'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!

ಗೌತಮ್‌ ಅದಾನಿ ದೊಡ್ಡ ನಿರ್ಧಾರ ತೆಗೆದುಕೊಂಡಿದ್ದಾರೆ. ಕೊಲಂಬೋ ಪೋರ್ಟ್‌ ಪ್ರಾಜೆಕ್ಟ್‌ಗಾಗಿ ಅಮೆರಿಕದಿಂದ ಕೇಳಿದ್ದ 553 ಮಿಲಿಯನ್‌ ಯುಎಸ್‌ ಡಾಲರ್‌ ಫಂಡಿಂಗ್‌ಅನ್ನು ಅವರು ನಿರಾಕರಿಸಿದ್ದು, ಈ ಪ್ರಾಜೆಕ್ಟ್‌ಅನ್ನು ಸ್ವಂತ ಹಣದಿಂದಲೇ ಮಾಡೋದಾಗಿ ತಿಳಿಸಿದ್ದಾರೆ.

Gautam adani Rejects US Fund For Colombo Port Project san

ಮುಂಬೈ (ಡಿ.11): ಅಮೇರಿಕಾದಲ್ಲಿ ಲಂಚದ ಆರೋಪ ಎದುರಿಸುತ್ತಿರುವ ಗೌತಮ್ ಅದಾನಿ ದೊಡ್ಡ ನಿರ್ಧಾರ ಮಾಡಿದ್ದಾರೆ. ಗೌತಮ್‌ ಅದಾನಿ ಕಂಪನಿಯು ಶ್ರೀಲಂಕಾದಲ್ಲಿನ ತನ್ನ ಕೊಲಂಬೋ ಪೋರ್ಟ್ಸ್‌ ಪ್ರಾಜೆಕ್ಟ್‌ ಯೋಜನೆಗೆ ಅಮೆರಿಕದ ಹಣವನ್ನು ತಿರಸ್ಕಾರ ಮಾಡಿದೆ. ಅಂದಾಜು 553 ಮಿಲಿಯನ್‌ ಮಿಲಿಯನ್‌ ಯುಎಸ್‌ ಡಾಲರ್‌ ಅಂದರೆ 4692 ಕೋಟಿ ರೂಪಾಯಿ ಹಣವನ್ನು ಅದಾನಿ ಕಂಪನಿ ತಿರಸ್ಕಾರ ಮಾಡಿದೆ. ಈ ಬಗ್ಗೆ ಷೇರು ವಿನಿಮಯ ಕೇಂದ್ರಕ್ಕೆ ಅದಾನಿ ಕಂಪನಿ ಮಾಹಿತಿ ನೀಡಿದೆ. ಈ ಯೋಜನೆಯನ್ನು ಪೂರ್ಣಗೊಳಿಸಲು ಯುಎಸ್ ನಿಧಿಯ ಬದಲಿಗೆ ಬೇರೆ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದ್ದಾರೆ. ಅದರರ್ಥ, ಗೌತಮ್‌ ಅದಾನಿ ಈ ದೊಡ್ಡ ಪ್ರಾಜೆಕ್ಟ್‌ಅನ್ನು ತಮ್ಮ ಸ್ವಂತ ಹಣದಿಂದಲೇ ಪೂರ್ಣ ಮಾಡುವ ನಿರ್ಧಾರ ಮಾಡಿದ್ದಾರೆ.

ಕೊಲಂಬೊ ಬಂದರು ಯೋಜನೆ ಎಂದರೇನು?: ಶ್ರೀಲಂಕಾದ ಈ ಕೊಲಂಬೊ ಪೋರ್ಟ್ ಪ್ರಾಜೆಕ್ಟ್ ಅದಾನಿ ಅವರ ಪಾಲಾಗಿದೆ. ಕೊಲಂಬೊ ಬಂದರಿನ ಸಾಮರ್ಥ್ಯವನ್ನು ವಿಸ್ತರಿಸಲು ಈ ಯೋಜನೆಯು 2021 ರಲ್ಲಿ ಪ್ರಾರಂಭವಾಗಿದೆ. ಗೌತಮ್ ಅದಾನಿ ಅವರ ಕಂಪನಿ ಅದಾನಿ ಪೋರ್ಟ್ಸ್ ಮತ್ತು ಶ್ರೀಲಂಕಾದ ಜಾನ್ ಕೀಲ್ಸ್ ಹೋಲ್ಡಿಂಗ್ಸ್ ಜಂಟಿಯಾಗಿ ಇದರ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಈ ಕೊಲಂಬೊ ವೆಸ್ಟ್ ಇಂಟರ್ನ್ಯಾಷನಲ್ ಟರ್ಮಿನಲ್ (CWIT) ಶ್ರೀಲಂಕಾದ ಅತಿದೊಡ್ಡ ಕಂಟೈನರ್ ಟರ್ಮಿನಲ್ ಆಗಿರುತ್ತದೆ. ಈ ಕೆಲಸವನ್ನು ಪೂರ್ಣಗೊಳಿಸಲು, ಅದಾನಿ ಗ್ರೂಪ್ ಕಂಪನಿಯು ಯುಎಸ್ ಧನಸಹಾಯಕ್ಕಾಗಿ ಮಾತುಕತೆಯನ್ನು ಪ್ರಾರಂಭಿಸಿತ್ತು.

ಕಳೆದ ನವೆಂಬರ್‌ನಲ್ಲಿ ಒಪ್ಪಂದ: ಅದಾನಿ ಪೋರ್ಟ್ಸ್ ಈ ಯೋಜನೆಗೆ $553 ಮಿಲಿಯನ್ ನಿಧಿಯ ಬಗ್ಗೆ US ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಷನ್ (DFC) ಮಾತುಕತೆ ನಡೆಸಿತ್ತು. ಅದಲ್ಲದೆ, ಕಳೆದ ನವೆಂಬರ್‌ನಲ್ಲಿಯೇ ಈ ಪ್ರಾಜೆಕ್ಟ್‌ಗೆ ಡಿಎಫ್‌ಸಿ ಅನುಮೋದನೆ ಕೂಡ ನೀಡಿತ್ತು. ಈಗ ಇದರ ಪರಿಶೀಲನೆ ಕಾರ್ಯ ನಡೆಯುತ್ತಿದೆ. ಇದರ ಮಧ್ಯೆ ಅಮೆರಿಕದಲ್ಲಿ ತಮ್ಮ ವಿರುದ್ದ ಕೇಳಿ ಬಂದ ಲಂಚ ಆರೋಪದ ಬಳಿಕ, ಅದಾನಿ ಪೋರ್ಟ್ಸ್‌ ದೊಡ್ಡ ನಿರ್ಧಾರ ಮಾಡಿದ್ದು, ಈ ಪ್ರಾಜೆಕ್ಟ್‌ಗೆ ಅಮೆರಿಕದ ಹಣ ಅಗತ್ಯವಿಲ್ಲ ಎನ್ನುವುದಾಗಿ ತಿಳಿಸಿದೆ.

2025ರಲ್ಲಿ ಷೇರು ಮಾರುಕಟ್ಟೆಗೆ ಬರಲಿದೆ ಪ್ರಖ್ಯಾತ ಕಂಪನಿಗಳ IPO, ಇದರ ಮೌಲ್ಯವೇ 1.5 ಲಕ್ಷ ಕೋಟಿ!

ಪಿಟಿಐ ವರದಿಯ ಪ್ರಕಾರ, ಬಿಲಿಯನೇರ್ ಗೌತಮ್ ಅದಾನಿ ನೇತೃತ್ವದ ಅದಾನಿ ಗ್ರೂಪ್ ಮಂಗಳವಾರ ತಡರಾತ್ರಿ ವಿನಿಮಯ ಫೈಲಿಂಗ್‌ನಲ್ಲಿ ಶ್ರೀಲಂಕಾ ಬಂದರು ಯೋಜನೆಯನ್ನು ಪೂರ್ಣಗೊಳಿಸಲು ತನ್ನದೇ ಆದ ಸಂಪನ್ಮೂಲಗಳನ್ನು ಬಳಸುವುದಾಗಿ ಮತ್ತು ಡಿಎಫ್‌ಸಿಯಿಂದ ಯುಎಸ್ ಹಣವನ್ನು ಪಡೆಯುವುದಿಲ್ಲ ಎಂದು ಹೇಳಿದೆ. ಇದರೊಂದಿಗೆ, ಈ ಕೊಲಂಬೊ ಯೋಜನೆಯು ಮುಂದಿನ ವರ್ಷದ ಆರಂಭದಲ್ಲಿ ಪ್ರಾರಂಭವಾಗಲಿದೆ ಮತ್ತು ನಾವು ಯುಎಸ್ ಇಂಟರ್ನ್ಯಾಷನಲ್ ಡೆವಲಪ್‌ಮೆಂಟ್ ಫೈನಾನ್ಸ್ ಕಾರ್ಪೊರೇಶನ್‌ನಿಂದ ಹಣಕ್ಕಾಗಿ ನಮ್ಮ ವಿನಂತಿಯನ್ನು ಹಿಂಪಡೆದಿದ್ದೇವೆ ಎಂದು ಕಂಪನಿ ತಿಳಿಸಿದೆ.

ದೇಶದ 12 ಬ್ಯಾಂಕ್‌ಗಳಿಂದ 25,500 ಕೋಟಿ ಸಾಲ ಕೇಳಿದ ರಿಲಯನ್ಸ್‌ ಇಂಡಸ್ಟ್ರೀಸ್‌!

Latest Videos
Follow Us:
Download App:
  • android
  • ios