MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • Mini-stroke: ರಾತ್ರಿಯಿಡೀ ಮೊಬೈಲ್ ನೋಡ್ಕೊಂಡು ಎದ್ದಿರ್ತಿರಾ? ಸಾವಿನ ಅಪಾಯ ಹೆಚ್ಚು!

Mini-stroke: ರಾತ್ರಿಯಿಡೀ ಮೊಬೈಲ್ ನೋಡ್ಕೊಂಡು ಎದ್ದಿರ್ತಿರಾ? ಸಾವಿನ ಅಪಾಯ ಹೆಚ್ಚು!

ತಡರಾತ್ರಿ ಮಲಗುವ ಅಭ್ಯಾಸವಿದ್ರೆ ಇಂದೇ ಬಿಟ್ಟುಬಿಡಿ. ನಿದ್ರಾಹೀನತೆ ಮಿನಿ-ಸ್ಟ್ರೋಕ್‌ಗೆ ಕಾರಣವಾಗಬಹುದು ಅಂತಾ ತಜ್ಞರು ಎಚ್ಚರಿಕೆ ನೀಡಿದ್ದಾರೆ. ನಿದ್ರಾಹೀನತೆಯಿಂದ ರಕ್ತದೊತ್ತಡ, ಉರಿಯೂತ, ಹೃದಯ ಸಂಬಂಧಿ ಕಾಯಿಲೆ, ಮೆದುಳಿನ ಸಮಸ್ಯೆ ಹಠಾತ್ ಮಾತು ನಿಲ್ಲುವುದು, ದೃಷ್ಠಿ, ಕೈ ಕಾಲಿನ ಸಮಸ್ಯೆಗೆ ಕಾರಣ.. 

3 Min read
Author : Ravi Janekal
Published : Jul 01 2026, 04:12 PM IST
Share this Photo Gallery
  • FB
  • TW
  • Linkdin
  • Whatsapp
14
ನಿದ್ರಾಹೀನತೆಯಿಂದ ಮಿನಿ ಸ್ಟ್ರೋಕ್ ಅಪಾಯ ಹೆಚ್ಚಿಸುತ್ತೆ
Image Credit : Asianet News

ನಿದ್ರಾಹೀನತೆಯಿಂದ ಮಿನಿ-ಸ್ಟ್ರೋಕ್ ಅಪಾಯ ಹೆಚ್ಚಿಸುತ್ತೆ

ಹಿಂದಿನಕಾಲ ಅಂದ್ರೆ ನೂರಾರು ವರ್ಷ ಏನೂ ಅಲ್ಲ, ಒಂದಿಪ್ಪತ್ತು ವರ್ಷಗಳ ಹಿಂದೆ ಜನರ ಬದುಕು, ಜೀವನಶೈಲಿ ಈಗ ಇದ್ದಂತೆ ಇರಲಿಲ್ಲ. ಬೆಳಗಿನ ಜಾವ ಎದ್ದೇಳೋದು, ಸರಿಯಾದ ಸಮಯಕ್ಕೆ ಉಣ್ಣೋದು, ಹಗಲಿನ ವೇಳೆ ದುಡಿಯೋದು ರಾತ್ರಿಯಾಗುತ್ತಿದ್ದಂತೆ ನಿಶ್ಚಿಂತೆಯಿಂದ ಮಲಗೋದು.. ಅಂದಿನ ಪ್ರತಿಯೊಬ್ಬರ ಜೀವನಚಕ್ರವಾಗಿತ್ತು. ಯಾಕೆಂದ್ರೆ ಆಗ ಯಾರ ಬಳಿಯೂ ಮೊಬೈಲೇ ಇರಲಿಲ್ಲವಲ್ಲ? ಪ್ರಪಂಚ ಚಿಕ್ಕದಾಗಿತ್ತು. ಆಗೆಲ್ಲ ಯಾವ್ಯಾವ ಟೈಂಗೆ ಮಲಗಬೇಕು, ತಿನ್ನಬೇಕು ಅಂತಾ ಇದಕ್ಕೆಲ್ಲ ಯಾವ ವೈದ್ಯರ ಬಳಿಯೂ ಸಲಹೆ ಕೇಳಬೇಕಿರಲಿಲ್ಲ. ಹಳ್ಳಿಗಳಲ್ಲಿ ಸರಿಯಾಗಿ ರಾತ್ರಿ ಎಂಟು ಎಂಟೂವರೆಗೆ ಮಲಗಿದ್ರೆ, ನಗರ ಪಟ್ಟಣಗಳಲ್ಲಿ ತುಸು ಹೆಚ್ಚು ಅಬ್ಬಬ್ಬ ಅಂದ್ರೆ ರಾತ್ರಿ ಹತ್ತರವರೆಗೆ ಎದ್ದಿರ್ತಿದ್ರು. ಅದರಾಚೆಗೆ ಎದ್ದೇಳೋಣಂದ್ರೂ ನಿದ್ದೆ ಆವರಿಸಿ ಕುಳಿತಲ್ಲೇ ಮಲಗಿಸಿಬಿಡ್ತಿತ್ತು. ಆದರೆ ಈಗ?

ಆಧುನಿಕ ಯುಗದಲ್ಲಿ ಅದರಲ್ಲೂ ಮೊಬೈಲ್ ಬಂದ ನಂತರ ಜೀವನ ಚಕ್ರವೇ ಬದಲಾಗಿ ಹೋಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
24
ಯುವ ಪೀಳಿಗೆ ಬಗ್ಗೆ ಆತಂಕ
Image Credit : social media

ಯುವ ಪೀಳಿಗೆ ಬಗ್ಗೆ ಆತಂಕ

ಯುವಪೀಳಿಗೆಯನ್ನು ನೆನೆದರೆ ಅವರ ಆರೋಗ್ಯದ ಕುರಿತು ಆತಂಕ ಮೂಡುತ್ತದೆ. ಬೆಳಗ್ಗೆ ಸ್ಕೂಲ್ ಕಾಲೇಜು, ಸ್ವಲ್ಪ ಬ್ರೇಕ್ ಸಿಕ್ಕರೆ ಸಾಕು ಮೊಬೈಲ್‌ನಲ್ಲಿ ಗೇಮಿಂಗ್.. ಮನೆಗೆ ಬಂದು ರಾತ್ರಿ ಊಟದ ಬಳಿಕ ಬೆಡ್‌ಮೇಲೆ ಕುಳಿತು ಮತ್ತೆ ಮೊಬೈಲ್‌ ಹಿಡಿದರೆಂದ್ರೆ ಮಧ್ಯೆರಾತ್ರಿಯಾದ್ರೂ ಮೊಬೈಲ್‌ನಲ್ಲಿ ಚಾಟಿಂಗ್, ಗೇಮಿಂಗ್ ನಲ್ಲಿ ಮುಳುಗಿರ್ತಾರೆ. ಇದು ಯಾವ ಪರಿ ಅಂದ್ರೆ ಮೊಬೈಲ್ ಹಿಡಿದುಕೊಂಡು ಅವರ ಕೈಬೆರಳುಗಳು ಒಂದು ರೀತಿ ವಕ್ರವಾಗಿಬಿಟ್ಟಿರುತ್ತವೆ. ಇನ್ನೂ ವಿಚಿತ್ರ ನೋಡಿ; ಇಂಥ ಮಕ್ಕಳದು ಒಂದು ಕತೆಯಾದ್ರೆ ಪೋಷಕರದ್ದು ಇನ್ನೊಂದು. ದಾರಾವಾಹಿ ಎಲ್ಲ ಮುಗಿಯುವರೆಗೆ ಒಲೆಗೆ ಬೆಂಕಿ ಬೀಳಲ್ಲ. ರಾತ್ರಿ ಹತ್ತಕ್ಕೆ ಅಡುಗೆ, ಹನ್ನೊಂದಕ್ಕೆ ಊಟ, ಹನ್ನೆರಡಕ್ಕೆ ನಿದ್ದೆ! ಹಿಂದೆಲ್ಲ ಹೀಗಿತ್ತಾ? ಸಂಜೆ ಹೊತ್ತುಮುಳುಗುತ್ತಿದ್ದಂತೆ ಒಲೆ ಮಲೆ ಅನ್ನಕ್ಕಿಡುವುದು ಕಡ್ಡಾಯ ಎಂಬಂತಿತ್ತು. ಇದೆಲ್ಲದರ ಪರಿಣಾಮ ಏನಾಗಿದೆ ಅಂದ್ರೆ ಇಂದಿನ ಪೀಳಿಗೆಯವರಿಗೆ ನಿದ್ರಾಹೀನತೆ ಹೆಚ್ಚು. ಇದರಿಂದಾಗಿ ಮಿನಿ-ಸ್ಟ್ರೋಕ್, ತಲೆನೋವು, ದೃಷ್ಟಿದೋಷ.. ಹೀಗೆ ಆರೋಗ್ಯದಲ್ಲಿ ಹಲವು ತೊಂದರೆಗಳು ಕಾಡುತ್ತವೆ.

Related Articles

Related image1
ನಿದ್ರಾಹೀನತೆ, ಮೊಬೈಲ್ ಅಡಿಕ್ಷನ್ ಇವೆಲ್ಲವೂ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣ!
Related image2
ಈ ಬ್ಲಡ್ ಗ್ರೂಪ್‌ನವರಿಗೆ ಸಣ್ಣ ವಯಸ್ಸಿನಲ್ಲೇ ಸ್ಟ್ರೋಕ್ ಅಪಾಯ ಹೆಚ್ಚು! ಸಂಶೋಧನೆಯಲ್ಲಿ ರಿವೀಲ್
34
ನಿದ್ರಾಹೀನತೆಯಿಂದ ಮಿನಿ-ಸ್ಟ್ರೋಕ್ ಬರುತ್ತಾ?
Image Credit : Getty

ನಿದ್ರಾಹೀನತೆಯಿಂದ ಮಿನಿ-ಸ್ಟ್ರೋಕ್ ಬರುತ್ತಾ?

ಹೌದು ವೈದ್ಯರು ಹೇಳುವಂತೆ, ನಿದ್ರಾಹೀನತೆಯೂ ಮಿನಿ-ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ. ಆರೋಗ್ಯವಂತ ಮನುಷ್ಯ ಸರಿಸುಮಾರು ಎಂಟು ತಾಸು ನಿದ್ರಿಸಬೇಕು. ಆದ್ರೆ ಇಂದಿನ ವೇಗದ ಜೀವನ, ಮೊಬೈಲ್ ಯುಗದಲ್ಲಿ ಎಂಟು ತಾಸು ಮಲಗ್ತಾರೆ ಅನ್ನೋದು ಕಷ್ಟವೇ. ಜನರು ಹತ್ತಕ್ಕೆ ಮಲಗಿದ್ರೂ ಹಾಸಿಗೆಯಲ್ಲೇ ಹೊರಳಾಡಿಕೊಂಡು ಮೊಬೈಲ್ ನೋಡಿಕೊಂಡು ಎಚ್ಚರವಾಗಿಯೇ ಇರ್ತಾರೆ. ಕೆಲವರಿಗಂತ ಬೆಳಗಾದದ್ದೇ ಗೊತ್ತಾಗಲ್ಲ. ಬೆಳಗಿನಜಾವಕ್ಕೆ ನಿದ್ದೆಗೆ ಜಾರಿರ್ತಾರೆ. ಈ ರೀತಿ ದಿನ ಅಭ್ಯಾಸವಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಆಯಾಸವನ್ನು ಹೆಚ್ಚಿಸುವುದಲ್ಲದೆ ಮಿನಿ-ಸ್ಟ್ರೋಕ್‌ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಸಹ ಹೆಚ್ಚಿಸುತ್ತದೆ ನರವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಮಿನಿ ಸ್ಟ್ರೋಕ್ ಎಂದರೇನು?

ವೈದ್ಯಕೀಯವಾಗಿ ಇದನ್ನು Transient ischemic attack ಎಂದು ಕರೆಯಲ್ಪಡುವ ಮಿನಿ-ಸ್ಟ್ರೋಕ್, ಮೆದುಳಿನ ಒಂದು ಭಾಗಕ್ಕೆ ರಕ್ತದ ಹರಿವು ತಾತ್ಕಾಲಿಕವಾಗಿ ನಿಲ್ಲಿಸಿಬಿಡುತ್ತೆ. ಆಗ ಮಿನಿಸ್ಟ್ರೋಕ್ ಸಂಭವಿಸುತ್ತೆ. ರೋಗಲಕ್ಷಣಗಳು ಕೆಲವೇ ನಿಮಿಷಗಳಲ್ಲಿ ಕಡಿಮೆಯಾಗಬಹುದು, ಆದರೆ ಅದನ್ನು ಹಗುರವಾಗಿ ಕಂಡರೆ ಮುಂದೆ ಅಪಾಯ ಹೆಚ್ಚಬಹುದು. ಯುಎಸ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಹೆಲ್ತ್ ಪ್ರಕಾರ, ಮಿನಿಸ್ಟ್ರೋಕ್ ಅನುಭವಿಸುವ ಸರಿಸುಮಾರು ಮೂರು ಜನರಲ್ಲಿ ಒಬ್ಬರು ನಂತರ ಪಾರ್ಶ್ವವಾಯುವಿಗೆ ಒಳಗಾಗುತ್ತಾರಂತೆ. ಈ ಪ್ರಕರಣಗಳಲ್ಲಿ ಅರ್ಧದಷ್ಟು ಪ್ರಕರಣಗಳು ಒಂದು ವರ್ಷದೊಳಗೆ ಸಂಭವಿಸುತ್ತವೆ ಎಂಬುದು ಇನ್ನು ಆತಂಕಕಾರಿ ವಿಷಯ!

44
ನಿದ್ರಾಹೀನತೆಯಿಂದ ಈ ಸಮಸ್ಯೆ ಏಕೆ ಬರುತ್ತೆ?
Image Credit : social media

ನಿದ್ರಾಹೀನತೆಯಿಂದ ಈ ಸಮಸ್ಯೆ ಏಕೆ ಬರುತ್ತೆ?

ನಿದ್ರೆ ನರವೈಜ್ಞಾನಿಕ ಮತ್ತು ಹೃದಯ ಸಂಬಂಧಿತ ಸಮಸ್ಯೆಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಡಾ ಚಂದನಾ ಆರ್. ಗೌಡ ಒಂದು ಖಾಸಗಿ ವಾಹಿನಿಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಇದು ದೀರ್ಘಕಾಲದ ನಿದ್ದೆಯ ಕೊರತೆಯಿಂದಾಗಿ ಹಾರ್ಮೋನುಗಳ ಮಟ್ಟ ಹೆಚ್ಚಿಸಲು ಕಾರಣವಾಗುತ್ತದೆ, ಇದು ರಕ್ತದೊತ್ತಡದ ಮೇಲೆ ಪರಿಣಾಮ ಬೀರುತ್ತದೆ, ಉರಿಯೂತವನ್ನು ಹೆಚ್ಚಿಸುತ್ತದೆ ಅಷ್ಟೇ ಅಲ್ಲದೆ ಚಯಾಪಚಯ ಕ್ರಿಯೆಯನ್ನು ದುರ್ಬಲಗೊಳಿಸುತ್ತದೆ ಎಂದು ಅವರು ಹೇಳುತ್ತಾರೆ. ಈ ಎಲ್ಲವುಗಳಿಂದ ಕೊನೆಗೆ ಮಿನಿ-ಸ್ಟ್ರೋಕ್‌ಗಳು ಅನಂತರದ ಸ್ಟ್ರೋಕ್‌ಗಳ ಅಪಾಯವನ್ನು ಹೆಚ್ಚಿಸಬಹುದು.

ನಿದ್ದೆ ಏಕೆ ಮುಖ್ಯ ಎಂದರೆ..

ತಜ್ಞರ ಪ್ರಕಾರ, ಉತ್ತಮ ನಿದ್ರೆ ದೇಹವನ್ನು ವಿಶ್ರಾಂತಿಯಿಂದ ಇಡುತ್ತೆ, ರಕ್ತನಾಳಗಳನ್ನು ಸರಿಪಡಿಸಲು, ರಕ್ತದೊತ್ತಡವನ್ನು ನಿಯಂತ್ರಿಸಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನವೂ ನಿದ್ದೆ ಸರಿಯಾಗಿ ಮಾಡದಿದ್ರೆ ಅಥವಾ ತಡರಾತ್ರಿ ಮಲಗುವುದನ್ನೇ ರೂಡಿಸಿಕೊಂಡಿದ್ರೆ ದೇಹದ ವ್ಯವಸ್ಥೆಗಳು ಪರಿಣಾಮ ಬೀರುತ್ತವೆ. ರಾಷ್ಟ್ರೀಯ ಹೃದಯ, ಶ್ವಾಸಕೋಶ ಮತ್ತು ರಕ್ತ ಸಂಸ್ಥೆಯ ಸಂಶೋಧನೆಯು ದೀರ್ಘಾವಧಿಯ ನಿದ್ರಾಹೀನತೆಯು ಅಧಿಕ ರಕ್ತದೊತ್ತಡ, ಬೊಜ್ಜು, ಮಧುಮೇಹದ ಜೊತೆಗೆ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತೋರಿಸಿದೆ,

ಕೆಲವರು ಸೇಡು ತೀರಿಸಿಕೊಳ್ಳಲು ಮಲಗುವುದಿಲ್ಲ!

ಇತ್ತೀಚಿನ ವರ್ಷಗಳಲ್ಲಿ ಒಂದು ಟ್ರೆಂಡಿಂಗ್ Quote ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. 'ಸೇಡು ತೀರಿಸಿಕೊಳ್ಳೋವರೆಗೆ ನಿದ್ರಿಸಬೇಡ, ಕನಸು ನನಸಾಗುವವರೆಗೆ ನಿದ್ರಿಸಬೇಡ ಅನ್ನೋದು ಈ ರೀತಿ ಸೇಡು, ಕನಸುಗಳ ಬೆನ್ನಟ್ಟಲು ನಿದ್ದೆ ಮಾಡದಿರುವುದು ಅಪಾಯವೇ ಹೆಚ್ಚು. ದೇಹಕ್ಕೆ ವಿಶ್ರಾಂತಿ ಬೇಕಾದಾಗ ಆಕಳಿಕೆ ಬರುತ್ತೆ. ಮಲಗಬೇಕಕು. ಆದ್ರೆ ಉದ್ದೇಶಪೂರ್ವಕವಾಗಿ ಎಚ್ಚರವಿದ್ದು ತಡವಾಗಿ ಮಲಗುವ ಅಭ್ಯಾಸ ಆರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ.

ಮಿನಿಸ್ಟ್ರೋಕ್‌ನ ದೊಡ್ಡ ಸಮಸ್ಯೆ ಎಂದರೆ

ಮಿನಿ-ಸ್ಟ್ರೋಕ್‌ಗಳ ದೊಡ್ಡ ಸಮಸ್ಯೆ ಎಂದರೆ ಅವುಗಳ ಲಕ್ಷಣಗಳನ್ನು ಹೆಚ್ಚಾಗಿ ಕಡೆಗಣಿಸೋದು! ದೇಹದ ಒಂದು ಭಾಗದಲ್ಲಿ ಹಠಾತ್ ದೌರ್ಬಲ್ಯ ಅಥವಾ ಮರಗಟ್ಟುವಿಕೆ, ಮಾತನಾಡಲು ತೊಂದರೆ, ತಲೆತಿರುಗುವಿಕೆ, ದೃಷ್ಟಿ ಮಂದವಾಗುವುದು, ಮುಖದ ಒಂದು ಬದಿ ಜೋತು ಬೀಳುವುದು ಅಥವಾ ಕೆಲವು ನಿಮಿಷಗಳ ಕಾಲ ಕನ್ಫ್ಯೂಸ್‌ನಲ್ಲಿರೋದು ಇವೆಲ್ಲ ಆರಂಭಿಕ ಲಕ್ಷಣಗಳಾಗಿರಬಹುದು. ಅಂತಹ ಯಾವುದೇ ಲಕ್ಷಣಗಳನ್ನು ನಿರ್ಲಕ್ಷಿಸಬಾರದು ಮತ್ತು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಹೇಳುತ್ತಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಆರೋಗ್ಯ
ಜೀವನಶೈಲಿ

Latest Videos
Recommended Stories
Recommended image1
Fatty Liver: ಫ್ಯಾಟಿ ಲಿವರ್ ಸಮಸ್ಯೆಯೇ? ಚಿಂತೆ ಬಿಡಿ, ಈ 6 ಸ್ನ್ಯಾಕ್ಸ್ ಧೈರ್ಯವಾಗಿ ತಿನ್ನಿ!
Recommended image2
ಮಲಗುವ ಮುನ್ನ ಮಾಡುವ ಈ ತಪ್ಪು ನಿಮ್ಮ ನಿದ್ರೆಗೆ ಭಂಗ ತರಬಹುದು, ಎಚ್ಚರ!
Recommended image3
ಮಟನ್ ತಿನ್ನೋವಾಗ ಎಚ್ಚರ ! ರುಚಿಯಾಗಿರುವ ಕೆಲ ಅಂಗ ಜೀವ ತೆಗಿಬಹುದು
Related Stories
Recommended image1
ನಿದ್ರಾಹೀನತೆ, ಮೊಬೈಲ್ ಅಡಿಕ್ಷನ್ ಇವೆಲ್ಲವೂ ಗಂಭೀರ ಕಾಯಿಲೆಯ ಆರಂಭಿಕ ಲಕ್ಷಣ!
Recommended image2
ಈ ಬ್ಲಡ್ ಗ್ರೂಪ್‌ನವರಿಗೆ ಸಣ್ಣ ವಯಸ್ಸಿನಲ್ಲೇ ಸ್ಟ್ರೋಕ್ ಅಪಾಯ ಹೆಚ್ಚು! ಸಂಶೋಧನೆಯಲ್ಲಿ ರಿವೀಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved