ಮಲಗುವ ಮುನ್ನ ಮಾಡುವ ಈ ತಪ್ಪು ನಿಮ್ಮ ನಿದ್ರೆಗೆ ಭಂಗ ತರಬಹುದು, ಎಚ್ಚರ!
Sleep hygiene tips: ನಿದ್ರೆಯ ಸಮಸ್ಯೆಯಿಂದ ಮುಕ್ತಿ ಪಡೆಯಲು ಯಾವ ತಪ್ಪುಗಳನ್ನು ತಿದ್ದಿಕೊಳ್ಳಬೇಕು ಎಂಬ ಬಗ್ಗೆ ಖ್ಯಾತ ತಜ್ಞೆ ಡಾ. ಹಂಸಾ ಯೋಗೇಂದ್ರ ಅವರು ನೀಡಿದ ಉಪಯುಕ್ತ ಮಾಹಿತಿ ಇಲ್ಲಿದೆ.

ಕೆಲವು ತಪ್ಪು ಅಭ್ಯಾಸ
ಕೆಲವು ತಪ್ಪು ಅಭ್ಯಾಸ
ಬಹಳಷ್ಟು ಜನರಿಗೆ ಹಾಸಿಗೆಯ ಮೇಲೆ ಮಲಗಿದ ತಕ್ಷಣ ನಿದ್ರೆ ಬರುವುದಿಲ್ಲ. ಗಂಟೆಗಟ್ಟಲೆ ಮಗ್ಗುಲು ಬದಲಿಸುತ್ತಾ ಕಳೆಯುತ್ತಾರೆ. ಇನ್ನು ಕೆಲವರು ನಿದ್ರೆಗಾಗಿ ಮಾತ್ರೆಗಳನ್ನು ಅವಲಂಬಿಸುತ್ತಾರೆ, ಇದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಪ್ರಸಿದ್ಧ ಆರೋಗ್ಯ ತಜ್ಞೆ ಡಾ. ಹಂಸಾ ಯೋಗೇಂದ್ರ ಅವರ ಪ್ರಕಾರ, ನಮಗೆ ಸರಿಯಾಗಿ ನಿದ್ರೆ ಬಾರದಿರಲು ನಾವು ಅರಿವಿಲ್ಲದೆ ಮಾಡುವ ಕೆಲವು ತಪ್ಪು ಅಭ್ಯಾಸಗಳೇ ಕಾರಣ. ಆ ತಪ್ಪುಗಳು ಯಾವುವು ಎಂಬ ಮಾಹಿತಿ ಇಲ್ಲಿದೆ.
ಭಾರೀ ಊಟ (Heavy Food)
ಭಾರೀ ಊಟ (Heavy Food)
ನೀವು ರಾತ್ರಿ ಸಮಯದಲ್ಲಿ ಅತಿಯಾದ ಅಥವಾ ಮಸಾಲೆಯುಕ್ತ ಆಹಾರವನ್ನು ಸೇವಿಸಿದರೆ, ಅದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಎಣ್ಣೆ ಮತ್ತು ಮಸಾಲೆ ಪದಾರ್ಥಗಳು ಜೀರ್ಣವಾಗಲು ಹೆಚ್ಚು ಸಮಯ ತೆಗೆದುಕೊಳ್ಳುತ್ತವೆ, ಇದರಿಂದ ಅಸ್ವಸ್ಥತೆ ಉಂಟಾಗಿ ನಿದ್ರೆ ಬರುವುದಿಲ್ಲ. ಆದ್ದರಿಂದ ರಾತ್ರಿ ವೇಳೆ ಯಾವಾಗಲೂ ಹಗುರವಾದ ಮತ್ತು ಸುಲಭವಾಗಿ ಜೀರ್ಣವಾಗುವ ಆಹಾರವನ್ನು ಸೇವಿಸಿ.
ಮೆದುಳಿಗೆ ಆಯಾಸ (Screen Time)
ಮೆದುಳಿಗೆ ಆಯಾಸ (Screen Time)
ಮಲಗುವ ಮುನ್ನ ಸೋಶಿಯಲ್ ಮೀಡಿಯಾ ಸ್ಕ್ರಾಲ್ ಮಾಡುವುದು ಅಥವಾ ಮೊಬೈಲ್‌ನಲ್ಲಿ ಸಿನಿಮಾ, ವೆಬ್ ಸೀರೀಸ್ ನೋಡುವುದರಿಂದ ಮೆದುಳು ಸಕ್ರಿಯವಾಗಿಯೇ ಉಳಿಯುತ್ತದೆ. ಇದರಿಂದ ನಿದ್ರೆ ಬರುವುದು ಕಷ್ಟವಾಗುತ್ತದೆ. ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಮೊಬೈಲ್ ಪಕ್ಕಕ್ಕಿಡುವುದು ಉತ್ತಮ.
ತಡರಾತ್ರಿಯವರೆಗೆ ಕೆಲಸ
ತಡರಾತ್ರಿಯವರೆಗೆ ಕೆಲಸ
ಅನೇಕರು ರಾತ್ರಿ ತಡವಾಗಿ ಕೆಲಸ ಮಾಡುವ ಅಭ್ಯಾಸ ಹೊಂದಿರುತ್ತಾರೆ. ಇದು ನಿಮ್ಮ ದೇಹದ ನೈಸರ್ಗಿಕ ಲಯವನ್ನು (Circadian Rhythm) ಹದಗೆಡಿಸುತ್ತದೆ. ಇದರಿಂದ ನಿದ್ರೆಯ ಹಾರ್ಮೋನ್‌ಗಳ ಮಟ್ಟ ಕಡಿಮೆಯಾಗಿ, ಅನಿದ್ರೆ (Insomnia) ಮತ್ತು ದೈಹಿಕ ಆಯಾಸದಂತಹ ಸಮಸ್ಯೆಗಳು ಕಾಡುತ್ತವೆ.
ಕೋಪ ಅಥವಾ ಒತ್ತಡದಲ್ಲಿ ಮಲಗುವುದು
ಕೋಪ ಅಥವಾ ಒತ್ತಡದಲ್ಲಿ ಮಲಗುವುದು
ನೀವು ಅತಿಯಾದ ಟೆನ್ಷನ್, ಒತ್ತಡ ಅಥವಾ ಕೋಪದ ಮನಸ್ಥಿತಿಯಲ್ಲಿ ಮಲಗಲು ಹೋದರೆ ನಿದ್ರೆ ಬರುವುದಿಲ್ಲ. ಈ ಸಂದರ್ಭದಲ್ಲಿ ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್‌ನಂತಹ ಹಾರ್ಮೋನ್‌ಗಳು ಹೆಚ್ಚಾಗುತ್ತವೆ, ಇದು ಮೆದುಳನ್ನು ಎಚ್ಚರವಾಗಿರಿಸುತ್ತದೆ. ಮನಸ್ಸು ಶಾಂತವಾಗದ ಹೊರತು ನೆಮ್ಮದಿಯ ನಿದ್ರೆ ಸಾಧ್ಯವಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

