ಕುತ್ತಿಗೆ ಬಲಭಾಗದಲ್ಲಿ ತುಂಬಾ ನೋವಿದ್ಯಾ? ಇಗ್ನೋರ್ ಮಾಡ್ಬೇಡಿ
ಅನೇಕ ಜನರು ಕುತ್ತಿಗೆಯ ಬಲಭಾಗದಲ್ಲಿ ನೋವಿನ ಬಗ್ಗೆ ದೂರುತ್ತಿರುತ್ತಾರೆ. ಕುತ್ತಿಗೆಯ ನೋವಿನ (Neck Pain) ಹಿಂದೆ ಅನೇಕ ಕಾರಣಗಳಿವೆ. ಕೆಲವೊಮ್ಮೆ ಈ ಕಾರಣವು ಸಾಕಷ್ಟು ಚಿಕ್ಕದಾಗಿರುತ್ತದೆ, ಆದರೆ ಅನೇಕ ಬಾರಿ ಇದು ನೀವು ಯೋಚನೆ ಮಾಡದೇ ಇರುವ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು. ಹಾಗಾಗಿ ನೀವು ಎಚ್ಚರದಿಂದಿರಬೇಕು. ಇಲ್ಲಿ ನಾವು ಕುತ್ತಿಗೆ ನೋವಿಗೆ ಕಾರಣ ಮತ್ತು ಅದನ್ನು ಗುಣಪಡಿಸುವ ಕ್ರಮಗಳ ಬಗ್ಗೆ ನಿಮಗೆ ಹೇಳಲಿದ್ದೇವೆ.
ಕುತ್ತಿಗೆಯು ದೇಹದ ಪ್ರಮುಖ ಭಾಗವಾಗಿದ್ದು, ಇದರಲ್ಲಿ ಬೆನ್ನು ಮೂಳೆಯ (Back Bone) ಮೂಳೆಗಳು, ಸ್ನಾಯುಗಳು ಮತ್ತು ವಿವಿಧ ಅಂಗಾಂಶಗಳು ಸೇರಿವೆ. ದೇಹದ ಇತರ ಕೆಲವು ಪ್ರಮುಖ ಭಾಗಗಳನ್ನು ನಮ್ಮ ಡ್ರೆಸ್ ಮೂಲಕ ಮುಚ್ಚುತ್ತೇವೆ, ಆದರೆ ಕುತ್ತಿಗೆಯನ್ನು ಮುಚ್ಚೋದಿಲ್ಲ. ಇದರಿಂದಾಗಿ ಗಾಯ ಹೆಚ್ಚಾಗುವ ಅಪಾಯ ಇದೆ.
ಸಾಮಾನ್ಯವಾಗಿ, ಜನರು ಕುತ್ತಿಗೆ ನೋವಿನಿಂದ ಪರಿಹಾರ ಪಡೆಯಲು ಔಷಧಿಗಳು ಅಥವಾ ಮನೆಮದ್ದುಗಳನ್ನು ಟ್ರೈ ಮಾಡ್ತಾರೆ. ಆದರೂ ಕೆಲವೊಮ್ಮೆ ನಾವು ಕೇರ್ ಲೆಸ್ ಮಾಡುವ ಈ ಸಣ್ಣ ಕುತ್ತಿಗೆ ನೋವು ಅಪಾಯಕಾರಿ ರೋಗದ ಸಂಕೇತವೂ ಆಗಿರಬಹುದು. ಕುತ್ತಿಗೆಯಲ್ಲಿನ ಈ ನೋವು ಯಾವ ರೋಗಗಳ ಸಂಕೇತವಾಗಿರಬಹುದು ಮತ್ತು ನೀವು ವೈದ್ಯರನ್ನು ಯಾವಾಗ ಭೇಟಿಯಾಗಬೇಕು ಎಂದು ತಿಳಿಯೋಣ.
ಕುತ್ತಿಗೆಯಲ್ಲಿ ನೋವು ಏಕೆ ಉಂಟಾಗುತ್ತದೆ?
ಅನೇಕ ಬಾರಿ, ಬೆಳಿಗ್ಗೆ ಎದ್ದ ನಂತರ, ಕುತ್ತಿಗೆಯಲ್ಲಿ ನೋವು ಅಥವಾ ಬಿಗಿತ ಉಂಟಾಗುತ್ತದೆ. ಎತ್ತರದ ದಿಂಬಿನ ಮೇಲೆ ತಲೆ ಇಟ್ಟಾಗ, ಗಟ್ಟಿಯಾದ ಹಾಸಿಗೆ ಮೇಲೆ ಮಲಗೋದ್ರಿಂದ ಅಥವಾ ರಾತ್ರಿಯಲ್ಲಿ ಮಲಗುವಾಗ ಸರಿಯಾದ ಭಂಗಿಯಲ್ಲಿ ಮಲಗದೇ ಇದ್ದರೆ ಆವಾಗ ಕುತ್ತಿಗೆ ನೋವಾಗುತ್ತೆ. ಇದಲ್ಲದೆ, ನೀವು ಕಂಪ್ಯೂಟರ್ ಅಥವಾ ಲ್ಯಾಪ್‌ಟ್ಯಾಪಿನಲ್ಲಿ (Laptop) ಒಂದೇ ಭಂಗಿಯಲ್ಲಿ ಗಂಟೆಗಟ್ಟಲೆ ಕುಳಿತಾಗ, ಅದು ನಿಮ್ಮ ಕುತ್ತಿಗೆ ನೋವಿಗೆ ಕಾರಣವಾಗಬಹುದು.
ಒತ್ತಡ ಮತ್ತು ಆತಂಕ
ಹೆಚ್ಚು ಒತ್ತಡದಿಂದಾಗಿ (Stress), ಸ್ನಾಯುಗಳು ಗಟ್ಟಿಯಾಗುತ್ತವೆ. ಸಾಮಾನ್ಯವಾಗಿ ಜನರು ಒತ್ತಡದಲ್ಲಿದ್ದಾಗ ಕುತ್ತಿಗೆ ಮತ್ತು ಬೆನ್ನಿನಲ್ಲಿ ನೋವು ಅನುಭವಿಸಲು ಪ್ರಾರಂಭಿಸುತ್ತಾರೆ. ಆದುದರಿಂದ ಒತ್ತಡದ ಪರಿಸ್ಥಿತಿಗಳನ್ನು ನಿಯಂತ್ರಿಸೋದು ಉತ್ತಮ.
ಕಾರಣವಿಲ್ಲದೆ ನೆಕ್ ಪೆನ್
ಅನೇಕ ಬಾರಿ ಕುತ್ತಿಗೆ ನೋವಿಗೆ ನಿಖರ ಕಾರಣ ತಿಳಿದಿರೋದಿಲ್ಲ. ಯಾವುದೇ ಕಾರಣವಿಲ್ಲದೆ ಕುತ್ತಿಗೆಯಲ್ಲಿ ನೋವು ಉಂಟಾದಾಗ, ನಿಮ್ಮ ಸ್ನಾಯು ಅಂಗಾಂಶಗಳಲ್ಲಿ ಒಂದು ಮುರಿದಿದೆ ಎಂದರ್ಥ. ಕುತ್ತಿಗೆಯಲ್ಲಿ ಈ ರೀತಿಯ ನೋವು ಸಾಮಾನ್ಯ.
ಟೊರ್ಟಿಕೊಲಿಸ್
ಇದು ಕುತ್ತಿಗೆಯ ಸ್ನಾಯುಗಳಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಇದರಿಂದಾಗಿ ತಲೆ ಒಂದು ಬದಿಗೆ ಭಾಗುತ್ತದೆ. ಸ್ನಾಯುಗಳಿಗೆ ಹಾನಿ ಅಥವಾ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುವುದರಿಂದ ಈ ಸಮಸ್ಯೆ ಎದುರಿಸಬೇಕಾಗುತ್ತದೆ. ಟಾರ್ಟಿಕೊಲಿಸ್ ಎಂಬುದು ನೀವು ಯಾವಾಗ ಬೇಕಾದರೂ ಹೊಂದಬಹುದಾದ ಸಮಸ್ಯೆ.
ಟೋರ್ಟಿಕೊಲಿಸಿಸ್ ಇದ್ದಾಗ, ಮಲಗುವಾಗ ವ್ಯಕ್ತಿಯ ಕುತ್ತಿಗೆ ಸರಿಯಾಗಿಯೇ ಇರುತ್ತೆ. ಆದರೆ ನಿದ್ರೆಯಿಂದ ಎಚ್ಚರಗೊಂಡಾಗ, ಕುತ್ತಿಗೆಯನ್ನು ಚಲಿಸಲು ಸಾಧ್ಯವಿರೋದಿಲ್ಲ. ಅನೇಕ ಸಂದರ್ಭಗಳಲ್ಲಿ ಈ ನೋವು ಕೆಲವೇ ದಿನಗಳಲ್ಲಿ ತನ್ನಷ್ಟಕ್ಕೆ ತಾನೇ ವಾಸಿಯಾಗುತ್ತದೆ. ಆದರೆ ಕೆಲವು ಸಂದರ್ಭಗಳಲ್ಲಿ ಟೊರ್ಟಿಕೊಲಿಸ್ ಗಂಭೀರ ಕಾಯಿಲೆಯ ಲಕ್ಷಣವಾಗಿರಬಹುದು. ಟೊರ್ಟಿಕೋಲಿಸ್ ನಿಂದಾಗಿ, ಗೆಡ್ಡೆಗಳು, ಸೋಂಕು ಸಹ ಉಂಟಾಗುವ ಸಾಧ್ಯತೆ ಹೆಚ್ಚು.
ಬ್ರಾಚಿಯಲ್ ಪ್ಲೆಕ್ಸಸ್
ಬ್ರಾಚಿಯಲ್ ಪ್ಲೆಕ್ಸಸ್ ಎಂಬುದು ನರಗಳ ಜಾಲವಾಗಿದ್ದು, ಇದು ಬೆನ್ನುಹುರಿಯಿಂದ ಭುಜಗಳು, ತೋಳುಗಳು ಮತ್ತು ಕೈಗಳಿಗೆ ಸಂಕೇತ ಕಳುಹಿಸುತ್ತದೆ. ಕುತ್ತಿಗೆಯಲ್ಲಿನ ಗಾಯದಿಂದಾಗಿ, ಅದು ಬ್ರಾಚಿಯಲ್ ಪ್ಲೆಕ್ಸಸ್ ಮೇಲೆ ಪರಿಣಾಮ ಬೀರಿದಾಗ, ಅದು ಕೈಗಳಲ್ಲಿ ನೋವನ್ನು ಉಂಟು ಮಾಡುತ್ತದೆ. ಬ್ರಾಚಿಯಲ್ ಪ್ಲೆಕ್ಸಸ್‌ನಲ್ಲಿನ ಗಾಯಗಳಿಗೆ ಅತ್ಯಂತ ಸಾಮಾನ್ಯ ಕಾರಣವೆಂದರೆ ಕಾರು ಅಪಘಾತ (Accident) ಅಥವಾ ಕ್ರೀಡೆಯ ಸಮಯದಲ್ಲಿನ ಗಾಯ.
ಕುತ್ತಿಗೆಯ ಬಲಭಾಗದಲ್ಲಿ ನೋವಿಗೆ ಇತರ ಕೆಲವು ಕಾರಣಗಳು ಯಾವುವು ತಿಳಿಯಿರಿ
- ರುಮಟಾಯ್ಡ್ ಆರ್ಥ್ರೈಟಿಸ್
- ಕ್ಯಾನ್ಸರ್ (cancer)
- ಗಂಭೀರ ಗಾಯ
- ನರ ಮತ್ತು ಬೆನ್ನುಹುರಿಯ ಹಾನಿ
- ಸೋಂಕು
- ಮೂಳೆ ಅಸ್ವಸ್ಥತೆ
ಕುತ್ತಿಗೆ ನೋವಿಗೆ ಚಿಕಿತ್ಸೆ
ನಿಮ್ಮ ಕುತ್ತಿಗೆ ನೋವು ಸಣ್ಣದಾಗಿದ್ದರೆ ನೀವು ಕೆಲವು ಮನೆ ಮದ್ದುಗಳ (Home Remedies) ಸಹಾಯದಿಂದ ಅದನ್ನು ಗುಣ ಪಡಿಸಬಹುದು. ನೀವು ಪೇನ್ ಕಿಲ್ಲರ್ (Pain Killer) ಕೂಡ ತೆಗೆದುಕೊಳ್ಳಬಹುದು. ಅಲ್ಲದೇ ಹೀಟ್ ಪ್ಯಾಡ್ (Heat Pad) ಕೂಡ ಬಳಸಬಹುದು. ಕುತ್ತಿಗೆ ಮಸಾಜ್, ಸ್ಟ್ರೆಚಿಂಗ್, ಕೂಲಿಂಗ್ ಪ್ಯಾಡ್ (Cooling Pad) ಮೂಲಕವೂ ನೋವು ನಿವಾರಣೆ ಮಾಡಬಹುದು. ಅಲ್ಲದೆ, ಮಲಗುವಾಗ, ಕುಳಿತುಕೊಳ್ಳುವಾಗ ಮತ್ತು ನಡೆಯುವಾಗ ದೇಹದ ಭಂಗಿಯನ್ನು ಚೆನ್ನಾಗಿರಿಸಿಕೊಳ್ಳಿ. ಕುತ್ತಿಗೆಯನ್ನು ಬಲಪಡಿಸುವ ವ್ಯಾಯಾಮ ಮಾಡಿ.
ವೈದ್ಯರನ್ನು ಯಾವಾಗ ನೋಡಬೇಕು?
ನಿಮ್ಮ ಕುತ್ತಿಗೆಯಲ್ಲಿ ಕಡಿಮೆ ನೋವು ಇದ್ದರೆ, ಅದಕ್ಕಾಗಿ ವೈದ್ಯರನ್ನು ಭೇಟಿ ಮಾಡುವ ಅಗತ್ಯವಿಲ್ಲ. ಪೇನ್ ಕಿಲ್ಲರ್ ಕುತ್ತಿಗೆ ನೋವನ್ನು ಸಹ ಕಡಿಮೆ ಮಾಡಬಹುದು. ಕುತ್ತಿಗೆಗೆ ಸಂಬಂಧಿಸಿದ ಕೆಲವು ವ್ಯಾಯಾಮಗಳು ಸಹ ನೋವಿಗೆ ಸಾಕಷ್ಟು ಪರಿಹಾರ ನೀಡಬಹುದು. ಆದರೆ ನೋವು ತುಂಬಾ ಹೆಚ್ಚಾಗಿದ್ದರೆ ಮತ್ತು ನೀವು ಇತರ ಕೆಲವು ರೋಗಲಕ್ಷಣಗಳನ್ನು ಸಹ ಹೊಂದಿದ್ದರೆ, ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.