಿಕೊಳ್ಳಲು ಪಾದಗಳಿಗೆ ಸ್ವಲ್ಪ ಎಣ್ಣೆ ಅಥವಾ ಕೆನೆ ಹಚ್ಚಿ. ಹೀಗೆ ಮಾಡುವುದರಿಂದ ನಿಮ್ಮ ಪಾದಗಳಿಗೆ ಸಾಕಷ್ಟು ರಿಲೀಫ್ ಸಿಗುತ್ತದೆ.
 

Follow Us:
Download App:
  • android
  • ios