ಹವಾಮಾನಕ್ಕೆ ತಕ್ಕಂತೆ ಹಾಲು ಕುಡಿಯಿರಿ.... ಆದ್ರೆ ಈ ತಪ್ಪು ಮಾಡ್ಬೇಡಿ...
ಬಾಲ್ಯದಿಂದಲೂ, ಹಾಲು ಕುಡಿಯುವುದು (drinking milk) ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಾವು ಕೇಳುತ್ತಲೇ ಇದ್ದೇವೆ. ಹಾಲಿನಲ್ಲಿ ದೇಹಕ್ಕೆ ಅಗತ್ಯವಾದ ಪ್ರತಿಯೊಂದು ಅಂಶವೂ ಇದೆ. ಹಾಲು ಜೀವಸತ್ವಗಳು, ಕ್ಯಾಲ್ಸಿಯಂ, ಪ್ರೋಟೀನ್, ನಿಯಾಸಿನ್, ರಂಜಕ ಮತ್ತು ಪೊಟ್ಯಾಸಿಯಮ್ ಗಳಿಂದ ಸಮೃದ್ಧವಾಗಿದೆ. ಆದರೆ ಅನೇಕ ಬಾರಿ ನಾವು ಹಾಲಿನ ಬದಲು ಮತ್ತೇನನ್ನೋ ಸೇವಿಸುತ್ತೇವೆ., ವಿಶೇಷವಾಗಿ ಬೇಸಿಗೆ ಸೀಸನ್ ನಲ್ಲಿ. ತಜ್ಞರ ಪ್ರಕಾರ, ಹವಾಮಾನ ಯಾವುದೇ ಆಗಿರಲಿ, ಹಾಲನ್ನು ಬೇಡ ಅನ್ಲೇಬೇಡಿ. ಆದ್ರೆ ಹವಾಮಾನಕ್ಕೆ ಅನುಗುಣವಾಗಿ ನೀವು ಅದನ್ನು ಕುಡಿಯುವ ಸಮಯ ಮತ್ತು ವಿಧಾನ ಬದಲಾಯಿಸಬಹುದು.
ಈ ಲೇಖನದ ಸಹಾಯದಿಂದ, ಬೇಸಿಗೆಯಲ್ಲಿ ಹಾಲು ಕುಡಿಯಲು ಸರಿಯಾದ ಸಮಯ ಮತ್ತು ಮಾರ್ಗ ಯಾವುದು ಎಂದು ನಾವು ನಿಮಗೆ ತಿಳಿಸುತ್ತೇವೆ. ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳೇನು? ಇದನ್ನ ಮೊದಲಿಗೆ ತಿಳಿಯೋಣ.
ಕ್ಯಾಲ್ಸಿಯಂನ ಅತ್ಯುತ್ತಮ ಮೂಲ - ಹಾಲಿನಲ್ಲಿರುವ ಕ್ಯಾಲ್ಸಿಯಂ ನಮ್ಮ ಹಲ್ಲುಗಳು ಮತ್ತು ಮೂಳೆಗಳನ್ನು ಬಲಪಡಿಸುತ್ತದೆ. ಇದು ಉತ್ತಮ ಆರೋಗ್ಯ ಕಾಪಾಡಲು ಸಹ ನೆರವಾಗುತ್ತೆ.
ಹಾಲು ಪ್ರೋಟೀನ್ (protein)ನಿಂದ ಸಮೃದ್ಧವಾಗಿದೆ - ಇದು ನಮ್ಮ ದೇಹಕ್ಕೆ ಮತ್ತು ಮಾಂಸದ ಸ್ನಾಯುಗಳಿಗೆ ಶಕ್ತಿಯನ್ನು ನೀಡಲು ಅತ್ಯಗತ್ಯವಾಗಿದೆ. ಸ್ಟ್ರಾಂಗ್ ಮಸಲ್ಸ್ ಪಡೆಯಲು ಇದು ಸಹಾಯ ಮಾಡುತ್ತೆ.
ಮಲಬದ್ಧತೆಯ ಸಮಸ್ಯೆಯನ್ನು ತಡೆಗಟ್ಟುವುದು- ಯಾರಿಗಾದರೂ ಮಲಬದ್ಧತೆಯ ಸಮಸ್ಯೆಯಿದ್ದರೆ, ಉಗುರು ಬೆಚ್ಚಗಿನ ಹಾಲನ್ನು ಕುಡಿಯಿರಿ. ಇದು ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡಲು ಸಹಾಯ ಮಾಡುತ್ತೆ.
ಹೈಡ್ರೇಟ್ ಆಗಿರಿಸುತ್ತೆ- ಸಾಮಾನ್ಯವಾಗಿ ಬೇಸಿಗೆಯಲ್ಲಿ ನಿರ್ಜಲೀಕರಣದ (dehydration) ಸಮಸ್ಯೆ ಹೆಚ್ಚಾಗುತ್ತದೆ. ಅದಕ್ಕಾಗಿಯೇ ವಿಶೇಷವಾಗಿ ವ್ಯಾಯಾಮ ಮತ್ತು ದೈಹಿಕ ಚಟುವಟಿಕೆ ಮಾಡುವವರು ಪ್ರತಿದಿನ ಹಾಲು ಸೇವಿಸಬೇಕು. ದೇಹವನ್ನು ಹೈಡ್ರೇಟ್ ಮಾಡಲು ಹಾಲು ಉತ್ತಮ ಆಯ್ಕೆಯಾಗಿದೆ.
ಒತ್ತಡ ದೂರ - ಉಗುರುಬೆಚ್ಚಗಿನ ಹಾಲು ದಿನವಿಡೀ ಆಯಾಸ ಮತ್ತು ಒತ್ತಡದಿಂದ (stress) ನಿಮ್ಮನ್ನು ಮುಕ್ತಗೊಳಿಸಲು ಸಹಾಯ ಮಾಡುತ್ತದೆ. ಇದರೊಂದಿಗೆ, ಇದು ನಿದ್ರಾಹೀನತೆಯ ಸಮಸ್ಯೆ ಸಹ ದೂರವಾಗುತ್ತೆ. ಹಾಲು ನಿಮಗೆ ಉತ್ತಮ ಮತ್ತು ಆರಾಮದಾಯಕ ನಿದ್ರೆ ಬರೋವಂತೆ ಮಾದುತ್ತೆ.
ಹಾಲು ಕುಡಿಯಲು ಸರಿಯಾದ ಸಮಯ ಮತ್ತು ವಿಧಾನ
ಬೆಳಿಗ್ಗೆ ಒಂದು ಲೋಟ ಹಾಲಿನಿಂದ ಪ್ರಾರಂಭವಾದರೆ ಅದು ನಿಮ್ಮನ್ನು ದಿನವಿಡೀ ಶಕ್ತಿಯುತವಾಗಿರಿಸುತ್ತದೆ, ಜೊತೆಗೆ ಆಕ್ಟೀವ್ ಆಗಿರಿಸುತ್ತೆ. ಇನ್ನು ಬೇಸಿಗೆ ಬಗ್ಗೆ ಹೇಳೊದಾದ್ರೆ, ನೀವು ಬಿಸಿ ಹಾಲಿನ ಬದಲು ತಣ್ಣನೆಯ ಹಾಲು ಅಥವಾ ಮಿಲ್ಕ್ ಶೇಕ್ ಸೇವಿಸಬಹುದು.
ನೀವು ಜಿಮ್ಮರ್ (gymmer) ಆಗಿದ್ದರೆ, ಅರ್ಧ ಗಂಟೆಯ ವ್ಯಾಯಾಮದ ನಂತರ ಹಾಲು ಕುಡಿಯಿರಿ, ಇದು ನಿಮ್ಮ ದೇಹಕ್ಕೆ ಶಕ್ತಿ ನೀಡುತ್ತದೆ ಮತ್ತು ಅಗತ್ಯ ಪೌಷ್ಟಿಕಾಂಶವನ್ನು ನೀಡುತ್ತೆ. ಬೇಸಿಗೆಯಲ್ಲಿ ವ್ಯಾಯಾಮದ ಸಮಯದಲ್ಲಿ, ದೇಹವು ಬೇಗನೆ ನಿರ್ಜಲೀಕರಣಗೊಳ್ಳಲು ಪ್ರಾರಂಭಿಸುತ್ತದೆ, ಹೀಗಾದ್ರೆ ತಣ್ಣನೆಯ ಹಾಲು ಕುಡಿಯಿರಿ,ಇದು ತಕ್ಷಣವೇ ದೇಹವನ್ನು ಹೈಡ್ರೇಟ್ ಮಾಡುತ್ತೆ.
ತಂಪಾದ ಹಾಲು (cold milk) ಸೇವಿಸೋದ್ರಿಂದ ಬೆಳಿಗ್ಗೆ ನಿಮಗೆ ತಾಜಾತನದ ಅನುಭವ ನೀಡುತ್ತದೆ, ರಾತ್ರಿ ಮಲಗುವ ಮೊದಲು ಉಗುರು ಬೆಚ್ಚಗಿನ ಹಾಲು ಕುಡಿಯುವುದರಿಂದ ಆಯಾಸ ನಿವಾರಣೆಯಾಗುತ್ತೆ ಮತ್ತು ನಿದ್ರಾಹೀನತೆಯ ಸಮಸ್ಯೆ ದೂರವಾಗುತ್ತದೆ.
ಹಾಲನ್ನು ಯಾವಾಗ ತಪ್ಪಿಸಬೇಕು -
ನಿಮಗೆ ಶೀತ ಅಥವಾ ಜ್ವರವಿದ್ದರೆ (fever), ತಣ್ಣನೆಯ ಹಾಲನ್ನು ತಪ್ಪಿಸಿ. ಆವಾಗ, ನೀವು ಉಗುರು ಬೆಚ್ಚಗಿನ ಬಿಸಿ ಹಾಲನ್ನು ಸೇವಿಸಬಹುದು ಎಂದು ವೈದ್ಯರು ಹೇಳುತ್ತಾರೆ.
ಹೆಚ್ಚು ಬಿಸಿ ಹಾಲು ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ, ಹಾಗಾಗಿ ಅದರ ಬದಲಾಗಿ ನೀವು ಉಗುರು ಬೆಚ್ಚಗಿನ ಹಾಲನ್ನು ಕುಡಿಯೋದು ಉತ್ತಮ.
ಹಾಲಿನಲ್ಲಿ ಕಂಡುಬರುವ ಲ್ಯಾಕ್ಟೋಸ್ (lactose) ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತದೆ. ಹಾಲನ್ನು ಲಘುವಾಗಿ ಬಿಸಿ ಮಾಡಿದಾಗ, ಅದರಲ್ಲಿ ಕಂಡುಬರುವ ಲ್ಯಾಕ್ಟೋಸ್ ಕಡಿಮೆಯಾಗುತ್ತೆ, ಇದು ಅತಿಸಾರ ಮತ್ತು ಅಜೀರ್ಣತೆಯ ಸಮಸ್ಯೆಯನ್ನು ದೂರ ಮಾಡುತ್ತೆ.
ಹಾಲು ಕುಡಿದರೆ ಕೆಲವರಿಗೆ ಹೊಟ್ಟೆನೋವು ಮತ್ತು ಅಸಿಡಿಟಿ ಸಮಸ್ಯೆ ಉಂಟಾಗುತ್ತೆ. ಹೀಗಾದ್ರೆ, ಆಸಿಡಿಟಿ ತೆಗೆದುಹಾಕಲು ತಣ್ಣನೆಯ ಹಾಲನ್ನು ಸೇವಿಸುವುದು ಉತ್ತಮ.
ಕೆಲವು ಆಹಾರ ಪದಾರ್ಥಗಳು ಮತ್ತು ಇತರ ಡ್ರಿಂಕ್ಸ್ ಗಳಂತೆ, ಖಾಲಿ ಹೊಟ್ಟೆಯಲ್ಲಿ ಹಾಲು ಕುಡಿಯಬೇಡಿ. ಹಾಗೆ ಮಾಡಿದ್ರೆ ಅದು ದೇಹದಲ್ಲಿ ಆಮ್ಲದ ಮಟ್ಟವನ್ನು ಹೆಚ್ಚಿಸುತ್ತದೆ. ಇದರಲ್ಲಿರುವ ಸ್ಯಾಚುರೇಟೆಡ್ ಕೊಬ್ಬಿನ (saturated fat) ಪ್ರೋಟೀನ್ ಕಿಬ್ಬೊಟ್ಟೆಯ ಸ್ನಾಯುಗಳನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ ಹಾಲು ಕುಡಿಯೋ ಮೊದಲು ಬೇರೇನಾದರೂ ತಿಂದು ಮತ್ತೆ ಹಾಲು ಕುಡಿಯಿರಿ.