ಒಂದು ಸಿಗರೇಟ್ ಪುರುಷರಲ್ಲಿ 17 ನಿಮಿಷ, ಮಹಿಳೆಯರಲ್ಲಿ 22 ನಿಮಿಷ ಆಯಸ್ಸು ಕಡಿಮೆ ಮಾಡುತ್ತೆ!
ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಗೊತ್ತಿದ್ರೂ, ಸಿಗರೇಟ್ ಪ್ಯಾಕ್ ಮೇಲೆ 'ಸ್ಮೋಕಿಂಗ್ ಕಿಲ್ಸ್' ಅಂತ ಬರೆದಿದ್ರೂ ಜನ ಸಿಗರೇಟ್ ಸೇದ್ತಾರೆ. ಸ್ಟೈಲ್ ಗೋಸ್ಕರ ಶುರು ಮಾಡಿ, ವ್ಯಸನಿಗಳಾಗ್ತಾರೆ. ಹೊಸ ಅಧ್ಯಯನದ ಪ್ರಕಾರ, ಧೂಮಪಾನದಿಂದ ಆಯಸ್ಸು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತದೆಯಂತೆ.
ಪುರುಷರು ಒಂದು ಸಿಗರೇಟ್ ಸೇದ್ರೆ 17 ನಿಮಿಷ, ಮಹಿಳೆಯರು 22 ನಿಮಿಷ ಆಯಸ್ಸು ಕಡಿಮೆಯಾಗುತ್ತೆ ಅಂತ ಹೊಸ ಅಧ್ಯಯನ ಹೇಳುತ್ತೆ. ಯೂನಿವರ್ಸಿಟಿ ಕಾಲೇಜ್ ಲಂಡನ್ ನ ಹೆಲ್ತ್ ಅಂಡ್ ಸೋಶಿಯಲ್ ಕೇರ್ ವಿಭಾಗ ಈ ಮಾಹಿತಿ ನೀಡಿದೆ.
ಧೂಮಪಾನಿಗಳು ತಮ್ಮ ಜೀವಿತಾವಧಿಯಲ್ಲಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದುಕೊಳ್ಳುತ್ತಾರೆ. ಒಂದು ಸಿಗರೇಟ್ 20 ನಿಮಿಷ ಆಯಸ್ಸು ಕಡಿಮೆ ಮಾಡುತ್ತೆ. 20 ಸಿಗರೇಟ್ ಇರುವ ಪ್ಯಾಕೆಟ್ 7 ಗಂಟೆ ಆಯಸ್ಸು ಕಡಿಮೆ ಮಾಡುತ್ತದೆ ಎಂದು ಹೇಳಿದೆ.
ಡಾ. ಸಾರಾ ಜಾಕ್ಸನ್ ಹೇಳುವ ಪ್ರಕಾರ, ಧೂಮಪಾನಿಗಳು ಸುಮಾರು ಒಂದು ದಶಕದಷ್ಟು ಜೀವಿತಾವಧಿ ಕಳೆದುಕೊಳ್ಳುತ್ತಾರೆ. ಬೇಗ ಧೂಮಪಾನ ಬಿಟ್ಟಷ್ಟು ಆರೋಗ್ಯವಾಗಿ, ಹೆಚ್ಚು ಕಾಲ ಬದುಕಬಹುದು.
17,100 ಕೋಟಿ ರೂಪಾಯಿ ಡೀಲ್, ಅದಾನಿ ವಿಲ್ಮಾರ್‌ನಿಂದ ಹೊರಬರಲು ನಿರ್ಧರಿಸಿದ ಅದಾನಿ ಗ್ರೂಪ್!
ಹೊಸ ವರ್ಷದ ದಿನ ಧೂಮಪಾನ ಬಿಟ್ಟರೆ ಫೆಬ್ರವರಿ 20 ರ ವೇಳೆಗೆ ಒಂದು ವಾರದಷ್ಟು ಆಯಸ್ಸು ಹೆಚ್ಚಿಸಿಕೊಳ್ಳಬಹುದು. ವರ್ಷದ ಅಂತ್ಯದ ವೇಳೆಗೆ 50 ದಿನಗಳ ಆಯಸ್ಸು ಉಳಿಸಿಕೊಳ್ಳಬಹುದು. ಧೂಮಪಾನಿಗಳಲ್ಲಿ ಹೃದ್ರೋಗ, ಪಾರ್ಶ್ವವಾಯು ಅಪಾಯ ಹೆಚ್ಚು.
'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!