- Home
- Life
- Health
- ವಾಲ್ನಟ್ಸ್ ಮೆದುಳಿಗೆ, ರಾಜ್ಮಾ ಕಿಡ್ನಿಗೆ ಒಳ್ಳೇದು..ಅಂಗಾಂಗಳನ್ನು ಹೋಲುವ ಇವೆಲ್ಲಾ ದೇಹಕ್ಕೆ ಪ್ರಯೋಜನಕಾರಿಯೇ?
ವಾಲ್ನಟ್ಸ್ ಮೆದುಳಿಗೆ, ರಾಜ್ಮಾ ಕಿಡ್ನಿಗೆ ಒಳ್ಳೇದು..ಅಂಗಾಂಗಳನ್ನು ಹೋಲುವ ಇವೆಲ್ಲಾ ದೇಹಕ್ಕೆ ಪ್ರಯೋಜನಕಾರಿಯೇ?
ಅಂಗಗಳ ಗಾತ್ರವನ್ನು ಹೋಲುವ ತರಕಾರಿಗಳು, ಹಣ್ಣುಗಳು ಮತ್ತು ನಟ್ಸ್ ಅವುಗಳಿಗೆ ನಿಜವಾಗಿಯೂ ಪ್ರಯೋಜನಕಾರಿಯೇ?. ಈ ಬಗ್ಗೆ FMRI ಗುರ್ಗಾಂವ್‌ನ ಕ್ಲಿನಿಕಲ್ ನ್ಯೂಟ್ರಿಷನ್ ಡಾ. ದೀಪ್ತಿ ಖತುಜಾ ಇಲ್ಲಿ ತಿಳಿಸಿದ್ದಾರೆ ನೋಡಿ...

ನಿಮ್ಮ ಮೆದುಳಿನ ಆರೋಗ್ಯ ಹೆಚ್ಚಲು ನೀವು ವಾಲ್ನಟ್ಸ್ ತಿನ್ನಬೇಕು ಎಂದು ಹೇಳಿರುವುದನ್ನು ನೀವು ಕೇಳಿರಬಹುದು. ಹಾಗೆಯೇ ರಾಜ್ಮಾ ಕಿಡ್ನಿಗೆ, ಶ್ವಾಸಕೋಶಕ್ಕೆ ದ್ರಾಕ್ಷಿ, ಗರ್ಭಾಶಯಕ್ಕೆ ಆವಕಾಡೊ, ಸ್ತನಕ್ಕೆ ಕಿತ್ತಳೆ, ಹೃದಯಕ್ಕೆ ಟೊಮೆಟೊ ಮತ್ತು ರಕ್ತಕ್ಕೆ ದಾಳಿಂಬೆಯನ್ನು ಶಿಫಾರಸ್ಸು ಮಾಡಲಾಗುತ್ತದೆ.
ಈ ಎಲ್ಲಾ ತರಕಾರಿ ಅಥವಾ ಹಣ್ಣುಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ತಿಳಿಯುತ್ತದೆ. ಇವು ನಮ್ಮ ದೇಹದ ಭಾಗಗಳಿಗೆ ಹೋಲುತ್ತವೆ. ಆದ್ದರಿಂದ ಅಂಗಗಳ ಗಾತ್ರವನ್ನು ಹೋಲುವ ತರಕಾರಿಗಳು, ಹಣ್ಣುಗಳು ಮತ್ತು ನಟ್ಸ್ ಅವುಗಳಿಗೆ ನಿಜವಾಗಿಯೂ ಪ್ರಯೋಜನಕಾರಿಯೇ ಎಂದು ನಾವು ತಿಳಿದುಕೊಳ್ಳೋಣ. ಈ ಬಗ್ಗೆ FMRI ಗುರ್ಗಾಂವ್‌ನ ಕ್ಲಿನಿಕಲ್ ನ್ಯೂಟ್ರಿಷನ್ ಡಾ. ದೀಪ್ತಿ ಖತುಜಾ ಇಲ್ಲಿ ತಿಳಿಸಿದ್ದಾರೆ ನೋಡಿ...
ಡಾ. ದೀಪ್ತಿ ಖತುಜಾ ಅವರು, "ನಾನು ಇದರ ಬಗ್ಗೆ ಖಂಡಿತ ಹೇಳಲು ಬಯಸುತ್ತೇನೆ. ಇದು ಸ್ವಲ್ಪ ಮಟ್ಟಿಗೆ ಸರಿ, ಆದರೆ ಅದನ್ನು ಸಂಪೂರ್ಣವಾಗಿ ಸರಿ ಎಂದು ಪರಿಗಣಿಸಲಾಗುವುದಿಲ್ಲ. ಕಿಡ್ನಿ (ಮೂತ್ರಪಿಂಡ) ಆರೋಗ್ಯಕ್ಕೆ ರಾಜ್ಮಾ ತಿನ್ನಲು ಸಲಹೆ ನೀಡುತ್ತಾರೆ. ಏಕೆಂದರೆ ಈ ಸಮಸ್ಯೆಗೆ ಆಹಾರದಲ್ಲಿ ಪ್ರೋಟೀನ್ ಇರುವುದು ಅವಶ್ಯಕ. ಇದು ನಮ್ಮ ಮೂತ್ರಪಿಂಡಗಳಿಗೆ ಪ್ರಯೋಜನಕಾರಿಯೂ ಆಗಿದೆ. ಆದ್ದರಿಂದ ನೀವು ರಾಜ್ಮಾ ಅನ್ನು ಸಾಕಷ್ಟು ಪ್ರಮಾಣದಲ್ಲಿ ಸೇವಿಸಿದರೆ ಅದು ಮೂತ್ರಪಿಂಡಕ್ಕೆ ಸ್ವಲ್ಪ ಮಟ್ಟಿಗೆ ಪ್ರಯೋಜನಕಾರಿಯಾಗಿದೆ. ಶ್ವಾಸಕೋಶದ ಆರೋಗ್ಯಕ್ಕೆ ದ್ರಾಕ್ಷಿ ತಿನ್ನಬೇಕು. ಆದರೆ ಅದು ಯಾವುದೇ ದೊಡ್ಡ ಪರಿಣಾಮ ಬೀರುವುದಿಲ್ಲ.
ಪ್ರೋಟೀನ್ ಪ್ರಮಾಣವು ಅಗತ್ಯಕ್ಕಿಂತ ಹೆಚ್ಚಿರಬಾರದು ಮತ್ತು ಅಗತ್ಯಕ್ಕಿಂತ ಕಡಿಮೆ ಇರಬಾರದು ಎಂಬುದನ್ನು ನಾವು ನೆನಪಿನಲ್ಲಿಡಬೇಕು ಎಂದು ದೀಪ್ತಿ ತಿಳಿಸಿದ್ದಾರೆ.
ಇನ್ನು ವಾಲ್ನಟ್ಸ್ ವಿಚಾರಕ್ಕೆ ಬರುವುದಾದರೆ ಇದು ಮೆದುಳಿನ ಆಕಾರದಲ್ಲಿರುವುದರಿಂದ ಮೆದುಳಿಗೆ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ವಾಲ್ನಟ್ಸ್ ಆಂಟಿಆಕ್ಸಿಡೆಂಟ್‌ಗಳು ಮತ್ತು ಫೈಟೊಕೆಮಿಕಲ್‌ಗಳನ್ನು ಒಳಗೊಂಡಿರುತ್ತವೆ. ಇವು ಆರೋಗ್ಯಕರ ಕೊಲೆಸ್ಟ್ರಾಲ್‌ಗೆ ಸಹ ಪ್ರಯೋಜನಕಾರಿ. ಹೃದಯ ರೋಗಿಗಳಿಗೆ ಪ್ರೋಟೀನ್ ಜೊತೆಗೆ ವಾಲ್ನಟ್ಸ್ ತಿನ್ನಲು ಸಲಹೆ ನೀಡುತ್ತಾರೆ. ಏಕೆಂದರೆ ಇದು ಒಮೆಗಾ -3 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ.
ನೀವು ಸಸ್ಯಾಹಾರಿಗಳಾಗಿದ್ದರೆ ಮತ್ತು ಒಮೆಗಾ -3 ನ ಅಗತ್ಯವಿದ್ದರೆ ವಾಲ್ನಟ್ಸ್ ತಿನ್ನಲು ಸಲಹೆ ನೀಡುತ್ತಾರೆ. ಏಕೆಂದರೆ ಹೆಚ್ಚಿನ ಒಮೆಗಾ -3 ಕೊಬ್ಬಿನಾಮ್ಲಗಳು ಮಾಂಸಾಹಾರಿ ಮೀನು ಇತ್ಯಾದಿಗಳಲ್ಲಿ ಕಂಡುಬರುತ್ತವೆ. ಹಾಗಾಗಿ ನೀವು ನಿಮ್ಮ ಆಹಾರದಲ್ಲಿ ವಾಲ್ನಟ್ಸ್ ಅನ್ನು ಸೇರಿಸಿದರೆ, ಅದು ದೇಹಕ್ಕೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.