ದಟ್ಟ ಕೇಶರಾಶಿ ಒಡತಿ ನೀವಾಗಬೇಕೆ? ವಿಟಮಿನ್ ಬಿ -7 ಆಹಾರ ಸೇವಿಸಿ!
ಕೂದಲು ತೆಳ್ಳಗಾಗುವ ಸಮಸ್ಯೆಯಿಂದ ನೀವು ತೊಂದರೆಗೀಡಾಗಿದ್ಯ? ಇದಕ್ಕೇನಪ್ಪಾ ಕಾರಣ ಎಂದು ಯೋಚ್ನೆ ಮಾಡ್ತಿದ್ದೀರಾ?, ನಿಮ್ಮ ಡಯಟ್ ಮತ್ತು ಲೈಫ್ ಸ್ಟೈಲ್ ಇದಕ್ಕೆ ದೊಡ್ಡ ಕಾರಣ. ನಾವು ತಿನ್ನುವ ಆಹಾರವು ನಮ್ಮ ಆರೋಗ್ಯ, ಮೆಟಬೋಲಿಸಂ ಮತ್ತು ದೇಹದ ಕಾರ್ಯ ನಿರ್ವಹಣೆಗೆ ಸಂಬಂಧಿಸಿದೆ. ಅಷ್ಟೇ ಅಲ್ಲ ಡಯಟ್ ಕೂದಲಿನ ಉದ್ದ ಮತ್ತು ದಪ್ಪದ ಮೇಲೆ ಪರಿಣಾಮ ಬೀರುತ್ತೆ.
ನಿಮಗೂ ಸುಂದರವಾದ ಉದ್ದ, ದಪ್ಪವಾದ ಕೂದಲು(Hair) ಬೇಕು ಎನಿಸಿದರೆ ನಾವು ನಮ್ಮ ಆಹಾರದಲ್ಲಿ ಕೆಲವೊಂದು ಅಂಶಗಳನ್ನು ಸೇರಿಸ್ಬೇಕು. ಇದಕ್ಕಾಗಿ, ಬಯೋಟಿನ್ ಅಂದರೆ ವಿಟಮಿನ್ ಬಿ -7 ಬಹಳ ಮುಖ್ಯ. ವಿಟಮಿನ್ ಬಿ 7 ಸಮೃದ್ಧವಾಗಿರುವ ಆಹಾರ ನಮ್ಮ ಕೂದಲನ್ನು ಆರೋಗ್ಯಕರ, ಬಲವಾಗಿ, ಉದ್ದವಾಗಿ ಮತ್ತು ದಟ್ಟವಾಗಿಸುತ್ತೆ. ವಿಟಮಿನ್ ಬಿ -7 ಸಮೃದ್ಧವಾಗಿರುವ ಈ ಅಹಾರಗಳನ್ನು ನೀವು ಸೇವಿಸಿ ನೋಡಿ.
ಕೂದಲಿಗೆ ಅಗತ್ಯವಾದ ವಿಟಮಿನ್
ಕೂದಲನ್ನು ಆರೋಗ್ಯಕರವಾಗಿಡಲು, ಒಬ್ಬ ವ್ಯಕ್ತಿ ದಿನಕ್ಕೆ ಕನಿಷ್ಠ 20-30 ಮೈಕ್ರೋಗ್ರಾಂ ಬಯೋಟಿನ್(Biotin) ಡೋಸ್ ಸೇವಿಸಬೇಕು. ಇದಕ್ಕಾಗಿ ಕೆಲವು ಆಹಾರಗಳನ್ನು ನಿಮ್ಮ ಡಯಟ್ ನಲ್ಲಿ ಸೇರಿಸಿ. ಬಯೋಟಿನ್ ಕೊರತೆ, ಅಂದ್ರೆ ವಿಟಮಿನ್ ಬಿ 7 ಸರಿದೂಗಿಸಲು ನೀವು ಸೇವಿಸಬಹುದಾದ ಕೆಲವೊಂದು ಆಹಾರಗಳ ಬಗ್ಗೆ ಇಲ್ಲಿ ಮಾಹಿತಿ ತಿಳಿಸ್ತೀವಿ ನೋಡಿ…
ಬಯೋಟಿನ್ ಸಮೃದ್ಧವಾಗಿರುವ ಆಹಾರ
ಮೊಟ್ಟೆ(Egg) -
ನೀವು ಪ್ರತಿದಿನ ಒಂದು ಮೊಟ್ಟೆ ಸೇವಿಸಿದ್ರೆ, ದೇಹಕ್ಕೆ 20 ಮೈಕ್ರೊಗ್ರಾಮ್ ಬಯೋಟಿನ್ ಸಿಗುತ್ತೆ. ಮೊಟ್ಟೆ ತಿನ್ನೋದ್ರಿಂದ ದೇಹಕ್ಕೆ ಪ್ರೋಟೀನ್, ವಿಟಮಿನ್ ಡಿ ಮತ್ತು ಇತರ ವಿಟಮಿನ್ಸ್ ಸಿಗುತ್ತೆ. ಇದು ಕೂದಲನ್ನು ಆರೋಗ್ಯಕರವಾಗಿಸುತ್ತೆ.
ಸೋಯಾಬೀನ್(Soyabean)-
ಬಯೋಟಿನ್ ಕೊರತೆ ನೀಗಿಸಲು ನೀವು ಸೋಯಾಬೀನ್ ಸಹ ಸೇವಿಸ್ಬಹುದು. ನೀವು 100 ಗ್ರಾಂ ಸೋಯಾಬೀನ್ ಸೇವಿಸಿದ್ರೆ, ದೇಹಕ್ಕೆ 19.3 ಮೈಕ್ರೋಗ್ರಾಮ್ ವಿಟಮಿನ್ ಬಿ 7 ದೊರೆಯುತ್ತೆ. ಇದನ್ನು ವಿವಿಧ ರೀತಿಯಲ್ಲಿ ನೀವು ಸೇವಿಸಬಹುದು.
ಚಿಕನ್(Chicken) -
ನೀವು ನಾನ್-ವೆಜ್ ಸೇವಿಸೋರಾದ್ರೆ, ಚಿಕನ್ ಪ್ರಿಯರಾಗಿದ್ರೆ ಚಿಕನ್ ನಿಮಗೆ ಅತ್ಯುತ್ತಮ ಆಯ್ಕೆ, ಇದು ದೇಹದಲ್ಲಿ ವಿಟಮಿನ್ ಬಿ 7 ಕೊರತೆ ಸರಿದೂಗಿಸುತ್ತೆ. ನೀವು 75 ಗ್ರಾಂ ಚಿಕನ್ ತಿಂದ್ರೆ, 31 ಮೈಕ್ರೊಗ್ರಾಮ್ ಬಯೋಟಿನ್ ನೀಡುತ್ತೆ.
ಹುರಿದ ಕಡಲೆಕಾಯಿ -
ಹುರಿದ ಕಡಲೆಕಾಯಿ ಸೇವಿಸೋ ಮೂಲಕ ಸಹ ನೀವು ವಿಟಮಿನ್ ಬಿ 7 ಕೊರತೆ ಪೂರೈಸ್ಬಹುದು ಸುಮಾರು 100 ಗ್ರಾಂ ಕಡಲೆಕಾಯಿಯಲ್ಲಿ 17.20 ಮೈಕ್ರೋಗ್ರಾಮ್ ವಿಟಮಿನ್ ಬಿ 7 (Vitamin B 7)ಪಡೆಯುತ್ತೀರಿ. ಇದು ದೈನಂದಿನ ಅಗತ್ಯವನ್ನು ಪೂರೈಸುತ್ತೆ. ಉತ್ತಮ ಆರೋಗ್ಯವನ್ನು ನೀಡುತ್ತೆ.
ಸೂರ್ಯಕಾಂತಿ ಬೀಜ (Sunflower seed)-
ನೀವು ಆಹಾರದಲ್ಲಿ ಸೀಡ್ಸ್ ಸೇರಿಸಬೇಕು. ಅನೇಕ ರೀತಿಯ ಸೀಡ್ಸ್ ತಿನ್ನೋದ್ರಿಂದ ಕೂದಲು ಆರೋಗ್ಯಕರ ಮತ್ತು ಬಲವಾಗಿರುತ್ತೆ. ನೀವು ಸೂರ್ಯಕಾಂತಿ ಬೀಜ ಆಹಾರದಲ್ಲಿ ಸೇರಿಸಿದರೆ ದೇಹಕ್ಕೆ ಸಾಕಷ್ಟು ವಿಟಮಿನ್ ಬಿ 7 ನೀಡುತ್ತೆ. 100 ಗ್ರಾಂ ಸೂರ್ಯಕಾಂತಿ ಬೀಜ ತಿನ್ನೋದ್ರಿಂದ 13 ಮೈಕ್ರೊಗ್ರಾಂ ಬಯೋಟಿನ್ ಸಿಗುತ್ತೆ.