ಈ ರೀತಿ ಆಹಾರ ತಯಾರಿಸಿದ್ರೆ ತೂಕ ಇಳಿಯೋದು ಗ್ಯಾರಂಟಿ!
ನೀವು ಅಡುಗೆ ಮಾಡುವ ವಿಧಾನ ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಹೌದು, ನೀವು ಹೇಗೆ ತಿನ್ನುತ್ತಿರೋ ಹಾಗೆ ಕಾಣುತ್ತೀರ ಅನ್ನೋ ಮಾತು ನಿಜಾ. ಆದ್ದರಿಂದ ಇಲ್ಲಿ ಹೇಳಿರುವ ಕೆಲವು ಟಿಪ್ಸ್ ಸಹಾಯದಿಂದ ನೀವು ಅಡುಗೆಯನ್ನು ಇನ್ನಷ್ಟು ಉತ್ತಮಗೊಳಿಸಬಹುದು. ಈ ಟ್ರಿಕ್ ನಿಮಗೆ ಅಡುಗೆ ಮಾಡಲು ಸಹಾಯ ಮಾಡುತ್ತೆ, ಜೊತೆಗೆ ಇದು ನಿಮ್ಮ ತೂಕ ಇಳಿಸುವ ಸಹ ಉಪಯುಕ್ತ.
ವೆಯಿಟ್ ಲಾಸ್(Weight loss) ಜರ್ನಿಯಲ್ಲಿ, ಕೆಲವು ಬೇಯಿಸುವ ವಿಧಾನ ಮತ್ತು ತಿನ್ನುವ ವಿಧಾನ ಬದಲಾಯಿಸುವ ಮೂಲಕ ಅನೇಕ ಬದಲಾವಣೆ ತರಬಹುದು. ಆದ್ದರಿಂದ ನೀವು ಏನು ಅಡುಗೆ ಮಾಡುತ್ತಿದ್ದೀರಿ ಎಂದು ತಿಳಿದುಕೊಳ್ಳೋದು ಮುಖ್ಯ. ಹೇಗೆ ಅಡುಗೆ ಮಾಡಿದರೆ ಒಳ್ಳೆದು, ಅದು ಹೇಗೆ ತೂಕ ಇಳಿಸಿಕೊಳ್ಳಲು ಸಹಾಯ ಮಾಡಬಹುದು ಎಂದು ತಿಳಿಯೋಣ.
ಚಾಪಿಂಗ್(Chopping) ಬಗ್ಗೆ ಕಾಳಜಿ ವಹಿಸಿ
ಯಾವಾಗಲೂ ತರಕಾರಿಯನ್ನು ದೊಡ್ಡ ಸೈಜ್ ಕತ್ತರಿಸಿ. ಇದು ಅಡುಗೆಯ ಸಮಯದಲ್ಲಿ ತರಕಾರಿ ಕಡಿಮೆ ಎಣ್ಣೆ ಹೀರಿಕೊಳ್ಳುವಂತೆ ಮಾಡುತ್ತೆ. ಹಾಗೆ ದೊಡ್ಡ ಸೈಜ್ ಚಾಪ್ ಮಾಡೋದ್ರಿಂದ ತರಕಾರಿಗಳ ಬಣ್ಣ ಸಹ ಉಳಿಸಿಕೊಳ್ಳಲಾಗುತ್ತೆ.
ತರಕಾರಿ ಸಿಪ್ಪೆ ತೆಗೆಯಬೇಡಿ(Peel)
ತರಕಾರಿ ಸಿಪ್ಪೆ ಸಹ ತಮ್ಮ ಪೋಷಕಾಂಶ ಹೊಂದಿರುತ್ತೆ , ಆದ್ದರಿಂದ ಸಿಪ್ಪೆಯೊಂದಿಗೆ ತರಕಾರಿ ಬೇಯಿಸಿ. ಅವುಗಳಲ್ಲಿ ಕಂಡುಬರುವ ಫೈಬರ್ ನಿಮಗೆ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತೆ. ಆಲೂಗಡ್ಡೆ, ಟೊಮೆಟೊ, ಸೌತೆಕಾಯಿ, ಬದನೆಕಾಯಿ ಮತ್ತು ಇತರ ತರಕಾರಿಗಳ ಸಿಪ್ಪೆ ತೆಗೆಯಬೇಡಿ.
ತಾಜಾ ಮಸಾಲೆಗಳು(Fresh masala) ಪರಿಣಾಮಕಾರಿ
ಪುದೀನಾ, ತುಳಸಿ, ಕರಿಬೇವಿನ ಎಲೆ ಹಾಗೂ ಇಂತಹ ವಸ್ತುಗಳನ್ನು ಸೇರಿಸಲಾದ ತಾಜಾ ಮಸಾಲೆ ಆಹಾರದ ರುಚಿ ಹೆಚ್ಚಿಸೋದು ಮಾತ್ರವಲ್ಲಾ, ಹೆಚ್ಚುವರಿ ಕ್ಯಾಲೊರಿ ಅಥವಾ ಸೋಡಿಯಂ ಸೇರಿಸದೆ ನಿಮ್ಮ ತೂಕ ನಿಯಂತ್ರಿಸಲು ಸಹಾಯ ಮಾಡುತ್ತೆ.
ಮೈಕ್ರೋವೇವ್ (Microwave)ಕೂಡ ಇದಕ್ಕೆ ಸಹಕಾರಿ
ತರಕಾರಿಗಳನ್ನು ಹುರಿಯುವುದಕ್ಕಿಂತ ಹಬೆಯಲ್ಲಿ ಬೇಯಿಸಿದ ಆಹಾರ ತಿನ್ನೋದು ಆರೋಗ್ಯಕ್ಕೆ ಉತ್ತಮ ಆಯ್ಕೆ. ಆದ್ದರಿಂದ ನೀವು ಬಯಸಿದರೆ, ತರಕಾರಿಗಳನ್ನು ಮೈಕ್ರೋವೇವ್ನಲ್ಲಿ ಬೇಯಿಸಬಹುದು. ಇದರಲ್ಲಿ, ತರಕಾರಿಗಳ ಪೋಷಕಾಂಶ ಹಾಗೆಯೇ ಉಳಿಯುತ್ತೆ ಮತ್ತು ಇದು ತೂಕ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತೆ.
ಆಲಿವ್ ಎಣ್ಣೆ(Olive oil) ಉತ್ತಮ ಆಯ್ಕೆ
ಆಲಿವ್ ಎಣ್ಣೆಯಲ್ಲಿ ಕಂಡುಬರುವ ಆಂಟಿ ಒಕ್ಸಿಡಂಟ್ಸ್ ಮತ್ತು ಫೈಟೋನ್ಯೂಟ್ರಿಯೆಂಟ್ಸ್ ಅಡುಗೆ ಮಾಡುವಾಗ ತರಕಾರಿಗಳು, ಹೆಚ್ಚು ಪೌಷ್ಟಿಕಾಂಶದಿಂದ ಕೂಡಿರುತ್ತೆ. ಹಾಗೆಯೇ ಆಲಿವ್ ಎಣ್ಣೆ ಬೇರೆ ಅಡುಗೆ ಎಣ್ಣೆ ಜೊತೆ ಕಂಪೇರ್ ಮಾಡುವಾಗ, ಬೇರೆ ಎಣ್ಣೆಗಳಿಗಿಂತ ಕಡಿಮೆ ಬಳಸಲಾಗುತ್ತೆ .