MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಊಟ ಆದ ತಕ್ಷಣ ಟಾಯ್ಲೆಟ್‌ಗೆ ಓಡ್ತೀರಾ? ಹಾಗಿದ್ರೆ ಈ ಗಂಭೀರ ವಿಚಾರ ನಿಮಗೆ ಗೊತ್ತಿರಲಿ

ಊಟ ಆದ ತಕ್ಷಣ ಟಾಯ್ಲೆಟ್‌ಗೆ ಓಡ್ತೀರಾ? ಹಾಗಿದ್ರೆ ಈ ಗಂಭೀರ ವಿಚಾರ ನಿಮಗೆ ಗೊತ್ತಿರಲಿ

5 Toilet Habits That Reveal Your Gut Health: ನಮ್ಮ ಕರುಳಿನ ಆರೋಗ್ಯ ಹೇಗಿದೆ ಅಂತ ತಿಳಿದುಕೊಳ್ಳೋಕೆ ನಮ್ಮ ಮಲವಿಸರ್ಜನೆಯ ಅಭ್ಯಾಸಗಳನ್ನೇ ಗಮನಿಸಿದರೆ ಸಾಕು ಅಂತಾರೆ ಆರೋಗ್ಯ ತಜ್ಞರು. ಊಟವಾದ ತಕ್ಷಣ ನೀವು ಟಾಯ್ಲೆಟ್‌ಗೆ ಹೋಗುತ್ತಿದ್ದೀರಾ ಅಂದ್ರೆ ಏನರ್ಥ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್‌

1 Min read
Author : Naveen Kodase
Published : Jul 16 2026, 06:30 PM IST
Share this Photo Gallery
  • FB
  • TW
  • Linkdin
  • Whatsapp
16
ಕರುಳಿನ ಆರೋಗ್ಯ:
Image Credit : Getty

ಕರುಳಿನ ಆರೋಗ್ಯ:

ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಅಥವಾ ಒಂದು ನಿರ್ದಿಷ್ಟ ಸಮಯಕ್ಕೆ ಸರಿಯಾಗಿ ಮಲವಿಸರ್ಜನೆ ಆಗುತ್ತಿದ್ದರೆ, ನಿಮ್ಮ ಜೀರ್ಣಾಂಗ ವ್ಯವಸ್ಥೆ ಚೆನ್ನಾಗಿದೆ ಎಂದರ್ಥ. ಆದರೆ, ನಿಮ್ಮ ದೇಹ ಬೇರೆ ರೀತಿ ವರ್ತಿಸುತ್ತಿದ್ದರೆ, ಅದು ಕೆಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯಾಗಿರಬಹುದು. ನೀವು ಮುಖ್ಯವಾಗಿ ಗಮನಿಸಬೇಕಾದ 4 ಪ್ರಮುಖ ವಿಚಾರಗಳು ಇಲ್ಲಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
1. ಕಾಫಿ ಕುಡಿದ ನಂತರವೇ ಟಾಯ್ಲೆಟ್‌ಗೆ ಹೋಗುವುದು
Image Credit : Asianet News

1. ಕಾಫಿ ಕುಡಿದ ನಂತರವೇ ಟಾಯ್ಲೆಟ್‌ಗೆ ಹೋಗುವುದು

ಕೆಲವರಿಗೆ ಬೆಳಗ್ಗೆ ಕಾಫಿ ಕುಡಿದರಷ್ಟೇ ಟಾಯ್ಲೆಟ್‌ಗೆ ಹೋಗೋಕೆ ಆಗೋದು. ಆದರೆ ಇದು ದೇಹದ ಸ್ವಾಭಾವಿಕ ಜೀರ್ಣಕ್ರಿಯೆ ಅಲ್ಲ. ಇಲ್ಲಿ ಕಾಫಿ ಒಂದು ಉತ್ತೇಜಕವಾಗಿ (stimulator) ಕೆಲಸ ಮಾಡುತ್ತದೆ. ಅಂದರೆ, ನಿಮ್ಮ ದೇಹ ಅದರ ಸಹಜ ಲಯದಲ್ಲಿ ಕೆಲಸ ಮಾಡುತ್ತಿಲ್ಲ ಅಂತ ಇದರರ್ಥ.

Related Articles

Related image1
Toilet Paper: ಅಮೆರಿಕ, ಯುರೋಪ್ ಜನರು ಟಾಯ್ಲೆಟ್‌ನಲ್ಲಿ ನೀರಿನ ಬದಲು ಟಿಶ್ಯೂ ಬಳಸುವುದೇಕೆ? ಇಲ್ಲಿದೆ ನಿಜವಾದ ಕಾರಣ
Related image2
Bengaluru Life: ಬೆಂಗಳೂರಲ್ಲಿ 1.4 ಲಕ್ಷ ಸಂಬಳಕ್ಕಿಂತ, ಊರಲ್ಲಿ 40 ಸಾವಿರವೇ ಲೇಸು! ಯುವಕನ ಪೋಸ್ಟ್ ವೈರಲ್
36
2. ಊಟ ಮಾಡಿದ ತಕ್ಷಣವೇ ಟಾಯ್ಲೆಟ್‌ಗೆ ಹೋಗುವುದು
Image Credit : Asianet News

2. ಊಟ ಮಾಡಿದ ತಕ್ಷಣವೇ ಟಾಯ್ಲೆಟ್‌ಗೆ ಹೋಗುವುದು

ಊಟ ಮಾಡಿದ ತಕ್ಷಣವೇ ಟಾಯ್ಲೆಟ್‌ಗೆ ಹೋಗಬೇಕು ಅನ್ನಿಸೋದು ಕರುಳಿನ ಕಾರ್ಯದಲ್ಲಿನ ಏರುಪೇರು ಅಥವಾ ಪೋಷಕಾಂಶಗಳು ಸರಿಯಾಗಿ ಹೀರಿಕೊಳ್ಳುತ್ತಿಲ್ಲ ಎಂಬುದರ ಸಂಕೇತ. ಆಹಾರವು ಕರುಳಿನ ಮೂಲಕ ತುಂಬಾ ವೇಗವಾಗಿ ಹಾದುಹೋಗುವುದರಿಂದ ಹೀಗೆ ಆಗುತ್ತದೆ. ಇದು ಬೇರೆ ಜೀರ್ಣಕ್ರಿಯೆ ಸಮಸ್ಯೆಗಳಿಗೂ ಕಾರಣವಾಗಬಹುದು.

46
3. ಎರಡು-ಮೂರು ದಿನಕ್ಕೊಮ್ಮೆ ಮಾತ್ರ ಮಲವಿಸರ್ಜನೆ
Image Credit : Asianet News

3. ಎರಡು-ಮೂರು ದಿನಕ್ಕೊಮ್ಮೆ ಮಾತ್ರ ಮಲವಿಸರ್ಜನೆ

ನೀವು 2-3 ದಿನಕ್ಕೊಮ್ಮೆ ಮಾತ್ರ ಮಲವಿಸರ್ಜನೆ ಮಾಡುತ್ತಿದ್ದರೆ, ನಿಮಗೆ ದೀರ್ಘಕಾಲದ ಮಲಬದ್ಧತೆ ಇದೆ ಎಂದರ್ಥ. ಕರುಳಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾಗಳ ಪ್ರಮಾಣದಲ್ಲಿನ ವ್ಯತ್ಯಾಸ ಅಥವಾ ಕಳಪೆ ಕರುಳಿನ ಆರೋಗ್ಯ ಇದಕ್ಕೆ ಕಾರಣವಾಗಿರಬಹುದು.

56
4. ಕೆಲಸದ ಜಾಗದಲ್ಲಿ ಅಥವಾ ಹೊರಗಿದ್ದಾಗ ತುರ್ತುಪರಿಸ್ಥಿತಿ
Image Credit : google

4. ಕೆಲಸದ ಜಾಗದಲ್ಲಿ ಅಥವಾ ಹೊರಗಿದ್ದಾಗ ತುರ್ತುಪರಿಸ್ಥಿತಿ

ಮನೆಯಿಂದ ಹೊರಗಿದ್ದಾಗ ಅಥವಾ ಕೆಲಸದ ಸ್ಥಳದಲ್ಲಿದ್ದಾಗ ಇದ್ದಕ್ಕಿದ್ದಂತೆ ಟಾಯ್ಲೆಟ್‌ಗೆ ಹೋಗಬೇಕು ಅನ್ನಿಸುವುದು, ಮಾನಸಿಕ ಒತ್ತಡ ನಿಮ್ಮ ಕರುಳಿನ ಮೇಲೆ ಎಷ್ಟು ಪರಿಣಾಮ ಬೀರುತ್ತಿದೆ ಅನ್ನೋದಕ್ಕೆ ಸಾಕ್ಷಿ. ಒತ್ತಡವು ಜೀರ್ಣಕ್ರಿಯೆಯನ್ನು ವೇಗಗೊಳಿಸಬಹುದು ಅಥವಾ ಅಡ್ಡಿಪಡಿಸಬಹುದು.

66
5. ಗಮನಿಸಬೇಕಾದ ಅಂಶ
Image Credit : Asianet News

5. ಗಮನಿಸಬೇಕಾದ ಅಂಶ

ಪ್ರತಿದಿನ ಒಂದೇ ಸಮಯಕ್ಕೆ ಮಲವಿಸರ್ಜನೆ ಆಗುವುದು ಉತ್ತಮ ಜೀರ್ಣಕ್ರಿಯೆ ಮತ್ತು ಆರೋಗ್ಯಕರ ಕರುಳಿನ ಸಂಕೇತ. ನಿಮ್ಮ ಮಲವಿಸರ್ಜನೆಯ ಸಮಯವನ್ನು ಸರಿಯಾಗಿ ಗಮನಿಸುವುದರಿಂದ, ದೇಹದಲ್ಲಿನ ಇತರ ಆರೋಗ್ಯ ಸಮಸ್ಯೆಗಳನ್ನು ಮೊದಲೇ ಪತ್ತೆಹಚ್ಚಲು ಸಹಾಯವಾಗುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಶೌಚಾಲಯ
ಜೀವನಶೈಲಿ
ಆರೋಗ್ಯ

Latest Videos
Recommended Stories
Recommended image1
Parenting Tips: ಪೋಷಕರೇ ಮಾಡುವ ಈ 5 ತಪ್ಪು ಮಕ್ಕಳನ್ನು ಸೋಮಾರಿಗಳನ್ನಾಗಿ ಮಾಡುತ್ತವೆ.. ಎಚ್ಚರ!
Recommended image2
ಗ್ಯಾಸ್ ಉರಿಯ ಮೇಲೆ ನೇರವಾಗಿ ಚಪಾತಿ ಬೇಯಿಸಿದರೆ ಕ್ಯಾನ್ಸರ್ ಬರುತ್ತದೆಯೇ? ಇಲ್ಲಿದೆ ಡಾಕ್ಟರ್ ಉತ್ತರ
Recommended image3
Men-Women Relationship: ಮಹಿಳೆಯರ ಈ ಸಮಸ್ಯೆಗಳನ್ನು ಹೆಚ್ಚಿನ ಪುರುಷರು ಅರ್ಥಮಾಡಿಕೊಳ್ಳುವುದೇ ಇಲ್ಲ!
Related Stories
Recommended image1
Toilet Paper: ಅಮೆರಿಕ, ಯುರೋಪ್ ಜನರು ಟಾಯ್ಲೆಟ್‌ನಲ್ಲಿ ನೀರಿನ ಬದಲು ಟಿಶ್ಯೂ ಬಳಸುವುದೇಕೆ? ಇಲ್ಲಿದೆ ನಿಜವಾದ ಕಾರಣ
Recommended image2
Bengaluru Life: ಬೆಂಗಳೂರಲ್ಲಿ 1.4 ಲಕ್ಷ ಸಂಬಳಕ್ಕಿಂತ, ಊರಲ್ಲಿ 40 ಸಾವಿರವೇ ಲೇಸು! ಯುವಕನ ಪೋಸ್ಟ್ ವೈರಲ್
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved