Asianet Suvarna News Asianet Suvarna News

ಆರೋಗ್ಯಕ್ಕೆ ಬೇಕು Seasonal Fruits, ಬೇಸಿಗೆಗೆ ಇವೇ ಬೆಸ್ಟ್

ಬೇಸಿಗೆ (Summer) ಎಂದಾಕ್ಷಣ ಮೊದಲು ಮನಸ್ಸಿಗೆ ಬರುವುದು ತಂಪಾದ ಪಾನೀಯ, ಹಣ್ಣಿನ ಜ್ಯೂಸ್‌ಗಳು (Fruit Juice), ಹಣ್ಣುಗಳು. ದೇಹಕ್ಕೆ ಯಾವುದು ತಂಪು(cool) ನೀಡುತ್ತೋ ಅದೆಲ್ಲಾ ನೆನಪಾಗುತ್ತೆ. ಸಾಮಾನ್ಯವಾಗಿ ಕಾಣಿಸಿಕೊಳ್ಳವ ಕಲ್ಲಂಗಡಿ, ಮಾವು, ಹಲಸು, ಸೇಬು ಇಷ್ಟೇ ಅಲ್ಲದೆ ಇನ್ನೂ ಹಣ್ಣುಗಳಿವೆ. ನಮಗೆ ಗೊತ್ತಿರದ ಎಷ್ಟೋ ಹಣ್ಣುಗಳ ಮಾಹಿತಿ ಇಲ್ಲಿದೆ. 

Summer seasonal fruits good for health and to be fit
Author
Bangalore, First Published May 30, 2022, 4:52 PM IST

ಬೇಸಿಗೆ ಎಂದಾಕ್ಷಣ ಮೊದಲು ಮನಸ್ಸಿಗೆ ಬರುವುದು ತಂಪಾದ ಪಾನೀಯ, ಹಣ್ಣಿನ ಜ್ಯೂಸ್‌ಗಳು, ಹಣ್ಣುಗಳು. ದೇಹಕ್ಕೆ ಯಾವುದು ತಂಪು ನೀಡುತ್ತೋ ಅದೆಲ್ಲಾ ನೆನಪಾಗುತ್ತೆ. 
ಬೇಸಿಗೆಯಲ್ಲಿ ದಾಹ ತೀರಿಸಿಕೊಳ್ಳಲು ಜ್ಯೂಸ್ ಅಥವಾ ಎಳನೀರು (Tender Coconut) ಕುಡಿದರಷ್ಟೇ ಸಾಕೆ. ದಾಹ ನೀಗಿಸಿಕೊಳ್ಳುವುದರ ಜೊತೆಗೆ ದೇಹಕ್ಕೆ ಕೆಲ ಹಣ್ಣುಗಳು ಸೇವಿಸುವುದು ಅತ್ಯಗತ್ಯ. 
ಬೇಸಿಗೆಯಲ್ಲಿ ಬಿಡುವ ಎಷ್ಟೋ ಹಣ್ಣುಗಳು ತಮ್ಮದೇ ಆದ ಕೆಲ ಗುಣಗಳನ್ನು ಹೊಂದಿವೆ. ಅವುಗಳಿಂದ ಶರೀರಕ್ಕೆ (Body) ಹಲವು ಉಪಯೋಗಗಳಿವೆ. ನಮಗೆ ಸಾಮಾನ್ಯವಾಗಿ ಕಾಣಿಸಿಕೊಳ್ಳವ ಕಲ್ಲಂಗಡಿ (Watermelon), ಮಾವು (Mango), ಹಲಸು (Jackfruit), ಸೇಬು (Apple) ಇಷ್ಟೇ ಅಲ್ಲದೆ ಇನ್ನೂ ಹಣ್ಣುಗಳಿವೆ. ನಮಗೆ ಗೊತ್ತಿರದ ಎಷ್ಟೋ ಹಣ್ಣುಗಳ ಬಗ್ಗೆ ಇಲ್ಲಿದೆ ಮಾಹಿತಿ. 


ನಕ್ಷತ್ರ ಹಣ್ಣು (Carambola / Star fruit)
ಮಕ್ಕಳಿಂದ(children) ಹಿಡಿದು ಹಿರಯರವರೆಗೂ(elders) ಆರೋಗ್ಯ ಬಹಳ ಒಳ್ಳೆಯದು ಈ ನಕ್ಷತ್ರ ಹಣ್ಣು(star fruit). ಇದಕ್ಕೆ ಇಂಗ್ಲೀಷ್‌ನಲ್ಲಿ ಕರಂಬೋಲಾ(carambola) ಎಂದು ಕರೆಯುತ್ತಾರೆ. ಹುಣಿ(sore), ಸಿಹಿ(sweet) ಎರಡೂ ಅಂಶಗಳನ್ನೊಳಗೊAಡ ಈ ಹಣ್ಣು ಬಹುತೇಕ ಚರ್ಮ ಖಾಯಿಲೆಗೆ(skin desise), ದೇಹಕ್ಕೆ ಬೇಕಾದ ಕಬ್ಬಿಣಾಂಶ(iron), ಕಫ(cough), ಉರಿಯೂತ, ಚಿಕನ್‌ಪಾಕ್ಸ್(chickenpox), ಕರುಳು ಸಮಸ್ಯೆ, ತಲೆನೋವು, ಮಲಬದ್ಧತೆ (constipation)  ಹೀಗೆ ಬಹುತೇಕ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ನೋಡಲು ನಕ್ಷತ್ರದಂತೆ ಕಾಣುವ ಈ ಹಣ್ಣಿನ ಗಿಡ ಬಲು ಅಪರೂಪ. ಜ್ಯೂಸ್(juice) ಮಾಡಿ ಕುಡಿಯುವುದರಿಂದ ಆಯಾಸ, ಸುಸ್ತು ಕಡಿಮೆಯಾಗುತ್ತದೆ. ಇತ್ತೀಚಿನ ದಿನಗಳಲ್ಲಿ ಈ ಹಣ್ಣನ್ನು ಡಯೆಟ್‌ನಲ್ಲಿ(diet) ಬಳಸಲಾಗುತ್ತಿದೆ. ವಿಟಮಿನ್ ಸಿ(vitamin c) ಅಂಶ ಹೇರಳವಾಗಿದ್ದು ರಕ್ತದಲ್ಲಿನ ಶುಗರ್(sugar) ಅನ್ನು ಕಂಟ್ರೋಲ್ ಮಾಡುವ ಗುಣ ಹೊಂದಿದೆ. ಹಳದಿ(yellow) ಕೆಂಪು(red) ಮಿಶ್ರಿತದಲ್ಲಿ ಕಾಣಿಸಿಕೊಳ್ಳುವ ಈ ಹಣ್ಣು ರಕ್ತದೊತ್ತಡ(blood pleasure) ಕಡಿಮೆ ಮಾಡುತ್ತದೆ. ಪ್ರತೀ ದಿನ ಇದನ್ನು ಜ್ಯೂಸ್ ಮಾಡಿ ಕುಡಿಯುವುದರಿಂದ ಹೃದಯ(heart) ಬಡಿತದ ಒತ್ತಡ ಕಡಿಮೆ ಮಾಡುತ್ತದೆ. ಇದನ್ನು ತುಕ್ಕಿಡಿದ, ಹಿತ್ತಾಳೆ ಪಾತ್ರೆಗಳಿಗೆ ತೊಳೆಯಲು ಉಪಯೋಗಿಸುತ್ತಾರೆ. 

ತಂಪಾದ ಎನರ್ಜಿ ಡ್ರಿಂಕ್ಸ್ ಮನೆಯಲ್ಲಿ ಮಾಡಿ ಕುಡೀರಿ

ಬ್ರೆಡ್‌ಫ್ರೂಟ್ (Bread Fruit)
ಹಲಸನ್ನು (Jackfruit) ಹೋಲುವ ಈ ಹಣ್ಣಿಗೆ ಬೇರುಹಲಸು ಎಂದು ಕರೆಯುತ್ತಾರೆ. ಇಂಗ್ಲಿಷ್‌ನಲ್ಲಿ ಬ್ರೆಡ್ ಫ್ರೂಟ್(bread fruit) ಎನ್ನುತ್ತಾರೆ. ನೋಡಲು ಸಣ್ಣದಾಗಿದ್ದು, ಇದನ್ನು ಬೇಯಿಸಿ, ಕರೆದು ತಿನ್ನಲಾಗುತ್ತದೆ. ಈ ಹಣ್ಣಿನಲ್ಲಿ ಪೊಟ್ಯಾಷಿಯಮ್ (Potassium) ಅಂಶ ಹೇರಳವಾಗಿದೆ. ಜೊತೆಗೆ ರಕ್ತದೊತ್ತಡ ಕಡಿಮೆ ಮಾಡಿವುದು. ಸೋಡಿಯಂನ(Sodium) ಪರಣಾಮವನ್ನು ಕಡಿಮೆ ಮಾಡುವ ಮೂಲಕ ಹೃದಯ ಬಡಿತವನ್ನು ನಿಯಂತ್ರಿಸುತ್ತದೆ. 

ಡಯಾಬಿಟೀಸ್ (Diabetes) ಇರುವವರು ಬೇರುಹಲಸನ್ನು ತಿಂದರೆ ರಕ್ತದಲ್ಲಿನ ಶುಗರ್ ಲೆವೆಲ್‌ನ್ನು ಕಂಟ್ರೋಲ್ ಮಾಡುವುದರ ಜೊತೆಗೆ ಒಳ್ಳೆಯ ಕೊಬ್ಬನ್ನು(cholesterol) ಬಿಡುಗಡೆ ಮಾಡುತ್ತದೆ. ಬೇಯಿಸದರೆ ಆಲೂಗೆಡ್ಡೆಯಂತಾಗುವ (Potato) ಈ ಹಣ್ಣಲ್ಲಿ ಕಾರ್ಬೋಹೈಡ್ರೇಟ್(Carbohydrates) ಹೆಚ್ಚಾಗಿದ್ದು ಗ್ಲೂಕೋಸ್ (Glucose) ಹೆಚ್ಚಿಸುತ್ತದೆ. ವಿಟಮಿನ್ ಸಿ, ಪೊಟ್ಯಾಷಿಯಂ, ಫೈಬರ್ ಅಂಶವಿದ್ದು, ಹೃದಯ ಸಂಬಂಧಿ ಖಾಯಿಲೆಯನ್ನು ನಿಯಂತ್ರಿಸುತ್ತದೆ.

ಕುಮ್ಕಾಟ್ಸ್ (Kumquats)
ಇದು ಕಿತ್ತಳೆಯಂತೆ ಹೋಲುವ ಹಣ್ಣಾಗಿದ್ದು, ಒವಲ್(oval) ಅಥವಾ ರೌಂಡ್ ಶೇಪ್‌ನಲ್ಲಿ(round shape) ಇರುತ್ತದೆ. ತಿನ್ನಲು ಸಿಹಿಯಾಗಿರುವ ಈ ಹಣ್ಣಿನ ಮೇಲ್ಪದರ ಅಂದರೆ ಸಿಪ್ಪೆ ತೆಳುವಾಗಿರುತ್ತದೆ. ಇದರಲ್ಲಿ ವಿಟಮಿನ್ ಸಿ, ಎ(vitamin C, A) ಅಂಶವಿದೆ. ಇದರ ಸಿಪ್ಪೆಯಲ್ಲಿ ಫೈಬರ್ ಹಾಗೂ ಆಂಟಿಆಕ್ಸಿಡೆAಟ್(antioxidant) ಅಂಶ ಹೆಚ್ಚಾಗಿದೆ. ಸೋಡಿಯಂ ಹಾಗೂ ಕೊಬ್ಬಿನಾಂಶ ಇದರಲ್ಲಿ ಅಲ್ಪ ಪ್ರಮಾಣದಲ್ಲಿದ್ದು ಡಯೆಟ್ ಫ್ರೆಂಡ್ಲಿ(diet friendly) ಹಣ್ಣಾಗಿದೆ. ಈ ಹಣ್ಣಿನ ಪೇಸ್ಟ್ ಸ್ಕçಬ್(scrub) ರೀತಿ ಹಚ್ಚುವುಸದರಿಂದ ಚರ್ಮದ(skin) ಕಾಂತಿಯೂ ಹೆಚ್ಚುತ್ತದೆ. ಏಕೆಂದರೆ ಇದರಲ್ಲಿ ಆಯಂಟಿ ಆಕ್ಸಿಡೆಂಟ್, ಪೆಕ್ಟಿನ್(pectin), ಟ್ಯಾನಿಸ್ ಮುಂತಾದ ಎಣ್ಣೆ(oil) ಪದಾರ್ಥಗಳಿವೆ. ಇದು ಚರ್ಮವನ್ನು(skin) ಉತ್ತಮಗೊಳಿಸುತ್ತದೆ. 

ನೇರಳೆ(Jamun)
ಬಾಲ್ಯದ ನೆನಪು ಹೆಚ್ಚುವ ನೇರಳೆ ಬೇಸಿಗೆಯಲ್ಲಿ(summer) ಹೆಚ್ಚು. ಡಯಾಬಿಟಿಸ್ ಫ್ರೆಂಡ್ಲಿಯಾಗಿದ್ದು, ಇದರ ಬೀಜನವನ್ನು ಶುಗರ್ (Sugar) ಇರುವವರು ತಿನ್ನುವುದು ಒಳ್ಳೆಯದು. 
ಕಬ್ಬಿಣಾಂಶ, ವಿಟಮಿನ್ ಎ ಮತ್ತು ಸಿ (Vitamin A & C) ಅಂಶ ಹೆಚ್ಚಾಗಿದ್ದು, ಕಣ್ಣು(eye) ಹಾಗೂ ಚರ್ಮಕ್ಕು ಒಳ್ಳೆಯದಾಗಿದೆ. ಕಡಿಮೆ ರಕ್ತದೊತ್ತಡ ಇದ್ದಲ್ಲಿ ಹೆಚ್ಚಿಸುತ್ತಲ್ಲದೆ, ಶುಗರ್ ಲೆವೆಲ್ ಕಾಯ್ದುಕೊಖ್ಖುತ್ತದೆ. ಕಿಡ್ನಿ(Kidney) ಸಂಬಂಧಿಸಿದ ಖಾಯಿಲೆಗಳನ್ನು ನಿಯಂತ್ರಿಸುವ ಗುಣ ಇದರಲ್ಲಿದೆ. 

Ayurvedic Tips : ಆರೋಗ್ಯಕ್ಕೆ ಈ ಹಣ್ಣು ಅಮೃತವಾದ್ರೂ ತಪ್ಪಾಗಿ ಸೇವನೆ ಮಾಡಿದ್ರೆ ಅಪಾಯ ಹೆಚ್ಚು

ಜಂಬೆ ಹಣ್ಣು(Water Apples )
ಇಂಗ್ಲಿಷ್‌ನಲ್ಲಿ ಇದನ್ನು ವಾಟರ್ ಆಯಪಲ್ ಎನ್ನುತ್ತಾರೆ. ಲೈಟ್ ಸ್ವೀಟ್ (Light Sweet), ಸ್ವಲ್ಪ್ ಒಗರು ಒಗರಾಗಿರುವ ಈ ಹಣ್ಣಲ್ಲಿ ನೀರಿನಾಂಶ ಹೆಚ್ಚಾಗಿರುತ್ತೆ. ಇದನ್ನು ಡಯಾಬಿಟಿಸ್, ಕಿಡ್ನಿ ಸಮಸ್ಯೆ ಇರುವವರಿಗೆ ಒಳ್ಳೆಯದು. ಮಲಬದ್ಧತೆ ಸುಗಮ, ಗ್ಯಾಸ್ಟಿçಕ್(gastric) ಸಮಸ್ಯೆ ಇರುವವರು ಈ ಹಣ್ಣನ್ನು ಸೇವಿಸಬಹುದು. ಗುಲಾಬಿ ಕೆಂಪು ಮಿಶ್ರಿತ ಬಣ್ಣ, ಬಿಳಿ ಬಣ್ಣಗಳಲ್ಲಿ ಈ ಹಣ್ಣು ಸಿಗಿತ್ತದೆ. ಇಮ್ಯುನಿಟಿ ಪವರ್ (Immunity) ಹೆಚ್ಚಿಸುವುದು, ಕೊಬ್ಬಿನಾಂಶ ಕಡಿಮೆ ಮಾಡುವುದು, ಹೃದಯ ಸಂಬಂಧಿ ಖಾಯಿಲೆಗಳಿಗೆ ಸಹಕಾರಿಯಾಗಿದೆ. ಡಯೆಟ್ ಫ್ರೆಂಡ್ಲಿಯಾಗಿರುವ ಈ ಹಣ್ಣಲ್ಲಿ ಹೆಚ್ಚಿನ ನೀರಿನಾಂಶ ಇರುವುದರಿಂದ ದೇಹವು ಡೀಹೈಡ್ರೇಟ್ (Dehydrate) ಆಗುವುದನ್ನು ತಪ್ಪಿಸುತ್ತದೆ.

Follow Us:
Download App:
  • android
  • ios