ಅಯ್ಯಯ್ಯೋ! ಪುರುಷರ ಲೈಂಗಿಕ ಸಾಮರ್ಥ್ಯ ಹೆಚ್ಚಿಸುವ ಈ ತರಕಾರಿಯ ಬೆಲೆ ಕೆಜಿಗೆ 85 ಸಾವಿರ ಮುಟ್ಟಿದೆ
ಪ್ರಪಂಚದ ದುಬಾರಿ ತರಕಾರಿಯ ಬೆಲೆ ಕೇಳಿ ಎಲ್ಲರೂ ಶಾಕ್. ಸಿಕ್ಕಾಪಟ್ಟೆ ಹೆಲ್ತ್ ಉಪಯೋಗಗಳನ್ನು ಹೊಂದಿರುವ ಇದರ ಬಗ್ಗೆ ತಿಳಿದುಕೊಳ್ಳಿ.

ದಿನನಿತ್ಯ ಬಳಸುವ ಈರುಳ್ಳಿ, ಟೊಮ್ಯಾಟೋ, ಬೆಳ್ಳುಳ್ಳಿ, ಆಲೂಗಡ್ಡೆ ಬೆಲೆ ಏರುಪೇರು ಆದ್ರೆ ಮಾತ್ರ ತಲೆ ಕೆಡಿಸಿಕೊಳ್ಳುವ ನಾವ ನಿಜಕ್ಕೂ ಪ್ರಪಂಚದ ದುಬಾರಿ ತರಕಾರಿ ಹೆಸರು ಕೇಳಿದ್ರೆ ಶಾಕ್ ಆಗ್ತೀವಿ.
ಹೌದು! ಪ್ರಪಂಚದ ಅತಿ ದುಬಾರಿ ತರಕಾರಿ ಅಂದ್ರೆ ಹಾಪ್ ಚಿಗುರುಗಳು. ಇದನ್ನು ಹಾಪ್ ಶಾಟ್ಸ್ ಅಥವಾ hamulus lupulus ಎಂದು ಕರೆಯಲಾಗುತ್ತದೆ.
ಈ ತರಕಾರಿಯನ್ನು ಬೆಳೆಯಲು ಸುಮಾರು 3 ವರ್ಷ ತೆಗೆದುಕೊಳ್ಳುತ್ತದೆ. ಈ ಹಾಪ್ ಕೋನ್ಸ್ ಎಂದು ಜನಪ್ರಿಯತೆ ಪಡೆದಿರುವ ಈ ತರಕಾರಿ ಹೂವನ್ನು ಬಿಯರ್ ತಯಾರಿಕೆ ಮಾಡಲು ಪ್ರಮುಖ ಏಜೆಂಟ್ ಆಗಿ ಬಳಸುತ್ತಾರೆ.
ಈ ತರಕಾರಿಯನ್ನು ಕಳೆದ ವರ್ಷ ಕೆಜಿಗೆ 85,000 ಸಾವಿರಕ್ಕೆ ಮಾರಾಟ ಮಾಡಿದ್ದಾರೆ. ಈ ತರಕಾರಿ ಮಾರ್ಕೆಟ್‌ನಲ್ಲಿ ಬಲು ಬೇಗ ವ್ಯಾಪಾರವಾಗುತ್ತದೆ ಅಷ್ಟರ ಮಟ್ಟಕ್ಕೆ ಡಿಮ್ಯಾಂಡ್ ಹೊಂದಿದೆ.
ಈ ತರಕಾರಿಯಲ್ಲಿ ವಿಟಮಿನ್ ಇ, ಬಿ6 ಮತ್ತು ಸಿ ಹೊಂದಿದೆ. ವಿವಿಧ ಸೋಂಕುಗಳನ್ನು ರಕ್ಷಿಸುತ್ತದೆ. ಅಧ್ಯಾಯನದಲ್ಲಿ ಇದರ ಉಪಯೋಗಗಳು ತಿಳಿದು ಬಂದ ಮೇಲೆ ಡಿಮ್ಯಾಂಡ್ ಮತ್ತಷ್ಟು ಹೆಚ್ಚಾಗಿದೆ.
ಪ್ರತಿಷ್ಠಿತ ನ್ಯೂಸ್ ಪ್ರಕಟ ಮಾಡಿರುವ ಪ್ರಕಾರ ಈ ತರಕಾರಿಯ ಗಿಡಮೂಲಿಕೆಗಳಲ್ಲಿ ಪುರುಷರ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸುವ ಅಂಶವಿದೆ. ಲೈಂಗಿಕ ಸಮಸ್ಯೆಗೆ ಸಂಬಂಧ ಪಟ್ಟ ಯಾವುದೇ ಸಮಸ್ಯೆ ಇದ್ದರೂ ಈ ತರಕಾರಿ ಸರಿ ಮಾಡುತ್ತದೆ ಎನ್ನಲಾಗಿದೆ.
ಬ್ಯೂಟಿ ಲೋಕದಲ್ಲೂ ಈ ತರಕಾರಿಯನ್ನು ಬಳಸುತ್ತಾರೆ. ಈ ತರಕಾರಿಯ ಹೂಗಳಿಂದ ಚರ್ಮದ ಕಾಂತಿ ಹೆಚ್ಚಿಸುತ್ತದೆ ಹಾಗೂ ಯೌವನದ ಹೊಳಪನ್ನು ಪಡೆಯಲು ಸಹಾಯ ಮಾಡುತ್ತದೆ. ಮೊಡವೆ ಸಂಪೂರ್ಣವಾಗಿ ಮಾಯವಾಗಿಬಿಡುತ್ತದೆ.