17,100 ಕೋಟಿ ರೂಪಾಯಿ ಡೀಲ್‌, ಅದಾನಿ ವಿಲ್ಮಾರ್‌ನಿಂದ ಹೊರಬರಲು ನಿರ್ಧರಿಸಿದ ಅದಾನಿ ಗ್ರೂಪ್‌!

ಬಿಲಿಯನೇರ್ ಗೌತಮ್ ಅದಾನಿ ಅವರ ಗ್ರೂಪ್ ಅದಾನಿ ವಿಲ್ಮಾರ್‌ನಿಂದ ನಿರ್ಗಮಿಸುವುದಾಗಿ ಘೋಷಿಸಿದೆ. ತನ್ನ ಪಾಲನ್ನು ವಿಲ್ಮಾರ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಿದೆ. ಈ ವಹಿವಾಟಿನ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್ ಆಗಿದೆ.

Gautam Adani group announced its exit from FMCG joint venture Adani Wilmar san

ನವದೆಹಲಿ (ಡಿ.30): ಬಿಲಿಯನೇರ್ ಗೌತಮ್ ಅದಾನಿ ಅವರ ಗ್ರೂಪ್‌ ಸೋಮವಾರ ಎಫ್‌ಎಂಸಿಜಿ ಜಂಟಿ ಉದ್ಯಮ ಅದಾನಿ ವಿಲ್ಮಾರ್‌ನಿಂದ ನಿರ್ಗಮಿಸುವುದಾಗಿ ಘೋಷಿಸಿದೆ. ಕಂಪನಿಯಲ್ಲಿರುವ ತನ್ನ ಪಾಲನ್ನು, ಈಗಾಗಲೇ ಜಂಟಿ ಉದ್ಯಮದಲ್ಲಿರುವ ಇನ್ನೊಂದು ಕಂಪನಿಯಾದ ಸಿಂಗಾಪುರದ ವಿಲ್ಮಾರ್‌ ಹಾಗೂ ಮುಕ್ತ ಮಾರುಕಟ್ಟೆಯಲ್ಲಿ ಅಂದಾಜು 2 ಬಿಲಿಯನ್‌ ಡಾಲರ್‌ಗೆ ಮಾರಾಟ ಮಾಡುವುದಾಗಿ ತಿಳಿಸಿದೆ. ಅಮೆರಿಕದ ಲಂಚದ ಆರೋಪದ ಬಳಿಕ ಅದಾನಿ ಗ್ರೂಪ್‌ ಮಾಡುತ್ತಿರುವ ಅತ್ಯಂತ ಮಹತ್ವದ ಒಪ್ಪಂದ ಇದಾಗಿದೆ. ದೇಶದಲ್ಲಿ ಅದಾನಿ ವಿಲ್ಮಾರ್‌ ಫಾರ್ಚೂನ್‌ ಬ್ರ್ಯಾಡ್‌ ಹೆಸರಿನಲ್ಲಿ ಅಡುಗೆ ಎಣ್ಣೆ, ಗೋಧಿ ಹಿಟ್ಟು ಹಾಗೂ ಇತರ ಆಹಾರ ವಸ್ತುಗಳನ್ನು ಅದಾನಿ ವಿಲ್ಮಾರ್‌ ಲಿಮಿಟೆಡ್‌ ಎನ್ನುವ ಹೆಸರಿನಲ್ಲಿ ಉತ್ಪಾದನೆ ಮಾಡುತ್ತದೆ. ಅದಾನಿ ವಿಲ್ಮಾರ್‌ಕಂಪನಿಯಲ್ಲಿ ಅದಾನಿ ಗ್ರೂಪ್‌ 43.94ರಷ್ಟು ಪಾಲನ್ನು ಕಂಪನಿ ಹೊಂದಿದ್ದರೆ, ಇಷ್ಟೇ ಪಾಲನ್ನು ವಿಲ್ಮಾರ್‌  ಗ್ರೂಪ್‌ ಕೂಡ ಹೊಂದಿದೆ. ಇದರಲ್ಲಿ ಶೇ. 31.06ರಷ್ಟು ಪಾಲನ್ನು ವಿಲ್ಮಾರ್‌ ಇಂಟರ್‌ನ್ಯಾಷನಲ್‌ಗೆ ಮಾರಾಟ ಮಾಡಲಿದ್ದರೆ, ಶೇ. 13ರಷ್ಟು ಪಾಲನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಮೂಲಕ, ಕನಿಷ್ಠ ಪಬ್ಲಿಕ್‌ ಶೇರ್‌ಹೋಲ್ಡಿಂಗ್ ಬಾಧ್ಯತೆಯನ್ನು ಪೂರೈಕೆ ಮಾಡಲಿದೆ.

ಅಂದಾಜು 12, 314 ಕೋಟಿ ರೂಪಾಯಿಗೆ (ಪ್ರತಿ ಷೇರಿಗೆ 305 ರೂಪಾಯಿಗಿಂತ ಹೆಚ್ಚಲ್ಲದೆ) ಶೇ. 31.06ರಷ್ಟು ಪಾಲನ್ನು ವಿಲ್ಮಾರ್‌ಗೆ ಮಾರಾಟ ಮಾಡಲಾಗುತ್ತದೆ. ಇನ್ನು ಓಎಫ್‌ಎಸ್‌ ಮೂಲಕ ಉಳಿದ ಷೇರು ಮಾರಾಟ ಮಾಡಲಿದ್ದು, ಇದರ ಒಟ್ಟಾರೆ ಮೌಲ್ಯ 2 ಬಿಲಿಯನ್‌ ಯುಎಸ್‌ಡಾಲರ್‌ ಅಂದರೆ, 17,100 ಕೋಟಿ ರೂಪಾಯಿ ಆಗಿರಲಿದೆ.

'ಇದರೊಂದಿಗೆ ಅದಾನಿ ಎಂಟರ್‌ಪ್ರೈಸೆಸ್‌ ಲಿಮಿಟೆಡ್‌, ಅದಾನಿ ವಿಲ್ಮಾರ್‌ ಲಿಮಿಟೆಡ್‌ನಿಂದ ಸಂಪೂರ್ಣವಾಗಿ ಹೊರಬರಲಿದೆ. ಅದಾನಿ ವಿಲ್ಮಾರ್‌ ಗ್ರೂಪ್‌ನಲ್ಲಿ ಅದಾನಿ ನಾಮ ನಿರ್ದೇಶಿತ ನಿರ್ದೇಶಕರು ಕೆಳಗಿಳಿಯಲಿದ್ದಾರೆ' ಎಂದು ಪ್ರಕಟಣೆಯಲ್ಲಿ ತಿಳಿಸಿದೆ. 2025ರ ಮಾರ್ಚ್‌ 31ರ ಒಳಗಾಗಿ ಈ ವಹಿವಾಟು ಪೂರ್ಣಗೊಳ್ಳಲಿದೆ. ಪ್ರಮುಖ ಮೂಲಸೌಕರ್ಯ ವ್ಯವಹಾರಗಳಲ್ಲಿ AEL ನ ಬೆಳವಣಿಗೆಯನ್ನು ಟರ್ಬೋಚಾರ್ಜ್ ಮಾಡಲು ಪಾಲನ್ನು ಮಾರಾಟದಿಂದ ಬರುವ ಆದಾಯವನ್ನು ಬಳಸಲಾಗುತ್ತದೆ.

ಈ ವಹಿವಾಟಿನೊಂದಿಗೆ ಅದಾನಿ ಗ್ರೂಪ್‌ನಲ್ಲಿ ಲಿಕ್ವಿಡಿಟಿ ಇನ್ನಷ್ಟು ಹೆಚ್ಚಾಗಲಿದೆ.  ನವೆಂಬರ್‌ನಲ್ಲಿ US ಫೆಡರಲ್ ಪ್ರಾಸಿಕ್ಯೂಟರ್‌ಗಳ ನಂತರದ ಮೊದಲ ಪ್ರಮುಖ ವಹಿವಾಟು ಇದಾಗಿದೆ. ಅಮೆರಿಕದ ಏಜೆನ್ಸಿಗಳು ನವೀಕರಿಸಬಹುದಾದ ಇಂಧನ ಪೂರೈಕೆ ಒಪ್ಪಂದಗಳನ್ನು ಗೆಲ್ಲಲು ಅದಾನಿ $265 ಮಿಲಿಯನ್ ಲಂಚದ ಯೋಜನೆ ರೂಪಿಸಿದ್ದರು ಎಂದು ಆರೋಪ ಮಾಡಿತ್ತು. ಅದಾನಿ ಗ್ರೂಪ್ ಈ ಆರೋಪಗಳನ್ನು ನಿರಾಧಾರ ಎಂದು ನಿರಾಕರಿಸಿದೆ ಮತ್ತು ಕಾನೂನಿನ ಆಶ್ರಯವನ್ನು ಪಡೆಯುವುದಾಗಿ ಹೇಳಿದೆ.

'ಅಮೆರಿಕದ 4692 ಕೋಟಿ ಬೇಡ..' ಸ್ವಂತ ಹಣದಲ್ಲೇ Colombo Port Project ಮುಗಿಸುವ ನಿರ್ಧಾರಕ್ಕೆ ಬಂದ ಅದಾನಿ!

ಅದಾನಿ ವಿಲ್ಮಾರ್ ಲಿಮಿಟೆಡ್‌ನಲ್ಲಿ ಅದಾನಿ ಗ್ರೂಪ್ ಮತ್ತು ಸಿಂಗಾಪುರ ಮೂಲದ ಸರಕು ವ್ಯಾಪಾರಿ ವಿಲ್ಮರ್ ನಡುವಿನ ಸಮಾನ ಜಂಟಿ ಉದ್ಯಮವಾಗಿದೆ. ಎರಡು ಪಾಲುದಾರರು ಪ್ರಸ್ತುತ ಅದಾನಿ ವಿಲ್ಮಾರ್‌ನ ಸಂಯೋಜಿತ ಶೇಕಡಾ 87.87 ಅನ್ನು ಹೊಂದಿದ್ದಾರೆ. ಲಿಸ್ಟಿಂಗ್‌f ಆಗಿರುವ ಕಂಪನಿಯಲ್ಲಿ ಪ್ರಮೋಟರ್‌ಗಳು ಗರಿಷ್ಠ ಶೇ. 75ರಷ್ಟು ಷೇರು ಹೊಂದಿರಬಹುದು. ಆದರೆ, ಈ ಕಂಪನಿಯಲ್ಲಿ ಇದರು ಪಾಲು ಬಹುಪಾಲು ಹೆಚ್ಚಾಗಿದೆ. ಮಾರುಕಟ್ಟೆ ನಿಯಂತ್ರಕ ಸೆಬಿ ನಿಯಮಗಳ ಪ್ರಕಾರ ದೊಡ್ಡ ಕಂಪನಿಗಳು ಕನಿಷ್ಠ 25 ಪ್ರತಿಶತದಷ್ಟು ಷೇರುಗಳನ್ನು ಪಟ್ಟಿಯಿಂದ ಮೂರು ವರ್ಷಗಳೊಳಗೆ ಸಾರ್ವಜನಿಕರಿಗೆ ಲಭ್ಯವಿರಿಸಬೇಕು ಎಂದು ತಿಳಿಸಿದೆ.

ಗೌತಮ್‌ ಅದಾನಿ-ಪ್ರೀತಿ ಅದಾನಿ ಪ್ರೇಮಕಥೆ ಸಖತ್‌ ಇಂಟ್ರಸ್ಟಿಂಗ್!

1999ರಲ್ಲಿ ಆರಂಭವಾದ ಅದಾನಿ ವಿಲ್ಮಾರ್‌, ಫಾರ್ಚ್ಯೂನ್‌ ಬ್ರ್ಯಾಂಡ್‌ನ ಅಡುಗ ಎಣ್ಣೆ, ಗೋಧಿ ಹಿಟ್ಟು, ಧಾನ್ಯಗಳು, ಅಕ್ಕಿ ಹಾಗೂ ಸಕ್ಕರೆಯನ್ನು ಮಾರಾಟ ಮಾಡುತ್ತದೆ. 10 ರಾಜ್ಯಗಳಲ್ಲಿ 23 ಪ್ಲ್ಯಾಂಟ್‌ಗಳನ್ನು ಇದು ಹೊಂದಿದ್ದು ಅದಾನಿ ವಿಲ್ಮಾರ್‌ನ ಮಾರುಕಟ್ಟೆ ಮೌಲ್ಯ ಡಿ. 27ರ ವೇಳೆಗೆ 42, 785 ಕೋಟಿ ರೂಪಾಯಿ ಆಗಿದೆ.

Latest Videos
Follow Us:
Download App:
  • android
  • ios