Fruits for Health: ನಿಮ್ಮ ಮನೆಯಲ್ಲಿ ಈ ಹಣ್ಣುಗಳಿದ್ರೆ ಕಾಡುವ ರೋಗಗಳ ಬಗ್ಗೆ ತಲೆ ಕೆಡಿಸೋದೆ ಬೇಡ!
Fruits for Health: ನೀವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ರೆ ನೀವು ಈ ಹಣ್ಣುಗಳನ್ನು ಸೇವಿಸಿ. ಒಂದೊಂದು ಹಣ್ಣು ಒಂದೊಂದು ರೋಗವನ್ನು ನಿವಾರಿಸುವ ಶಕ್ತಿಯನ್ನು ಹೊಂದಿದೆ. ಹಾಗಿದ್ರೆ ಯಾವ ಹಣ್ಣು ಸೇವಿಸೋದರಿಂದ ಯಾವ ಆರೋಗ್ಯ ಸಮಸ್ಯೆ ನಿವಾರಣೆಯಾಗುತ್ತೆ ನೋಡೋಣ.

ಹಣ್ಣುಗಳಿಂದ ಆರೋಗ್ಯ
ಹಣ್ಣುಗಳು ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳನ್ನು ಒದಗಿಸುತ್ತವೆ, ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ ಮತ್ತು ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ. ಸಿಟ್ರಸ್ ಹಣ್ಣುಗಳು ವಿಟಮಿನ್ ಸಿ ಯೊಂದಿಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ, ಬಾಳೆಹಣ್ಣುಗಳು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ ಮತ್ತು ಹಣ್ಣುಗಳು ಉರಿಯೂತವನ್ನು ಕಡಿಮೆ ಮಾಡುತ್ತವೆ ಎಂಬುದನ್ನು ಎತ್ತಿ ತೋರಿಸುತ್ತವೆ. ಪ್ರತಿಯೊಂದು ಹಣ್ಣು ಆರೋಗ್ಯಕ್ಕೆ ಉತ್ತಮ ಪ್ರಯೋಜನ ನೀಡುತ್ತೆ. ಯಾವ ಹಣ್ಣು ಸೇವಿಸೋದರಿಂದ ಏನೆಲ್ಲಾ ಸಮಸ್ಯೆ ನಿವಾರಣೆಯಾಗುತ್ತೆ ನೋಡೋಣ.
ಡಿಹೈಡ್ರೇಶನ್ - ಕಲ್ಲಂಗಡಿ ಹಣ್ಣು
ಬೇಸಿಗೆ ಕಾಲದಲ್ಲಿ ಅಥವಾ ಅತಿಯಾದ ಬಿಸಿಲಿಗೆ ಹೊರ ಹೋದಾಗ ಅಥವಾ ಮನೆಯಲ್ಲಿ ಇರುವಾಗಲೇ ಡಿಹೈಡ್ರೇಶನ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ಹಲವು ಸಮಸ್ಯೆಗಳು ಕಾಡಲು ಶುರುವಾಗುತ್ತೆ. ಇಂತಹ ಸಂದರ್ಭದಲ್ಲಿ ನೀವು ಕಲ್ಲಂಗಡಿ ಹಣ್ಣು ಸೇವಿಸೋದು ಉತ್ತಮ.
ಮಸಲ್ ಕ್ರಾಂಪ್ -ಅವಕಾಡೋ
ಓಡುವಾಗ, ಅಥವಾ ಮಲಗಿ ಎದ್ದಾಗ, ಇನ್ನೇನಾದರು ಮಾಡುವಾಗ ದಿಢೀರ್ ಆಗಿ ಮಸಲ್ ಕ್ರಾಂಪ್ ಅಥವಾ ಮಾಂಸಖಂಡಗಳ ಸೆಳೆತ ಉಂಟಾಗುತ್ತದೆ. ಅಂತಹ ಸಂದರ್ಭದಲ್ಲಿ ಅವಕಾಡೋ ಸೇವಿಸಿ. ಇದರಿಂದ ಸೆಳೆತ ಕಡಿಮೆಯಾಗುತ್ತೆ.
ಸುಸ್ತು- ಬಾಳೆಹಣ್ಣು
ಸ್ವಲ್ಪ ಕೆಲಸ ಮಾಡಿದರೆ ಸುಸ್ತು, ನಡೆದರೆ ಸುಸ್ತು ಎಂದು ನಿಮಗೆ ಅನಿಸಿದರೆ, ಪ್ರತಿದಿನ ಬಾಳೆಹಣ್ಣು ಸೇವಿಸಿ. ಇದು ದೇಹಕ್ಕೆ ಶಕ್ತಿ ನೀಡಿ ನಿಮ್ಮ ಸುಸ್ತನ್ನು ನಿವಾರಿಸುತ್ತದೆ. ಎನರ್ಜಿಟಿಕ್ ಆಗಿರುವಂತೆ ನೋಡಿಕೊಳ್ಳುತ್ತೆ.
ತಲೆನೋವು - ಬೆರ್ರಿ
ನಿಮಗೆ ತಲೆನೋವಿನ ಸಮಸ್ಯೆ ಇದೆಯೇ? ಪದೇ ಪದೇ ಸಣ್ಣ ಸಣ್ಣ ತಲೆ ನೋವು ಕಾಣಿಸಿಕೊಳ್ಳುತ್ತಿದ್ದರೆ, ಬೆರ್ರಿ ಸೇವಿಸಿ. ಸ್ಟ್ರಾಬೆರ್ರಿ, ಬ್ಲೂ ಬೆರ್ರಿ, ಬ್ಲ್ಯಾಕ್ ಬೆರ್ರಿ ಯಾವುದೇ ಹಣ್ಣುಗಳನ್ನು ಸೇವಿಸಿ, ಇವು ತಲೆನೋವನ್ನು ನಿವಾರಿಸುತ್ತದೆ.
ಉದರ ಸಂಬಂಧಿ ಸಮಸ್ಯೆ- ಪಪ್ಪಾಯಿ
ದೇಹಕ್ಕೆ ಅಭ್ಯಾಸವಿಲ್ಲದ ಏನೇ ಆಹಾರ ಸೇವನೆ ಮಾಡಿದಾದ ಉದರ ಸಂಬಂಧಿ ಸಮಸ್ಯೆಗಳು ಉಂಟಾಗುತ್ತವೆ. ಅಂತಹ ಸಂದರ್ಭದಲ್ಲಿ ಹೊಟ್ಟೆಯನ್ನು ಸರಿ ಮಾಡಲು ಪಪ್ಪಾಯಿ ಸೇವಿಸಿ.
ಕಡಿಮೆ ಶಕ್ತಿ -ಸೇಬು
ದೇಹದಲ್ಲಿ ಶಕ್ತಿಯೇ ಇಲ್ಲ ಎಂದು ನಿಮಗೆ ಅನಿಸಿದರೆ, ಆಪಲ್ ಸೇವಿಸಿ. ಇದು ದೇಹಕ್ಕೆ ಶಕ್ತಿಯನ್ನು ನೀಡುತ್ತೆ. ಪ್ರತಿದಿನ ಒಂದು ಸೇಬನ್ನು ಸೇವಿಸೋದರಿಂದ ವೈದ್ಯರನ್ನು ಸಹ ದೂರ ಇಡಬಹುದು.
ಇನ್ಸೋಮಿಯ -ಚೆರ್ರಿ
ನಿಮಗೆ ನಿದ್ರಾಹೀನತೆ ಸಮಸ್ಯೆ ಇದೆಯೇ ರಾತ್ರಿ ಹೊತ್ತು ಸರಿಯಾಗಿ ನಿದ್ರೆ ಬರೋದಿಲ್ವಾ? ಹಾಗಿದ್ರೆ ಚೆರ್ರಿ ಸೇವಿಸಿ. ಇದು ನಿದ್ರಾ ಹೀನತೆಯನ್ನು ನಿವಾರಿಸಿ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.
ಅಧಿಕ ರಕ್ತದೊತ್ತಡ-ದಾಳಿಂಬೆ
ನೀವು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಬಳಲುತ್ತಿದ್ದರೆ ನಿಯಮಿತವಾಗಿ ದಾಳಿಂಬೆ ತಿನ್ನಲು ಮರಿಬೇಡಿ, ಯಾಕಂದ್ರೆ ಇದು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತೆ. ಉತ್ತಮ ಆರೋಗ್ಯ ನೀಡುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.
