ಬೂದುಗುಂಬಳಕಾಯಿ ಜ್ಯೂಸ್ ಕುಡಿದು, ತೂಕ ಇಳಿಸಿ
ಬೂದುಗುಂಬಳಕಾಯಿ ಜನಪ್ರಿಯ ತರಕಾರಿಯಲ್ಲ, ವಿಶೇಷವಾಗಿ ಮಕ್ಕಳು ಅದನ್ನು ಯಾವುದೇ ರೀತಿಯಲ್ಲಿ ಮಾಡಿದ್ರೂ ಇಷ್ಟಪಡೋದಿಲ್ಲ, ಆದರೆ ಬೂದು ಕುಂಬಳಕಾಯಿ ಸೇವನೆಯಿಂದ ಎಷ್ಟೊಂದು ಪ್ರಯೋಜನವಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಬೂದುಗುಂಬಳಕಾಯಿ ನಿಮ್ಮ ಆರೋಗ್ಯ ಉತ್ತೇಜಿಸುವ ಮೂಲಕ ದೇಹವನ್ನು ಆರೋಗ್ಯಕರವಾಗಿರಿಸುತ್ತೆ.
ನೀವು ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೂದುಗುಂಬಳಕಾಯಿ ಜ್ಯೂಸ್(Ash gourd juice) ಕುಡಿದ್ರೆ, ಅದು ನಿಮ್ಮ ದೇಹವನ್ನು ನಿರ್ವಿಷಗೊಳಿಸುತ್ತೆ, ಅಷ್ಟೇ ಅಲ್ಲ ಇದರಿಂದ ಇನ್ನೂ ಹಲವಾರು ಪ್ರಯೋಜನಗಳಿವೆ. ಇದರ ಆರೋಗ್ಯ ಪ್ರಯೋಜನ ತಿಳಿದ್ರೆ ಖಂಡಿತವಾಗಿಯೂ ನೀವಿದನ್ನು ಸೇವಿಸುವಿರಿ.
ಬೂದುಗುಂಬಳಕಾಯಿ ಜ್ಯೂಸ್ ಪ್ರಯೋಜನಗಳು
1. ತೂಕ ಇಳಿಸಿಕೊಳ್ಳಲು(Weight loss) ಸಹಾಯ ಮಾಡುತ್ತೆ
ಬೂದುಗುಂಬಳಕಾಯಿ ತುಂಬಾ ಕಡಿಮೆ ಕ್ಯಾಲೋರಿ ಹೊಂದಿರುತ್ತೆ ಮತ್ತು ನೀರು ತುಂಬಾ ಹೆಚ್ಚಾಗಿರುತ್ತೆ. ಹಾಗಾಗಿ ಅದರ ಬಳಕೆಯು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತೆ. ಇದು ಫೈಬರ್ ನಿಂದ ಸಮೃದ್ಧವಾಗಿದೆ, ಆದ್ದರಿಂದ ಇದು ನಿಮ್ಮ ಹೊಟ್ಟೆ ದೀರ್ಘಕಾಲದವರೆಗೆ ತುಂಬಿರುವಂತೆ ಮಾಡುತ್ತೆ.
2. ದೇಹವನ್ನು ತಂಪಾಗಿರಿಸುತ್ತೆ
ದೇಹ ತಂಪಾಗಿಸುವ ಕೆಲಸ ಮಾಡುವುದರಿಂದ ಬೇಸಿಗೆಯಲ್ಲಿ ಬೂದುಗುಂಬಳಕಾಯಿ ಅತ್ಯುತ್ತಮ. ಇದು ಹಾನಿಕಾರಕ ಕೆಮಿಕಲ್ ಪರಿಣಾಮ ಕಮ್ಮಿಗೊಳಿಸುತ್ತೆ, ಅಜೀರ್ಣ ಮತ್ತು ಹುಣ್ಣು ತಡೆಯುತ್ತೆ. ಆದುದರಿಂದ ತುಂಬಾ ಹೀಟ್(Heat) ಆದಾಗ ನೀವು ಇದನ್ನು ಸೇವಿಸಬಹುದು.
3. ದೇಹವನ್ನು ನಿರ್ವಿಷಗೊಳಿಸುತ್ತೆ
ಹೆಚ್ಚಿನ ಜನರು ಕೆಟ್ಟಲೈಫ್ ಸ್ಟೈಲ್ ಫಾಲೊ ಮಾಡ್ತಿದ್ದಾರೆ, ಅವರಿಗೆ ಬೂದುಗುಂಬಳಕಾಯಿ ಜ್ಯೂಸ್ ದಿವ್ಯೌಷದ ಎಂದರೆ ತಪ್ಪಾಗಲಾರದು. ಇದು ದೇಹವನ್ನು ನಿರ್ವಿಷಗೊಳಿಸುತ್ತೆ, ಹಾನಿಕಾರಕ ವಿಷ(Poison) ಹೊರಹಾಕುತ್ತೆ ಮತ್ತು ಮೂತ್ರಕೋಶದ ಕಾರ್ಯ ಸುಧಾರಿಸುತ್ತೆ .
4. ಕರುಳಿನ ಆರೋಗ್ಯ ಸುಧಾರಿಸುತ್ತೆ
ಬೂದುಗುಂಬಳಕಾಯಿ ಉತ್ತಮ ಬ್ಯಾಕ್ಟೀರಿಯಾವನ್ನು ಉತ್ತೇಜಿಸುತ್ತೆ, ಇದು ಜೀರ್ಣಕ್ರಿಯೆ, ಮಲಬದ್ಧತೆ(Constipation) ಮತ್ತು ಇತರ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ತೆಗೆದುಹಾಕುತ್ತೆ ಮತ್ತು ನಿಮ್ಮ ಕರುಳನ್ನು ಸ್ವಚ್ಛ ಮತ್ತು ಆರೋಗ್ಯಕರವಾಗಿಸುತ್ತೆ .
5. ಶಕ್ತಿ ಹೆಚ್ಚಿಸುತ್ತೆ
ಬೂದುಗುಂಬಳಕಾಯಿಯಲ್ಲಿ ಕ್ಯಾಲ್ಸಿಯಂ(Calcium), ಸತು, ರಂಜಕ, ಥಯಾಮಿನ್ ಮತ್ತು ರೈಬೋಫ್ಲೇವಿನ್ ನಂತಹ ಜೀವಸತ್ವಗಳು ಸಮೃದ್ಧವಾಗಿವೆ, ಇದು ದೇಹದ ಶಕ್ತಿ ಹೆಚ್ಚಿಸಲು ಮತ್ತು ಆಯಾಸ ನಿವಾರಿಸುವ ಕೆಲಸ ಮಾಡುತ್ತೆ.
6. ನಿದ್ರಾ ಹೀನತೆ(Sleeplessness) ನಿವಾರಣೆ
ಬೂದುಗುಂಬಳಕಾಯಿ ಶಾಂತಗೊಳಿಸುವ ಗುಣ ಸಹ ಹೊಂದಿದೆ, ಇದು ದೇಹವನ್ನು ವಿಶ್ರಾಂತಿಗೊಳಿಸಲು ಸಹಾಯ ಮಾಡುತ್ತೆ. ಇದರ ರಸವು ನಿದ್ರಾಹೀನತೆ ಮತ್ತು ಆತಂಕದಂತಹ ಸಮಸ್ಯೆ ನಿವಾರಿಸಲು ಸಹಾಯ ಮಾಡುತ್ತೆ .