ಮನೆಯಲ್ಲಿಯೇ ಸ್ಪರ್ಮ್ ಕೌಂಟ್ ಚೆಕ್ ಮಾಡಿಕೊಳ್ಳಬಹುದಾ? ಹೇಗೆಂದು ತಿಳಿದುಕೊಳ್ಳಿ
Men Fertility Test ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುವ ಸ್ಪರ್ಮ್ ಕೌಂಟ್ ಅನ್ನು ಈಗ ಮನೆಯಲ್ಲಿಯೇ ಪರೀಕ್ಷಿಸಿಕೊಳ್ಳಬಹುದು. ಹೊಸ ವೈದ್ಯಕೀಯ ಕಿಟ್‌ಗಳು ಮತ್ತು ಸ್ಮಾರ್ಟ್‌ಫೋನ್ ಆಧಾರಿತ ಪರಿಹಾರಗಳು ಖಾಸಗಿತನ ಕಾಪಾಡಿಕೊಂಡು ಸ್ಪರ್ಮ್ ಕೌಂಟ್ ತಿಳಿಯಲು ಸಹಾಯ ಮಾಡುತ್ತವೆ.

ಇಂದು ಮನೆಯಲ್ಲಿಯೇ ಜ್ವರ, ಸಕ್ಕರೆ, ರಕ್ತದೊತ್ತಡ ಪ್ರಮಾಣ ಎಷ್ಟಿದ ಎಂಬುದನ್ನು ಪರಿಶೀಲಿಸಿಕೊಳ್ಳಬಹುದು. ಅದೇ ರೀತಿ ಗರ್ಭಿಣಿ ಹೌದಾ ಅಥವಾ ಅಲ್ಲವಾ ಎಂಬುದನ್ನು ತಿಳಿಯಲು ಮಾರುಕಟ್ಟೆಯಲ್ಲಿ ವೈದ್ಯಕೀಯ ಉತ್ಪನ್ನಗಳು ಸಿಗುತ್ತವೆ.
ಸ್ಪರ್ಮ್ ಕೌಂಟ್ ಕಡಿಮೆಯಾದ್ರೆ ಪುರುಷರಲ್ಲಿ ಬಂಜೆತನಕ್ಕೆ ಕಾರಣವಾಗುತ್ತದೆ. ಇತ್ತೀಚಿನ ದಿನಗಳ ಜೀವನಶೈಲಿಯಿಂದಾಗಿ ಪುರುಷರಲ್ಲಿ ಬಂಜೆತನದ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಸ್ಪರ್ಮ್ ಕೌಂಟ್ ತಿಳಿದುಕೊಳ್ಳಬೇಕಾದ್ರೆ ಕ್ಲಿನಿಕ್‌ಗೆ ಹೋಗಬೇಕಾಗುತ್ತದೆ. ಆದ್ರೆ ಇದೀಗ ಮನೆಯಲ್ಲಿಯೇ ನೀವು ಈ ಪರೀಕ್ಷೆ ಮಾಡಿಕೊಳ್ಳಬಹುದು.
ಈ ಮೊದಲು ಸ್ಪರ್ಮ್ ಕೌಂಟ್ ತಿಳಿದುಕೊಳ್ಳಲು ಪುರುಷರು ಫರ್ಟಿಲಿಟಿ ಕ್ಲಿನಿಕ್ ಅಥವಾ ಲ್ಯಾಬ್‌ಗೆ ಹೋಗಬೇಕಾಗಿತ್ತು. ಇಲ್ಲಿ ನಿಮ್ಮ ಸ್ಪರ್ಮ್ ಮಾದರಿಯನ್ನು ಪಡೆದುಕೊಂಡು ಲ್ಯಾಬ್‌ನಲ್ಲಿ ಪರೀಕ್ಷೆ ನಡೆಸಿ ವರದಿಯನ್ನು ನೀಡಲಾಗುತ್ತಿತ್ತು. ಆದ್ರೆ ಇದರಿಂದ ಖಾಸಗಿತನಕ್ಕೆ ಧಕ್ಕೆಯಾಗುತ್ತೆ ಎಂಬುವುದು ಹಲವು ಪುರುಷರ ವಾದವಾಗಿತ್ತು.
ಈಗ ಮನೆಯಲ್ಲಿ ನಿಮ್ಮ ಸ್ಪರ್ಮ್ ಕೌಂಟ್ ತಿಳಿದುಕೊಳ್ಳಲು ಮಾರುಕಟ್ಟೆಗೆ ವೈದ್ಯಕೀಯ ಕಿಟ್ ಬಂದಿದೆ. ಈ ಕಿಟ್ ಬಳಕೆಯಿಂದ ನಿಮ್ಮ ಖಾಸಗಿತನಕ್ಕೆ ಯಾವುದೇ ಧಕ್ಕೆಯುಂಟಾಗಲಾರದು. 2025 ರಲ್ಲಿ ಪಬ್ಲಿಷ್ ಜರ್ನಲ್ ಆಫ್ ಫರ್ಟಿಲಿಟಿ ಎಂಡ್ ಸ್ಟೇರಿಲಿಟಿ ಮತ್ತು ಪಿಎಮ್‌ಸಿ ಇಡಿ ಒಂದು ಹೋಮ್ ಟೆಸ್ಟಿಂಗ್ ಕಿಟ್ ತಂದಿದೆ. ಈ ಕಿಟ್ ಪ್ರಭಾವಶೀಲತೆಯನ್ನು ಹೊಂದಿದೆ.
ಈ ಕಿಟ್ ಬಳಸುವ ಮೂಲಕ ಕಡಿಮೆ ದರದಲ್ಲಿ ಸರಳವಾಗಿ ಸ್ಪರ್ಮ್ ಕೌಂಟ್ ಪರಿಶೀಲಿಸಿಕೊಳ್ಳಬಹುದು. ಈ ಕಿಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು, ಇದು ಪ್ರೆಗ್ನೆಸಿ ಕಿಟ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ನಿಮ್ಮ ಸ್ಯಾಂಪಲ್ ಕಲೆಕ್ಟ್ ಮಾಡಿಕೊಂಡು ಕಿಟ್‌ಗೆ ಹಾಕಬೇಕು. 10 ನಿಮಿಷದ ನಂತರ ನಿಮ್ಮ ಸ್ಪರ್ಮ್ ಕೌಂಟ್ ತೋರಿಸಲಾಗುತ್ತದೆ.
ನೀವು ಬಳಕೆ ಮಾಡುವ ಸ್ಮಾರ್ಟ್‌ಫೋನ್ ಸಹಾಯದಿಂದಲೂ ಸ್ಪರ್ಮ್ ಕೌಂಟ್ ಮೊಟಿಲಿಟಿ ತಿಳಿದುಕೊಳ್ಳಬಹುದಾಗಿದೆ. ನಿಮ್ಮ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಆಗುವ ಹಲವು ಡಿವೈಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಮಾದರಿಯನ್ನು ಮೈಕ್ರೋಚಿಪ್‌ನಲ್ಲಿ ಲೋಡ್ ಮಾಡಿದ ನಂತರ, ಅದು ನಿಮ್ಮ ಫೋನ್ ಪರದೆಯಲ್ಲಿ ಲೈವ್ ವೀಡಿಯೊವನ್ನು ತೋರಿಸುತ್ತದೆ. ಇದರಿಂದ ವೀರ್ಯಾಣುಗಳ ಸಂಖ್ಯೆ, ಚಲನಶೀಲತೆ ಮತ್ತು ಪ್ರಗತಿಶೀಲ ಚಲನಶೀಲತೆ ತಿಳಿದುಕೊಳ್ಳಬಹು
ನೀವು ಮನೆಯಲ್ಲಿ ಸ್ಪರ್ಮ್ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲು ಅದಕ್ಕಾಗಿ ಸುರಕ್ಷಿತವಾದ ಕಿಟ್ ಬಳಕೆ ಮಾಡಬೇಕಾಗುತ್ತದೆ. ಈ ಕಿಟ್‌ನಲ್ಲಿ ವಿಶೇಷ ಸಂರಕ್ಷಣಾ ದ್ರಾವಣ ಹೊಂದಿರುತ್ತದೆ. ಈ ದ್ರಾವಣ ಮಾದರಿಯನ್ನು 52 ಗಂಟೆಗಳ ಕಾಲ ಸುರಕ್ಷಿತವಾಗಿರುಸುತ್ತದೆ. ಪ್ರಯೋಗಾಲಯಕ್ಕೆ ಮಾದರಿ ಕಳುಹಿಸಲು ಇಷ್ಟಪಡದವರು ಮನೆಯಲ್ಲಿಯೇ ಹೊಸ ಕಿಟ್ ಬಳಸಬಹುದು.
ಸ್ಪರ್ಮ್ ಕೌಂಟ್ ನಿಖರವಾಗಿ ತಿಳಿದುಕೊಳ್ಳಬೇಕಾದ್ರೆ 2-7 ದಿನಗಳ ಮೊದಲು ಸ್ಖಲನದಿಂದ ದೂರವಿರಬೇಕಾಗುತ್ತದೆ. ಹಾಗಾದ್ರೆ ಮಾತ್ರ ವೀರ್ಯಾಣುಗಳ ನಿಖರ ಸಂಖ್ಯೆ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಫಲಿತಾಂಶವು ಸಾಮಾನ್ಯವಾಗಿಲ್ಲದಿದ್ದರೆ, ಫಲವತ್ತತೆ ತಜ್ಞರನ್ನು ಸಂಪರ್ಕಿಸಬಹುದು. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ ಮತ್ತು ಧೂಮಪಾನ ಮತ್ತು ಮದ್ಯಪಾನವನ್ನು ತಪ್ಪಿಸುವಂತಹ ಆರೋಗ್ಯಕರ ಜೀವನಶೈಲಿಯನ್ನು ಮುನ್ನಡೆಸುವ ಮೂಲಕ ನಿಮ್ಮ ವೀರ್ಯಾಣುಗಳ ಸಂಖ್ಯೆಯನ್ನು ಸುಧಾರಿಸಬಹುದು.