ಯಾವುದೇ ಚಟವಿಲ್ಲದಿದ್ದರೂ, ಚೆನ್ನಾಗಿದ್ದರೂ ಕ್ಯಾನ್ಸರ್ ಬರುವುದೇಕೆ?, ಇಲ್ಲಿದೆ ನೋಡಿ ವೈದ್ಯರ ಸಲಹೆ
ಕ್ಯಾನ್ಸರ್... ಕೇಳಿದ ತಕ್ಷಣ ಮನಸ್ಸಿನಲ್ಲಿ ಭಯ ಹುಟ್ಟಿಸುವ ಪದ. ಧೂಮಪಾನ, ಮದ್ಯಪಾನ, ಕೆಟ್ಟ ಆಹಾರ ಪದ್ಧತಿ ಮತ್ತು ಮಾಲಿನ್ಯದಂತಹ ಅನೇಕ ಅಪಾಯಕಾರಿ ಅಂಶಗಳು ಕ್ಯಾನ್ಸರ್‌ಗೆ ಕಾರಣವಾಗಬಹುದು. ಆದರೆ ಯಾವುದೇ ಚಟ ಇಲ್ಲದಿದ್ದರೂ ಕ್ಯಾನ್ಸರ್‌ಗೆ ಗುರಿಯಾಗುವುದು ಏಕೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?.

ನಿರಂತರ ಕಿರಿಕಿರಿ ಅನುಭವಿಸಿದರೆ...
Hidden Cancer Risks; ನಮ್ಮಲ್ಲಿ ಹೆಚ್ಚಿನವರು ಕ್ಯಾನ್ಸರ್ ಬರುವುದು ಧೂಮಪಾನ, ಮದ್ಯಪಾನ, ಮಾಲಿನ್ಯ ಅಥವಾ ಫ್ಯಾಮಿಲಿಯಲ್ಲಿ ಯಾರಿಗಾದರೂ ಇದ್ದರೆ ಬರುವುದು ಅಂದುಕೊಳ್ಳುತ್ತಾರೆ. ಆದರೆ ಈ ಯಾವುದೇ ಕೆಟ್ಟ ಅಭ್ಯಾಸಗಳು ಇಲ್ಲದಿದ್ರೂ ಅಥವಾ ಯಾವುದೇ ಫ್ಯಾಮಿಲಿ ಹಿಸ್ಟ್ರಿ ಇಲ್ಲದಿದ್ರೂ ಕೆಲವು ಜನರು ಈ ಮಾರಕ ಕಾಯಿಲೆಗೆ ಗುರಿಯಾಗುತ್ತಾರೆ. ಅದ್ಯಾಕೆ ಅಂತ ಎಂದಾದರೂ ನೀವು ಯೋಚಿಸಿದ್ದೀರಾ?. ಡಾ. ತರಂಗ್ ಕೃಷ್ಣ (drtarangkrishna) ಅವರ ಪ್ರಕಾರ, ಮಾನಸಿಕ ಕಾರಣಕ್ಕೂ ಈ ಕಾಯಿಲೆ ಬರುವುದು. ಹೌದು, ನಿರಂತರ ಕಿರಿಕಿರಿ ಅನುಭವಿಸಿದರೆ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಅಂದರೆ ಯಾವಾಗಲೂ ಮಾನಸಿಕ, ಭಾವನಾತ್ಮಕ ಅಥವಾ ದೈಹಿಕವಾಗಿ ತೊಂದರೆಗೊಳಗಾಗಿದ್ದರೂ ಅದು ಗಂಭೀರ ಕಾಯಿಲೆಗೆ ಮೂಲವಾಗಬಹುದು.
ಒತ್ತಡವು ಮನಸ್ಸಿನ ಶತ್ರು ಮಾತ್ರವಲ್ಲ, ದೇಹಕ್ಕೂ ಶತ್ರು
ದಿನನಿತ್ಯದ ಗಡಿಬಿಡಿ, ಅಪೂರ್ಣ ನಿದ್ರೆ, ಸಂಬಂಧಗಳಲ್ಲಿನ ಉದ್ವಿಗ್ನತೆ ಮತ್ತು ಹೇಳಲಾಗದ ನೋವು...ಇವೆಲ್ಲವೂ ಒಟ್ಟಾಗಿ ನಮ್ಮ ದೇಹದೊಳಗೆ ಅನಾರೋಗ್ಯಕ್ಕೆ ಆಹ್ವಾನ ನೀಡುವ ವಾತಾವರಣವನ್ನು ಸೃಷ್ಟಿಸುತ್ತವೆ. ಈ ಒತ್ತಡವು ದೀರ್ಘಕಾಲದವರೆಗೆ ಮುಂದುವರಿದಾಗ ದೇಹಕ್ಕೆ ಗುಣಪಡಿಸಿಕೊಳ್ಳುವ ಶಕ್ತಿ ಅಂದರೆ ತನ್ನನ್ನು ತಾನು ಗುಣಪಡಿಸಿಕೊಳ್ಳುವ ಸಾಮರ್ಥ್ಯವು ಕ್ರಮೇಣ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ.
ಭಾವನೆಗಳು ಅನಾರೋಗ್ಯಕ್ಕೆ ಕಾರಣವಾದಾಗ
ಹಲವು ಬಾರಿ ನಾವು ನಮ್ಮ ಭಾವನೆಗಳನ್ನು ನಿಗ್ರಹಿಸುತ್ತೇವೆ. ಅಂದರೆ ಮಾತನಾಡುವುದಿಲ್ಲ ಅಥವಾ ವ್ಯಕ್ತಪಡಿಸುವುದಿಲ್ಲ. ಆದರೆ ಈ ನಿಗ್ರಹಿಸಲಾದ ಭಾವನೆಗಳು ದೇಹದಲ್ಲಿ ಒಂದು ರೀತಿಯ ಉರಿಯೂತವನ್ನು ಉಂಟುಮಾಡುತ್ತವೆ. ದೇಹದಲ್ಲಿ ಪುನರಾವರ್ತಿತ ಉರಿಯೂತ ಉಂಟಾದಾಗ ಅದು ಕ್ಯಾನ್ಸರ್‌ನಂತಹ ಕಾಯಿಲೆಗಳಿಗೆ ವೇದಿಕೆ ಸಿದ್ಧಪಡಿಸುತ್ತದೆ ಎಂದು ವಿಜ್ಞಾನವು ನಂಬುತ್ತದೆ.
ನಿಮ್ಮ ದೇಹದ ಎಚ್ಚರಿಕೆಗಳನ್ನು ನಿರ್ಲಕ್ಷಿಸದಿರಿ
ಕೆಲವೊಮ್ಮೆ ನಿರಂತರ ಆಯಾಸ, ಆಗಾಗ್ಗೆ ತಲೆನೋವು ಅಥವಾ ಜೀರ್ಣಕಾರಿ ಸಮಸ್ಯೆಗಳು...ಇವೆಲ್ಲವೂ ದೇಹವು ಕೆಲವು ಆಂತರಿಕ ಒತ್ತಡದಿಂದ ಹೋರಾಡುತ್ತಿದೆ ಎಂಬುದರ ಸಂಕೇತಗಳಾಗಿರಬಹುದು. ಆದರೆ ನಾವು ಈ ಸಂಕೇತಗಳನ್ನು ಸಣ್ಣದಾಗಿ ಪರಿಗಣಿಸಿ ನಿರ್ಲಕ್ಷಿಸಿದಾಗ, ಅದೇ ಸಣ್ಣ ಸಮಸ್ಯೆ ನಂತರ ಗಂಭೀರ ರೂಪವನ್ನು ಪಡೆಯಬಹುದು.
ಮಾನಸಿಕ ಶಾಂತಿಯೇ ರಕ್ಷಣೆಯ ಮಾರ್ಗ
ಯೋಗ, ಧ್ಯಾನ, ಆಳವಾದ ಉಸಿರಾಟದ ವ್ಯಾಯಾಮಗಳು ಮತ್ತು ಮನಸ್ಸಿನ ಶಾಂತಿಯನ್ನು ಕಾಪಾಡಿಕೊಳ್ಳುವುದು ಮಾನಸಿಕ ಆರೋಗ್ಯಕ್ಕೆ ಮಾತ್ರವಲ್ಲ, ಕ್ಯಾನ್ಸರ್‌ನಂತಹ ಕಾಯಿಲೆಗಳಿಂದ ದೇಹವನ್ನು ರಕ್ಷಿಸುತ್ತದೆ ಎಂದು ಅನೇಕ ವೈದ್ಯರು ಈಗ ನಂಬಲು ಪ್ರಾರಂಭಿಸಿದ್ದಾರೆ. ನಾವು ಒತ್ತಡದಿಂದ ಹೊರಬಂದಾಗ ನಮ್ಮ ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ದೇಹವು ತನ್ನನ್ನು ತಾನು ಉತ್ತಮವಾಗಿ ಸರಿಪಡಿಸಿಕೊಳ್ಳಲು ಸಾಧ್ಯವಾಗುತ್ತದೆ.